ಕುಂದಾಪುರ: ಕೋಟೇಶ್ವರ ಪಂಚಾಯತ್ ಗೆ ಸೇರಿದ ಎಸ್.ಎಲ್.ಆರ್.ಎಂ. ಒಣ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಯಾದ ಘಟನೆ ರವಿವಾರ ನಸುಕಿನ ವೇಳೆ ಕೋಟೇಶ್ವರದಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಹಿಂಬದಿಯಲ್ಲಿ (ಹಳೆ ಗ್ರಾಪಂ ಕಟ್ಟಡ) ಕಳೆದ ನಾಲ್ಕೈದು ವರ್ಷಗಳಿಂದ ಎಸ್.ಎಲ್.ಆರ್.ಎಂ. ಘಟಕ ಕಾರ್ಯಾಚರಿಸುತ್ತಿದ್ದು
ಅಪೌಷ್ಟಿಕತೆ ಹೋಗಲಾಡಿಸಿ ಮಕ್ಕಳ ಕಲಿಕೆಗೆ ನೆರವಾಗಲು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಹಾಗೂ ಪದವಿಪೂರ್ವ (ಪಿಯುಸಿ) ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ಓದುವ ಹಾಗೂ ಪಿಯುಸಿ ಓದುವ ಎಲ್ಲಾ ಮಕ್ಕಳಿಗೂ ನೆರವಾಗಲಿದೆ.
ಬೆಂಗಳೂರು, ಡಿ.20- ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡ ಬೊಮಯ್ಯ ಅವರು ಇಂದು ನಿಧನರಾಗಿದ್ದಾರೆ.ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದ ದೊಡ್ಡಯ್ಯ ಮತ್ತು ಚಿಕ್ಕಮ ದಂಪತಿಯ ಪುತ್ರರಾದ ದೊಡ್ಡಬೊಮಯ್ಯ ಅವರು ಈ ಮೊದಲು ಸಂಜೆವಾಣಿ ಮತ್ತು ಪ್ರಸ್ತುತ ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ
ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ ೧೬ರಂದು ಹನುಮಾನ್ ನಗರದ ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ನಿಕಟಪೂರ್ವ ಸಂಚಾಲಕರು, ಪ್ರಸ್ತುತ ವಿವೇಕಾನಂದ ವಿದ್ಯಾವರ್ಧಕ ಸಂಘದ ಪುತ್ತೂರು (ರಿ.) ಇದರ ಸಹಕಾರ್ಯನಿರ್ವಹಣಾಧಿಕಾರಿಯಾಗಿರುವ ಶ್ರೀ ವೆಂಕಟ್ರಮಣರಾವ್ ಮಂಕುಡೆ ವಹಿಸಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದ
ಮೂಲ್ಕಿಯ ಕ್ಯಾನ್‌ಕೋಸ್ ಡ್ರೈಫ್ರೂಟ್ಸ್ ಸ್ಟೋರ್ ಸೋಶಿಯಲ್ ಮೀಡಿಯಾದಲ್ಲಿ ಆಯೋಜಿಸಿದ ಸ್ಪರ್ಧೆ ಕ್ಯಾನ್‌ಕೋಸ್ ಗೀವ್‌ಅವೇಯಲ್ಲಿ ಸುರೇಶ್ ಪೂಜಾರಿ ಬೈಲೂರುರವರು ವಿಜೇತರಾದರು. ಬಹುಮಾನವನ್ನು ಮೂಲ್ಕಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹರ್ಷರಾಜ್ ಶೆಟ್ಟಿ ಜಿ.ಎಂ ಹಾಗೂ ಮೂಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾ ಅಧ್ಯಕ್ಷರಾದ ಚಂದ್ರಕಾಂತ ಶ್ರಿಯಾನ್ ವಿತರಿಸಿದರು.ಈ ಸಂದರ್ಭದಲ್ಲಿ ಹೊಸಅಂಗಣ ಪತ್ರಿಕೆಯ ಸಂಪಾದಕರಾದ ಹರೀಶ್ಚಂದ್ರ ಸಾಲ್ಯನ್, ಉದಯ ಅಮೀನ್ ಮಟ್ಟು, ಹೆಜಮಾಡಿ ಪಂಚಾಯತ್
ಕಾಪು ಪುರಸಭೆ, ಕಾಪುಗ್ರಾಮ ಪಂಚಾಯತ್ ಬೆಳಪು/ಮಜೂರು/ಶಿರ್ವ/ಕಟಪಾಡಿ/ಕೋಟೆಬಡಾ/ಕುತ್ಯಾರು/ಎಲ್ಲೂರು, ಕುರ್ಕಾಲು/ಮುದರಂಗಡಿ/ಇನ್ನಂಜೆ ತೆಂಕ ಎರ್ಮಾಳು/ಹೆಜಮಾಡಿ/ಪಲಿಮಾರು/ಪಡುಬಿದ್ರಿ ನೇತೃತ್ವದಲ್ಲಿ ದಿನಾಂಕ 20.12.2025 ರಂದು ಮೆಸ್ಕಾಂ ಕಾಪು ವಿಭಾಗದ ವತಿಯಿಂದ ಕಾಪು ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ ನಡೆಯಲಿದೆ. ದಿನಾಂಕ 20.12.2025 ರಂದು ಸಮಯ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಮೆಸ್ಕಾಂ ನಿಯಮಿತ ಕಾಪು ಉಪವಿಭಾಗದ ವತಿಯಿಂದ ಕಾಪು
ಪುತ್ತೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ದ.ಕ. ಜಿಲ್ಲಾಡಳಿತ ವತಿಯಿಂದ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪುತ್ತೂರು ಇದರ ಸಹಯೋಗದಲ್ಲಿ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಸಹಕಾರದಲ್ಲಿ ಗಡಿ-ಸಂಸ್ಕೃತಿ- ಉತ್ಸವದ ಅಂಗವಾಗಿ ‘ಕಲಾರ್ಣವ-2025’ ಭಾವ-ರಾಗ-ತಾಳ ಕಾರ್ಯಕ್ರಮ ಡಿಸೆಂಬರ್ 20 ರಂದು ಸಂಜೆ 4.30 ಗಂಟೆಯಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ. ಸಂಜೆ
ಪುತ್ತೂರು:ಕಳೆದ ಎರಡು ದಿನಗಳಿಂದ ಪುತ್ತೂರಿನ ಬಸ್ ನಿಲ್ದಾಣ ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಆಶ್ರಯವಿಲ್ಲದೆ ತಂಗುತ್ತಿದ್ದ ಒಂಟಿ ಮಹಿಳೆಯೊಬ್ಬರನ್ನು ರೋಟರಿ ಕ್ಲಬ್ ಪುತ್ತೂರು ಯುವದ ಮಾನವೀಯ ಕಾರ್ಯಚಟುವಟಿಕೆಯ ಮೂಲಕ ರಕ್ಷಿಸಿ, ಸೂಕ್ತ ಪುನರ್ವಸತಿ ಕಲ್ಪಿಸಿದ ಘಟನೆ ಸಮಾಜಕ್ಕೆ ಆಶಾಕಿರಣವಾಗಿ ಪರಿಣಮಿಸಿದೆ. ರೋಟರಿ ಕ್ಲಬ್ ಪುತ್ತೂರು ಯುವದ ಮಾಜಿ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರೂ ಈಗಾಗಲೇ ಸುಮಾರು 150ಕ್ಕೂ ಅಧಿಕ
ಪುತ್ತೂರು: ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ದ.ಕ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಅಂತರ್ ಜಿಲ್ಲಾ ಮಾಸ್ಟರ್ಸ್ ಕ್ರೀಡಾ ಕೂಟದಲ್ಲಿ ಪುತ್ತೂರಿನ ಧೀರಜ್ ಕೆಮ್ಮಿಂಜೆಯವರು ಶಾಟ್‌ಪುಟ್ ಮತ್ತು 100 ಮೀ ಓಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. ಇವರು ಜಯಪ್ರಕಾಶ್ ಮರೀಲ್ ಮತ್ತು ಉಷಾರಾಣಿ ದಂಪತಿಯ ಪುತ್ರ. ಇವರು ರಾಮಕ್ಷತ್ರಿಯ ಸೇವಾ ಸಂಘ ಪುತ್ತೂರಿನ ಸದಸ್ಯ ಹಾಗೂ ರಾಮಕ್ಷತ್ರಿಯ ಯುವ ವೃoದದ ಸದಸ್ಯರು ಆಗಿರುತ್ತಾರೆ.
ಪುತ್ತೂರು; ನರಿಮೊಗರು ಗ್ರಾಮದ ಶಿಬರ ನಡುವಾಲ್ ಎಂಬಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಅಭಿನಂದನೆ ಕೋರಿ ಹಾಕಲಾದ ಬ್ಯಾನರ್ ಗೆ ಕಿಡಿಗೇಡಿಗಳು ಹಾನಿ ಮಾಡಿದ್ದು ಆರೋಪಿಗಳನ್ನು ತಕ್ಷಣ ಬಂಧಿಸುವAತೆ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ ಪೊಲೀಸರಿಗೆ ಮನವಿ ನೀಡಿದ್ದಾರೆ.ಆ ಭಾಗದಲ್ಲಿ ಬಹು ವರ್ಷಗಳಿಂದ ರಸ್ತೆ ಬೇಡಿಕೆ ಇತ್ಗು.ಇಷ್ಟು ವರ್ಷ ಯಾರಿಂದಲೂ ಆ ಭಾಗದ ರಸ್ತೆ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಶಾಸಕರು ಮುತುವರ್ಜಿ



























