Home Posts tagged #mangalore (Page 28)

ಯುವಕರ ತಂಡದಿಂದ ಪೆಟ್ರೋಲ್ ಬಂಕ್ ನ ಸಿಬಂದಿಗೆ ಹಲ್ಲೆ

ಮೂಡುಬಿದಿರೆ : ಯುವಕರ ತಂಡವೊಂದು ಪೆಟ್ರೋಲ್ ಬಂಕ್ ನ ಸಿಬಂದಿಗಳಿಗೆ ಹಲ್ಲೆ ನಡೆಸಿದ ಘಟನೆ ಗುರುವಾರ ಸಂಜೆ ಮೂಡುಬಿದಿರೆಯಲ್ಲಿ ನಡೆದಿದೆ. ಹಲ್ಲೆಗೊಳಗಾಗಿರುವ ಸಿಬಂದಿಗಳಾದ ಸುರೇಶ್, ಮೌನೇಶ್ ಮತ್ತು ಪ್ರವೀಣ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಯುವಕರ ತಂಡವು ಸಿಬಂದಿ ಸುರೇಶ್ ಎಂಬಾತನ ಬಳಿ ಮಾತನಾಡಿ

ಅಯನಾ.ವಿ.ರಮಣ್ ಗೆ ಇಂಗ್ಲಿಷ್ ಎಮ್. ಎ ಯಲ್ಲಿ ಚಿನ್ನದ ಪದಕ

ಮೂಡುಬಿದಿರೆ : ಮೈಸೂರು ವಿಶ್ವವಿದ್ಯಾನಿಲಯವು 2024 – 25 ನೇ ಸಾಲಿನಲ್ಲಿ ನಡೆಸಿದ ಅಂತಿಮ ವರ್ಷದ ಎಮ್. ಎ ಪರೀಕ್ಷೆಯಲ್ಲಿ ಮೂಡುಬಿದಿರೆಯ ಅಯನಾ.ವಿ.ರಮಣ್ ಚಿನ್ನದ ಪದಕದೊಂದಿಗೆ ತೇರ್ಗಡೆಯಾಗಿದ್ದಾರೆ.ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಈ ಉನ್ನತ ವ್ಯಾಸಂಗ ನಡೆಸಿದ ಅಯನಾ. ವಿ. ರಮಣ್ ‘ ಅಮೆರಿಕನ್ ಲಿಟರೇಚರ್ ‘ವಿಷಯದಲ್ಲಿ ಗೋಲ್ಡ್ ಮೆಡಲ್ ಗೆದ್ದ ಸಾಧನೆ ಮಾಡಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡುಕುತ್ಯಾರು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶನೀಶ್ವರ ಪೂಜಾ ಮಹೋತ್ಸವ

ಕಟಪಾಡಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡುಕುತ್ಯಾರು ಪರಮಪೂಜ್ಯ ಜಗದ್ಗುರು ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶನೀಶ್ವರ ಪೂಜಾ ಮಹೋತ್ಸವವು ಶ್ರೀ ಸರಸ್ವತೀ ಯಾಗ ಶಾಲೆ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ನಡೆಯಲಿದೆ. ಶ್ರೀಗಳವರ ಸಾನಿಧ್ಯದಲ್ಲಿ ಈ ಮೊದಲು ಅನೇಕ ಸಮಾಜಮುಖೀ ಕಾರ್ಯಗಳು ನಡೆದಿವೆ

ಕಾರ್ಮಿಕ ವಿಮಾ ಯೋಜನೆಯ ಸೌಲಭ್ಯಗಳು ಸಿಗದ ಬಗ್ಗೆ ಸದನದ ಗಮನಕ್ಕೆ ತಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಕಾಪು: ರಾಜ್ಯದಲ್ಲಿ ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಪ್ರತಿ ಜಿಲ್ಲೆಯಲ್ಲಿಯೂ ಕಾರ್ಮಿಕ ರಾಜ್ಯ ವಿಮಾ ಯೋಜನೆಯ ಆಸ್ಪತ್ರೆಗಳಿದ್ದು, ಮಾರಾಣಾಂತಿಕ ಖಾಯಿಲೆಗಳಿಗೆ ಬೇಕಾದ ಔಷಧೋಪಚಾರಗಳ ಕೊರತೆ ಇರುವುದು ಸರಕಾರದ ಗಮನಕ್ಕೆ ಬಂದಿದೆಯೇ..? ಬಂದಿದ್ದಲ್ಲಿ ಕೈಗೊಂಡ ಕ್ರಮವೇನು ಹಾಗೂ ಕಳೆದ 2 ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರು ಸಹಜ ಹಾಗೂ ಕೆಲಸದ ಸ್ಥಳದಲ್ಲಿ ಮರಣ ಹೊಂದಿದ್ದಲ್ಲಿ ಅವಲಂಬಿತರಿಗೆ ಸರಕಾರ ನೀಡುಬಹುದಾದ

ಗೋವಾದ ಎಡಿಸಿ ಪ್ರಕಾಶನದಿಂದ “ಚಾರೊಳಿ ಕಿಂಗ್” ರೇಮಂಡ್ ಡಿಕೂನಾ ತಾಕೊಡೆಯವರಿಗೆ ಸನ್ಮಾನ

ಕಳೆದ ಆರು ವರ್ಷಗಳಲ್ಲಿ ಪ್ರತಿ ದಿನ ಒಂದು ಚಾರೊಳಿ ಚುಟುಕು ತನ್ನ ಮಾತೃಭಾಷೆ ಕೊಂಕಣಿಯಲ್ಲಿ ಬರೆದು ಇಂದಿಗೆ ಎಡುವರೆ ಸಾವಿರಕ್ಕೂ ಹೆಚ್ಚು ಚುಟುಕು ಕೊಂಕಣಿಯಲ್ಲಿ ಬರೆದು ಪ್ರಕಟಿಸಿದ ರೇಮಂಡ್ ಡಿಕೂನಾ ತಾಕೊಡೆ ಅವರಿಗೆ ಗೋವಾದ ಪನಜಿಯಲ್ಲಿ ಎಡಿಸಿ ಪ್ರಕಾಶನ ವತಿಯಿಂದ “ಚಾರೊಳಿ ಕಿಂಗ್” ಎಂದು ಸನ್ಮಾನ ಮಾಡಲಾಯಿತು. ಗೋವಾದ ಕೊಂಕಣಿ ಅಕಾಡೆಮಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ಹಾಡುಗಾರರು ,ಚಿತ್ರಗೀತೆ ರಚನಕಾರ ಪ್ರಶಾಂತ್

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ವತಿಯಿಂದ ಹಮ್ಮಿಕೊಂಡ ಕನ್ನಡ ಗೀತಾ ಗಾಯನ ಸ್ಪರ್ಧೆಯ ಫಲಿತಾಂಶ

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ವತಿಯಿಂದ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಕನ್ನಡ ಗೀತಾ ಗಾಯನ ಆನ್ ಲೈನ್ ಸ್ಪರ್ಧೆಯ ಫಲಿತಾಂಶಪ್ರಕಟಗೊಂಡಿದೆ. ವಿವಿಧ ಶಾಲೆಗಳ ಹಾಗೂ ಸಾರ್ವಜನಿಕವಾಗಿ ಪಿಯುಸಿವರೆಗಿನ ವಿದ್ಯಾರ್ಥಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದು, ಸ್ಪರ್ಧಿಗಳ ಹಾಡಿನ ಪ್ರಸ್ತುತಿ, ಸ್ವರ-ತಾಳ, ಲಯ, ಹೊಂದಾಣಿಕೆಯನ್ನು ಆಧಾರವಾಗಿಟ್ಟುಕೊಂಡು ತೀರ್ಪುಗಾರರ

ಹಿರಿಯ ಮದ್ದಲೆಗಾರ ಪದ್ಯಾಣ ಶಂಕರನಾರಾಯಣ ಭಟ್ ಗೆ 5 ನೇ ವಷ೯ದ ಶ್ರೀ ಹರಿಲೀಲಾ ಯಕ್ಷಗಾನ ಪ್ರಶಸ್ತಿ ಪ್ರದಾನ

ಮೂಡುಬಿದಿರೆ : ಇಲ್ಲಿನ ಅಲಂಗಾರು ಬಡಗುಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಜಿ ಯಕ್ಷ ಫೌಂಡೇಶನ್ ವತಿಯಿಂದ ಮಂಗಳವಾರ ನಡೆದ ಶ್ರೀ ಹರಿಲೀಲಾ ಯಕ್ಷಗಾನದ ೫ನೇ ವರ್ಷದ ಪ್ರಶಸ್ತಿ ಪ್ರದಾನ ಮತ್ತು ಯಕ್ಷ ನಾದೋತ್ಸವವು ಮಂಗಳವಾರ ನಡೆಯಿತು. ಅರ್ಥಧಾರಿ, ಯಕ್ಷಗಾನ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆಯ ಶಬ್ಧ ಹೆಚ್ಚುತ್ತಿದ್ದು ಇದರಿಂದಾಗಿ ಪಂಚವಾದ್ಯಗಳೂ ಮೂಲೆ ಗುಂಪಾಗುತ್ತಿದೆ

ಅಖಿಲ ಭಾರತ ಸೀನಿಯರ್ ನ್ಯಾಶನಲ್ ಸಾಫ್ಟ್ ಬಾಲ್ ಚಾಂಪಿಯನ್‍ಶಿಪ್‍ : ಬನ್ನಡ್ಕ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ : ಡಿ.13ರಿಂದ 18ರವರೆಗೆ ಕೊಲ್ಕೊತ್ತಾದಲ್ಲಿ ನಡೆಯಲಿರುವ ಅಖಿಲ ಭಾರತ ಸೀನಿಯರ್ ನ್ಯಾಶನಲ್ ಸಾಫ್ಟ್ ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಇಲ್ಲಿನ ಬನ್ನಡ್ಕ ವಿಶ್ವವಿದ್ಯಾಲಯ ಕಾಲೇಜಿನ ತೃತೀಯ ಬಿಸಿಎ ವಿದ್ಯಾರ್ಥಿನಿಯರಾದ ಸಂಗೀತಾ ಪೂಜಾರಿ ಮತ್ತು ನಿಖಿತಾ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರತ್ನಾಕರ ಪುತ್ತೂರಾಯ ತಿಳಿಸಿದ್ದಾರೆ.

ಎರ್ಮಾಳು: ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹೆದ್ದಾರಿಯಿಂದ ಧರೆಗೆ ಉರುಳಿದ ಕಾರು,ಓರ್ವ ಸಾವು

ಪಡುಬಿದ್ರಿ:ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ತೋಟಕ್ಕೆ ಉರುಳಿ ಕಾರಿನಲ್ಲಿದ್ದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಪಡುಬಿದ್ರಿ ರಾ.ಹೆ.66 ರಲ್ಲಿ ತಡರಾತ್ರಿ 2 ಗಂಟೆಯ ಸುಮಾರಿಗೆ ಎರ್ಮಾಳು ತೆಂಕ ಸೇತುವೆ ಬಳಿ ಘಟಸಿದೆ. ಮೃತರನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಮಾಲಿಕ ಕುಡುಪು ನಿವಾಸಿ ಅಭಿಷೇಕ್ (ಅಭಿ) ಎಂದು ಗುರುತಿಸಲಾಗಿದೆ. ಕಾಪು ಮೂಳೂರಿನ ಸಾಯಿರಾಧ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ನೇಹಿತರೊಂದಿಗೆ

ಪ್ರತಿಷ್ಠಿತ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಕೀರ್ತನ್ KP ಭಾರತೀಯ ವಾಯುಸೇನೆಗೆ ಆಯ್ಕೆ

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಕೀರ್ತನ್ KP ರವರು ಭಾರತೀಯ ವಾಯುಸೇನೆಯ ನೇಮಕಾತಿಯ ನೇಮಕಾತಿ ಪ್ರಕ್ರಿಯೆಗಳಲ್ಲಿ ಉತ್ತೀರ್ಣರಾಗಿ ಆಯ್ಕೆಗೊಂಡಿರುತ್ತಾರೆ, ಹಲವಾರು ಸೇನಾ ನೇಮಕಾತಿಗಳು ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿಗಳ ಆಯ್ಕೆ ಪ್ರಕ್ರಿಯೆಗಳಿಗೆ ತರಬೇತಿ ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯ ಯಶಸ್ವೀ ಪಯಣನಕ್ಕೆ ಮತ್ತೊಂದು ಬಹುದೊಡ್ಡ ಯಶಸ್ಸು ದೊರಕಿದ್ದು ನಿರಂತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಕೀರ್ತನ್ ರವರ