ಪಡುಬಿದ್ರಿ :- ಕರಾವಳಿ ಭಾಗದ ಉದ್ದಗಲಕ್ಕೂ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಮೊಗವೀರ ಸಮಾಜವು ಹಿಂದುಳಿದ ಸಮಾಜವಾಗಿದ್ದು..ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತಿದ್ದು ಅಬ್ಬರದ ಕಡಲಿಗೆ ಎದೆ ಒಡ್ಡಿ ಜೀವ ಭಯ ಲೆಕ್ಕಿಸದೇ ಮೀನುಗಾರಿಕೆಯನ್ನು ಮಾಡಿಕೂಂಡು ಬರುತಿದ್ದು. ನ್ಯಾಯಯುತ ಬದುಕನ್ನು ನಡೆಸುತಿರುವ ಮೊಗವೀರ ಸಮಾಜವು ಸರ್ಕಾರದ ಸ್ಥಾನ ಮಾನವನನ್ನು
ಕಾಪು ವಿಧಾನಸಭಾ ಕ್ಷೇತ್ರದ ಕಾಪು ತಾಲೂಕಿನ 16 ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಇಲಾಖಾಧಿಕಾರಿಗಳೊಂದಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾಪು ತಹಶೀಲ್ದಾರರ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಕಾಪು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಬರುನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಭ್ಯವಿರುವ ನಿವೇಶಗಳನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡುವ ಬಗ್ಗೆ ಹಾಗೂ ಸರಕಾರಿ ನಿವೇಶನವನ್ನು ಗುರುತಿಸಿ ಸರ್ವೆ
ಕುಂದಗನ್ನಡದ ನೆಲದಲ್ಲಿ ಹುಟ್ಟಿ, ಬದುಕಿಗೊಂದು ನೆಲೆಯರಸಿ ಮಂಗಳೂರಿಗೆ ಬಂದು ಸೇರಿ, ಇಲ್ಲಿಯವರಾದವರೆಲ್ಲರೂ ಸೇರಿ, ತಮ್ಮ ಮೂಲ ಸಂಸ್ಕೃತಿ, ಭಾಷೆ, ಆಚರಣೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ “ಕುಡ್ಲದಗಿಪ್ಪ ಕುಂದಾಪ್ರದರ್” ಎಂಬ ವಾಟ್ಸಾಪ್ ಬಳಗವನ್ನು ರಚಿಸಿಕೊಂಡಿದ್ದಾರೆ. ಈಗ ಈ ವಾಟ್ಸಾಪ್ ಬಳಗದ ಸದಸ್ಯರ ಸಂಖ್ಯೆ 650ನ್ನು ಮೀರಿದೆ.ಈ ವಾಟ್ಸಾಪ್ ಬಳಗದ ಸದಸ್ಯರೆಲ್ಲರೂ ಸೇರಿ , ಕಳೆದ ಐದು ವರ್ಷಗಳಿಂದ, ಆಷಾಢ ಮಾಸದ ಒಂದು
ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ, ಬೈಂದೂರು ನೇತ್ರತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ “ಕೆಸರಲ್ಲೊಂದಿನ ಗಮ್ಮತ್”ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಗರಿಕರನ್ನು ಒಂದೇ ಸೂರಿನಡಿ ಸೇರಿಸಿ, ಹೆಸರೇ ತಿಳಿಸುವಂತೆ ಗಡ್ಜ್ ಗಮ್ಮತ್ ಮಾಡುವ ಪರಿಕಲ್ಪನೆ ಆಯೋಜಕರದ್ದಾಗಿದೆ. ಇದೇ ಬರುವ ಆಗಸ್ಟ್ 3 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ನೈಲಾಡಿ ಬೈಲ್ ಹಾಗೂ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಲ್ಶ ಗ್ರಾಮದ ಸನ್ನಿದಿ ಪ್ರಗತಿಬಂಧು ತಂಡದ ಸದಸ್ಶರಾದ ಯಾದವ ರವರಿಗೆ ಕ್ರಿಟಿಕಲ್ ಇನ್ಲೇಸ್ ಯೋಜನೆಯಡಿಯಲ್ಲಿ ರೂ.25000 ಸಹಾಧನವನ್ನು ಆರೋಗ್ಶ ಸುಧಾರಣೆಗಾಗಿ ವಿತರಿಸಿ ಸಾಂತ್ವಾನ ತಿಳಿಸಲಾಯಿತು.ಬಲ್ಶ ಗ್ರಾಮದ ಯಾದವರವರು ಕೆಲಸ ಮಾಡುವ ಸಂದರ್ಭ ಆಕಸ್ಮೀಕವಾಗಿ ಮರದಿಂದ ಬಿದ್ದು ಬೆನ್ನು ಮೂಳೆ ಮತ್ತು ಸೋಂಟದ ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ದುರ್ಗಾವತಿ ಹಾಗೂ
ಸುಳ್ಯ:ಪತ್ರಕರ್ತರು ಸುದ್ದಿ ಮಾಡುವಾಗ ಸತ್ಯ, ನಿಖರತೆಗೆ ಒತ್ತು ನೀಡಬೇಕು, ಯಾವುದೇ ವಿಷಯವನ್ನುಪರಾಂಭರಿಸಿ, ಸತ್ಯವನ್ನು ಅರಿತು ವರದಿ ಮಾಡಬೇಕು ಎಂದು ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದ್ದಾರೆ.ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಜನರಿಗೆ ಮಾಹಿತಿ, ಶಿಕ್ಷಣ
ಕಲ್ಲಡ್ಕ ಕೊಳಕೀರು ನಿವಾಸಿ, ಹಿರಿಯ ರಂಗಭೂಮಿ ಕಲಾವಿದ, ತುಳು ರಂಗಭೂಮಿಯ ಕಲಾವಿದ, ಚಿತ್ರನಟ ಚಿ.ರಮೇಶ್ ಕಲ್ಲಡ್ಕ (68) ಅವರು ಜು.23ರ ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಕಳೆದ ಹಲವು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ಮಂಗಳೂರಿನ ಹೆಸರಾಂತ ನಾಟಕ ತಂಡ ಕಲಾಸಂಗಮದಲ್ಲಿ ಕಳೆದ 20 ವರ್ಷಗಳಿಂದ ಹತ್ತಾರು ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು.
ಹೊಟೇಲ್ ಡಿಂಕಿ ಡೈನ್‌ನ ಸಹಕಾರದಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನ ಸಂಸ್ಕಾರ ಭಾರತಿ ಮಂಗಳೂರು ಸಹಯೋಗದೊಂದಿಗೆ ಆಟಿ ಅಮಾವಾಸ್ಯೆಯ ವಿಶೇಷ ಕಷಾಯ ಮದ್ದನ್ನು ಉಚಿತವಾಗಿ ನೀಡುತ್ತಿದ್ದಾರೆ. ಮಂಗಳೂರಿನ ಜನತೆಗೆ ಕಳೆದ 10 ವರ್ಷಗಳಿಂದ ಈ ಸೇವೆಯನ್ನು ತುಳುವ ಬೊಳ್ಳಿ ಪ್ರತಿಷ್ಠಾನ ಡಿಂಕಿ ಡೈನ್ ಹೋಟೆಲ್ ನ ಸಂಪೂರ್ಣ ಸಹಭಾಗಿತ್ವದೊಂದಿಗೆ ನಡೆಸಿಕೊಂಡು ಬರುತ್ತಿದೆ. ಈ ಬಾರಿ 11 ನೇ ವರ್ಷ ಎಲ್ಲರೂ ಬಂದು ಆಟಿ ಅಮಾವಾಸ್ಯೆಯ ಈ ವಿಶೇಷ ಕಷಾಯ ಮತ್ತು ಮೆಂತೆ ಗಂಜಿಯನ್ನು ಉಚಿತವಾಗಿ
ಪಡುಬಿದ್ರಿ : ಉಚ್ಚಿಲ ಬಡಾಗ್ರಾಮ ಪಂಚಾಯತ್ ಮತ್ತು ಬಾಡಿಫೈ ಸಹಯೋಗದಲ್ಲಿ ೧೧ ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿಗೆ ಪಂಚಾಯತ್ ಸಭಾಭವನದಲ್ಲಿ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್ ದೀಪ ಬೆಳಗಿಸಿ ಚಾಲನೆಯನ್ನು ನೀಡಿ ಶುಭವನ್ನು ಹಾರೈಸಿದರು. ಬಾಡಿ ಫೈ ಸಂಸ್ಥೆ ಮುಖ್ಯಸ್ಥ ನರೇಂದ್ರ ಕುಂದಾಪುರ ಮಾತನಾಡಿ, ಯಾವುದೇ ಔಷಧವಿಲ್ಲದೆ ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗೆ ಉಚಿತ ಥೆರಪಿ ಸಹಾಯಕ. ಈ ಥೆರಪಿಯ ಮೂಲಕ ಪಾದದಲ್ಲಿರುವ ಆಕ್ಯೂಪ್ರೆಷರ್ ಪಾಯಿಂಟ್‌ನ್ನು
ಮಂಗಳೂರಿನ ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್ ಎಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ ೬ ಮತ್ತು ಬಾರ್ ೬ ಬಿಡುಗಡೆಗೊಂಡಿತು. ವಾ.ಓ೦೧: ಹೊಸ ಹೊಸ ತಂತ್ರಜ್ಞಾನದ ಮೂಲಕ ಗ್ರಾಹಕರ ಮನಗೆದ್ದಿರುವ ಸೋನಿ ಸೆಂಟರ್ ಇದೀಗ ಉತ್ಕೃಷ್ಟವಾದ ಆಡಿಯೋ ವಿಶ್ಯುವಲ್ ಅನುಭವ ಹೆಚ್ಚಿಸುವ ನಿಟ್ಟಿನಲ್ಲಿ ಸೋನಿ ಬ್ರಾವಿಯಾ ಥಿಯೇಟರ್ ಸಿಸ್ಟಮ್ 6 ಮತ್ತು ಬಾರ್ 6 ಬಿಡುಗಡೆಗೊಳಿಸಿದೆ. ಮಂಗಳೂರಿನ ಚಿಲಿಂಬಿಯ ಸೋನಿ ಸೆಂಟರ್‌ನ ಮಥಾಯಸ್




























