Home Posts tagged V4News (Page 49)

ಕನ್ನಡ ಮಿತ್ರರು ಯು.ಎ.ಇ ಆಯೋಜನೆಯ “ಕನ್ನಡ ಪಾಠ ಶಾಲೆ ದುಬೈ” ಗೆ ಗಡಿನಾಡು ಸಾಧಕ ಅಂತಾರಾಷ್ಟ್ರೀಯ ಪುರಸ್ಕಾರ

ಅನಿವಾಸಿ ಯುವ ಪೀಳಿಗೆ ಕನ್ನಡ ಸಾಕ್ಷರತೆಯನ್ನು ಸಾರುವ ಕನ್ನಡ ಸಾಕ್ಷರತೆಯ ಮಹಾ ಅಭಿಯಾನವನ್ನು ಆರಂಭಿಸಿ, ಜಾಗತಿಕ ಕನ್ನಡ ಕಲಿಕಾ ಚಳುವಳಿಯ ಹರಿಕಾರ ಎಂದು ಪ್ರಖ್ಯಾತರಾಗಿರುವ ಶಶಿಧರ್ ನಾಗರಾಜಪ್ಪ ಮತ್ತು ಅವರ ತಂಡವನ್ನು ದುಬೈ ಗಡಿನಾಡ ಉತ್ಸವ -2025 ರಲ್ಲಿ ಪುರಸ್ಕರಿಸಿ ಗೌರವಿಸಲಾಯಿತು. ದುಬೈ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ {ರಿ }ಯುಎಇ ಘಟಕ ಮತ್ತು ಗಡಿ

ಪಾಲಡ್ಕ : ಯುವಕನಿಂದ ಮಹಿಳೆಗೆ ಕತ್ತಿಯಿಂದ ಇರಿತ; ಆರೋಪಿ ಪೊಲೀಸ್ ವಶಕ್ಕೆ

ಮೂಡುಬಿದಿರೆ: ಯುವಕನೋರ್ವ ಮಹಿಳೆಯೊಬ್ಬರಿಗೆ ಕತ್ತಿಯಿಂದ ಇರಿದ ಪರಿಣಾಮವಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಶನಿವಾರ ನಡೆದಿದೆ. ವಣ೯ಬೆಟ್ಟುವಿನ ಕೆರೆಕೋಡಿ ನಿವಾಸಿ ನವೀನ್ ಅವರ ಪತ್ನಿ ಸಂಜೀವಿ (ನಯನಾ ನಾಯ್ಕ್) ಇರಿತಕ್ಕೊಳಗಾದ ಎಂದು ಮಹಿಳೆ ಎಂದು ಗುರುತಿಸಲಾಗಿದ್ದು ಅವರ ತಲೆ, ಕೈ ಮತ್ತು ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ರಾಮ್ ಮೋಹನ ನಗರ ನಿವಾಸಿ ರಾಜೇಶ್ ನಾಯ್ಕ್

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಒತ್ತಾಯ ಕುಂದಾಪುರ ವಕೀಲರಿಂದ ಪತ್ರ ಚಳವಳಿ

ಕುಂದಾಪುರ: ಕರಾವಳಿಯಲ್ಲಿ ಹೈಕೋರ್ಟ್ ಸ್ಥಾಪನೆಗೆ ಒತ್ತಾಯಿಸಿ ದ.ಕ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಕೀಲರ ಸಂಘಗಳಿಂದ ನಡೆಯುತ್ತಿರುವ ಅಂಚೆ ಕಾರ್ಡ್ ಚಳವಳಿಯ ಭಾಗವಾಗಿ ಕುಂದಾಪುರದಲ್ಲೂ ಪತ್ರ ಚಳವಳಿ ಶುಕ್ರವಾರ ನಡೆಯಿತು. ಬಹುಕಾಲದ ಬೇಡಿಕೆಗೆ ಎಲ್ಲಾ ಪಕ್ಷಗಳ ನಾಯಕರೂ ಬೆಂಬಲ ನೀಡಿದ್ದಾರೆ. ಈ ಭಾಗದಿಂದ ಬಹಳಷ್ಟು ವ್ಯಾಜ್ಯಗಳು ಕೋರ್ಟ್‌ಗೆ ಹೋಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿ ವಿಚಾರಣೆಗೂ ಬೆಂಗಳೂರಿಗೆ ತೆರಳುವುದರಿಂದ ಖರ್ಚು ವೆಚ್ಚಗಳು

ದುಬೈಯಲ್ಲಿ ಅಕ್ಟೋಬರ್ 25 ರಂದು “ದುಬೈ ಗಡಿನಾಡ ಉತ್ಸವ -2025”

ದುಬೈ : ಯುಎಇಯಲ್ಲಿ ಇರುವ ಎಲ್ಲಾ ಗಡಿನಾಡಿನ ಹಾಗೂ ಕರುನಾಡಿನ ಕನ್ನಡಿಗರನ್ನು ಒಟ್ಟುಗೂಡಿಸಿ “ದುಬೈ ಗಡಿನಾಡ ಉತ್ಸವ -2025″ವನ್ನು ಅದ್ದೂರಿಯಾಗಿ ಆಚರಿಸುವ ಹಾಗೂ ಈ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ಮೂಡಿಬರಲಿ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಗಲ್ಫ್ ನ ಅಧ್ಯಕ್ಷರಾದ ಅಶ್ರಫ್ ಶಾ ಮಾಂತುರು ರವರು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಾ ಶುಭವನ್ನು ಹಾರೈಸಿದರು.ಅಕ್ಟೋಬರ್ 25 ರಂದು ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ

ಅ.24 : ವಿಶೇಷ ಕಾರ್ಯಪಡೆ ಸಿಬ್ಬಂದಿಗಳಿಗಾಗಿ ತುಳು ಭಾಷಾ ಕಲಿಕೆ ಮತ್ತು ಸಂಸ್ಕೃತಿ ಪರಿಚಯ ಕಾರ್ಯಗಾರ ಉದ್ಘಾಟನೆ

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರಿನ ವಿಶೇಷ ಪೊಲೀಸ್ ಕಾರ್ಯಪಡೆಯ(ಎಸ್ .ಎ. ಎಫ್ ) ಸಿಬ್ಬಂದಿಗಳಿಗಾಗಿ 20 ದಿನಗಳ ತುಳು ಭಾಷಾ ಕಲಿಕೆ ಮತ್ತು ಸಂಸ್ಕೃತಿ ಪರಿಚಯ ಕಾರ್ಯಗಾರವನ್ನು ಹಮ್ಮಿಕೊಂಡಿದೆ. ಇತ್ತೀಚೆಗೆ ಹೊಸದಾಗಿ ರಚಿಸಲ್ಪಟ್ಟ ವಿಶೇಷ ಕಾರ್ಯಪಡೆಯ ಸಿಬ್ಬಂದಿಗಳಿಗೆ ಸ್ಥಳೀಯ ಸಂಸ್ಕೃತಿ ಪರಿಚಯ ಮಾಡುವ ಹಾಗೂ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ವಿಶೇಷ ಆಸಕ್ತಿ ವಹಿಸಿದ ಹಿನ್ನೆಲೆಯಲ್ಲಿ

ಬನ್ನೇರುಘಟ್ಟ ಲಯನ್ಸ್ ತಂಡದಿಂದ ದೀಪಾವಳಿ ಫೋಟೋ ಶೂಟ್ – ಗ್ರಾಮೀಣ ಮಹಿಳೆಯರೊಂದಿಗೆ ಸಂವಾದ

ಬೆಂಗಳೂರು : ಬೆಳಕಿನ ಹಬ್ಬವಾದ ದೀಪಾವಳಿ ಆಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಗ್ರೇಟರ್ ಬನ್ನೇರಘಟ್ಟ ಸದಸ್ಯರು ಕನಕಪುರದ ಸಮೀಪದ ಹೋರಳುಗಲ್ಲು ಗ್ರಾಮಕ್ಕೆ ಸ್ನೇಹ ಮತ್ತು ಸೇವೆಯ ಉದ್ದೇಶದ ಪ್ರವಾಸವನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ’ದೀಪದಿಂದ ದೀಪವಾ’ ಎಂಬಆಶಯದೊಂದಿಗೆ ಬೆಳಕನ್ನು ಮತ್ತು ಒಗ್ಗಟ್ಟಿನ ಶಕ್ತಿಯನ್ನು ಬಿಂಬಿಸುವ ವಿಂಟೇಜ್ ಶೈಲಿಯ ಫೋಟೋ ಶೂಟ್ ನಡೆಸಲಾಯಿತು. ಇದೆ ವೇಳೆ ಹೋರಳುಗಲ್ಲು ಗ್ರಾಮದ ಗ್ರಾಮೀಣ ಮಹಿಳೆಯರು ಮತ್ತು

ದೀಪಾವಳಿ ತುಳುವ ನೆಲದ ಸಂಸ್ಕೃತಿಯ ಪ್ರತಿಬಿಂಬ : ಕಿಶೋರ್ ಕುಮಾರ್ ಶೇಣಿ

ಮಂಗಳೂರು : ತುಳುನಾಡಿನಲ್ಲಿ ನಡೆಯುವ ದೀಪಾವಳಿಯು ಕೃಷಿ ಬದುಕಿಗೆ ಹೊಂದಿಕೊಂಡ ತುಳುವ ನೆಲದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಪೆರ್ಲ ಹೊಂಬೆಳಕು ಶಿಕ್ಷಣ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್ ರೈ ಶೇಣಿ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಮಂಗಳೂರು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾದ ‘ದೀಪಾವಳಿ ಪರ್ಬದ ಐಸಿರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು . ದೀಪಾವಳಿ ಹಬ್ಬದ

ಹಾಸನ: ಹಾಸನಾಂಬ ದೇವಿ ದರ್ಶನದ ಬಳಿಕ ಭೀಕರ ಅಪಘಾತ: ಇಬ್ಬರ ಸಾವು

ಹಾಸನಾಂಬ ದೇವಿ ದರ್ಶನ ಮುಗಿಸಿ ವಾಪಾಸ್ ಬೆಂಗಳೂರಿಗೆ ಹೋಗುವ ದಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಬೆಂಗಳೂರಿನ ಬಸವರಾಜು ಮತ್ತು ಅನುಶ್ರೀ (19) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಛಾಯಾ (20) ಹಾಗೂ ಮತ್ತೊಂದು ಬೈಕ್ ಸವಾರ ಮೊಹಮ್ಮದ್ ಶಾಹಿದ್ ಅವರನ್ನು ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಛಾಯಾ ಅವರ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸ್

ಪುತ್ತೂರು:ವಿದ್ಯಾಸಮೃದ್ಧಿ ಲೋಕಾರ್ಪಣೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಮೊದಲ Tuition App ಆಗಿರುವ Vidyasamruddhi Tuition App ಪುತ್ತೂರಿನ Rotary GL Sabhabhavanaದಲ್ಲಿ ಲೋಕಾರ್ಪಣೆಗೊಂಡಿತು. ವಿದ್ಯಾಸಮೃದ್ಧಿಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ SRK Laddersನ ಕೇಶವ ಅಮೈ ಕಲಾಯಿಗುತ್ತು ಅವರು ಮಾತನಾಡಿ ಇಂದು 10ನೇ ತರಗತಿಯ ಮಕ್ಕಳಿಗೆ ನೀವು ಪಾಠಗಳನ್ನು App ಮೂಲಕ ಕೊಟ್ಟಿದ್ದೀರಿ. ಮುಂದೆ ಸಾರ್ವಜನಿಕರಿಗೆ ಉಪಯೋಗವಾಗುವ Spoken English ಮಸ್ತು ಇತರ ಭಾಷೆಗಳನ್ನು ಸಹ ನೀಡುವ ಕೆಲಸ

ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಶ್ರೀ ಮಾರಿಯಮ್ಮನ ಕ್ಷೇತ್ರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ

ಕಾಪು:ಕರ್ನಾಟಕ ಸರಕಾರದ ಮಾಜಿ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರು ಇಂದು ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಕ್ಷೇತ್ರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯ ದರುಶನ ಪಡೆದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ದೇವಳದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿಯವರ ಸಮಕ್ಷಮದಲ್ಲಿ