Home Posts tagged #mangalore (Page 415)

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ನಾಮಪತ್ರ ಸಲ್ಲಿಕೆ

ಮಂಗಳೂರು: ಮಂಗಳೂರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ್ ಭಂಡಾರಿ ಸ್ಪರ್ಧಿಸುತ್ತಿದ್ದು, ಇಂದು ಅವರು ಚುನಾವಣಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ನಾಮಪತ್ರ ಸಲ್ಲಿಸಿದರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಭಂಡಾರಿ, ವಿದ್ಯಾರ್ಥಿ ಜೀವನದಿಂದಲೇ ನಾನು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದೇನೆ. ಕಳೆದ 40

ಎಸ್‌ಎಸ್‌ಎಫ್ ರಾಜ್ಯ ಪ್ರತಿಭೋತ್ಸವ

ಕರ್ನಾಟ ರಾಜ್ಯ ವಿದ್ಯಾರ್ಥಿ ಒಕ್ಕೂಟವು ಯುವ ಜನಾಂಗದದಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪೋಷಿಸಲು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುತ್ತಾ ಬಂದಿರುವ ಪ್ರತಿಭೋತ್ಸವ ರಾಜ್ಯ ಸಮಾವೇಶವು ನವೆಂಬರ್ 26 ರಿಂದ 28 ರ ವರೆಗೆ ಕೃಷ್ಣಾಪುರದಲ್ಲಿ ನಡೆಯಲಿದೆ ಎಂದು ರಾಜ್ಯ ಪ್ರತಿಭೋತ್ಸವ ಸಮಿತಿಯ ಚೇರ್‌ಮೆನ್ ಕೆ.ಎಂ. ಮುಸ್ತಫಾ ನಈಮಿ ಹಾವೇರಿ ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.

ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಗೆ ರೈಫಲ್ ಕ್ಲಬ್ 8 ಮಂದಿ ಸ್ಪರ್ಧಿಗಳು ಭಾಗಿ : ಮುಖ್ಯ ಕೋಚ್ ಮುಖೇಶ್ ಕುಮಾರ್

64 ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಗೆ ಮಂಗಳೂರು ರೈಫಲ್ ಕ್ಲಬ್‌ನ ಎಂಟು ಮಂದಿ ಶೂಟರ್‌ಗಳು ಪ್ರತಿನಿಧಿಸಲಿದ್ದಾರೆ ಎಂದು ಮುಖ್ಯ ಕೋಚ್ ಮುಖೇಶ್ ಕುಮಾರ್ ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. 2021 ರಲ್ಲಿ ಸ್ಮಾಲ್ ಬೋರ್ ರೈಫಲ್ ಈವೆಂಟ್‌ಗಳನ್ನು ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾವು ಎಂಪಿ ಸ್ಟೇಟ್ ಶೂಟಿಂಗ್ ಅಕಾಡೆಮಿ ಶೂಟಿಂಗ್ ರೇಂಜ್‌ಗಳು, ಗೋರೆಗಾಂವ್, ಭೋಪಾಲ್‌ನಲ್ಲಿ ನವೆಂಬರ್

ಯೇನೆಪೊಯ ನರ್ಸಿಂಗ್ ಕಾಲೇಜಿನ ವತಿಯಿಂದ ಸಮ್ಮೇಳನ

ಯೇನೆಪೋಯ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಟ್ಟ ಯೇನೆಪೋಯ ನರ್ಸಿಂಗ್ ಕಾಲೇಜು ಮಂಗಳೂರು ಮತ್ತು ಭಾರತದ ಶುಶ್ರೂಷಕರ ಸಂಶೋಧನಾ ಸೊಸೈಟಿ ಜಂಟಿ ಸಹಯೋಗದಲ್ಲಿ ನವೆಂಬರ್ 26 ಮತ್ತು 27 ರಂದು 24 ನೇ ರಾಷ್ಟ್ರಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಯೆನೆಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ. ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸಂಶೋಧನಾ ಬರಹಗಳ ಮೂಲಕ ನರ್ಸಿಂಗ್ ಪಾಂಡಿತ್ಯವನ್ನು ಬಲಪಡಿಸುವುದು

ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಪೂರ್ಣ ಹಿನ್ನೆಲೆ ಶಾಸಕ ಡಾ. ಭರತ್ ಶೆಟ್ಟಿ ಭೇಟಿ, ಪರಿಶೀಲನೆ

ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಹಾಗೂ ಬೊಂದೇಲ್ – ಮಂಗಳ ಜ್ಯೋತಿ ಸಂಪರ್ಕಿಸುವ ಪಚ್ಚನಾಡಿ ಮುಖ್ಯ ರಸ್ತೆ, ಎರಡೂ ಬದಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ವೇಗ ಪಡೆದು ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಲೋಕಾರ್ಪಣೆಗೊಳಿಸುವ ಮುನ್ನ ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರ ಸೂಚನೆ ಮೇರೆಗೆ ಪರಿಶೀಲನೆ ನಡೆಸಲು ಪಚ್ಚನಾಡಿ ರೈಲ್ವೇ ಬ್ರಿಡ್ಜ್ ಕಾಮಗಾರಿ ಪ್ರದೇಶಕ್ಕೆ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈರವರು ಭೇಟಿ ನೀಡಿದರು.   ಇವರಿಗೆ

ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್’ ಕಿರೀಟ ಮುಡಿಗೇರಿಸಿಕೊಂಡ ಅನನ್ಯಾ ಸಿಂಗ್

ಮಂಗಳೂರಿನ ವೆಲೆನ್ಸಿಯಾದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ವಿದ್ಯಾರ್ಥಿನಿಯಾದ ಅನನ್ಯಾ ಸಿಂಗ್ ಅವರು ’ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್’ ಕಿರೀಟವನ್ನು ಮುಡಿಗೇರಿಸಿದ್ದಾರೆ ನವದೆಹಲಿಯ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಆಯೋಜಿಸಿರುವ ’ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್- 2021’ಸ್ಪರ್ಧೆಯಲ್ಲಿ ಅನನ್ಯಾ ಸಿಂಗ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಅವರು

ರೆ. ಜಾರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಗಾರ್ಡ್‌ನ್ ಲೋಕಾರ್ಪಣೆ

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ವಿದೇಶಿ ಮಿಷನರಿಗಳು ಸಲ್ಲಿಸಿದ ಸೇವೆಗಳು ಸ್ಮರಣೀಯ. ಇದಕ್ಕೆ ಪೂರಕವಾಗಿ ದೇಶೀಯ ಸಭಾ ಪಾಲಕರುಗಳು ಸಭಾ ಪ್ರಾಂತ್ಯದ ಅಭಿವೃದ್ಧಿಗಾಗಿ ಸಭಾ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇಂಥವರಲ್ಲಿ ರೆ. ಜಾರ್ಜ್ ಎ. ಬೆರ್ನಾಡ್ ಕೂಡ ಒಬ್ಬರು. ಇಂಥವರನ್ನು ಸ್ಮರಿಸಿ ಇವರ ಹೆಸರಿನಲ್ಲಿ ಕರ್ನಾಟಕ ಥಿಯಲಾಜಿಕಲ್ ಕಾಲೇಜಿನ ಮುಖಾಂತರ ಗಾರ್ಡನ್ ಒಂದನ್ನು ನಿರ್ಮಾಣ ಮಾಡಿರುವುದು ಅಭಿನಂದನೀಯ ಎಂದು ಚರ್ಚ್ ಆಫ್ ಸೌತ್ ಇಂಡಿಯಾ

ನಳಿನ್ ಕುಮಾರ್‌ಗೆ ಎನ್‌ ಇಪಿ ಅಂದ್ರೇನು ಗೊತ್ತಾ..?: ಮಂಗಳೂರಲ್ಲಿ ಎನ್‌ಎಸ್‌ಯುಐ ನಾಯಕರ ಆಕ್ರೋಶ

ರಾಜ್ಯದಲ್ಲಿ ಏಕಾಏಕಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ. ಶಿಕ್ಷಣ ನೀತಿ ಹೇಗಿರಬೇಕು, ಏನೆಲ್ಲಾ ಬದಲಾವಣೆ ಆಗಿದೆ ಎನ್ನುವುದರ ಬಗ್ಗೆ ಶಾಲೆ, ಕಾಲೇಜಿನ ಆಡಳಿತ ಸಂಸ್ಥೆಯಾಗಲೀ, ಶಿಕ್ಷಕ ವೃಂದಕ್ಕಾಗಲೀ ಮಾಹಿತಿ ಇಲ್ಲ. ಹತ್ತನೇ ಕ್ಲಾಸ್ ಕಲಿಯದವರು ಶಿಕ್ಷಣ ನೀತಿ ಮಾಡಿದ್ದಾರೆ. ಇಲ್ಲಿನ ಬಿಜೆಪಿ ನಾಯಕರಿಗಾಗಲೀ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಗೆ ಆಗಲೀ ಶಿಕ್ಷಣ ನೀತಿಯ ಬಗ್ಗೆ ಗೊತ್ತಾ ಎಂದು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ

ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ:ಲೋಕಾಯುಕ್ತ ನಿರೀಕ್ಷಕ ಅಮಾನುಲ್ಲಾ 

ಮಂಗಳೂರು:  ಕರ್ನಾಟಕ ಲೋಕಾಯುಕ್ತ, ನಗರದ ರಥಬೀದಿಯ ಡಾ. ದಯಾನಂದ ಪೈ – ಪಿ. ಸತೀಶ್ ಪೈ ಸರಕಾರಿ ಪ್ರಥಮದರ್ಜೆ ಸಹಯೋಗದಲ್ಲಿ ವಿಚಕ್ಷಣ ಜಾಗೃತಿ ಸಪ್ತಾಹ -2021ರ ಅಂಗವಾಗಿ ಪ್ರತಿಜ್ಞಾವಿಧಿ, ಜಾಗೃತಿ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಲೋಕಾಯುಕ್ತದ ಮಂಗಳೂರು ನಿರೀಕ್ಷಕರಾದ ಅಮಾನುಲ್ಲಾ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ

ಪಡುಬಿದ್ರಿ ಮುಖ್ಯ ಪೇಟೆಯಲ್ಲೇ ಸರಣಿ ಕಳ್ಳತನ

ಪಡುಬಿದ್ರಿ ಪೊಲೀಸ್ ಠಾಣೆಯ ನೂರು ಮೀಟರ್ ಅಂತರ, ಪೇಟೆಭಾಗದ ಪೊಲೀಸ್ ವಾಹನ ತಪಾಸಣಾ ಸ್ಥಳಕ್ಕೆ ಇಪ್ಪತ್ತು ಮೀಟರ್ ಅಂತರದಲ್ಲಿರುವ ಆರು ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿಸುವ ಮೂಲಕ ಸರಣಿ ಕಳ್ಳತನ ನಡೆಸಿದ್ದಾರೆ. ಪೊಲೀಸರಿಗೆ ಸವಾಲಾದ ಈ ಕಳ್ಳತನ ಪ್ರಕರಣ ಭೇದಿಸಲು ಪೊಲೀಸರು ಸಿಸಿ ಕ್ಯಾಮಾರಗಳ ಮೊರೆ ಹೋಗಿದ್ದಾರೆ. ಕಳ್ಳತನ ನಡೆದ ಎರಡು ಅಂಗಡಿಗಳ ಅಂಚು ತೆಗೆದು ಒಳ ನುಗ್ಗಿದರೆ, ಉಳಿದ ಹಣ್ಣು ಹಂಪಲು, ಕಬ್ಬಿನ ಜ್ಯೂಸ್, ತರಕಾರಿ, ಹೂವಿನಂಗಡಿ ಇವುಗಳಿಗೆ ಭದ್ರತೆ