ಉಡುಪಿ : ಉಡುಪಿ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಎದುರು ಶ್ರೀ ವಾಸುದೇವ ಬಿಲ್ಡಿಂಗ್‌ನ ನೆಲ ಮಹಡಿಯಲ್ಲಿ ಮಹತಿ ಎಂಟರ್‌ಪ್ರೈಸಸ್ ಪವರ್ ಟ್ರೋನಿಕ್ ಸಿಸ್ಟಮ್ ಸೊಲಾರ್ & ಯುಪಿಎಸ್ ಸೊಲ್ಯೂಷನ್ಸ್‌ನ ಉದ್ಘಾಟನಾ ಸಮಾರಂಭವು ಫೆ.04ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ರಜತಪೀಠಪುರ ಪೇಜಾವರ ಅಧೋಕ್ಷಜ ಮಠದ ಪರಮ ಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ
ಕೆಳ ಮತ್ತು ಮಧ್ಯಮ ವರ್ಗದ ಜನರ ಏಳಿಗೆಯ ದೃಷ್ಠಿಯಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ. ಅಟಲ್ ಟಿಂಕರ್ ಲ್ಯಾಬ್‌ಗಳನ್ನು ಶಾಲೆಗಳಿಗೆ ವಿಸ್ತರಿಸಿರುವುದು, ಆದಾಯ ತೆರಿಗೆ ಪಾವತಿಯ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಿರುವುದು, ಕಿಸಾನ್ ಕೆಡಿಟ್‌ನ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದು ಜೊತೆಗೆ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸೆಂಟರ್‌ಗಳನ್ನು ತೆರೆಯುವುದಲ್ಲದೆ ಜೀವರಕ್ಷಕ ಔಷಧಗಳಿಗೆ ಜಿಎಸ್‌ಟಿಯಿಂದ
ಭಾರತೀಯ ಕೋಸ್ಟ್‌ಗಾರ್ಡ್ ನ 49ನೆ ರೈಸಿಂಗ್ ಡೇಯ ಅಂಗವಾಗಿ ನಡೆದ ‘ಡೇ ಎಟ್ ಸೀ’ ಎಂಬ ಕೋಸ್ಟ್ ಗಾರ್ಡ್‌ನಿಂದ ಶೌರ್ಯದ ಅಣುಕು ಪ್ರದರ್ಶನ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ ನಡೆಯಿತು. ಸಮುದ್ರ ಮಧ್ಯೆ ಹಡಗುಗಳಲ್ಲಿ ಸಂಭವಿಸುವ ಅನಾಹುತ, ಕಡಲ್ಗಳ್ಳರ ಪತ್ತೆ, ಅಪಾಯಕ್ಕೆ ಸಿಲುಕುವ ಮೀನುಗಾರಿಕಾ ಬೋಟು ಹಾಗೂ ಮೀನುಗಾರರ ರಕ್ಷಣೆಯ ನಿಟ್ಟಿನಲ್ಲಿ ಕರಾವಳಿ ರಕ್ಷಣಾ ಪಡೆಯಿಂದ ನಡೆಸಲಾಗುವ
ಚೀನಾದ ಹಾರ್ಬಿನ್‌ನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಏಷ್ಯನ್ ವಿಂಟರ್ ಗೇಮ್ಸ್ 2025ಕ್ಕೆ ಮಂಗಳೂರಿನ ಡೇನಿಯಲ್ ಕಾನ್ಸೆಸಾವೊ ಮತ್ತು ಡ್ಯಾಶಿಯಲ್ ಕಾನ್ಸೆಸಾವೊ ಅವರು ಟೀಮ್ ಇಂಡಿಯಾ-ಐಸ್ ಸ್ಕೇಟಿಂಗ್‌ಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಜಿಲ್ಲೆಯಲ್ಲಿ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡುವವರು ಅನೇಕರಿದ್ದಾರೆ. ಅದೇ ಸಾಲಿಗೆ ಮಂಗಳೂರಿನ ಸಹೋದರ ಮತ್ತು ಸಹೋದರಿಯಾದ ಡೇನಿಯಲ್ ಕಾನ್ಸೆಸಾವೊ ಮತ್ತು ಡ್ಯಾಶಿಯಲ್ ಕಾನ್ಸೆಸಾವೊ ಅವರು ಸೇರಿದ್ದಾರೆ. ಇದೀಗ ಇಂಡಿಯಾ
ಉಡುಪಿ ಜಿಲ್ಲೆಯ ಆರೋಪಿತ ನಕ್ಸಲ್ ಮಹಿಳೆ ಲಕ್ಷ್ಮಿ ತೊಂಬಟ್ಟು ಶರಣಾಗಿದ್ದಾಳೆ. ಈ ಮೂಲಕ ಕರ್ನಾಟಕ ಮೂಲದ ಎಲ್ಲಾ ನಕ್ಸಲರು ಶರಣಾದಂತಾಗಿದೆ. ಲಕ್ಷ್ಮಿ ಸ್ವಇಚ್ಛೆಯಿಂದ ಶರಣಾಗಿದ್ದು ಆಕೆಯನ್ನು ’ ’ಎ’ ಕೆಟಗರಿಯಲ್ಲಿ ಪರಿಗಣಿಸಿ ಪರಿಹಾರ ನೀಡಲು ಜಿಲ್ಲಾಡಳಿತ ಶಿಫಾರಸು ಮಾಡಿದೆ. ಉಡುಪಿಯಲ್ಲಿ ಒಂದು ಅಪರೂಪದ ನಕ್ಸಲ್ ಶರಣಾಗತಿ ನಡೆಯಿತು. ಕಳೆದ ಒಂದು ದಶಕದಿಂದ ಮುಖ್ಯ ವಾಹಿನಿಯಲ್ಲಿ ಇದ್ದರೂ ಕರ್ನಾಟಕದಲ್ಲಿ ಕಾಣಿಸಿಕೊಳ್ಳದ ಉಡುಪಿ ಮೂಲದ ಲಕ್ಷ್ಮಿ ಜಿಲ್ಲಾಡಳಿತದ ಮುಂದೆ
ಕಾರ್ಕಳ, ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಜನವಿರೋಧಿ ನೀತಿ ಖಂಡಿಸಿ ಫೆಬ್ರವರಿ 6 ರಂದು ತಾಲೂಕು ಕಚೇರಿ ಮುಂಭಾಗ ಬೆಳಿಗ್ಗೆ 10 ಗಂಟೆಯಿಂದ ಪ್ರತಿಭಟನೆ ಸಭೆ ನಡೆಯಲಿದೆ ಎಂದು ಬಿಜೆಪಿ ಕ್ಷೇತ್ರ ಅಧ್ಯಕ್ಷ ನವೀನ್ ನಾಯಕ್ ಮಾಹಿತಿ ನೀಡಿದರು. ಕಳೆದ ಎರಡು ವರ್ಷಗಳಲ್ಲಿ ಆಡಳಿತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಗ್ರಾಮೀಣ ಭಾಗದ ಜನರ ನಿತ್ಯ ಜೀವನಕ್ಕೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ. ಹಿಂದೂ ಕಾರ್ಯಕರ್ತರಿಗೆ
ಮಂಗಳೂರಿನ ಉರ್ವ ಸ್ಟೋರ್‌ನ ಕರಾವಳಿ ಲೇಖಕಿಯರ ವಾಚಕರ ಸಂಘದ ಹಾಲ್‌ನಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಸಹಯೋಗದೊಂದಿಗೆ ’ಧರ್ಮ ಭಗಿನಿಯರು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಮಹಿಳೆ ಮತ್ತು ಸನ್ಯಾಸ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಸಹ ನಡೆಯಿತು. ಜಗತ್ತಿನಲ್ಲಿ ಹಿಸ್ ಸ್ಟೋರಿ ಇದೆ, ಹರ್ ಸ್ಟೋರಿಯನ್ನು ನಾವೇ ಬರೆಯಬೇಕಾಗಿದೆ. ಹೆಣ್ಣುಮಕ್ಕಳನ್ನು ಅಡುಗೆ ಕೋಣೆ, ಹೆರಿಗೆ ಕೋಣೆಗೆ ಸೀಮಿತಗೊಳಿಸಿದ್ದ ಸಮಾಜದಲ್ಲಿ ನಮ್ಮದು ಹೋರಾಟದ,
ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ಮತ್ತೆ ಮೋಸ, ಮತ್ತೊಮ್ಮೆ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು. ಸಾಲಮಾಡಿಯಾದ್ರು ತುಪ್ಪ ತಿನ್ನು ಎನ್ನುವಹಾಗೆ ಒಟ್ಟು ಬಜೆಟ್ ನಲ್ಲಿ 24% ರಷ್ಟು ಸಾಲ 15.68 ಲಕ್ಷ ಕೋಟಿ ಸಾಲ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ. ಕೇಂದ್ರ ಸರ್ಕಾರದ ಒಟ್ಟು ಸ್ವೀಕೃತಿ 31.47 ಲಕ್ಷ ಮತ್ತು ಒಟ್ಟು ತೆರಿಗೆ
ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳುನಾಡಿನ ಖ್ಯಾತ ಚಿತ್ರ ನಿರ್ದೇಶಕ ಅತ್ಲೇ ಅವರು ಕುಟುಂಬ ಸಮೇತ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ತದನಂತರ ಶ್ರೀ ದೇವಳದ ಕಚೇರಿಯಲ್ಲಿ ಭಕ್ತಾದಿಗಳ ಅನ್ನದಾನಕ್ಕಾಗಿ ರೂಪಾಯಿ 10 ಲಕ್ಷದ ಬ್ಯಾಂಕ್ ಚೆಕ್ ಅನ್ನು ಕಾರ್ಯನಿರ್ವಹಣಾಧಿಕಾರಿಯವರಿಗೆ ನೀಡಿರುವರು. ಈ ಸಂದರ್ಭದಲ್ಲಿ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಅತ್ಲೇ ಅವರನ್ನು ಶಾಲು ಹೊಂದಿಸಿ ಸ್ಮರಣೆಗೆ
ರಾಜ್ಯದ ಅತಿ ದೊಡ್ಡ ದರೋಡೆ ಪ್ರಕರಣ ಎಂದು ಹೇಳಲಾದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿಗೆ ಪೊಲೀಸರು ಗುಂಡಿನ ರುಚಿ ತೋರಿಸಿದ ಘಟ ನೆ ನಡೆದಿದೆ. ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿ ಮುಂಬಯಿ ಧಾರಾವಿಯ ಮುರುಗಂಡಿ ಎಂಬಾತನ ಕಾಲಿಗೆ ಪೊಲೀಸರು ಗುಂಡೇಟು ಇಳಿಸಿದ್ದಾರೆ. ಕೋಟೆಕಾರು ಅಜ್ಜಿನಡ್ಕ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಪೊಲೀಸರು ಸ್ಥಳ ಮಹಜರು ನಡೆಸಲು ಆರೋಪಿ ಮುರುಗಂಡಿಯನ್ನು ಕೋಟೆಕಾರಿಗೆ ಕರೆದುಕೊಂಡು ಬಂದಿದ್ದರು. ಈ ವೇಳೆ




























