Home Posts tagged #mangalore (Page 48)

ಪಡುಬಿದ್ರಿ : ಯುವವಾಹಿನಿ ಪಡುಬಿದ್ರಿ ಘಟಕದ 2025-26ನೇ ಸಾಲಿನ ಪದಗ್ರಹಣ

ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕದ 2025-26ನೇ ಸಾಲಿನ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾ ನಿಧಿ ವಿತರಣೆ ಕಾರ್ಯಕ್ರಮ ಆ. 24 ಆದಿತ್ಯವಾರ ಮಧ್ಯಾಹ್ನ ಗಂಟೆ 2 ಕ್ಕೆ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಜರಗಲಿದೆ. ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷೆ ಶಶಿಕಲಾ

ಮೂಡುಬಿದಿರೆ: ದೊಡ್ಮನೆ ಫ್ರೆಂಡ್ಸ್ ಬೆದ್ರ ಇವರ ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ

ಮೂಡುಬಿದಿರೆ: ದೊಡ್ಮನೆ ಫ್ರೆಂಡ್ಸ್ ಬೆದ್ರ ಇವರ ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ ಮೂಡಬಿದಿರೆಯ ಶ್ರೀ ಗೌರಿ ದೇವಸ್ಥಾನದಲ್ಲಿ ನಡೆಯಿತು. ತಂಡದ ಹೊಸ ಲೋಗೋವನ್ನು ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡುಬಿದರೆ ಇವರು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, 9 ವರ್ಷಗಳಿಂದ ದೊಡ್ಮನೆ ಫ್ರೆಂಡ್ಸ್ ತಂಡವು ಸ್ವಚ್ಛತಾ ಕಾರ್ಯಕ್ರಮ, ಚಂದ್ರಶೇಖರ

ಏಳು ಪಟ್ಟಣ ಮೊಗವೀರ ಸಭಾ : ಕದ್ರಿಯಲ್ಲಿ ಸಿಯಾಳ ಅಭಿಷೇಕ

ಮಂಗಳೂರು : ಇಲ್ಲಿನ ಏಳು ಪಟ್ಟಣ ಮೊಗವೀರ ಸಂಯುಕ್ತ ಸಭಾದ ವತಿಯಿಂದ ಶ್ರಾವಣ ಮಾಸದ ಪ್ರಥಮ ಸೋಮವಾರ ಪದ್ಧತಿಯಂತೆ ಈ ಬಾರಿ ಕೂಡಾ ಕದ್ರಿ ಮಠದಲ್ಲಿ ಹಾಗೂ ಕದ್ರಿ ಕ್ಷೇತ್ರದಲ್ಲಿ ಸಿಯಾಳ ಅಭಿಷೇಕ ನೆರವೇರಿತು.ಕದ್ರಿ ಮಠದ ಆವರಣದಲ್ಲಿ ಇರುವ ಪೂರ್ವ ಕಾಲದ ಮಠಾಧೀಶರ ಬೃಂದಾವನಗಳಲ್ಲಿ, ಶ್ರೀ ಕಾಳ ಬೈರವೇಶ್ವರ ಸಾನಿಧ್ಯದಲ್ಲಿ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಈ ಅಭಿಷೇಕ ಆರಾಧನೆ ನಡೆಯಿತು.ಸಮುದ್ರ ಪೂಜೆ ನಡೆದ ಬಳಿಕ ಕದ್ರಿಯಲ್ಲಿ ಈ ಸಿಯಾಳ ಅಭಿಷೇಕವನ್ನು ಏಳು

ಆಭರಣ ಜ್ಯುವೆಲ್ಲರ್ಸ್ ನಿರ್ದೇಶಕ ಸುಭಾಶ್ ಎಂ.ಕಾಮತ್ ಗೆ  ಗೋಲ್ಡ್ ಅವಾರ್ಡ್ 

ಉಡುಪಿ: ನಗರದ ಹೆಸರಾಂತ ಆಭರಣ ಜ್ಯುವೆಲ್ಲರ್ಸ್ ನಿರ್ದೇಶಕ ಸುಭಾಶ್ ಎಂ.ಕಾಮತ್ ಕೀನ್ಯಾದ ಮಸೈಮಾರಾದಲ್ಲಿ ಸೆರೆಹಿಡಿದಿರುವ ಎರಡು ಚೀತಾಗಳು ತನ್ನ ಬೇಟೆಯನ್ನು ಬೆನ್ನು ಹತ್ತುವ “ಹಂಗರ್ ವರ್ಸಸ್ ಹೋಪ್” ಛಾಯಾಚಿತ್ರಕ್ಕೆ ಓರಾ ಡಿ ಫ್ರೇಮ್ ಸರ್ಕ್ಯುಟ್ ಆಯೋಜಿಸಿದ ಛಾಯಾಚಿತ್ರ ಸ್ಪರ್ಧೆಯ ವನ್ಯಜೀವಿ ವಿಭಾಗದಲ್ಲಿ ಕ್ಲಬ್ ಗೋಲ್ಡ್ ಅವಾರ್ಡ್ ಪಡೆದಿರುತ್ತಾರೆ. ಐವತ್ತಕ್ಕೂ ಹೆಚ್ಚು ದೇಶಗಳ ಛಾಯಾಗ್ರಾಹಕರು ಭಾಗವಹಿಸಿರುವ ಈ ಸ್ಪರ್ಧೆಯು ಪ್ರತಿಷ್ಟಿತ ಎಫ್. ಐ. ಎ. ಪಿ

ಮೂಡುಬಿದಿರೆ: ಚರ್ಚ್ ಪತ್ರ ದುರುಪಯೋಗ: “ಫೋಕಸ್” ವಾಟ್ಸಪ್ ಗ್ರೂಪಿನಿಂದ 12 ಲಕ್ಷ ಕಲೆಕ್ಷನ್, ಅಡ್ಮಿನ್ ಪೊಲೀಸರ ವಶಕ್ಕೆ

ಮೂಡುಬಿದಿರೆ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಗುವಿನ‌ ನೆರವು ಕೋರಿ ಬ್ಯಾಂಕ್ ಖಾತೆಯ ಮಾಹಿತಿ ಪತ್ರವನ್ನು ಚರ್ಚ್ ನ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ್ದು ಆಗ್ರೂಪ್ ನ ಅಡ್ಮಿನ್ ಅಕೌಂಟ್ ನಂಬರ್ ಅನ್ನು ಬದಲಾಯಿಸಿ ಹಣ ವಸೂಲಿ ಮಾಡಿದ್ದು, ಆತನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಯನ್ನು ವಿನೋದ್ ವಾಲ್ಟರ್ ಪಿಂಟೋ ಎಂದು ಗುರುತಿಸಲಾಗಿದೆ.ಪ್ರಕರಣದ ವಿವರ:ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.18 ರಂದು ತಾಕೋಡೆಯ ಹೋಲಿ

ಮೂಡುಬಿದಿರೆ : ಆಳ್ವಾಸ್ ನಲ್ಲಿ ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ : ಆಳ್ವಾಸ್ ಪದವಿ ಕಾಲೇಜಿನ ಆ್ಯಂಟಿ ರ‍್ಯಾಗಿಂಗ್ ಸೆಲ್, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೂತ್ ರೆಡ್‌ಕ್ರಾಸ್ ಘಟಕಗಳ ಜಂಟಿ ಆಶ್ರಯದಲ್ಲಿ ಮೂಡುಬಿದಿರೆ ಪೋಲೀಸ್ ಇಲಾಖೆಯ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮವು ಕುವೆಂಪು ಸಭಾಂಗಣದಲ್ಲಿ ನಡೆಯಿತು. ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರ‍್ಯಾಗಿಂಗ್ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಗೌರವಕ್ಕೆ ದಕ್ಕೆ ತರುವ ಗಂಭೀರ ಸಾಮಾಜಿಕ ಸಮಸ್ಯೆ. ಆ ಹಿನ್ನಲೆಯಲ್ಲಿ

ಸುಳ್ಯ ನ್ಯಾಯಾಲಯದಲ್ಲಿ ವಿಶೇಷ ಮಧ್ಯಸ್ಥಿಕಾ ಅಭಿಯಾನ : ಅಕ್ಟೋಬರ್ 7 ರವರೆಗೆ ಅವಕಾಶ

ಸುಳ್ಯ: ಸುಳ್ಯ ನ್ಯಾಯಾಲಯದಲ್ಲಿ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಎಂಬ 90 ದಿನಗಳ ವಿಶೇಷ ಮಧ್ಯಸ್ಥಿಕಾ ಅಭಿಯಾನ ಜುಲೈಯಿಂದ ಪ್ರಾರಂಭವಾಗಿದ್ದು, ಅಕ್ಟೋಬ‌ರ್ 7ರ ವರೆಗೆ ಈ ಅಭಿಯಾನ ನಡೆಯಲಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ವೈವಾಹಿಕ ಹಾಗೂ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ ಮತ್ತು ಸೇವಾ ಪ್ರಕರಣಗಳು,ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಗ್ರಾಹಕರ ವ್ಯಾಜ್ಯ

ಮಂಜೇಶ್ವರ ಅಬಕಾರಿ ಪೊಲೀಸರ ಮುಂದುವರಿದ ಕಾರ್ಯಾಚರಣೆ : ಮತ್ತೆ ದಾಖಲೆಗಳಿಲ್ಲದೆ ಸಾಗಾಟ ಮಾಡುತಿದ್ದ 96 ಪವನ್ ಚಿನ್ನಾಭರಣ ಸಹಿತ ಓರ್ವ ವಶಕ್ಕೆ

ಮಂಜೇಶ್ವರ: ಮಂಜೇಶ್ವರ ವಾಮಂಜೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಧಿಕಾರಿಗಳು ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಬಾನುವಾರ ಮಂಗಳೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕರ್ಣಾಟಕ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಂಜೇಶ್ವರ ಅಬಕಾರಿ ಇಲಾಖೆ ನಡೆಸಿದ ತಪಾಸಣೆಯಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 96 ಪವನ್ (762 ಗ್ರಾಂ) ಚಿನ್ನಾಭರಣಗಳೊಂದಿಗೆ ಒಬ್ಬನನ್ನು ಸೆರೆ ಹಿಡಿಯಲಾಗಿದೆ.ಬಾನುವಾರ ಸಂಜೆ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ನಲ್ಲಿ

ಉಡುಪಿ: ಮುಂದಿನ 5 ದಿನಗಳಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮುಂದಿನ 5 ದಿನಗಳಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆ.18 ಮತ್ತು 19 ರಂದು ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲೆಯಾದ್ಯಂತ ರಾತ್ರಿಯಿಂದಲೇ ಧಾರಾಕಾರ ಮಳೆಯಾಗುತ್ತಿದ್ದು ಜಿಲ್ಲೆಯ ಅಂಗನವಾಡಿ ,ಪ್ರಾಥಮಿಕ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ರಜೆ ಘೋಷಣೆ ಮಾಡಿದ್ದಾರೆ.ಮುಂದಿನ ಎರಡು ದಿನ ಅರಬ್ಬಿ

ಕಡಬ ಪಟ್ಟಣ ಪಂಚಾಯತ್ ಪ್ರಥಮ ಚುನಾವಣೆ:ಶೇ 79.83 ಮತದಾನ

ಕಡಬ: ಕಡಬ ಪಟ್ಟಣ ಪಂಚಾಯತ್ ನಡೆದ ಪ್ರಥಮ ಚುನಾವಣೆಯಲ್ಲಿ ಶೇ 79.83 ಮತದಾನವಾಗಿದ್ದು, ಯಾವುದೇ ಗೊಂದಲವಿಲ್ಲದೆ ಬೆಳಿಗ್ಗೆ 7 ರಿಂದ ಸಂಜೆ ಐದರ ತನಕ ಶಾಂತಿಯುತ ಮತದಾನವಾಗಿದೆ,32 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭಧ್ರವಾಗಿದ್ದು, ಒಟ್ಟು ಹದಿಮೂರು ವಾರ್ಡ್ಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ಅಭ್ಯರ್ಥಿಗಳನ್ನು ಕಣಕಕ್ಕಿಳಿಸಿದ್ದು, ಎಸ್.ಡಿ.ಪಿ.ಐ-೩, ಮುಸ್ಲಿಂ ಲೀಗ್-೧, ಪಕ್ಷೇತರರು-೨ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. 10