Home Posts tagged #mangalore (Page 47)

ಮುಲ್ಕಿ: ಇಂಜಿನಿಯರ್ಸ್ ಡೇ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಮುಲ್ಕಿ: ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮುಲ್ಕಿ ಹಾಗೂ ರೋಟರಿ ಕ್ಲಬ್ ಮುಲ್ಕಿ ಸಹಯೋಗದಲ್ಲಿ ಸೆಪ್ಟೆಂಬರ್ 16, 2025 ರ ಮಂಗಳವಾರದಂದು ಸಂಜೆ 6:30ಕ್ಕೆ ಕರ್ನಾಟಕದ ಮುಲ್ಕಿ, ಕಾರ್ನಾಡ್ ನಲ್ಲಿರುವ ರೋಟರಿ ಶತಾಬ್ಧ ಭವನದಲ್ಲಿ ಇಂಜಿನಿಯರ್ಸ್ ಡೇ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಭಾರತ ರತ್ನ ಸರ್ ಎಂ.

ಮೂಡುಬಿದಿರೆ: ಕಬಡ್ಡಿ ಅಳಿಯೂರು ಸರ್ಕಾರಿ ಪ್ರೌಢ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದ 17ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಳಿಯೂರಿನ ಸರ್ಕಾರಿ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ ಭಾಸ್ಕರ ಪಾಲಡ್ಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

ಮಂಗಳೂರು: ಆ.29ರಂದು ಕರಾವಳಿಯಾದ್ಯಂತ ನೆತ್ತೆರೆಕೆರೆ ಸಿನಿಮಾ ಬಿಡುಗಡೆ

ಮಂಗಳೂರು:ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಸ್ವರಾಜ್ ಶೆಟ್ಟಿ ನಿದೇರ್ಶನದಲ್ಲಿ ಲಂಚುಲಾಲ್ ಕೆ ಎಸ್ ನಿರ್ಮಾಣದಲ್ಲಿ ತಯಾರಾದ ನೆತ್ತೆರೆಕೆರೆ ತುಳು ಸಿನಿಮಾ ಆಗೋಸ್ಟ್ ೨೯ ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಚಿತ್ರತಂಡದವರು ಮಾಹಿತಿ ನೀಡಿದರು. ನೆತ್ತೆರೆಕೆರೆ ಸಿನಿಮಾ ಸಿನಿಮಾರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಠಿಸಲಿದೆ. ನೆತ್ತೆರೆಕೆರೆ ವಿಭಿನ್ನ ಬಗೆಯ ಕಮರ್ಷಿಯಲ್ ಚಿತ್ರವಾಗಿದೆ. ಪಾತ್ರಗಳು ಭಿನ್ನವಾಗಿದೆ.

ಮಂಗಳೂರು: ಐಐಎಂಎಂ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್‌ನ ಮಂಗಳೂರು ಶಾಖೆಯ ವಾರ್ಷಿಕ ಸಭೆಯು ನಡೆಯಿತು. ಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್ ಮಂಗಳೂರು ಶಾಖೆಯ ವಾರ್ಷಿಕ ಮಹಾಸಭೆಯು ಮಂಗಳೂರಿನ ಬಿಜೈನಲ್ಲಿರುವ ಹೋಟೆಲ್ ಓಷನ್ ಪರ್ಲ್ ಇನ್‌ನಲ್ಲಿ ನಡೆದಿದ್ದು, 2024-25 ರ ಅವಧಿಗೆ ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ ಸತೀಶ್ ಸತ್ಯನಾರಾಯಣ ಅವರನ್ನು ಶಾಖೆಯ

ಕಾರ್ಕಳ:ಕಾಳು ಪಾಣಾರ ಅವರಿಗೆ ತುಳು ಅಕಾಡೆಮಿಯ ಚಾವಡಿ ತಮ್ಮನ

ಕಾರ್ಕಳ: ತುಳುನಾಡಿನ ಕಂಬಳವು ಒಂದು ಕ್ರೀಡೆ ಮಾತ್ರವಲ್ಲ, ಅದು ಜಾತ್ಯತೀತವಾಗಿ ಮತ್ತು ಮೇಲುಕೀಳು ಎಂಬ ಭಾವನೆಯಿಲ್ಲದೆ, ಸಮಾಜದ ಎಲ್ಲ ಜನರು ಒಂದೆಡೆ ಸೇರುವ ತೌಳವ ಆಚರಣೆಯಾಗಿದೆ. ಕಂಬಳದಲ್ಲಿ ಗೆಲ್ಲುವ-ಸೋಲುವ ಸ್ಪರ್ಧೆ ಇದ್ದರೂ ಅಂತಿಮವಾಗಿ ಇದು ಸಮಾಜದ ಸರ್ವರನ್ನು ಒಂದಾಗಿಸುತ್ತದೆ’ ಎಂದು ಕಂಬಳದ ವಿದ್ವಾಂಸರಾದ ಗುಣಪಾಲ ಕಡಂಬ ಅವರು ಅಭಿಪ್ರಾಯ ಪಟ್ಟರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಸೆಂಟರ್‌

ಭಜನಾ ಮಂದಿರದ ಕಾಮಗಾರಿಗಳ ಮನವಿ ಪತ್ರ ಬಿಡುಗಡೆ

ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿ (ರಿ.) ಆರ್ಬಿಕೋಡಿ 80 ಬಡಗುಬೆಟ್ಟು ಇದರ ಭಜನಾ ಮಂದಿರದ ತಗಡು ಚಪ್ಪರ ನಿರ್ಮಾಣ, ನೆಲಹಾಸು, ಆಡಳಿತ ಕಚೇರಿ ಹಾಗೂ ಇತರ ಕಾಮಗಾರಿಗಳ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಮನವಿ ಪತ್ರ ಬಿಡುಗಡೆ ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿ (ರಿ.) ಆರ್ಬಿಕೋಡಿ 80 ಬಡಗುಬೆಟ್ಟು ಇದರ ಭಜನಾ ಮಂದಿರದ ವಠಾರದಲ್ಲಿ ಶಾಶ್ವತ ತಗಡು ಚಪ್ಪರ ನಿರ್ಮಾಣ, ನೆಲಹಾಸು, ಆಡಳಿತ ಕಚೇರಿ ಹಾಗೂ ಇತರ ಕಾಮಗಾರಿಗಳ “ಮನವಿ ಪತ್ರ ಬಿಡುಗಡೆ

ನೆತ್ತರಕೆರೆ ಸಿನಿಮಾದ ಟ್ರೈಲರ್ ಬಿಡುಗಡೆ

ತುಳು ಮತ್ತು ಕನ್ನಡ ಬಹುನಿರೀಕ್ಷೆಯ ಸಿನಿಮಾ ನೆತ್ತರಕೆರೆ.. ಆಗಸ್ಟ್ 29ರಂದು ಸಿನಿಮಾ ತೆರೆಕಾಣಲಿದ್ದು, ಅಸ್ತ್ರಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತು.ತುಳು ಮತ್ತು ಕನ್ನಡದ ಬಹು ನಿರೀಕ್ಷೆಯ ಸಿನಿಮಾ ನೆತ್ತರಕೆರೆ… ಈಗಾಗಲೇ ಟೀಸರ್ ಬಿಡುಗಡೆಗೊಂಡು ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಅಸ್ತ್ರ ಪ್ರೋಡಕ್ಷನ್ ಯುಟ್ಯೂಬ್ ಚಾನೆಲ್ ನಲ್ಲಿ ಸಿನಿಮಾದ ಸಾಂಗ್ ಬಿಡುಗಡೆಯಾಗಿದ್ದು, ಸಖತ್ ಸೌಂಡ್ ಮಾಡುತ್ತಿದೆ. ಇದೀಗೆ ಸಿನಿಮಾದ

ದಕ್ಷಿಣ ಕನ್ನಡ ಹಾಗೂ ಕೊಡಗು ಗ್ರಂಥಪಾಲಕರ ಸಂಘ: ಆಳ್ವಾಸ್‌ನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ

ಮೂಡುಬಿದಿರೆ : ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗ್ರಂಥಪಾಲಕರ ಸಂಘ ಮತ್ತು ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ `ಗ್ರಂಥಾಲಯ ಸೇವೆಗಳ ನಾವಿನ್ಯತೆ ಹಾಗೂ ಪರಿಣಾಮಕಾರಿ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ’ವಿಷಯದ ಕುರಿತು ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಶನಿವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಮಂಗಳೂರು ವಿವಿ ಕಾಲೇಜಿನ ಡಾ.ಮಾಧವ ಎಂ.ಕೆ ಮಾತನಾಡಿ, ಕಲಿಕೆಯ ದೇಗುಲವಾದ

ಸುಳ್ಯ: ಪಿಎಸ್ಆರ್ ಸಿಲ್ಕ್ & ಸಾರೀಸ್‌ನ ಸಾರಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ

ಸುಳ್ಯ:ಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಜನರ ಮನಗೆದ್ದ ಪಿ.ಎಸ್.ಆರ್.ಸಿಲ್ಕ್ ವತಿಯಿಂದ ಸುಳ್ಯದ ಜ್ಯೂನಿಯರ್ ಕಾಲೇಜು ರಸ್ತೆಯ ಲಯನ್ಸ್ ಸೇವಾ ಸದನದಲ್ಲಿ ಸಾರಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ.22ರಿಂದ ಆರಂಭಗೊಂಡ ಸಾರಿಗಳ ಪ್ರದರ್ಶನ ಎರಡು ದಿನ ಮುಗಿದಿದ್ದು ಇನ್ನು ಒಂದು ದಿನ ಮಾತ್ರ ಲಭ್ಯವಿದೆ.ಆ.24 ರಂದು ಭಾನುವಾರ ರಾತ್ರಿ 8 ಗಂಟೆಯ ತನಕ ಪ್ರದರ್ಶನ ಮತ್ತು

ಕರಾವಳಿ ಪ್ರವಾಸೋದ್ಯಮ ಕುರಿತ ಜಿಲ್ಲಾ ಜನ ಪ್ರತಿನಿಧಿಗಳ ಸಭೆ

ಕರಾವಳಿ ಪ್ರವಾಸೋದ್ಯಮ ಕುರಿತಾಗಿ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ಸಭಾಧ್ಯಕ್ಷರು, ಸಚಿವರ ಉಪಸ್ಥಿತಿಯಲ್ಲಿ ನಡೆದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಕರಾವಳಿಯ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆ ಮಾನ್ಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉಪಮುಖ್ಯಮಂತ್ರಿ ಶ್ರೀ