ಮೂಡುಬಿದಿರೆ: ಶನಿವಾರ ನಿಡ್ಡೋಡಿ ಗ್ರಾಮದ ಕಾನ ಪ್ರದೇಶದಲ್ಲಿ ಬೈಕ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ನವ ವಿವಾಹಿತ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದುಘ೯ಟನೆ ನಡೆದಿದೆ.ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಸಂತೆಕಟ್ಟೆ ನಿವಾಸಿ ರಕ್ಷಿತ್ ಕುಮಾರ್ (30) ಮೃತಪಟ್ಟವರು. ಇವರು ಮೂಲ್ಕಿಯಲ್ಲಿರುವ ಪತ್ನಿಯ ಮನೆಗೆ ಬಂದಿದ್ದು, ಶನಿವಾರ ಬೆಳಿಗ್ಗೆ ಕಾರ್ಯನಿಮಿತ್ತ
ಮೂಡುಬಿದಿರೆ: ಅಗ್ನಿವೀರ್ ರ‍್ಯಾಲಿ ಆಡಳಿತ, ಸಂಘಟಿತ ವ್ಯವಸ್ಥೆ ಮತ್ತು ಸೇವಾಭಾವದ ಅಪರೂಪದ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಇದು ಕೇವಲ ನೇಮಕಾತಿ ಪ್ರಕ್ರಿಯೆಯಲ್ಲ; ಯುವ ಮನಸ್ಸುಗಳಲ್ಲಿ ದೇಶಸೇವೆಯ ಉತ್ಸಾಹವನ್ನು ಮತ್ತಷ್ಟು ಗಟ್ಟಿಗೊಳಿಸಿದ ಮಹತ್ವದ ಅಧ್ಯಾಯವಾಗಿದೆ. ಪುಣ್ಯದ ಕೆಲಸದಲ್ಲಿ ನಮ್ಮ ಸಂಸ್ಥೆಯು ಭಾಗಿಯಾಗಿರುವುದು ನಮ್ಮ ಭಾಗ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟರು. ಅವರು ಮೂಡುಬಿದಿರೆಯ ಸ್ವರಾಜ್ಯ
ಮೂಡುಬಿದಿರೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ವಾರ್ಷಿಕ ಕಬ್ಸ್-ಬುಲ್ ಬುಲ್ಸ್ ಉತ್ಸವ, ಸ್ಕೌಟ್-ಗೈಡ್ ಮೇಳ ಹಾಗೂ ರೋವರ್ಸ್-ರೇಂಜರ್ಸ್ ಸಮಾಗಮವು ಭಾನುವಾರ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆಯಿತು. ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ವಸಂತ್ ದೇವಾಡಿಗ ಅವರು ಉದ್ಘಾಟಿಸಿ ಮಾತನಾಡಿ “ವಿದ್ಯಾರ್ಥಿ ದೆಸೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಶಿಸ್ತು, ಸಮಾಜ ಸೇವೆ ಮತ್ತು ನಾಯಕತ್ವದ
ಮೂಡುಬಿದಿರೆ: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನಲ್ಲಿ ನಡೆದ 2025–26ನೇ ಸಾಲಿನ ವಿಶೇಷ ಚೇತನ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮೂಡುಬಿದಿರೆ ಜ್ಯೋತಿನಗರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅರ್ಪಿತಾ ಸ್ಪರ್ಧಿಸಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಸಾಧನೆಗಾಗಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ, ವಿದ್ಯಾರ್ಥಿವೃಂದ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಹಳೆವಿದ್ಯಾರ್ಥಿ
ಮೂಡುಬಿದಿರೆ : ಆಥಿ೯ಕ ಸಮಸ್ಯೆಯಿಂದ ಬಳಲುತ್ತಿದ್ದ ವಿವಾಹಿತನೋವ೯ ತಮ್ಮ ದಖಾ೯ಸಿನಲ್ಲಿರುವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಮಾನಾ೯ಡಿನಲ್ಲಿ ಮಂಗಳವಾರ ಸಂಜೆ ನಡೆದಿದೆ.ಪಡುಮಾನಾ೯ಡು ಗ್ರಾ. ಪಂಚಾಯತ್ ವ್ಯಾಪ್ತಿಯ ತಿರುಮಲಬೆಟ್ಟು ನಿವಾಸಿ ದಿ. ಮುತ್ತಯ್ಯ ಪೂಜಾರಿ ಅವರ ಪುತ್ರ ಅಗೋಟಿ ಯಾನೆ ರಮೇಶ್ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಮೇಸ್ತ್ರಿ ಕೆಲಸವನ್ನು ಮಾಡುತ್ತಿದ್ದ ರಮೇಶ್
ಮೂಡುಬಿದಿರೆ: ಇಲ್ಲಿನ ರಿಂಗ್ ರೋಡ್ ಬಳಿಯಲ್ಲಿ ಹೊಟೇಲ್ ಉದ್ಯಮವನ್ನು ಆರಂಭಿಸಬೇಕೆಂದು ಕನಸು ಕಂಡಿದ್ದ ಯುವಕನೋವ೯ ನೇಣಿಗೆ ಶರಣಾದ ಘಟನೆ ಶನಿವಾರ ಮಧ್ಯಾಹ್ನ ನಾಗರಕಟ್ಟೆಯಲ್ಲಿ ನಡೆದಿದೆ. ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ರಸ್ತೆಯ ಬಳಿ ಕಬ್ಬಿನ ಜ್ಯೂಸ್ ನ ಮಾರಾಟ ಮಾಡುತ್ತಿರುವ ಶ್ರೀನಿವಾಸ್ ಅವರ ಮಗ ದೀಕ್ಷಿತ್ (35) ಆತ್ಮಹತ್ಯೆ ಮಾಡಿಕೊಂಡ ಯುವಕ. ದುಬೈನಲ್ಲಿ ಉದ್ಯೋಗ ಮಾಡುತ್ತಿದ್ದ ದೀಕ್ಷಿತ್ ಕಳೆದ ಒಂದೂವರೆ ವಷ೯ಗಳಿಂದ ಊರಿನಲ್ಲಿಯೇ ಇದ್ದು ಹೊಟೇಲ್ ನಡೆಸುವ
ಮೂಡುಬಿದಿರೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನವೀನ್ ಸಾಲ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜೈಸನ್ ತಾಕೊಡೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಣೇಶ್ ಕಾಮತ್ ಎಂ., ಕಾರ್ಯದರ್ಶಿಯಾಗಿ ಶರತ್ ದೇವಾಡಿಗ, ಕೋಶಾಧಿಕಾರಿಯಾಗಿ ರಾಘವೇಂದ್ರ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೆಳುವಾಯಿ ಸೀತಾರಾಮ ಆಚಾರ್ಯ, ಪ್ರಸನ್ನ ಹೆಗ್ಡೆ, ಅಶ್ರಫ್ ವಾಲ್ಪಾಡಿ, ಪ್ರೇಮಶ್ರೀ ಕಲ್ಲಬೆಟ್ಟು, ಪುನೀತ್ ಆಯ್ಕೆಗೊಂಡಿದ್ದಾರೆ. ಮೂಡುಬಿದ್ರಿ
ಮೂಡುಬಿದಿರೆ: ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ವಿಶ್ವಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಡಿಸೆಂಬರ್ 25 ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಲಿದೆ.ಅತಿಶಯ ಸಿದ್ಧಕ್ಷೇತ್ರವಾದ ಮೂಡುಬಿದಿರೆಯ ಈ ಪುಣ್ಯಕ್ಷೇತ್ರದಲ್ಲಿ ಅಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿವೆ. ಸಂಜೆ 6 ರಿಂದ: ವಿವಿಧ ಭಜನಾ ತಂಡಗಳಿಂದ ಭಕ್ತಿ ಸುಧೆ – ಜಿನ ಭಜನಾ
ಮೂಡುಬಿದಿರೆ : ಇಲ್ಲಿನ ಅಲಂಗಾರು ಬಡಗುಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಜಿ ಯಕ್ಷ ಫೌಂಡೇಶನ್ ವತಿಯಿಂದ ಮಂಗಳವಾರ ನಡೆದ ಶ್ರೀ ಹರಿಲೀಲಾ ಯಕ್ಷಗಾನದ ೫ನೇ ವರ್ಷದ ಪ್ರಶಸ್ತಿ ಪ್ರದಾನ ಮತ್ತು ಯಕ್ಷ ನಾದೋತ್ಸವವು ಮಂಗಳವಾರ ನಡೆಯಿತು. ಅರ್ಥಧಾರಿ, ಯಕ್ಷಗಾನ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆಯ ಶಬ್ಧ ಹೆಚ್ಚುತ್ತಿದ್ದು ಇದರಿಂದಾಗಿ ಪಂಚವಾದ್ಯಗಳೂ ಮೂಲೆ ಗುಂಪಾಗುತ್ತಿದೆ
ಮೂಡುಬಿದಿರೆ : ಡಿ.13ರಿಂದ 18ರವರೆಗೆ ಕೊಲ್ಕೊತ್ತಾದಲ್ಲಿ ನಡೆಯಲಿರುವ ಅಖಿಲ ಭಾರತ ಸೀನಿಯರ್ ನ್ಯಾಶನಲ್ ಸಾಫ್ಟ್ ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಇಲ್ಲಿನ ಬನ್ನಡ್ಕ ವಿಶ್ವವಿದ್ಯಾಲಯ ಕಾಲೇಜಿನ ತೃತೀಯ ಬಿಸಿಎ ವಿದ್ಯಾರ್ಥಿನಿಯರಾದ ಸಂಗೀತಾ ಪೂಜಾರಿ ಮತ್ತು ನಿಖಿತಾ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರತ್ನಾಕರ ಪುತ್ತೂರಾಯ ತಿಳಿಸಿದ್ದಾರೆ.




























