ಕೊಂಡಾಣದಲ್ಲಿ ಕಟ್ಟುತ್ತಿದ್ದ ದೈವದ ಭಂಡಾರ ಮನೆಯನ್ನು ಜೆಸಿಬಿ ಬಳಸಿ ಉರುಳಿಸಿದ ಸಂಬಂಧ ಮುತ್ತಣ್ಣ ಶೆಟ್ಟಿ, ಧೀರಜ್, ಶಿವರಾಜ್ ಎಂಬ ಮೂವರನ್ನು ಬಂಧಿಸಿರುವುದಾಗಿ ಪೋಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.ಈ ಭಂಡಾರ ಮನೆಯನ್ನು ಮತ್ತು ದೈವಾಲಯವನ್ನು ಎಂಡೋಮೆಂಟಿಗೆ ಒಪ್ಪಿಸಿದ್ದರ ಸಂಬಂಧ ಮೂಲ ಕುಟುಂಬದವರ ನಡುವೆ ಇದ್ದ ಭಿನ್ನಾಭಿಪ್ರಾಯಗಳೇ ಈ ಭಂಡಾರ ಮನೆ
ಉಳ್ಳಾಲ ತಾಲೂಕಿನ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನಕ್ಕೆ ಸೇರಿದ ನಿರ್ಮಾಣ ಹಂತದ ಭಂಡಾರ ಮನೆಯನ್ನು ಕಿಡಿಗೇಡಿಗಳು ಜೆಸಿಬಿ ಮೂಲಕ ಧ್ವಂಸಗೊಳಿಸಿದ ಘಟನೆ ನಡೆದಿದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡ ಹಿನ್ನೆಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸ್ಥಳಕ್ಕೆ ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್, ತಹಶೀಲ್ದಾರ್ ಪುಟ್ಟರಾಜು, ಎಸಿಪಿ ಧನ್ಯಾ ನಾಯಕ್ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆನಂದ್ ಅವರು ಠಾಣೆಗೆ ದೂರು