Home Posts tagged moodabidre (Page 2)

ಎಲ್ಲೆಂದರಲ್ಲಿ ಕಸ ಬೀಸಾಡುವವರೇ ಜೋಕೆ..! :ಮೂಡುಬಿದಿರೆ ಪುರಸಭೆಯಿಂದ ಬೀಳುತ್ತೆ ರೂ. 10,000 ದಂಡ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಸಾವ೯ಜನಿಕ ಸ್ಥಳಗಳಲ್ಲಿ, ಖಾಲಿ ಸೈಟ್ಟ್ ನಲ್ಲಿ, ರಸ್ತೆ ಬದಿಗಳಲ್ಲಿ, ತೋಡಿನಲ್ಲಿ ಹೀಗೆ ಎಲ್ಲೆಂದರಲ್ಲಿ ಕಸ ಬಿಸಾಡುವವರೇ ಜೋಕೆ.. ನಿಮಗೆ ಪುರಸಭೆಯಿಂದ ಬೀಳುತ್ತೆ 10,000 ದಂಡ. ಮೂಡುಬಿದಿರೆ ಪುರಸಭೆಯು ಸಮಪ೯ಕ ತ್ಯಾಜ್ಯ ನಿವ೯ಹಣೆಯ ಬಗ್ಗೆ ಕಳೆದ ಹಲವು ವರುಷಗಳಿಂದ ಶ್ರಮ ವಹಿಸುತ್ತಾ ಬರುತ್ತಿದೆ. ಮನೆಗಳಲ್ಲಿ, ಉದ್ಯಮದಲ್ಲಿ,

ಈಜು ಸ್ಪಧೆ೯ : ಪ್ರೇರಣಾ ಶಾಲೆಯ ಪ್ರೀತಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಇಲ್ಲಿನ ಕಡಲಕೆರೆಯಲ್ಲಿರುವ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರೀತಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ರಾಜ್ಯ ಮಟ್ಟದಲ್ಲಿ ಸಮಗ್ರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ 4 x 100 ಮೀಟರ್ ರಿಲೇ: ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಿಂದೆ ಅವರು 400 ಮೀಟರ್ ಫ್ರೀ ಸ್ಟೈಲ್- ದ್ವಿತೀಯ ಸ್ಥಾನ, 400 ಮೀಟರ್ ಫ್ರೀ ಸ್ಟೈಲ್- ಪ್ರಥಮ

ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮೂಡುಬಿದಿರೆ : ಅರ್ಚಕ ವೃತ್ತಿ ಮಾಡಿಕೊಂಡಿದ್ದ ಯುವಕನೋವ೯ ಅಳಿಯೂರಿನ ವಸತಿ ಸಮುಚ್ಚಯವೊಂದರಲ್ಲಿ ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹರೀಶ್ ಲಕ್ಷ್ಮೀಕಾಂತ್ ರಾವ್ (33ವ) ಆತ್ಮಹತ್ಯೆಕೊಂಡ ಯುವಕ. ವಸತಿ ಸಮುಚ್ಛಯದಲ್ಲಿ ಮನೆ ಮಾಡಿಕೊಂಡಿದ್ದ ಮೃತರು ಪತ್ನಿ ಹಾಗೂ ಮನೆಯವರನ್ನು, ಅಪಾರ ಬಂಧುಗಳನ್ನು ಆಗಲಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಮೂಡುಬಿದಿರೆ: ಉದ್ಯಮಿ ಜಿ. ಮೋಹನ ಶೆಣೈ ನಿಧನ

ಮೂಡುಬಿದಿರೆ: ಹಿರಿಯ ಉದ್ಯಮಿ, ಪಂಚಾಯತ್ ಬೋರ್ಡ್ ಮಾಜಿ ಸದಸ್ಯ, ಸಾಮಾಜಿಕ ಪ್ರಮುಖ ಜಿ. ಮೋಹನ ಶೆಣೈ ( 88ವ) ಬೆಂಗಳೂರಿನ ವಾತ್ಸಲ್ಯ ನಿವಾಸದಲ್ಲಿ ಸೋಮವಾರ ನಿಧನ ಹೊಂದಿದರು. ಅವರು ಪತ್ನಿ, ಆರು ಮಂದಿ ಪುತ್ರರನ್ನು ಅಗಲಿದ್ದಾರೆ.ವರ್ತಕರಾಗಿ, ಉದ್ಯಮಿಯಾಗಿ ಮೂಡುಬಿದಿರೆಯಲ್ಲಿ ಸಾಮಾಜಿಕ ರಂಗದಲ್ಲಿಯೂ ಶೆಣೈಯವರು ಗುರುತಿಸಿಕೊಂಡಿದ್ದರು. ಜಿ. ವಾಸುದೇವ ಪೈ ಅವರಂತಹ ಸಾಮಾಜಿಕ ಧುರೀಣರ ನಿಕಟವರ್ತಿಯಾಗಿ ಸಮಾಜ ಮಂದಿರ ಸಭಾ,ಜಿ.ವಿ.ಪೈ ಮೆಮೋರಿಯಲ್ ಟ್ರಸ್ಟ್ , ರೋಟರಿ

ಎಕ್ಸಲೆಂಟ್ ಯುವರಾಜ್ ಜೈನ್ ಅವರಿಗೆ ಶ್ರೀ ಕೇಶವಾನಂದ ಭಾರತಿ ಶೈಕ್ಷಣಿಕ ಪ್ರಶಸ್ತಿ

ಮೂಡುಬಿದಿರೆ : ಡಾ. ಕಿಲಾರು ಗೋಪಾಲಕೃಷ್ಣ ಪ್ರತಿಷ್ಠಾನ ( ರಿ) ಸಂಪಾಜಿ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯ ಸ್ಮೃತಿಯಲ್ಲಿ ಕೊಡ ಮಾಡುವ ಶ್ರೀ ಕೇಶವಾನಂದ ಭಾರತಿ ಶೈಕ್ಷಣಿಕ ಪ್ರಶಸ್ತಿ ಯನ್ನು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಅವರಿಗೆ ಸಂಪಾಜಿ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.ಯಕ್ಷಗಾನ ವಿದ್ವಾಂಸರಾದ ಡಾ ಪ್ರಭಾಕರ ಜೋಶಿ ಅಭಿನಂದನಾ ಮಾತುಗಳನ್ನಾಡಿ ನಾರಾವಿ ಯಂತಹ ಗ್ರಾಮೀಣ ಪ್ರದೇಶದಲ್ಲಿ

ನ5: ಆಂಧ್ರ ರಾಜ್ಯಪಾಲ ಎಸ್. ಅಬ್ದುಲ್ ನಝೀರ್ ಅವರಿಗೆ ರಾಜ್ಯ ಕಾನೂನು ವಿವಿಯ ಗೌರವ ಡಾಕ್ಟರೇಟ್

ಮೂಡುಬಿದಿರೆ: ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ , ಆಂಧ್ರ ಪ್ರದೇಶದ ರಾಜ್ಯಪಾಲ ಮೂಡುಬಿದಿರೆ ಮೂಲದ ಎಸ್. ಅಬ್ದುಲ್ ನಝೀರ್ ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಜೀವಮಾನದ ಸಾಧನೆಗಾಗಿ ನ 5ರಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ.ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೆಳಿಗ್ಗೆ 11.30 ರಿಂದ ನಡೆಯಲಿರುವ ರಾಜ್ಯ ಕಾನೂನು ವಿಶ್ವ ವಿದ್ಯಾನಿಯದ 7ನೇ ಘಟಿಕೋತ್ಸವ ಸಮಾರಂಭದಲ್ಲಿ ಈ ಗೌರವ ಪ್ರದಾನ

ಅನಾರೋಗ್ಯ : ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಮೂಡುಬಿದಿರೆ : ಶಿತಾ೯ಡಿ ಗ್ರಾ. ಪಂ. ವ್ಯಾಪ್ತಿಯ ದಡ್ಡಾಲಪಲ್ಕೆಯಲ್ಲಿ ಮಹಿಳೆಯೋವ೯ರು ಗುರುವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿರ್ತಾಡಿ ದಡ್ಡಾಲಪಲ್ಕೆಯ ನಿವಾಸಿ ಫ್ಲೋರಿನ್ ಡಿಸೋಜ ( 58) ಆತ್ಮಹತ್ಯೆ ಮಾಡಿಕೊಂಡವರು.ಫ್ಲೋರಿನ್ ಅವರ ಮೂವರು ಮಕ್ಕಳು ವಿದೇಶದಲ್ಲಿದ್ದು ಮನೆಯಲ್ಲಿ ತಂಗಿಯೊಂದಿಗೆ ವಾಸವಾಗಿದ್ದರು. ಕಳೆದ ಕೆಲ ಸಮಯಗಳಿಂದ ಇವರಿಗೆ ಖಾಯಿಲೆಯೊಂದು ಬಾಧಿಸಿದ್ದು ಇದರಿಂದಾಗಿ ಮಾನಸಿಕವಾಗಿ ಜಿಗುಪ್ಸೆಗೊಂಡಿದ್ದರು. ತಂಗಿ ಶಿರ್ತಾಡಿ ಪೇಟೆಗೆ

ಮೂಡುಬಿದಿರೆ ತಾಲೂಕು ಮಟ್ಟದ ಕ್ರೀಡಾಕೂಟ: ಆಳ್ವಾಸ್ ಚಾಂಪಿಯನ್- 139 ಪದಕಗಳ ಸಾಧನೆ

ಮೂಡುಬಿದಿರೆ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಪ್ರಾಂತ್ಯ ಸರ್ಕಾರಿ ಪ್ರೌಢಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್‌ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ 2025-26ನೇ ಸಾಲಿನ ಕ್ರೀಡಾಕೂಟದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಗಳು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ಆಳ್ವಾಸ್ ಶಾಲೆಗಳು 14 ವರ್ಷ ಮತ್ತು 17 ವರ್ಷ ವಯೋಮಿತಿಯ ಎರಡೂ ವಿಭಾಗಗಳಲ್ಲಿ

ಕೌಟುಂಬಿಕ ಸಮಸ್ಯೆ : ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಮೂಡುಬಿದಿರೆ: ಕೌಟುಂಬಿಕ ಸಮಸ್ಯೆಯಿಂದಾಗಿ ಆಟೋ ಚಾಲಕನೋವ೯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಒಂಟಿಕಟ್ಟೆಯಲ್ಲಿ ನಡೆದಿದೆ. ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆ ನಿವಾಸಿ, ಆಟೋ ಚಾಲಕ ರಾಜೇಶ್ (42) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಅವರು ಮಹಾವೀರ ಕಾಲೇಜು ಬಳಿಯ ಆಟೋ ಪಾರ್ಕ್‌ನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ರಾಜೇಶ್ ಅವರು ತಮ್ಮ ಸ್ನೇಹಪರ ಸ್ವಭಾವವನ್ನು ಹೊಂದಿದ್ದರು. ಕೌಟುಂಬಿಕ

ಚೆಕ್ ಬೌನ್ಸ್ : ಆರೋಪಿಗೆ ನ್ಯಾಯಾಂಗ ಬಂಧನ

ಮೂಡುಬಿದಿರೆ : ಕಡಿಮೆ ಬಡ್ಡಿಯಲ್ಲಿ ಹೆಚ್‌.ಡಿ.ಎಫ್.ಸಿ.ಬ್ಯಾಂಕಲ್ಲಿ ಲೋನ್ ಮಾಡಿ ಕೊಡುತ್ತೇನೆಂದು ನಂಬಿಸಿ ವ್ಯಕ್ತಿಯೋರ್ವರಿಂದ ಹಣ ಪಡೆದು ಪರಾರಿಯಾಗಿದ್ದ ವ್ಯಕ್ತಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಟ್ವಾಳ ಕಲ್ಲಡ್ಕ ಬಾಳ್ತಿಲದ ಶರತ್ ಕುಮಾರ್ ಗೆ ಮೂಡುಬಿದಿರೆ ನ್ಯಾಯಾಲಯವು ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. 2021 ರಲ್ಲಿ ಶರತ್ ಕುಮಾರ್ ತಾನು ಎಚ್.ಡಿ.ಎಫ್.ಸಿ.ಬ್ಯಾಂಕಲ್ಲಿ ಉದ್ಯೋಗಿಯಾಗಿದ್ದು ಕಡಿಮೆ ಬಡ್ಡಿಯಲ್ಲಿ ಲೋನ್ ಮಾಡಿ