ಕಳೆದ ಹಲವಾರು ವರುಷಗಳಿಂದ ಮಸ್ಕಿಯ ವಿನಾಯಕ ಹೋಟೆಲ್ ಎದುರುಗಡೆ ಕಾರ್ಯನಿರ್ವಹಿಸುತ್ತಿದ್ದ ಶ್ರೀ ದುರ್ಗಾಂಬಾ ಟ್ರೇಡರ್ಸ್ ವ್ಯಾಪಾರ ಮಳಿಗೆಯು ಈಗ ಅವರ ಸ್ವಂತ ವಿಶಾಲ ಜಾಗವಾದ ಅರೆಹೊಳೆಯಲ್ಲಿ ಶುಭಾರಂಭಗೊಂಡಿತು. ನೂತನ ಮಳಿಗೆಯಲ್ಲಿ ಹೊಸ ಹೊಸ ಮಾದರಿಯ ಪಿಠೋಪಕರಣಗಳು, ಸಾನಿಟರಿ ವಸ್ತುಗಳು, ಪೈಂಟ್ಸ್ ಹಾಗೂ ಗುಣಮಟ್ಟದ ಕಟ್ಟಡ ಸಾಮಗ್ರಿಗಳು ಕೈಗೆಟುಕುವ ದರದಲ್ಲಿ
ಕುಂದಾಪುರ: ಬೆಳ್ವೆಯ ಗುಮ್ಮಹೊಲ ಎಂಬಲ್ಲಿನ ಸಂತ ಜೋಸೆಫರ ಚರ್ಚ್ ಧರ್ಮಗುರುಗಳು ಭಕ್ತಾದಿಗಳಿಗೆ ಅವಹೇಳನ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಚರ್ಚ್ ಮುಂಭಾಗ ಭಕ್ತರು ಪ್ರತಿಭಟನೆ ನಡೆಸಿದ್ದು, ವಾರದೊಳಗೆ ಧರ್ಮಗುರುಗಳ ಬದಲಾವಣೆ ಮಾಡದಿದ್ದಲ್ಲಿ ಪ್ರತಿಭಟನೆ ಜೊತೆಗೆ ಕ್ರೈಸ್ತ ಧರ್ಮ ತ್ಯಜಿಸುವ ಎಚ್ಚರಿಕೆ ನೀಡಿದ್ದಾರೆ. ಸುಮಾರು 60 ವರ್ಷಗಳ ಇತಿಹಾಸವಿರುವ ಉಡುಪಿ ಹೆಬ್ರಿ ತಾಲೂಕಿನ ಬೆಳ್ವೆ ಗುಮ್ಮಹೊಲದ ಸಂತ ಜೋಸೆಫರ ಚರ್ಚ್ಗೆ ಕಳೆದ 3 ತಿಂಗಳ ಹಿಂದೆ
ಕುಂದಾಪುರ: ಅಕ್ರಮವಾಗಿ ಗಾಂಜಾ ಹೊಂದಿದ್ದ ವ್ಯಕ್ತಿಯೋರ್ವನನ್ನು ಕುಂದಾಪುರ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರವಾರ ಬಿಣಗಾ ನಿವಾಸಿ ಜಾಫರ್ ಗುಡುಮಿಯಾ (28) ಬಂಧಿತ ಆರೋಪಿ. ಆರೋಪಿಯಿಂದ ಸುಮಾರು 4೦,೦೦೦ ರೂ ಮೌಲ್ಯದ ೧ಕೆಜಿ 810 ಗ್ರಾಂ ತೂಕದ ಗಾಂಜಾ, 1೦,೦೦೦ ಮೌಲ್ಯದ 1ಗ್ರಾಂ ತೂಕದ ಬ್ರೌನ್ ಶುಗರ್, 2 ಮೊಬೈಲ್ 1,5೦೦ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ಅವರು ಸಿಬ್ಬಂದಿಗಳೊಂದಿಗೆ
ಕುಂದಾಪುರ: ಬಾರ್ ಮ್ಯಾನೇಜರೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರಿಗಾಗಿ ಸ್ಥಳಕ್ಕೆ ತೆರಳಿದ್ದ ವೇಳೆ ಆರೋಪಿಗಳ ತಂಡ ಏಕಾಏಕಿಯಾಗಿ ತಲವಾರು ದಾಳಿ ನಡೆಸಿದ ಪರಿಣಾಮ ಇಬ್ಬರು ಯುವಕರು ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.ತಲವಾರು ದಾಳಿಗೊಳಗೊಳಗಾದ ಕಾಲ್ತೋಡು ನಿವಾಸಿ ರವಿ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿ ಇದೀಗ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಶಿರೂರು ಗ್ರಾಮದ
ಕುಂದಾಪುರ: ಗಂಗೊಳ್ಳಿಯಲ್ಲಿ ಗೋ ಹತ್ಯೆಯನ್ನು ವಿರೋಧಿಸಿ ನಡೆದ ಬೃಹತ್ ಪಾದಯಾತ್ರೆಯ ಬಳಿಕ ಇಲ್ಲಿನ ಮೀನುಗಾರ ಮಹಿಳೆಯರಿಂದ ಮೀನು ಖರೀದಿ ಬಹಿಷ್ಕರಿಸಿದ ಅನ್ಯಧರ್ಮೀಯರ ನಡೆಯನ್ನು ಖಂಡಿಸಿ ಭಾನುವಾರ ಬಿಜೆಪಿ ಬೈಂದೂರು ಮಂಡಲ ಹಿಂದುಳಿದ ವರ್ಗ ಮೋರ್ಚಾ ವತಿಯಿಂದ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡುವ ಮೂಲಕ ಮೀನುಗಾರ ಮಹಿಳೆಯರಿಗೆ ಆತ್ಮಸ್ಥೈರ್ಯ ನೀಡಿದರು. ಈ ವೇಳೆಯಲ್ಲಿ ಮಾತನಾಡಿದ ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ
ಕುಂದಾಪುರ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ನಗರ ಠಾಣಾಧಿಕಾರಿ ಹೊಡೆದಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ ಅನ್ಯಧರ್ಮದ ಹುಡಗನೊಬ್ಬ ಚೈತ್ರಾ ಕುಂದಾಪುರ ಅವರ ಬಗ್ಗೆ ಅವಹೇಳನಕಾರಿ ವ್ಯಾಟ್ಸಪ್ ಸ್ಟೇಟಸ್ ಹಾಕಿದ ಹಿನ್ನೆಲೆ ಆ ಹುಡುಗ ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಜಗಳ ನಡೆದಿತ್ತು. ಘಟನೆಯ ಬಳಿಕ ಹಿರಿಯರ ನೇತೃತ್ವದಲ್ಲಿ ನಗರ
ಕುಂದಾಪುರ: ಸರಕಾರದ ಅನೇಕ ವರ್ಷಗಳ ಪ್ರಯತ್ನದಿಂದ ಶಿಕ್ಷಣ ಇಲಾಖೆ ಒಂದು ಹಂತಕ್ಕೆ ಬಂದು ತಲುಪಿದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಪರಿಪೂರ್ಣತೆ ಕಂಡಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆ ಆಗಬೇಕು. ಅನೇಕ ಮಕ್ಕಳಿಗೆ ತಮ್ಮಲ್ಲಿರುವ ಜ್ಞಾನವನ್ನು ಬಳಸಿಕೊಳ್ಳಲು ಇನ್ನೂ ಕೂಡ ಸ್ವಾತಂತ್ರ್ಯ ದೊರೆತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.ಅವರು ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1.20 ಕೋ.ರೂ. ವೆಚ್ಚದಲ್ಲಿ
ಕುಂದಾಪುರ: ದೇವಸ್ಥಾನದ ರಕ್ಷಣೆಯ ಹೆಸರಲ್ಲಿ ನಾಟಕವಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದೀಗ ಹಿಂದೂ ದೇವಾಲಯಗಳನ್ನು ಉರುಳಿಸಲು ಮುಂದಾಗಿದೆ. ಬಿಜೆಪಿ ನಾಯಕರ ಇಂತಹ ಕಪಟ ಹಿಂದೂತ್ವಕ್ಕೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ವಾಗ್ದಾಳಿ ನಡೆಸಿದರು. ಅವರು ಮೈಸೂರು ನಂಜನಗೂಡಿನ ಪುರಾತನ ಹಿಂದೂ ದೇವಾಲಯ ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನು ದ್ವಂಸ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ದ
ಕುಂದಾಪುರ: ಪ್ರತೀ ವಷರ್ಷವೂ ಬಿರುಬೇಸಿಗೆಯಲ್ಲಿ ತಲ್ಲೂರು ಗ್ರಾ.ಪಂ ವ್ಯಾಪ್ತಿಯ ಪಿಂಗಾಣಿಗುಡ್ಡೆ ಹಾಗೂ ಉಪ್ಪಿನಕುದ್ರು ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಾರೆ. ಸೌಕೂರು ಏತ ನೀರಾವರಿ ಯೋಜನೆಯ ಮೂಲ ಯೋಜನೆಯಂತೆ ತಲ್ಲೂರು ಗ್ರಾ.ಪಂ ವ್ಯಾಪ್ತಿಗೆ ನೀರು ಕಲ್ಪಿಸಲು ಮೂಲನಕ್ಷೆ ತಯಾರಿಸಲಾಗಿತ್ತು. ಆದರೆ ರಾಜಕೀಯ ಸ್ವಹಿತಾಸಕ್ತಿಗಳಿಗಾಗಿ ಮೂಲ ಯೋಜನೆಯನ್ನು ಕೈಬಿಟ್ಟಿದ್ದು ತಲ್ಲೂರು ಗ್ರಾ.ಪಂ ವ್ಯಾಪ್ತಿಯ ಜನತೆಗೆ ದ್ರೋಹವೆಸಗಲಾಗಿದೆ ಎಂದು ಗ್ರಾಮಸ್ಥರು
ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಹಳ್ನಾಡು ಎಂಬಲ್ಲಿ ವಾಸವಾಗಿರುವ ಕಾರ್ತಿಕ್ (20) ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರೆ ಇತ್ತ ತಂದೆ ಮಾನಸಿಕ ಅಸ್ವಸ್ಥರು. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ತಲೆಯ ಮೇಲೆ ಹಾಕಿಕೊಂಡು, ತನ್ನ ವಿದ್ಯಾಭ್ಯಾಸವನ್ನೆ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿನ ಹೋಟೆಲ್ ನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಾರ್ತಿಕ್. ತನ್ನ ಎಳೆಯ ವಯಸ್ಸಿನಲ್ಲಿಯೇ ಸೋರುತ್ತಿದ್ದ ಮನೆಯನ್ನು ಮಾವನ ಸಹಾಯದಿಂದ ಹಾಗೂ ಬ್ಯಾಂಕಿನಿಂದ ಸಾಲ


















