Home Posts tagged V4News (Page 390)

ಪುತ್ತೂರು || ಕುದ್ದುಪದವು ಯುವಕನಿಂದ ಚೂರಿ ಇರಿತ-ಯುವತಿ ಗಂಭೀರ

ಪುತ್ತೂರು: ಪುತ್ತೂರು ಮಹಿಳಾ ಪೊಲೀಸ್ ಠಾಣಾ ಬಳಿ ಚೂರಿ ಇರಿತಗೊಂಡ ಯುವತಿ ಗಂಭೀರ ಗಾಯಗೊಂಡ ಹಿನ್ನಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪುತ್ತೂರು ಬಸ್ ನಿಲ್ದಾಣದಲ್ಲಿ ಯುವಕ ಮತ್ತು ಯುವತಿ ಮಧ್ಯೆ ಮಾತಿನಚಕಮಕಿ ನಡೆದಿದ್ದು ಕೊನೆಗೆ ಆಕೆ ಮಹಿಳಾ ಪೊಲೀಸ್ ಠಾಣೆಯ ಬಳಿ ಬಂದಾಗ ಬೈಕ್ ನಲ್ಲಿ ಬಂದ ಯುವಕ ಆಕೆಯ ಕತ್ತಿಗೆ ಚೂರಿಯಿಂದ ಇರಿದ್ದಿದ್ದಾನೆ ಎಂದು

ಮೂಡುಬಿದಿರೆ: ಕುದಿ ಕಂಬಳಕ್ಕೆ ಚಾಲನೆ

ಮೂಡುಬಿದಿರೆ: 2023-24ನೇ ಸಾಲಿನ ಕಂಬಳ ಸೀಸನ್ ನ ಪೂರ್ವಭಾವಿಯಾಗಿ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆಯಲ್ಲಿ ಕುದಿ ಕಂಬಳ ಆರಂಭಗೊಂಡಿತು. ಉದ್ಯಮಿ, ಕೋಣಗಳ ಯಜಮಾನ ರಂಜಿತ್ ಪೂಜಾರಿ ಕರೆಯಲ್ಲಿ ದೀಪ ಬೆಳಗಿಸುವ ಮೂಲಕ ಕುದಿ ಕಂಬಳಕ್ಕೆ ಚಾಲನೆಯನ್ನು ನೀಡಿದರು. ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ಸುರೇಶ್ ಕೆ.ಪೂಜಾರಿ ರೆಂಜಾಳ ಕಾರ್ಯ, ಪುರಸಭಾ ನಿರ್ಗಮನ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಬೆಳುವಾಯಿ ಗ್ರಾ.ಪಂ.ಸದಸ್ಯ ರಘು, ಕಂಬಳದ ಕೋಣಗಳ ಯಜಮಾನರುಗಳಾದ

ಬ್ರಹ್ಮಾವರ: ಚಂದ್ರಯಾನ-3 ಯಶಸ್ಸಿಗೆ ಸಂಭ್ರಮಾಚರಣೆ

ಬ್ರಹ್ಮಾವರ : ವಿಶ್ವಕ್ಕೆ ಅಚ್ಚರಿ ಮೂಡಿಸಿದ ಭಾರತದ ಚಂದ್ರಯಾನದ ಯಶಸ್ಸಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.ಬ್ರಹ್ಮಾವರ ಫ್ರೆಂಡ್ಸ್ ಮತ್ತು ಡೈಮಂಡ್ ಜಿಮ್‍ನ ಸದಸ್ಯರು ಭಾರತದ ಹೆಮ್ಮೆಯ ವಿಜ್ಞಾನಿಗಳ ತಂಡದ ಶ್ರಮಕ್ಕೆ, ಇಸ್ರೋ ಸಂಸ್ಥೆಗೆ, ದೇಶದ ಪ್ರಧಾನಿ ನರೇಂದ್ರ ಮೋದಿಜೀಯವರಿಗೆ ಮತ್ತು ಭಾರತ ಮಾತೆಗೆ ಜೈ ಕಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ತಂಡದ ದೇವಾನಂದ ನಾಯಕ್, ಅರ್ಜುನ ಪ್ರಭು, ಮಧುಸೂಧನ

ನೆಲ್ಯಾಡಿ: ಪಡುಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ವಾಲಿಬಾಲ್ ಪಂದ್ಯಾಟ

ನೆಲ್ಯಾಡಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸರಕಾರಿ ಪ್ರೌಢಶಾಲೆ ಪಡುಬೆಟ್ಟು ನೆಲ್ಯಾಡಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ವಾಲಿಬಾಲ್ ಪಂದ್ಯಾಟ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಯು.,ಯಾನೆ ಸಲಾಂ ಬಿಲಾಲ್ ಉದ್ಘಾಟಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ.ಕ್ರೀಡಾಂಗಣ ಉದ್ಘಾಟಿಸಿದರು.

ಬೆಳ್ತಂಗಡಿ: ಪಟ್ರಮೆ ಮೀಸಲು ಅರಣ್ಯದಲ್ಲಿ ಕಡವೆ ಬೇಟೆ- ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ: ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಡಿದ ಮೂವರನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿದ್ದು ಓರ್ವ ಆರೋಪಿ ಪರಾರಿಯಾಗಿದ್ದಾನೆ. ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ನಿವಾಸಿ ಕೊಟ್ಯಪ್ಪ ಗೌಡ, ಪುನೀತ್ ಮಣಿಯೇರು, ಎಸ್.ಜೆ.ಸುದೇಶ ಸಂಕೇಶ ಬಂಧಿತ ಆರೋಪಿಗಳು. ಲೋಕೇಶ್ ಸಂಕೇಶ ಎಂಬಾತ ಕಾಡಿನಲ್ಲಿ ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳಿಂದ ಕಡವೆಯ ಮೃತ ದೇಹ ಮತ್ತು

ಮೂಡುಬಿದಿರೆ: ಕರಿಂಜೆ ಘನತ್ಯಾಜ್ಯ ಘಟಕ ಅಸಮರ್ಪಕ ನಿರ್ವಹಣೆ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕರಿಂಜೆ ಮಾರಿಂಜಗುಡ್ಡೆಯಲ್ಲಿರುವ ಘನತ್ಯಾಜ್ಯ ಘಟಕವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸಮರ್ಪಕವಾಗಿ ನಿರ್ವಹಣೆಯಾಗುತ್ತಿದ್ದು ಇದರಿಂದಾಗಿ ಪರಿಸರದ ನಿವಾಸಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆಂದು ಪುರಸಭೆ ಸದಸ್ಯರು ಮತ್ತು ಸಾರ್ವಜನಿಕರು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ದೂರು ನೀಡಿದ್ದಾರೆ. ತಾಲೂಕು ಆಡಳಿತ ಸೌಧದಲ್ಲಿ ಡಿಸಿಯವರಿಂದ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ದೂರು ನೀಡಿ ಈ ಬಗ್ಗೆ ಚರ್ಚೆ

ಬ್ರಹ್ಮಾವರ: ಸುಜ್ಞಾನ ತೀರ್ಥರ 41ನೇ ಆರಾಧನಾ ಮಹೋತ್ಸವ

ಬ್ರಹ್ಮಾವರದ ಹಾನಸ ಅರೆಮಾದನಹಳ್ಳಿ ಸುಜ್ಞಾನ ತೀರ್ಥ ಮಹಾ ಸ್ವಾಮೀಜಿಯವರ 41 ನೇ ಆರಾಧನಾ ಮಹೋತ್ಸವ ನಡೆಯಿತು. ಉಡುಪಿ ಜಿಲ್ಲೆಯ ಕೊಕ್ಕರ್ಣೆಬಳಿಯ ಶಾಖಾ ಮಠ ಕಜ್ಕೆಯಲ್ಲಿ ಗುರುಪರಂಪರೆಯ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಆಚರಣೆಯ ಸಂದರ್ಭ ಜರುಗಿತು. ಈ ಸಂದರ್ಭ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ಮಾತನಾಡಿ, ಇತಿಹಾಸ ಇರುವ ಗುರು ಪರಂಪರೆಯಲ್ಲಿ, ಮೂಲ ಗುರುಗಳು ದೇಶದಾದ್ಯಂತ ನಡೆದಾಡಿದ ಮತ್ತು ಪವಾಡಗಳ ಕುರಿತು ಮತ್ತು ಹಾಸನದ ಬಳಿಯ

ಉಪ್ಪುಂದ: ಚಂದ್ರಯಾನ-3 ಯಶಸ್ವಿ: ವಿದ್ಯಾರ್ಥಿಗಳಿಂದ ಗಮನಸೆಳೆದ ISRO ರಚನಾ ವಿನ್ಯಾಸ

ಭಾರತದ ಚಂದ್ರಯಾನ-೩ ಯಶಸ್ವಿಯಾದ ಹಿನ್ನೆಲೆಯಲ್ಲಿ ಅದಕ್ಕೆ ಕಾರಣೀಕರ್ತರಾದ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಗೆ ಗೌರವ ಸೂಚಕವಾಗಿ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ISRO ಎಂಬ ರಚನಾ ವಿನ್ಯಾಸವನ್ನು ರಚಿಸಿ ಅಭಿನಂದನೆ ಸಲ್ಲಿಸಲಾಯಿತು. ಕಳೆದ ಬಾರಿ ಇದೇ ಸಂಸ್ಥೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ೭೫ ಎಂಬ ರಚನಾ ವಿನ್ಯಾಸವನ್ನು ರಚಿಸಿ ರಾಜ್ಯಾದ್ಯಂತ ಗಮನಸೆಳೆದಿದ್ದರು.

ಬಂಟ್ವಾಳ : ತುಂಬೆ ಗ್ರಾ.ಪಂ.ನ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಸ್ವೀಕಾರ

ಬಂಟ್ವಾಳ: ತುಂಬೆ ಗ್ರಾ.ಪಂ.ನ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಜಯಂತಿ ಕೇಶವ ಹಾಗೂ ಉಪಾಧ್ಯಕ್ಷರಾಗಿ ಗಣೇಶ್ ಸಾಲ್ಯಾನ್ ತುಂಬೆ ಬುಧವಾರ ಅಧಿಕಾರ ಸ್ವೀಕರಿಸಿದರು. ಬಳಿಕ ಪಂಚಾಯತಿ ಕಚೇರಿ ಆವರಣದಲ್ಲಿ ಗಿಡ ನೆಡುವ ಮೂಲಕ ಪದಗ್ರಹಣ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿ ಕೊಂಡರು. ಈ ಸಂದರ್ಭ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆವರೆಂಡ್ ಫಾಧರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ಬಿ.ಎ. ಗ್ರೂಫ್‍ನ ಸಲಾಂ ತುಂಬೆ, ನಿಕಟಪೂರ್ವಾಧ್ಯಕ್ಷ ಪ್ರವೀಣ್ ಬಿ.

ಮಳಲಿ : ಹೋಬಳಿ ಮಟ್ಟದ ಕಬ್ಬಡಿ ಪಂದ್ಯಾಟ – ಎಡಪದವು ಸ್ವಾಮಿ ವಿವೇಕಾನಂದ ಪ್ರೌಢಶಾಲೆಗೆ ಪ್ರಶಸ್ತಿ

ಮಳಲಿ ಪ್ರೌಢಶಾಲೆಯಲ್ಲಿ ಜರುಗಿದ ಗುರುಪುರ ಹೋಬಳಿ ಮಟ್ಟದ ಪ್ರೌಢಶಾಲಾ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಎಡಪದವು ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡಿದ್ದಾರೆ. ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಎಡಪದವು ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ