Home Posts tagged #Puttur adarsha Hospital

ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಜಾಗ ರಾಜಾರೋಷವಾಗಿ ಅತಿಕ್ರಮಣ

ಹಣ, ಅಧಿಕಾರ ಇದ್ದಲ್ಲಿ ಯಾವ ಕಾನೂನುಬಾಹಿರ ಕೃತ್ಯ ಮಾಡಿದರೂ ತಡೆಯುವವರು ಇಲ್ಲ ಎನ್ನುವ ಮನೋಭಾವ ಕೆಲವರಲ್ಲಿದೆ. ಈ ಮನೋಭಾವಕ್ಕೆ ತಕ್ಕಂತೆ ಇಂಥಹ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕುವ ಅಧಿಕಾರಿ ವರ್ಗವೂ ಸುಮ್ಮನಿದ್ದರೆ, ಇಂಥವರ ದಬ್ಬಾಳಿಕೆಯೂ ಹೆಚ್ಚಾಗುತ್ತದೆ. ಇಂಥಹುದೇ ಒಂದು ಪ್ರಕರಣ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ನಡೆದಿದ್ದು, ರಸ್ತೆ

ಪುತ್ತೂರಿನ ಕೊಡಂಗೆಯಲ್ಲಿ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥ-ಆಸ್ಪತ್ರೆಗೆ ದಾಖಲು

ಮನೆಯಲ್ಲಿ ತಯಾರಿಸಿದ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ ಹತ್ತು ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ನಡೆದಿದೆ. ಪಡ್ನೂರು ಕೊಡಂಗೆ ಸಾಂತಪ್ಪರವರ ಪುತ್ರ ರಾಘವ ರವರ ಮನೆಯಲ್ಲಿ ಈ ಘಟನೆ ನಡೆದಿದ್ದು ರಾಘವ, ಅವರ ತಾಯಿ ಹೊನ್ನಮ್ಮ, ಪತ್ನಿ ಲತಾ, ಪುತ್ರಿ ತೃಷಾ, ಸಹೋದರಿ ಬೇಬಿ, ಬಾವಂದಿರಾದ ದೇವಪ್ಪ, ಕೇಶವ, ರಾಘವರವರ ಸಹೋದರಿಯರ ಮಕ್ಕಳಾದ ಸುದೇಶ್, ಧನುಷ್ ಹಾಗೂ ಅರ್ಚನಾ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.