Home Posts tagged #mangalore (Page 65)

ಕುಂದಾಪುರ: ಕಾಂತಾರ ಖ್ಯಾತಿಯ “ಸ್ಟಾರ್ ಕಂಬಳ ಕೋಣ” ಇನ್ನು ಬರೀ ನೆನಪು

ಕುಂದಾಪುರ: ಸ್ಯಾಂಡಲ್‌ವುಡ್‌ನ ಸೂಪರ್‌ಹಿಟ್ ಚಲನಚಿತ್ರ ಕಾಂತಾರದ ಕೋಣ ಇನ್ನು ನೆನಪು ಮಾತ್ರ.ಕಾಂತಾರ ಸಿನೆಮಾದ ದೃಶ್ಯಗಳಲ್ಲಿ ನಟ ರಿಷಬ್ ಶೆಟ್ಟಿ ಅವರೊಂದಿಗೆ ತೆರೆಯ ಮೇಲೆ ಮಿಂಚಿದ್ದ ಜನಪ್ರಿಯ ಕೋಣ ‘ಅಪ್ಪು’ ಸಾವನ್ನಪ್ಪಿದೆ. ಇದರೊಂದಿಗೆ ಕರಾವಳಿ ಭಾಗದ ಕಂಬಳ ಪ್ರೇಮಿಗಳಲ್ಲಿ ಮತ್ತು ಚಿತ್ರಪ್ರೇಮಿಗಳಲ್ಲಿ ತೀವ್ರ ಬೇಸರ ಮನೆ ಮಾಡಿದೆ. ಕರಾವಳಿಯಲ್ಲಿ

ಮೂಡುಬಿದಿರೆ:ಕೃಷಿಯಿಂದ ಬೆಂಝ್ ಕಾರಿನವರೆಗೆ – ಪರಿಶ್ರಮವೇ ಯಶಸ್ಸಿನ ಬೀಗ: ರಾಜೇಶ್ ನಾಯ್ಕ್

ಮೂಡುಬಿದಿರೆ: ಇಂದಿನ ಯುಗದಲ್ಲಿ ಕೃಷಿಯನ್ನು ವೃತ್ತಿಯಾಗಿ ಆಯ್ಕೆ ಮಾಡುವುದು ಕೇವಲ ಪರಂಪರೆಯ ನಿರ್ವಹಣೆಯಲ್ಲ, ಅದೊಂದು ಜಾಣ ಆಯ್ಕೆ ಎಂದು ಸಾವಯವ ಕೃಷಿಕ ಹಾಗೂ ಶಾಸಕ ರಾಜೇಶ್ ನಾಯ್ಕ್ ನುಡಿದರು.ಅವರು ಆಳ್ವಾಸ್ ಮ್ಯಾನೆಜ್ಮೆಂಟ್ ವಿಭಾಗದ ಟ್ರೆöÊಬ್ಲೇಜ್ ವೇದಿಕೆ ಶುಕ್ರವಾರ, ಕುವೆಂಪು ಹಾಲ್‌ನಲ್ಲಿ ಆಯೋಜಿಸಿದ್ದ ವಿಶೇಷ ಅತಿಥಿ ಉಪನ್ಯಾಸ- ‘ನೆಲದಿಂದ ನೆಲೆವರೆಗೆ: ಕೃಷಿ ಉದ್ಯಮಿಯ ಯಶೋಗಾಥೆ’ ಕರ‍್ಯಕ್ರಮದಲ್ಲಿ ಮಾತನಾಡಿದರು.ಕೃಷಿಯಲ್ಲಿ ವರ್ಷದಲ್ಲಿ ಕೇವಲ ಎರಡು ತಿಂಗಳು

ತೆಂಕಮಿಜಾರು ಗ್ರಾ. ಪಂ. ಸದಸ್ಯ ಜೆ.ಕೆ.ಹಸನಬ್ಬ ನಿಧನ

ಮೂಡುಬಿದಿರೆ : ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಅಧ್ಯಕ್ಷ ಜೆ.ಕೆ.ಹಸನಬ್ಬ ( 56) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ತೆಂಕಮಿಜಾರು ಗ್ರಾಮ ಪಂಚಾಯತ್ ಗೆ ಸತತ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಒಂದು ಅವಧಿಯಲ್ಲಿ ಅಧ್ಯಕ್ಷರಾಗಿದ್ದರು.ಪರೋಪಕಾರ, ಪಂಚಾತಿಕೆಯಲ್ಲಿ ಮುಂಚೂಣಿಯಲ್ಲಿದ್ದ ಹಸನಬ್ಬ ಅವರು ತೋಡಾರು,ಮೂಡುಬಿದಿರೆ ಪರಿಸರದಲ್ಲಿ ಜನಪ್ರಿಯರಾಗಿದ್ದರು.ಮಾಜಿ ಸಚಿವ ದಿ.ಅಮರನಾಥ ಶೆಟ್ಟರ ಜೆ.ಡಿ.ಎಸ್.ನಲ್ಲೇ

ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ:’ಬ್ಯಾಕ್ ಟು ಊರು’ ಪರಿಕಲ್ಪನೆಗೆ, ಅಭಿವೃದ್ಧಿ-ಹೂಡಿಕೆಗಳಿಗೆ ಈ ಮನ್ನಣೆ ಪ್ರಬಲ ದಿಕ್ಸೂಚಿ: ಸಂಸದ ಕ್ಯಾ. ಚೌಟ

ನವದೆಹಲಿ: ಕಡಲ ನಗರಿ ಮಂಗಳೂರು ದೇಶದಲ್ಲೇ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಜಾಗತಿಕವಾಗಿ 49ನೇ ಸ್ಥಾನ ಪಡೆದಿರುವುದು ಬಹಳ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಇದು ಕೇವಲ ಕರಾವಳಿಗೆ ಮಾತ್ರವಲ್ಲದೆ, ಜಾಗತಿಕವಾಗಿಯೂ ಮಂಗಳೂರಿನ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ವಿಶ್ವದ ದೊಡ್ಡ ಡೇಟಾ ಸಂಗ್ರಹ ಸಂಸ್ಥೆಯಾದ ನಂಬಿಯೋ (Numbeo) ಇತ್ತೀಚೆಗೆ ಬಿಡುಗಡೆ ಮಾಡಿದ 2025ರ

ಅಲೋಶಿಯಸ್ ವಿವಿಯ ನಿವೇದಿತ ಅವರಿಗೆ ಪಿಎಚ್‌ಡಿ ಪದವಿ

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಾಣಿಜ್ಯ, ಹಣಕಾಸು ಮತ್ತು ಲೆಕ್ಕಶಾಸ್ತ್ರ ಶಾಲೆಯ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ನಿವೇದಿತರವರು ಮಂಡಿಸಿದ “Impact of Large-scale Retailing on Consumers and Small Traders: A Study with Reference to Dakshina Kannada District” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿಯನ್ನು ನೀಡಿದೆ. ಇವರು ಯುನಿವರ್ಸಿಟಿ ಕಾಲೇಜು

ಮಂಗಳೂರು:ಎಜೆ ಆಸ್ಪತ್ರೆ ಯಲ್ಲಿ ಪ್ರೋಸ್ಟೇಟ್ ವೃದ್ಧಿಗೆ ರೀಜಮ್ ಹೊಸ ಥೆರಪಿ ಪರಿಚಯ ದಕ್ಷಿಣ ಕನ್ನಡ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರಥಮ ಪ್ರಯೋಗ

ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ವಿಸ್ತರಿಸಿದ ಪ್ರಾಸ್ಟೇಟ್‌ಗೆ ಚಿಕಿತ್ಸೆ ನೀಡುವ ಅತ್ಯಾಧುನಿಕ ಹಾಗೂ ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸಾ ವಿಧಾನವಾದ ರೀಜಮ್ ಅನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಪರಿಚಯಿಸಿದೆ. ರೀಜಮ್ ಥೆರಪಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ನೀರಿನ ವಾಷ್ಪದ ಶಕ್ತಿಯನ್ನು ಬಳಸುವ ಪರಿಣಾಮಕಾರಿಯಾದ ವಿಧಾನವಾಗಿದೆ. ಇದು ದೀರ್ಘಕಾಲದ ಮೂತ್ರ ತೊಂದರೆಗಳಿಗೆ ಪರಿಹಾರ ನೀಡುತ್ತದೆ ಮತ್ತು

ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ, ಪಡು ಕುತ್ಯಾರು,ದುರ್ಗಾ ಮಹಿಳಾ ಮಂಡಳಿ ಪಡುಕುತ್ಯಾರು ವತಿಯಿಂದ ಶ್ರೀ ವರಲಕ್ಷ್ಮಿ ವ್ರತಾಚರಣೆ

ಪಡುಕುತ್ಯಾರು” ಶ್ರೀ ದುರ್ಗಾ ಮಂದಿರದಲ್ಲಿ ಶ್ರಾವಣ ಶುಕ್ರವಾರ ಆದ ಇಂದು ಶ್ರೀ ವರ ಮಹಾಲಕ್ಷ್ಮಿ ವ್ರತ ಪೂಜೆ ನೆರವೇರಿತು. ಶ್ರೀ ದುರ್ಗಾ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಪಡುಕುತ್ಯಾರು ಕೂಡವಳಿಕೆಯ ಸದಸ್ಯರು ಮತ್ತು ಕುಟುಂಬಸ್ಥರುದೇವರ ಅನುಗ್ರಹಕ್ಕೆ ಪ್ರಾರ್ಥನೆ ಸಲ್ಲಿಸಿದರು.ಈ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿಶ್ರೀ ದುರ್ಗಾಮಹಿಳಾ ಮಂಡಳಿ ಮತ್ತು ಪಡುಕುತ್ಯಾರು ಕೂಡುವಳಿಕೆಯ ಸದಸ್ಯರು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.

ಎನ್ನೆಂಸಿ ನೇಚರ್ ಕ್ಲಬ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಎನ್ನೆಂಸಿ ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ಇದರ 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಆಗಸ್ಟ್ 7ನೇ ಗುರುವಾರದಂದು ಕಾಲೇಜಿನ ಕಿರು ಸಭಾಂಗಣದಲ್ಲಿ ನಡೆಯಿತು. ವಾರ್ಷಿಕ ಚಟುವಟಿಕೆಗಳ ಭಿತ್ತಿಚಿತ್ರ ಅನಾವರಣಗೊಳಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ, ವಿಶೇಷ ಉಪನ್ಯಾಸ ಅವಧಿಯಲ್ಲಿ ಮಾತನಾಡಿದ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ಡಾ. ನವೀನ್ ಜಿ ಪಿ ಎ ಎನ್, ಪ್ರಕೃತಿ ಅಪಾರ

ವಿಟ್ಲ: ಕಾರು ಡಿಕ್ಕಿ – ಪಾದಚಾರಿಗೆ ಗಂಭೀರ ಗಾಯ

ವಿಟ್ಲ: ಕಾರೊಂದು ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಗಂಭೀರ‌ ಗಾಯಗೊಂಡ ಘಟನೆ ಆ.8ರಂದು ವಿಟ್ಲ ಠಾಣಾ ವ್ಯಾಪ್ತಿಯ ಪರ್ತಿಪ್ಪಾಡಿ ಎಂಬಲ್ಲಿ ನಡೆದಿದೆ. ಕುಡ್ತಮುಗೇರಿನ ಪ್ರಗತಿ ಸ್ವೀಟ್ಸ್ ನ ಮಾಲಿಕ ಜಗನ್ನಾಥ ಶೆಟ್ಟಿಗಾ‌ರ್ ಗಂಭೀರ ಗಾಯಗೊಂಡವರಾಗಿದ್ದಾರೆ. ಜಗನ್ನಾಥ ಶೆಟ್ಟಿಗಾರ್ ರವರು ಕುಡ್ತಮುಗೇರಿನಿಂದ ಪರ್ತಿಪ್ಪಾಡಿ ಕಡೆಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಅವರ ದ್ವಿಚಕ್ರ‌ ವಾಹನದ‌ ಟಯರ್ ಪಂಚರ್ ಆಗಿತ್ತು. ಆದ್ದರಿಂದ ಅವರು ತಮ್ಮ

ಮೂಡುಬಿದಿರೆ: ಆಳ್ವಾಸ್‌ನ ಹಿರಿಯ ವಿದ್ಯಾರ್ಥಿನಿ ಕಿನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ವಿಕಿಮೇನಿಯಾ 2025 ಸಮ್ಮೇಳನಕ್ಕೆ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಕಾಲೇಜಿನ ವಿಕಿಪೀಡಿಯಾ ಕ್ಲಬ್‌ನ ಕ್ರಿಯಾಶೀಲ ಸದಸ್ಯೆಯಾಗಿದ್ದ ಯಕ್ಷಿತಾ ಕೀನ್ಯಾದ ನೈರೋಬಿಯಲ್ಲಿ ಆಗಸ್ಟ್ 6ರಿಂದ 9ರವರೆಗೆ ನಡೆಯಲಿರುವ “ವಿಕಿಮೇನಿಯಾ 2025” ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಮೂವರಲ್ಲಿ ಇವರು ಒಬ್ಬರಾಗಿದ್ದಾರೆ. ವಿಕಿಮೇಡಿಯಾ ಫೌಂಡೇಶನ್‌ನ ಆಹ್ವಾನಿತರಿಂದ ಯಕ್ಷಿತಾ ಭಾರತ ದೇಶದ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ