Home Posts tagged #mangalore (Page 4)

ಬೆಳ್ತಂಗಡಿ: ತ್ರಿಶಲ ಜೈನ್ ಅವರಿಗೆ ಭಾರತ್ ಸ್ಕೌಟ್ ಏಂಡ್ ಗೈಡ್ ALT ಅರ್ಹತೆ

ಬೆಳ್ತಂಗಡಿ: ಸ. ಉ. ಪ್ರಾ. ಶಾಲೆ ಬಂಗಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿಯಾದ ತ್ರಿಶಲ ಜೈನ್ ರವರು ಭಾರತ್‌ ಸ್ಕೌಟ್ ಏಂಡ್ ಗೈಡ್ ಇದರ ಗೈಡ್ ಕ್ಯಾಪ್ಟನ್ ರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ರಾಷ್ಟ್ರೀಯ ತರಬೇತಿ ಕೇಂದ್ರ ಪಚಿಮರಿ ಮಧ್ಯಪ್ರದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ 65ನೇ ಸಹಾಯಕ ಲೀಡರ್ (ALT) ತರಬೇತಿದಾರರ ತರಬೇತಿಯಲ್ಲಿ ಭಾಗವಹಿಸಿ 2025-26 ನೇ

ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನ : ಎರಡು ತಿಂಗಳಲ್ಲಿ 15 ಕೋಟಿಗೂ ಮಿಕ್ಕಿ ಆದಾಯ

ಸುಬ್ರಹ್ಮಣ್ಯ ಜನವರಿ 21 : ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2025 ನವಂಬರ್ ಹಾಗೂ ಡಿಸೆಂಬರ್ ನ ಎರಡು ತಿಂಗಳಲ್ಲಿ ಒಟ್ಟು 14 ಕೋಟಿ 77 ಲಕ್ಷದ 80,000 ರೂ. ಆದಾಯ ಬಂದಿರುತ್ತದೆ.ನವೆಂಬರ್ ತಿಂಗಳಲ್ಲಿ ವಿವಿಧ ಸೇವೆಗಳಿಂದ 4,5621739 ಕೋಟಿರೂಪಾಯಿ ಹುಂಡಿಯಿಂದ 1,0976957 ಕೋಟಿ ರೂಪಾಯಿ ಹಾಗೂ ಅನ್ನದಾನ ನಿಧಿಯಿಂದ 8357769 ಲಕ್ಷ ರೂಪಾಯಿ ಆದಾಯ ಬಂದಿರುತ್ತದೆ. ಹಾಗೆಯೇ ಡಿಸೆಂಬರ್ ತಿಂಗಳ ವಿವಿಧ

​ಹಾಸನ: ಅಪ್ರಾಪ್ತ ಬಾಲಕಿಯ ಮೇಲೆ ಲೈಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಪೋಕ್ಸೊ ಕಾರಾಗೃಹ ಶಿಕ್ಷೆ

ಅಪ್ರಾಪ್ತ ಬಾಲಕಿಯ ಮೇಲೆ ಲೈಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಇಲ್ಲಿನ ಪೋಕ್ಸೊ (P0CSO) ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ಗುರುವಾರ ಮಹತ್ವದ ತೀರ್ಪು ನೀಡಿದೆ. ​ಬಾಲಕಿಯ ಮೇಲೆ ನಡೆದಿದ್ದ ಈ ಘೋರ ಕೃತ್ಯದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ಪ್ರಕಟಿಸಿದ್ದಾರೆ. ದಂಡದ ಮೊತ್ತದ ಜೊತೆಗೆ, ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ 7

ಮಲ್ಲಿಕಟ್ಟೆ ಶಿವಭಾಗ್ ವಾರ್ಡ್‌ನ ಪಾರ್ಕ್ ಅವ್ಯವಸ್ಥೆ – ನಾಗರಿಕರ ನಿರ್ಲಕ್ಷ್ಯದ ಪ್ರತಿಬಿಂಬ

ಪಾರ್ಕ್ ಉಳಿಸುವ ಹೊಣೆ ಯಾರದು ? ನಗರದ ಮಲ್ಲಿಕಟ್ಟೆ ಶಿವಭಾಗ್ ವಾರ್ಡ್ ಸಂಖ್ಯೆ 34 ವ್ಯಾಪ್ತಿಯಲ್ಲಿ ಇರುವ ಪಾರ್ಕ್ ಇಂದು ಸಂಪೂರ್ಣ ಅವ್ಯವಸ್ಥೆಯ ಗೂಡಾಗಿದೆ. ಮಕ್ಕಳ ಆಟ, ಹಿರಿಯರ ವಾಕಿಂಗ್‌, ಸಾರ್ವಜನಿಕರ ವಿಶ್ರಾಂತಿಗಾಗಿ ನಿರ್ಮಿಸಲಾಗಿದ್ದ ಈ ಪಾರ್ಕ್‌ ಈಗ ಅಸ್ತವ್ಯಸ್ತ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಪಾರ್ಕ್‌ಗೆ ಬರುವ ನಾಗರಿಕರು ಅನೇಕ ಅನಾನುಕೂಲಗಳನ್ನು ಅನುಭವಿಸಬೇಕಾಗಿದ್ದು, ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಕಿಂಗ್‌ಗೆ

ಯೇನೇಪೋಯದಲ್ಲಿ ರಾಷ್ಟ್ರೀಯ ಯುವದಿನಾಚರಣೆ – ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಾಗಾರ

ಸ್ವಾಮಿ ವಿವೇಕಾನಂದರ ಜನ್ಮ ದಿನದ ಸಂದರ್ಭದಲ್ಲಿಆಚರಿಸಲಾದ ರಾಷ್ಟ್ರೀಯ ಯುವದಿನ 2026ಅನ್ನುಅನುಸಂಧಾನಿಸಿ, ಯೇನೇಪೋಯ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತುಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕವು ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಾಗಾರವನ್ನು ಆಯೋಜಿಸಿತು. ಕಾರ್ಯಕ್ರಮವು19 ಜನವರಿ 2026, ಬೆಳಿಗ್ಗೆ10:30 ರಿಂದ ಮಧ್ಯಾಹ್ನ 12:30ರವರೆಗೆ ಕಾಲೇಜು ಸಭಾಂಗಣದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಮಂಗಳೂರು ಮೂಲದ ORESO ಸಂಸ್ಥೆಯ ಸ್ಥಾಪಕಿ ಮತ್ತು

ಮೂಡುಬಿದಿರೆ : ಸಿಎಸ್‌ಇಇಟಿ ಪರೀಕ್ಷೆಯಲ್ಲಿ ಆಳ್ವಾಸ್‌ನ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ : ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಜನವರಿ ಆವೃತ್ತಿಯಲ್ಲಿ ನಡೆದ ಕಂಪೆನಿ ಸೆಕ್ರಟರೀಸ್ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ (ಸಿಎಸ್‌ಇಇಟಿ) ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 13 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪ್ರೀತA ಬಸವರಾಜ್ ಪಟ್ಟಣಶೆಟ್ಟಿ (121), ದೀಕ್ಷಿತ್ ಕುಮಾರ್ (120), ಸುಜೀತ್ ರಾಘವೇಂದ್ರ ಎ (120), ಯಶವಂತ ರೆಡ್ಡಿ ಎಸ್ (111), ರುಜುಲಾ ಕೆ (110), ದಿಯಾ

ರಿಯಾಳುಲ್ ಇಸ್ಲಾಂ ದಫ್ ಕಮಿಟಿ 50ನೇ ವಾರ್ಷಿಕ ಮಹಾ ಸಮ್ಮೇಳನ ಮತ್ತು ದಫ್ ರಾತೀಬ್ ಕಾರ್ಯಕ್ರಮ

ಸಜೀಪ ನಡು; ಇಲ್ಲೀಯ ರಿಯಾಳುಲ್ ಇಸ್ಲಾಂ ದಫ್ ಕಮಿಟಿ 50ನೇ ವಾರ್ಷಿಕ ಮಹಾ ಸಮ್ಮೇಳನ ಮತ್ತು ದಫ್ ರಾತೀಬ್ ಕಾರ್ಯಕ್ರಮವು ಜನವರಿ 22 ರಿಂದ 25 ವರೇಗೆ ಬಹಳ ವಿಜೃಂಭಣೆಯಿಂದ ಜರುಗಲಿರುವ ಅಲ್ ಹಾಜಿ ಅಬ್ದುಲ್ ಲತೀಫ್ ನಿಝಾಮೀ, ಅಬ್ದುಲ್ ಸಲಾಂ ಫೈಝಿ ಎಡಪಾಲ, ವಿಧಾನ ಸಭಾ ಸ್ಪೀಕರ್ ಡಾಕ್ಟರ್ ಯು.ಟಿ.ಖಾದರ್, ಯು.ಕೆ.ಅಬ್ದುಲ್‌ ಅಝೀಝ್ ದಾರಿಮಿ, ಕೆ.ಐ.ಅಬ್ದಲ್ ಖಾದಿರ್ ದಾರಿಮಿ, ಇಬ್ರಾಹೀಂ ಬಾತಿಷಾ ತಂಙಳ್,ಎಚ್.ಎಸ್.ಹೈದರ್ ದಾರಿಮಿ ಮುಂತಾದ ಉಲೇಮಾ,ಉಮರಾಗಳು

ಮೂಡುಬಿದಿರೆ : ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಚಿಕಿತ್ಸೆಗೆ ಧನ ಸಹಾಯ

ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನ ಬೆಟ್ಟು, ಪಡುಮಾರ್ನಾಡ್ ಇದರ 87ನೇ ಸೇವಾ ಯೋಜನೆಯ ಜನವರಿ ತಿಂಗಳ 2ನೇ ಯೋಜನೆಯ 10,000ವನ್ನು ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಐಶ್ವರ್ಯ ಅವರ ಚಿಕಿತ್ಸೆಗೆ ನೀಡಲಾಯಿತು. ಐಶ್ವರ್ಯ ಅವರು ತನ್ನ ಪತಿ ಜಗದೀಶ್ ಆಚಾರ್ಯ ಅವರೊಂದಿಗೆ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಮನೆಯಿಂದ ದ್ವಿಚಕ್ರ ವಾಹನ ದಲ್ಲಿ ಹೋಗುತ್ತಿರುವಾಗ ಮುಂಡ್ಕೂರು ದ್ವಾರದ ಬಳಿ ಅತೀ ವೇಗದಲ್ಲಿ ಬರುತ್ತಿದ್ದ ಕಾರೊಂದು ಇವರ

ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ : ಆಂಧ್ರಕ್ಕೆ ಭೇಟಿ ನೀಡಿದ ಅಧ್ಯಯನ ತಂಡ

ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ರೂಪಿಸಬೇಕಾದ ಕಾನೂನು ಪ್ರಕ್ರಿಯೆಗಳ ಬಗ್ಗೆ ಹಾಗೂ ಅನುಷ್ಠಾನದ ವಿಧಿವಿಧಾನಗಳ ಬಗ್ಗೆ ಅಧ್ಯಯನ ಮಾಡಲು ರಾಜ್ಯ ಸರ್ಕಾರವು ನೇಮಿಸಿದ್ದ ಅಧ್ಯಯನ ಸಮಿತಿಯು ಆಂಧ್ರ ಪ್ರದೇಶಕ್ಕೆ ತೆರಳಿ 2 ದಿನಗಳ ಕಾಲ ಆಂಧ್ರ ಸರಕಾರದ ವಿವಿಧ ಇಲಾಖೆಗಳ ಜೊತೆಗೆ ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ರಾಜ್ಯ ನಿರ್ದೇಶಕರಾದ ಶ್ರೀಮತಿ ಕೆ.ಎಮ್

10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ದಸ್ತಗಿರಿ

ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ: 60/2009, ಕಲಂ:420 ಐಪಿಸಿ ಪ್ರಕರಣದಲ್ಲಿ, ಬಯೋಗ್ಯಾಸ್ ಸಂಪರ್ಕ ಮಾಡಿಸುವುದಾಗಿ ನಂಬಿಸಿ, ಹಣ ಪಡೆದು ಮೋಸ ಮಾಡಿದ ಪ್ರಕರಣದಲ್ಲಿ, ಸುಮಾರು 10 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಾಸನ ಚನ್ನರಾಯಪಟ್ಟಣ ನಿವಾಸಿ S N ಚಂದ್ರೆಗೌಡ ಎಂಬಾತನನ್ನು, ಹಾಸನ ಚನ್ನರಾಯಪಟ್ಟಣದ ಬೆಳಗಿಹಳ್ಳಿ ಎಂಬಲ್ಲಿಂದ ದಸ್ತಗಿರಿ ಮಾಡಿ ದಿನಾಂಕ 20/01/2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.