ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸೀದಿ ಸಮೀಪ ಹೆದ್ದಾರಿಯ ಹೊಂಡ ತಪ್ಪಿಸಲು ಹೋದ ಕಾರು ಚಾಲಕನೋರ್ವ ಸ್ಕೂಟರ್ ಗೆ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡಿದ್ದು ತಕ್ಷಣ ಆತನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಕೂಟರ್ ದಾಖಲೆ ಪರಿಶೀಲನೆ ಮಾಡಿದ ಸ್ಥಳೀಯ ಅದಮಾರು ನಿವಾಸಿ ನವನೀತ್ ಪಿ.
ಪಡುಬಿದ್ರಿ ಮೆಸ್ಕಾಂ ಕಛೇರಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ದಿನದಿಂದ ದಿನಕ್ಕೆ ಕಠಿಣವಾಗುತ್ತಿದ್ದು, ಗ್ರಾಹಕರಿಗೆ ಸೇವೆ ಎಂಬುದು ಮರೀಚಿಕೆಯಾತ್ತಿದೆ ಈ ನಿಟ್ಟಿನಲ್ಲಿ ಅನಿವಾರ್ಯವಾಗಿ ಸಾರ್ವಜನಿಕರನ್ನು ಸೇರಿಸಿಕೊಂಡು ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಶೀಘ್ರವಾಗಿ ಹಮ್ಮಿಕೊಳ್ಳಲಿದ್ದೇವೆ ಎಂಬುದಾಗಿ ತೆಂಕ ಗ್ರಾ.ಪಂ. ಸದಸ್ಯ ಬಾಲಚಂದ್ರ ಹೇಳಿದ್ದಾರೆ.ಮಳೆಗಾಲ ಬರುವುದಕ್ಕೆ ಮೊದಲು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಇಲಾಖೆಯ
ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ ಅಡ್ವೆ ಘಟಕದ ವತಿಯಿಂದ ಅಡ್ವೆ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಗದ್ದೆಯಲ್ಲಿ ಹತ್ತನೇ ವರ್ಷದ ಅಂಗವಾಗಿ ಕೆಸರ್ಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗರೋಡಿಯ ಮುಖ್ಯ ಅರ್ಚಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುವವಾಹಿನಿ ಅಡ್ವೆ ಘಟಕದ ಅಧ್ಯಕ್ಷ ಸಚಿನ್ ಎಸ್. ಕರ್ಕೇರ ಇವರ ನೇತ್ರತ್ವದಲ್ಲಿ ಪ್ರಪ್ರಥಮ ಬಾರಿಗೆ ಈ ಕೆಸರು ಗದ್ದೆ ಕ್ರೀಢಾಕೂಟ ಆಯೋಜಿಸಲಾಗಿದ್ದು, ಸುತ್ತಲ ಗ್ರಾಮಗಳಿಂದ ನೂರಾರು ಮಂದಿ
ಎರ್ಮಾಳು-ಪಡುಬಿದ್ರಿ ಗಡಿಭಾಗ ರಾಷ್ಟ್ರೀಯ ಹೆದ್ದಾರಿ ೬೬ರ ಕಿರು ಸೇತುವೆ ಬಳಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಅಪಘಾತ ವಲಯವಾಗಿ ರೂಪುಗೊಳ್ಳುತ್ತಿದೆ. ಸೋಮವಾರ ರಾತ್ರಿ ಗೂಡ್ಸ್ ಟೆಂಪೊವೊಂದು ಹೆದ್ದಾರಿಯಲ್ಲಿ ಶೇಕರಣೆಗೊಂಡಿರುವ ನೀರಿನ ಮೇಲಿಂದ ಚಲಿಸಿ ರಸ್ತೆ ವಿಭಜಕವೇರಿ ಮಗುಚಿ ಬಿದ್ದಿದೆ. ಭಾನುವಾರ ರಾತ್ರಿ ಕಾರೊಂದು ಅದೇ ಪ್ರದೇಶದಲ್ಲಿ ಪಲ್ಟಿಯಾಗಿ ನಾಲ್ವರು ಪ್ರಾಣಾಪಾಯದಿಂದ ಪಾರದ ಘಟನೆ ಹಚ್ಚ ಹಸುರಾಗಿರುವಾಗಲೇ ಮತ್ತೆ ಅಪಘಾತ ನಡೆದಿದೆ. ಈ ಅಪಘಾತಕ್ಕೆ
ಎರ್ಮಾಳು-ಪಡುಬಿದ್ರಿ ಗಡಿಭಾಗ ರಾಷ್ಟ್ರೀಯ ಹೆದ್ದಾರಿ 66ರ ಕಿರು ಸೇತುವೆ ಬಳಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಅಪಘಾತ ವಲಯವಾಗಿ ರೂಪುಗೊಳ್ಳುತ್ತಿದೆ. ಸೋಮವಾರ ರಾತ್ರಿ ಗೂಡ್ಸ್ ಟೆಂಪೊವೊಂದು ಹೆದ್ದಾರಿಯಲ್ಲಿ ಶೇಕರಣೆಗೊಂಡಿರುವ ನೀರಿನ ಮೇಲಿಂದ ಚಲಿಸಿ ರಸ್ತೆ ವಿಭಜಕವೇರಿ ಮಗುಚಿ ಬಿದ್ದಿದೆ. ಭಾನುವಾರ ರಾತ್ರಿ ಕಾರೊಂದು ಅದೇ ಪ್ರದೇಶದಲ್ಲಿ ಪಲ್ಟಿಯಾಗಿ ನಾಲ್ವರು ಪ್ರಾಣಾಪಾಯದಿಂದ ಪಾರದ ಘಟನೆ ಹಚ್ಚ ಹಸುರಾಗಿರುವಾಗಲೇ ಮತ್ತೆ ಅಪಘಾತ. ಈ ಅಪಘಾತಕ್ಕೆ
ಕೆಲ ಸಮಯದ ವಿರಾಮದ ಬಳಿಕ ಮತ್ತೆ ತಂಡಗಳ ಮಧ್ಯೆ ವಾಗ್ವಾದ ನಡೆದು ಚೂರಿಯಿಂದ ಇರಿದ ಘಟನೆ ತಡರಾತ್ರಿ ಪಡುಬಿದ್ರಿ ಪೇಟೆ ಸಮೀಪದ ದುರ್ಗಾ ಜುವ್ಯೆಲ್ಲರಿ ಬಳಿ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.ಸೂರಜ್, ಶರತ್, ತನುಜ್, ಅನೀಷ್ ಆರೋಪಿಗಳು.ಚೂರಿ ಇರಿತಕ್ಕೊಳಗಾದವರು ಸುಜಿತ್, ಗಾಯಾಳುವಿನ ಸಹೋದರ ಅಜಿತ್ ಹಾಗೂ ಸ್ನೇಹಿತ ಕರಣ್ ರೊಂದಿಗೆ ಪಕ್ಕದ ಪ್ರಣವ್ ಎಂಬವರ ಹೋಟೆಲ್ ಗೆ ಬಂದಿದ್ದು, ರಸ್ತೆಯಂಚಿನಲ್ಲಿ ಕಾರು ಇಲ್ಲಿಸಿದ್ದು , ಇನೋವ ಕಾರಿನಲ್ಲಿ ಸ್ಥಳಕ್ಕೆ ಬಂದ ಆರೋಪಿಗಳು
ಪಡುಬಿದ್ರಿ: ಕಳೆದ ಎರಡು ದಿನದ ಹಿಂದೆ ನಾಪತ್ತೆಯಾದ ಪಲಿಮಾರು ಗುಂಡಿ ನಿವಾಸಿ ವ್ಯಕ್ತಿಯ ಶವ ಪಕ್ಕದ ಕೆಸರು ತುಂಬಿದ ಹಳ್ಳವೊಂದರಲ್ಲಿ ಪತ್ತೆಯಾಗಿದೆ.ಮೃತರು ಪಲಿಮಾರು ಗುಂಡಿ ನಿವಾಸಿ, ಮುಂಬೈ ಮಹಾ ನಗರದಲ್ಲಿ ವಾಸವಿದ್ದ ಆನಂದ ಪೂಜಾರಿ(51), ಊರಿನ ಮನೆಯಲ್ಲಿ ಕುಟುಂಬದ ದೈವದ ಧಾರ್ಮಿಕ ಕಾರ್ಯಕ್ರಮವಿದ್ದು ಅದರಲ್ಲಿ ಪಾಲ್ಗೊಂಡಿದ್ದ ಇವರು ರಾತ್ರಿ ಸುಮಾರು ಹನ್ನೆರಡರ ಸುಮಾರಿಗೆ ಪಕ್ಕದ ಮನೆಯ ಅಂಗಳದಲ್ಲಿ ನಡೆದು ಹೋಗುವುದನ್ನು ಆ ಮನೆ ಮಂದಿ ನೋಡಿದ್ದರು. ಅಲ್ಲಿಂದ
ಎಂ.ಕೆ. ಬಾಲರಾಜ್ ಸಾರಥ್ಯದ “ಎಂಕಲ್ನ ಕಲಾವಿದೆರ್” ಮಟ್ಟು ಕಟಪಾಡಿ ಅಭಿನಯಿಸಿದ “ಮಾಯೊದ ಮಹಾಶಕ್ತಿಲು” ಎಂಬ ತುಳು ಭಕ್ತಿ ಪ್ರಧಾನ ಅದ್ಧೂರಿ ನಾಟಕ ಪ್ರಥಮ ಪ್ರಯೋಗದಲ್ಲೇ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಳೆದ ಏಳನೇ ತಾರೀಕಿನಂದ್ದು ಉಡುಪಿಯ ಅಜ್ಜರಗಾಡು ಭುಜಂಗ ಪಾರ್ಕಿನ ಬಯಲು ರಂಗಮಂದಿರಲ್ಲಿ ನಡೆದ ನಾಟಕ ವೀಕ್ಷಿಸಲು ಕಲಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ನಾಟಕದ ಪ್ರತಿಯೊಂದು ಮಜಲುಗಳನ್ನು ಆಡಿಕೊಂಡಾಡಿ ನಾಟಕ
ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಕ್ಕಿಕೊಂಡು ಸಾವನ್ನಪಿದ ಘಟನೆ ಕಾಪುವಿನ ಪೊಲಿಪು ಕಡಲ ಕಿನಾರೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಕಾಪು ಪೊಲಿಪು ನಿವಾಸಿ ಕಿಶೋರ್ (29) ಮೃತ ದುರ್ದೈವಿ. ಪ್ರತಿದಿನ ಕಯಾಕ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳುತ್ತಿದ್ದ ಕಿಶೋರ್ ಶುಕ್ರವಾರ ಮುಂಜಾನೆ ಕೂಡಾ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳಿದ್ದು ಮೀನುಗಾರಿಕಾ ಬಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಸಮುದ್ರದಲ್ಲಿ ತೇಲುತ್ತಿದ್ದ ಕಯಾಕ್ ಅನ್ನು ಗಮನಿಸಿದ
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಈಚರ್ ಟಿಪ್ಪರೊಂದನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಮುಂಜಾನೆ ಹೆದ್ದಾರಿಯಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದ ಪಡುಬಿದ್ರಿ ಪೊಲೀಸರು ಟಿಪ್ಪರ್ ವೊಂದನ್ನು ನಿಲ್ಲಿಸಲು ಸೂಚನೆ ನೀಡಿದರೂ ಉಡುಪಿ ಕಡೆಗೆ ವೇಗವಾಗಿ ಪರಾರಿಯಾಗಲು ಯತ್ನಿಸಿದ ಕೆ.ಎ.20-ಬಿ 1146 ನೋಂದಾಯಿತ ಸಂಖ್ಯೆಯ ಟಿಪ್ಪರನ್ನು ಬೆನ್ನಟ್ಟಿದಾಗ ಅದರ ಚಾಲಕ ಟಿಪ್ಪರನ್ನು ಎರ್ಮಾಳು ಸೇತುವೆ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ, ಟಿಪ್ಪರನ್ನು