Home Posts tagged #mangalore (Page 72)

ಮೂಡುಬಿದಿರೆ: ದ. ಕ. ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಕಾರ್ಯಾಗಾರ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಸಂಘ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ದ. ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಹಾಭಾಗಿತ್ವದಲ್ಲಿ ಒಂದು ದಿನದ ಕಾರ್ಯಾಗಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಪರಿಸರ ಜಾಗೃತಿ ಯಾನ

ಅವೈಜ್ಞಾನಿಕ ಕಾಮಗಾರಿಗಳು ಪಶ್ಚಿಮ ಘಟ್ಟಗಳಿಗೆ ಇಂದು ಅಪಾರ ಹಾನಿ ತಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಡಿನ ನಾಶ ಮುಂದಿನ ದಿನಗಳ ಭೀಕರತೆಯನ್ನು ಈಗಲೇ ಸಾರುತ್ತಿದೆ. ಉಳಿದಿರುವ ಕಾಡುಗಳನ್ನಾದರೂ ಉಳಿಸುವ ನಿರ್ಧಾರ ನಾವು ಮಾಡದಿದ್ದರೆ ಪ್ರಪಂಚ ನಾಶವಾಗುವ ದಿನ ದೂರವಿಲ್ಲ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಅಗತ್ಯದ ಬಗ್ಗೆ ಚಿಂತಿಸಬೇಕು ಎಂದು ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಹೇಳಿದರು.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಾಬಾ

ಸುಳ್ಯ ಎನ್ನೆoಪಿಯುಸಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕದ ವತಿಯಿಂದ ಪರಿಸರ ಜಾಗೃತಿ ಯಾನ ಪರಿಸರ ಗೀತೆ ಗಾಯನ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.ಮನುಷ್ಯ ತನ್ನ ದುರಾಸೆಗೆ ಪರಿಸರ ವನ್ನು ವಿನಾಶದ ಅಂಚಿಗೆ ತಳ್ಳ ಬಾರದು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕಾರ್ಯಕ್ರಮ ಉದ್ಘಾಟಕರಾದ ಎ ಓ ಎಲ್ ಇ (ರಿ)ಕಾರ್ಯದರ್ಶಿ ಕೆವಿ ಹೇಮನಾಥ್ ಅವರು ಹೇಳಿದರು. ಕ ಸಾ ಪ ಅಧ್ಯಕ್ಷರಾದ ಚಂದ್ರ ಶೇಖರ್ ಪೇರಾಲು ಅಧ್ಯಕ್ಷತೆ

ಸುಳ್ಯದ ಸಮಸ್ಯೆಗಳ ಬಗ್ಗೆ ಸಿ ಇ ಓ ಗಮನಕ್ಕೆ ತಂದ ರಾಧಾಕೃಷ್ಣ ಬೊಳ್ಳೂರು ನೇತೃತ್ವದ ಕಾಂಗ್ರೆಸ್ ನಿಯೋಗ

ದ. ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಪ್ರಥಮ ಬಾರಿಗೆ ಸುಳ್ಯ ತಾಲೂಕು ಪಂಚಾಯತ್ ಗೆ ಭೇಟಿ ನೀಡಿದ ಸಿ ಇ ಓ ವಿನಾಯಕ್ ಖರ್ಬಾರಿ ಯವರನ್ನು ತಾಲೂಕು ಪಂಚಾಯತ್ ಕಚೇರಿಯಲ್ಲಿ ಭೇಟಿ ಮಾಡಿದ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದ ಕಾಂಗ್ರೆಸ್ ನಿಯೋಗ ಸುಳ್ಯ ತಾಲೂಕಿಗೆ

ಮಂಗಳೂರು: ಜಾಗತಿಕ ತಂತ್ರಜ್ಞಾನ ಶ್ರೇಷ್ಠತೆಗೆ ನೋವಿಗೋ ಸೊಲ್ಯೂಷನ್ಸ್: ವರ್ಟೆಕ್ಸ್ ವರ್ಕ್‌ಸ್ಪೇಸ್‌ನಿಂದ ಸಂವಾದ ಕಾರ್ಯಕ್ರಮ

ಮಂಗಳೂರು: ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್ ವತಿಯಿಂದ ಯಶಸ್ವಿ ಸ್ವದೇಶಿ ಐಟಿ ಉದ್ಯಮಗಳಲ್ಲಿ ಒಂದಾದ ನೋವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರೊಂದಿಗೆ ’ದಿ ನೋವಿಗೋ ಸ್ಟೋರಿ’ ಎಂಬ ಶೀರ್ಷಿಕೆಯಲ್ಲಿ ಸಂವಾದ ಕಾರ್ಯಕ್ರಮ ಜು.18ರಂದು ಬಿಜೈ ಕಾಪಿಕಾಡ್‌ನ ಅಜಂತಾ ಬಿಸಿನೆಸ್ ಸೆಂಟರ್‌ನಲ್ಲಿ ಜರುಗಿತು.ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರಗುರುದತ್ತ ಶೆಣೈಅವರು ’ಜಾಗತಿಕತಂತ್ರಜ್ಞಾನ ಶ್ರೇಷ್ಠತೆಯಲ್ಲಿ ಮಂಗಳೂರಿನ

ಈದಿನ ಯೂಟ್ಯೂಬ್ ಬ್ಲಾಕ್ ತೆರವುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ

ಈದಿನ ಡಾಟ್ ಕಾಮ್ ಯೂಟ್ಯೂಬ್ ಬ್ಲಾಕ್ ಮಾಡಲು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಆ ಮೂಲಕ ಧರ್ಮಸ್ಥಳ ಮತ್ತು ಸೌಜನ್ಯ ವಿಚಾರಕ್ಕೆ ಸಂಬಂಧಿಸಿ ಈದಿನ ಡಾಟ್ ಕಾಮ್‌ಗೆ ಮೊದಲ ಗೆಲುವು ಸಿಕ್ಕಿದಂತಾಗಿದೆ. ಧರ್ಮಸ್ಥಳ ಮತ್ತು ಸೌಜನ್ಯ ವಿಷಯಕ್ಕೆ ಸಂಬಂಧಿಸಿದ ಸುದ್ದಿ ಪ್ರಕಟಿಸದಂತೆ ಇದ್ದ ಸಿವಿಎಲ್ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಧರ್ಮಸ್ಥಳ ದೇವಸ್ಥಾನದ ಟ್ರಸ್ಟ್‌ನ ಕೆಲವರು ಈದಿನ ಡಾಟ್ ಕಾಮ್

ಬೈಂದೂರು: ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಜಾತ್ರೆ ಸಂಭ್ರಮ

ಬೈಂದೂರು-ವಿಶ್ವವಿಖ್ಯಾತ ಮರವಂತೆಯ ಪ್ರಕೃತಿ ಸೊಬಗಿನ ತಾಣದಲ್ಲಿ ನೆಲೆ ನಿಂತಿರುವ ಪುರಾಣ ಪ್ರಸಿದ್ದ ಕ್ಷೇತ್ರ ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಜಾತ್ರೆ ಸಂಭ್ರಮದಿಂದ ಜರುಗಿತು. ಮಳೆ ನಡುವೆ ಬೆಳಗಿನಿಂದಲೇ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರ ಮಹಾಪೂರವೇ ಹರಿದು ಬಂದಿತು. ಕೆಲವರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಅಭಿಷೇಕ, ಪೂಜೆ, ಅರ್ಪಣೆ ಸಲ್ಲಿಸಿದರು. ಸಹಸ್ರಾರು ಭಕ್ತರು ಸರತಿ

ಉಪ್ಪುಂದ ಸಂರಕ್ಷಿತ ಸಮುದ್ರ ಪ್ರಬೇಧಗಳ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ

ಬೈಂದೂರು; ಯಶಸ್ವಿ ಫಿಶ್ ಮಿಲ್ ಮತ್ತು ಆಯಿಲ್ ಕಂಪೆನಿ, ಮಂಗಳೂರು ಐಸಿಎಆರ್-ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ, ಮೀನುಗಾರಿಕಾ ಇಲಾಖೆ – ಕರ್ನಾಟಕ ಸರ್ಕಾರ, ಸ್ಮಾಲ್ ಪೆಲಾಜಿಕ್ ಪರ್ಸಿನ್ ಫಿಷರೀಸ್ – ಕರ್ನಾಟಕ ಸ್ಪೇಟ್ FIP, ಆಳ ಸಮುದ್ರ ತಾಂಡೇಲರ ಸಂಘದ ವತಿಯಿಂದ ಅಳಿವಿನಂಚಿನಲ್ಲಿರುವ, ಅಪಾಯವನ್ನೆದುರಿಸುತ್ತಿರುವ, ಮತ್ತು ಸಂರಕ್ಷಿತ (ETP) ಸಮುದ್ರ ಪ್ರಭೇಧಗಳ ಸಂರಕ್ಷಣೆಯ ಕುರಿತು ಜಾಗ್ರತಿ ಮಾಹಿತಿ ಕಾರ್ಯಾಗಾರ

ಮೂಡುಬಿದಿರೆ: ಕಾಲೇಜು ವಿದ್ಯಾಥಿ೯ ಆತ್ಮಹತ್ಯೆ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕರಿಂಜೆಯಲ್ಲಿರುವ ನ್ಯೂ ವೈಬ್ರೆಂಟ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವನಿಗೆ ಆತನ ಪ್ರೇಯಸಿ ಮಾತು ಬಿಟ್ಟ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ನೆಹರುನಗರದ ವಿನಾಯಕ ಟಿ.ಮಿಸಾಳ ಅವರ ಮಗ ಸೂರ್ಯಮ್ ವಿನಾಯಕ ಮಿಸಾಳ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಈತ ನ್ಯೂ ವೈಬ್ರೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು ತಾನು ವಾಸ್ತವ್ಯದಲ್ಲಿದ್ದ ರೂಮಿನಲ್ಲಿ ಡೆತ್ ನೋಟ್ ಬರೆದಿಟ್ಟು

ಪಡುಬಿದ್ರಿ ಅಡಿಗಳ್ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ನಿಂದ ಸಮವಸ್ತ್ರ ವಿತರಣೆ

ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಡಿಗಳ್ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ನ ವತಿಯಿಂದ ಸಮವಸ್ತ್ರವನ್ನು ವಿತರಣ ಕಾರ್ಯಕ್ರಮ ನಡೆಯಿತು. “ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡುವ ಯೋಗ ನಮಗೆ ದೊರಕಿದೆ. ಇದು ನಿಜಕ್ಕೂ ಸೌಭಾಗ್ಯ. ಶಾಲೆಯ ಋಣ ಬಹಳ ದೊಡ್ಡದು. ಈಗ ಈ ಮೂಲಕ ಋಣವನ್ನು ತೀರಿಸುವ ಅವಕಾಶ ದೊರೆತಿದೆ ” ಎಂದು