ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನದ ಫಲವಾಗಿ ನವ ಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್-ನಂತೂರು-ಬಿಸಿ ರೋಡ್ ಬಂದರು ಸಂಪರ್ಕ ರಸ್ತೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ಕ್ಕೆ ಹಸ್ತಾಂತರಿಸಲು
ಸಹಕಾರ ಕ್ಷೇತ್ರದಲ್ಲಿ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಮಂಗಳೂರಿನ ಉರ್ವ ಸ್ಟೋರ್‌ನ ತುಳುಭವನ ಸಿರಿ ಚಾವಡಿಯಲ್ಲಿ 16 ನವೆಂಬರ್ 2025 ರಂದು ನಡೆದ 72ನೇ ಸಹಕಾರ ಸಪ್ತಾಹ ಆಚರಣೆಯ ಸಮಾರಂಭದಲ್ಲಿ ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಅವರಿಗೆ 2025 ರ ಪ್ರತಿಷ್ಠಿತ ತೌಳವ ಸಹಕಾರಿ ಮಾಣಿಕ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತುಳುನಾಡು ರಕ್ಷಣಾ ವೇದಿಕೆ (ರಿ) ಮತ್ತು ತುಳುನಾಡು ಸೂರ್ಯ ಪತ್ರಿಕೆ ಜಂಟಿಯಾಗಿ ಆಯೋಜಿಸಿದ
ರಚನಾ – ಮಂಗಳೂರಿನ ಕಥೊಲಿಕ್ ವಾಣಿಜ್ಯ ಮಹಾಮಂಡಳಿಯ ಅಧ್ಯಕ್ಷರಾಗಿ ರೊಯ್ ಕ್ಯಾಸ್ತೆಲಿನೊಮಂಗಳೂರಿನ ಕಥೊಲಿಕ್ ವಾಣಿಜ್ಯ ಮಹಾಮಂಡಳಿ – ರಚನಾದ 26ನೇ ಸಾಮಾನ್ಯ ಸಭೆ 16.11.25ರಂದು ಬೆಂದೂರ್ ಹಾಲ್‌ನಲ್ಲಿ ನಡೆಯಿತು. ಕಥೊಲಿಕ್ ಮುಖಂಡ ಮತ್ತು ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅವರನ್ನು ಮುಂದಿನ ಎರಡು ವರ್ಷದ ಅವಧಿಗೆ ಏಕಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸಂಸ್ಥೆಯ ನೇತೃತ್ವದಲ್ಲಿ ಇದು ಒಂದು ಪ್ರಮುಖ ಬದಲಾವಣೆ ಆಗಿದ್ದು, ಕ್ಯಾಥೋಲಿಕ್ ಸಮುದಾಯದ
ಯಕ್ಷಾಂಗಣದಿಂದ ಕನ್ನಡದ ನುಡಿ ಹಬ್ಬ ಆಚರಣೆ: ಕೆ.ಕೆ.ಶೆಟ್ಟಿ ಮಂಗಳೂರು: ‘ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ವಾರವಿಡೀ ಯಕ್ಷಗಾನ ತಾಳಮದ್ದಳೆಗಳನ್ನು ನಡೆಸುವ ಮೂಲಕ ಯಕ್ಷಾಂಗಣ ಸಂಸ್ಥೆ ನಿಜಾರ್ಥದಲ್ಲಿ ಕನ್ನಡದ ನುಡಿ ಹಬ್ಬವನ್ನು ಆಚರಿಸುತ್ತಿದೆ. ಸುಲಲಿತವಾದ ಕನ್ನಡ ಭಾಷೆಯನ್ನು ಯಕ್ಷಗಾನದಂತೆ ಸಶಕ್ತವಾಗಿ ಬಳಸಿಕೊಳ್ಳುವ ಕಲಾ ಮಾಧ್ಯಮ ಬೇರೊಂದಿಲ್ಲ’ ಎಂದು ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ
ತುಳು ಅಕಾಡೆಮಿ ಪ್ರಕಟಿಸಿದ ಮನು ಇಡ್ಯಾರ ನಾಟಕ ಕೃತಿಗಳ ಬಿಡುಗಡೆ ಮಂಗಳೂರು: ಎಪ್ಪತ್ತರ ದಶಕದ ಬಳಿಕ ತುಳು ರಂಗಭೂಮಿಯ ದಿಕ್ಕು ಬದಲಾಯಿಸಿದ ಯುಗ ಪ್ರವರ್ತಕ ನಾಟಕಕಾರ ಮನು ಇಡ್ಯಾರ ತುಳು ರಂಗಭೂಮಿಯ ಕೊಡುಗೆ ಅಪೂರ್ವದದು ಎಂದು ವಿಜಯ ಕರ್ನಾಟಕ ಪತ್ರಿಕೆಯ ನಿವೃತ್ತ ಸ್ಥಾನೀಯ ಸಂಪಾದಕ ಯು. ಕೆ .ಕುಮಾರನಾಥ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಇಡ್ಯಾ ಸುರತ್ಕಲ್ ಬಿಲ್ಲವ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಅಕಾಡೆಮಿ ಪ್ರಕಟಿಸಿರುವ
ಮಂಗಳೂರು : ತುಳು ಭಾಷೆಯಲ್ಲಿ ಅಪಾರವಾದ ಸಾಹಿತ್ಯವಿದೆ , ಈ ಸಾಹಿತ್ಯ ಕೃತಿಗಳ ಪರಿಚಯ ಮಾಡಿಕೊಳ್ಳಲು ಅಕಾಡೆಮಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ, ಈ ಮೂಲಕ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ಪ್ರೇರಣಾದಾಯಿಯಾಗಿ ಅಕಾಡೆಮಿ ಕೆಲಸ ಮಾಡುತ್ತಿದೆ ಎಂದು ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು ಹೇಳಿದರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ಅಕಾಡೆಮಿಡ್ ಒಂಜಿ
ಚನ್ನಕೇಶವ ದೇವಾಲಯದಲ್ಲಿ ಭದ್ರತಾ ನಿರ್ಲಕ್ಷ-ಕಾರ್ಯನಿರ್ವಹಿಸದ ಮೆಟಲ್ ಡಿಟೆಕ್ಟರ್ ಮತ್ತು ಸಿಸಿಟಿವಿ ಕ್ಯಾಮೆರಾಗಳು ಬೇಲೂರು, ನವೆಂಬರ್ 11 — ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಭದ್ರತಾ ಕ್ರಮಗಳ ನಿರ್ಲಕ್ಷ್ಯ ಆತಂಕ ಹುಟ್ಟಿಸಿದೆ. ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಅಳವಡಿಸಿರುವ ಮೆಟಲ್ ಡಿಟೆಕ್ಟರ್ ಕಳೆದ ಒಂದೂವರೆ ತಿಂಗಳಿನಿಂದ ಕಾರ್ಯನಿರ್ವಹಿಸದೇ ನಿಂತಿದ್ದು, ಪ್ರಮುಖ ಸಿಸಿಟಿವಿ ಕ್ಯಾಮೆರಾವೂ ಸಹ ವರ್ಕ್
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ವಿದ್ಯಾರ್ಥಿ, ಯುವಜನರಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸಲು ಹಮ್ಮಿಕೊಂಡಿರುವ ‘ಅಕಾಡೆಮಿಡ್ ಒಂಜಿ ದಿನ ; ಬಲೆ ತುಳು ಓದುಗ’ ಅಭಿಯಾನದ ಹನ್ನೆರಡನೇ ಕಾರ್ಯಕ್ರಮ ನ.12 ರಂದು ನಡೆಯಲಿದೆ.ಬುಧವಾರದಂದು ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ 30 ವಿದ್ಯಾರ್ಥಿಗಳು ಉರ್ವಾಸ್ಟೋರ್ ನಲ್ಲಿರುವ ತುಳು ಭವನದ ಗ್ರಂಥಾಲಯಕ್ಕೆ ಭೇಟಿ ನೀಡಿ ಅಧ್ಯಯನ ಹಾಗೂ ಸಂವಾದ ನಡೆಸುವರು. ಕಾರ್ಯಕ್ರಮವನ್ನು
ಆಲೂರು:ಪಟ್ಟಣದ ಮುಖ್ಯರಸ್ತೆಯಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಿ ನಂತರ ವೇದಿಕೆ ಕಾರ್ಯಕ್ರಮವನ್ನು ತಾಲ್ಲೂಕುವಕಚೇರಿ ಆವರಣದಲ್ಲಿ ಆಯೋಜಿಸಿದ್ದು,ಕಾರ್ಯಕ್ರಮವನ್ನು ಆಲೂರು ಸಕಲೇಶಪುರ ಕಟ್ಟಾಯ ವಿಧಾನಸಭಾ ಶಾಸಕರಾದ ಸಿಮೆಂಟ್ ಮಂಜು ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕನಕದಾಸರ ಜನ್ಮ ದಿನವನ್ನು ‘ಕನಕದಾಸ ಜಯಂತಿ’ಎಂದು ಆಚರಿಸಲಾಗುತ್ತದೆ. ಕತ್ತಿ ಗುರಾಣಿ ಹಿಡಿದು ರಣರಂಗದಲ್ಲಿ
ಮಂಗಳೂರು: ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ ಅವರು ತನ್ನ ಜಾನಪದೀಯ ಸಂಶೋಧನೆಯ ಕ್ಷೇತ್ರ ಕಾರ್ಯದ ಅನುಭವಗಳನ್ನು ದಾಖಲಿಸಿರುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಬರುವವರಿಗೆ ಬಹುದೊಡ್ಡ ಮಾರ್ಗದರ್ಶಿ ಕೊಡುಗೆಯನ್ನು ನೀಡಿದ್ದಾರೆ, ತುಳುವಿನಲ್ಲಿ ಇದೊಂದು ಮಹತ್ವದ ಕೃತಿಯಾಗಲಿದೆ ಎಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಆಶಾಲತಾ ಸುವರ್ಣ ಅವರು ಹೇಳಿದರು. ಅವರು ತುಳು ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಡಾ.ಇಂದಿರಾ ಹೆಗ್ಗಡೆ ಅವರ ‘ಬಾರಗೆರೆ




























