Home Posts tagged #death news

ಮಂಜೇಶ್ವರ: ನಾಲ್ಕನೇ ತರಗತಿಯ ವಿದ್ಯಾರ್ಥಿ ಕುಸಿದು ಬಿದ್ದು ಸಾವು

ಮಂಜೇಶ್ವರ: ನಾಲ್ಕನೇ ತರಗತಿಯ ವಿದ್ಯಾರ್ಥಿ ಶಾಲೆಯ ಕ್ರೀಡಾ ಸ್ಪರ್ಧೆಯ ಮಧ್ಯೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಂಗಲ್ಪಾಡಿ ಜಿಎಲ್‌ಪಿ ಶಾಲೆಯ ವಿದ್ಯಾರ್ಥಿ ಹಸನ್ ರಝಾ (10) ಸಾವನ್ನಪ್ಪಿದ ದುರ್ದೈವಿ . ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಶಾಲೆಯ ಕ್ರೀಡಾ ಸ್ಪರ್ಧೆ ನಡೆಯುವಾಗ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾದರೂ

ಮೂಡುಬಿದಿರೆ : ಕೊಣಾಜೆಕಲ್ಲಿಗೆ ಟ್ರಕ್ಕಿಂಗ್ ಗೆ ಬಂದ ಯುವಕ ಹೃದಯಾಘಾತಕ್ಕೆ ಬಲಿ

ಮೂಡುಬಿದಿರೆ : ಕೊಣಾಜೆಕಲ್ಲಿಗೆ ಟ್ರಕ್ಕಿಂಗ್ ಗೆ ಬಂದ ಯುವಕನೊಬ್ಬ ಹೃದಯಾಘಾತವಾಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.ಪುತ್ತೂರು ಬೆಟ್ಟಂಪ್ಪಾಡಿ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಮನೋಜ್ ಎನ್. (25ವ) ಹೃದಯಾಘಾತಕ್ಕೆ ಬಲಿಯಾದ ಯುವಕ.ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಡ್ಯಾರು: ಕುಸಿದುಬಿದ್ದು ಬಸ್‌ ನಿರ್ವಾಹಕ ಸಾವು

ಅಡ್ಯಾರು: ಕಾಲೇಜು ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕ ಕರ್ತವ್ಯದಲ್ಲಿದ್ದಾಗಲೇ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಅಡ್ಯಾರ್‌ ಸಮೀಪ ಇಂದು ಬೆಳಗ್ಗಿನ ವೇಳೆ ಸಂಭವಿಸಿದೆ.ಕುತ್ತಾರು ನಿವಾಸಿ ಸಂತೋಷ್‌ (40) ಮೃತರು. ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯಕ್ಕೆ ಸೇರಿದ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಬೆಳಗ್ಗಿನ ವೇಳೆ ಶಾಲಾ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ತೆರಳುವ ಟ್ರಿಪ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ

ಉಳ್ಳಾಲ : ಸೋಮೇಶ್ವರ ಸ್ಕೂಟರ್ ಅಪಘಾತ – ಸವಾರ ಸಾವು

ಉಳ್ಳಾಲ : ಸ್ಕಿಡ್ ಆಗಿ ನಿಯಂತ್ರಣ ತಪ್ಪಿದ ಸ್ಕೂಟರೊಂದು ರಸ್ತೆ ಬದಿಯ ಮನೆಯ ಆವರಣ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆ ಎಂಬಲ್ಲಿ ನಡೆದಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮೀ ಮಂದಿರ ಬಳಿಯ ನಿವಾಸಿ ರಾಘವೇಂದ್ರ ಸಾಲ್ಯಾನ್ (44)ಯಾನೆ ರಘು ಮೃತ ದುರ್ದೈವಿ. ಖಾಸಗಿ ಕಂಪನಿಯೊಂದರಲ್ಲಿ ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದ

ಮೂಡುಬಿದಿರೆ : ಸ್ವಣೋ೯ದ್ಯಮಿ ಶ್ರೀಧರ್ ಆಚಾಯ೯ ನಿಧನ

ಮೂಡುಬಿದಿರೆ : ಸ್ವಣೋ೯ದ್ಯಮಿ ಮೂಡುಬಿದಿರೆಯ ಸುಧಾ ಜ್ಯುವೆಲ್ಲರ್ಸ್ ನ ಮಾಲಕ ಶ್ರೀಧರ ಆಚಾರ್ಯ (84) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನ ಹೊಂದಿದರು.ಅವರು ಮೂಡುಬಿದಿರೆಯಲ್ಲಿ ಸುಧಾ ಜ್ಯುವೆಲ್ಲರ್ಸ್, ಲಕ್ಷ್ಮೀ ಜ್ಯುವೆಲ್ಲರ್ಸ್ ನ ಸ್ಥಾಪಕರಾಗಿದ್ದರು.ಮೂಡುಬಿದಿರೆ ಗುರುಮಠ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ 1997- 2002 ರ ಅವಧಿಯಲ್ಲಿ ಎರಡನೇ ಮೊಕ್ತೇಸರರಾಗಿ ಸೇವೆ ಸಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು.ಮೃತರು ಪತ್ನಿ, ಐದು ಮಂದಿ

ಕಡಬ: ಜೀಪು ಪಲ್ಟಿಯಾಗಿ ಕೃಷಿಕ ಸಾವು

ಕಡಬ: ಜೀಪು ಪಲ್ಟಿಯಾಗಿ ಕೃಷಿಕರೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿ ಸಂಭವಿಸಿದೆ.ಬಿಳಿನೆಲೆ ಗ್ರಾಮದ ಬಿಳಿನೆಲೆ ಬೈಲು ನಿವಾಸಿ ಧರ್ಮಪಾಲ (68) ಮೃತರು. ಧರ್ಮಪಾಲ ಅವರು ತನ್ನ ಮಗನೊಂದಿಗೆ ತೋಟಕ್ಕೆ ಔಷಧಿ ಸಿಂಪಡಿಸಿದ ಬಳಿಕ ತಮ್ಮ ಜೀಪಿನಲ್ಲಿ ಮನೆಗೆ ಹಿಂದಿರುಗುವ ವೇಳೆ ಮನೆ ಸಮೀಪ ಮಣ್ಣಿನ ರಸ್ತೆಯಲ್ಲಿ ಜೀಪು ಹತ್ತದೇ ಇದ್ದುದರಿಂದ ಧರ್ಮಪಾಲ ಅವರು ಜೀಪಿನಿಂದ ಇಳಿದು ರಸ್ತೆ ಬದಿ ನಿಂತಿದ್ದ ವೇಳೆ, ಜೀಪು ಚಲಾಯಿಸುತ್ತಿದ್ದ ಧರ್ಮಪಾಲರ ಮಗ

ಬಂಟ್ವಾಳ : ಹಿರಿಯ ರಂಗಭೂಮಿ ಕಲಾವಿದ ಚಿ. ರಮೇಶ್ ಕಲ್ಲಡ್ಕ ನಿಧನ

ಕಲ್ಲಡ್ಕ ಕೊಳಕೀರು ನಿವಾಸಿ, ಹಿರಿಯ ರಂಗಭೂಮಿ ಕಲಾವಿದ, ತುಳು ರಂಗಭೂಮಿಯ ಕಲಾವಿದ, ಚಿತ್ರನಟ ಚಿ.ರಮೇಶ್ ಕಲ್ಲಡ್ಕ (68) ಅವರು ಜು.23ರ ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಕಳೆದ ಹಲವು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ಮಂಗಳೂರಿನ ಹೆಸರಾಂತ ನಾಟಕ ತಂಡ ಕಲಾಸಂಗಮದಲ್ಲಿ ಕಳೆದ 20 ವರ್ಷಗಳಿಂದ ಹತ್ತಾರು ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು.

ಪುತ್ತೂರಿನ ಕನ್ನಡದ ಕಟ್ಟಾಳು ಸೀತಾರಾಮ ರೈ ಬನ್ನೂರು ನಿಧನ

ಪುತ್ತೂರು: ಪುತ್ತೂರಿನ ಕನ್ನಡದ ಕಟ್ಟಾಳು ಬನ್ನೂರು ನಿವಾಸಿ ಸೀತಾರಾಮ ರೈ ಬನ್ನೂರು(76ವ)ರವರು ಜು.15 ರಂದು ನಿಧನರಾದರು. ಪುತ್ತೂರಿನಲ್ಲಿ ಕನ್ನಡ ರಾಜ್ಯೋತ್ಸವ ಸಹಿತ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಭಾಗವಹಿಸುತ್ತಿದ್ದ ಸೀತಾರಾಮ ರೈ ಬನ್ನೂರು ಅವರು ಹೃದಯಾಘಾತಕ್ಕೊಳಗಾಗಿ ಹಲವು ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ಪುತ್ರಿ ರೋಜಾ, ಪುತ್ರರಾದ ಬ್ಲಾಕ್ ಕಾಂಗ್ರೆಸ್‌

ಉಳ್ಳಾಲ: ನಾಪತ್ತೆ ಆದ ಯುವಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ

ಉಳ್ಳಾಲ: ಜು. 2 ರಂದು ರಾತ್ರಿ ಮಲಗುವ ಕೊಠಡಿ ಯಿಂದ ನಾಪತ್ತೆಯಾದ ಬೀರಿ‌ ನಿವಾಸಿ ಯುವಕನ ಮೃತ ದೇಹ ಉಚ್ಚಿಲ ರೈಲ್ವೇ ಗೇಟ್ ಸಮೀಪ ಪತ್ತೆಯಾಗಿದೆ‌ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತಿಳಿದು ಬಂದಿದೆ.ಕೋಟೆಕಾರು ಬೀರಿ ನಿವಾಸಿ ಮೋಹದಾಸ್ ಅಮೀನ್ ಎಂಬವರ ಪುತ್ರ ತೇಜಸ್(25) ಜು.2ರಂದು ರಾತ್ರಿ ಮಲಗುವ ಕೋಣೆಯಿಂದ ನಾಪತ್ತೆಯಾಗಿದ್ದನುಈ ಕುರಿತು ತಂದೆಯವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂದು ಬೆಳಿಗ್ಗೆ ರೈಲ್ವೇ

ಬಂಟ್ವಾಳ: ಹಳ್ಳದಲ್ಲಿ ಯುವಕನ ಮೃತದೇಹ ಪತ್ತೆ- ಕೊಲೆ ಶಂಕೆ?

ಬಂಟ್ವಾಳದ ಬೆಂಜನಪದವಿನಲ್ಲಿ ಕಲ್ಲು ತೆಗೆದು ನಿರ್ಮಾಣಗೊಂಡ ನೀರು ನಿಂತ ಹಳ್ಳವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಬೆಂಜನಪದವು ನಿವಾಸಿ ಸಾಗರ್(28) ಮೃತಪಟ್ಟ ಯುವಕ. ಶನಿವಾರದಿಂದ ಸಾಗರ್ ನಾಪತ್ತೆಯಾಗಿದ್ದರು. ಮನೆಮಂದಿ ಹುಡುಕಾಟ ನಡೆಸಿದ್ದರು. ಆದರೆ ಆತ ಎಲ್ಲೂ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ಸಾಗರ್ ಮೃತದೇಹ ಹಳ್ಳವೊಂದರಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.