Home Posts tagged V4News (Page 785)

ಕುಕ್ಕೆ ದೇವಳಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ

ಕಡಬ: ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಸಚಿವರು ಶ್ರೀ ದೇವರ ದರುಶನ ಪಡೆದು ಸಂಕಲ್ಪ ನೆರವೇರಿಸಿ ವಿಶೇಷ ಸೇವೆ ಸಮರ್ಪಿಸಿದರು. ಶ್ರೀ ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯರು ಸಚಿವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಈ ಸಂದರ್ಭದಲ್ಲಿ

ದೀಪ ಬೆಳಕು ನೀಡಿದಂತೆ ಮನಸ್ಸು, ಹೃದಯ ಬೆಳಕಾಗಲಿ : ಡಾ. ಪ್ರಭಾಕರ ಭಟ್ ಕಲ್ಲಡ್ಕ

ಪುತ್ತೂರು: ಹಿಂದೂ ಸಮಾಜದ ಶಕ್ತಿಯನ್ನು ವೃದ್ಧಿಸಲು ನಮ್ಮ ಮನಸ್ಸು ಮತ್ತು ಹೃದಯ ಬೆಳಕಾಗಬೇಕು. ಅದಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ದೀಪದ ಬೆಳಕು ಎಲ್ಲರ ಮನೆ ಮನೆಯಲ್ಲಿ ಬೆಳಗಲಿ. ಮನೆ ದೇವಸ್ಥಾನ ಆಗಲಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಆಹ್ವಾನಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ವಿಭಾಗದ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಉರ್ಲಾಂಡಿ

ಕಾರ್ಕಳ: ತೋಟದ ಕೆಲಸಕ್ಕೆ ಬಂದಾತನಿಂದ ಚಿನ್ನದ ಉಂಗುರ ಕಳವು

ಕಾರ್ಕಳ ಕುಕ್ಕಂದೂರು ಗ್ರಾಮದ ಗುಂಡ್ಯಡ್ಕ ದಲ್ಲಿ ವಾಸವಾಗಿರಯವ ದೇಜು ಶೆಟ್ಟಿ ರವರ ಮನೆಗೆ ತೋಟದ ಕೆಲಸಕ್ಕೆ ಬಂದ ಬೆಳ್ತಂಗಡಿ ತಾಲೂಕಿನ ಜಯಪ್ರಕಾಶ್ ಮನೆಯ ಒಡತಿ ಸರಳ ಶೆಟ್ಟಿ ರವರು ಸ್ನಾನಕ್ಕೆಂದು ಹೋದಾಗ ಅವರ ಬೆಡ್ ರೂಂನಲ್ಲಿದ್ದ ಚಿನ್ನದ ಉಂಗುರವನ್ನು ಕಳವು ಮಾಡಿದ್ದು ಈ ಬಗ್ಗೆ ಸರಳ ಶೆಟ್ಟಿ ರವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಅದರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಬಳಿಕ ಉಂಗುರವನ್ನು ವೇಣೂರಿನ ಸೊಸೈಟಿಯೊಂದರಲ್ಲಿ

ಹಳೆಯಂಗಡಿಯ ಕೃಷ್ಣ ಪೂಜಾರಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ದೈವಾರಾಧನೆ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡಿದಲ್ಲದೆ ಕೃಷಿಕರಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡ ಹಳೆಯಂಗಡಿಯ ಕೃಷ್ಣ ಪೂಜಾರಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.ಹಳೆಯಂಗಡಿಯ ಗ್ರಾಮೀಣ ಪ್ರದೇಶವಾದ ಇಂದಿರಾನಗರದಲ್ಲಿ ಕರಾವಳಿಯ ಕಾರ್ಣಿಕ ಕ್ಷೇತ್ರವನ್ನು ಭಕ್ತಿಯ ಆರಾಧನೆಯಲ್ಲಿ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ಕೃಷ್ಣ ಪೂಜಾರಿಯವರು ಜಿಲ್ಲೆಯ ಅನೇಕ ದೈವಾರಾಧನೆ ಕ್ಷೇತ್ರಗಳಲ್ಲಿ ತಮ್ಮನ್ನು

ಜೇನು ವಿಷ ಸಂಗ್ರಹಿಸುವ ಸಹಾಸಕ್ಕೆ ಕೈಹಾಕಿದ ಯುವಕ

ಮಂಗಳೂರು: ಹೂವಿನ ಮಕರಂದ ಹೀರಿ ಜೇನು ನೊಣ, ಸಿಹಿಯಾದ ಜೇನು ತುಪ್ಪ ತಯಾರಿಸುತ್ತದೆ ಅಂತ ಎಲ್ಲರಿಗೂ ಗೊತ್ತು. ಆದ್ರೀಗ, ಇದೇ ಜೇನು ನೊಣಗಳ ದೇಹದಿಂದ ಉತ್ಪತ್ತಿಯಾಗುವ ವಿಷ, ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತೆ ಅಂದ್ರೆ ನೀವು ನಂಬಲೇಬೇಕು. ಅತ್ಯಂತ ಬೆಲೆಬಾಳುವ ಈ ನೊಣಗಳ ವಿಷ ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕಿ, ಮಂಗಳೂರಿನ ಯುವಕನೊಬ್ಬ ಯಶಸ್ವಿಯಾಗಿದ್ದಾರೆ. ಜೇನು ವಿಷ ಅಂದ್ರೆ ಬೀ ವೇನಮ್ ಪಡೆಯುವ ಯಂತ್ರವನ್ನು ತಯಾರಿಸಿ ವಿಷ ಸಂಗ್ರಹಿಸುವಲ್ಲಿ ಯಶಸ್ವಿಯಾಗಿರೋದು.

ಪುತ್ತೂರಿನ ಕೊಡನೀರು ಎಂಬಲ್ಲಿ ರಸ್ತೆ ಅಪಘಾತ : ದ್ವಿಚಕ್ರ ಸವಾರ ಮೃತ್ಯು

ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕೊಡನೀರು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದ್ವಿ ಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನ .1 ರಂದು ನಡೆದಿದೆ.ಪೆರಮೊಗರಿನ ಕೋಳಿ ಅಂಗಡಿಯ ಸೋಮಶೇಖರ್ ರೈ ಮೃತಪಟ್ಟವರು.ಇವರು ಮೂಲತ: ಸವಣೂರು ಪುಣ್ಚಪ್ಪಾಡಿ ನಿವಾಸಿಯಾಗಿದ್ದು ಸದ್ಯ ಪೆರಮೊಗರಿನಲ್ಲಿ ವಾಸವಾಗಿದ್ದರು . ಇವರಿಗೆ ಪುಣ್ಚಪ್ಪಾಡಿಯಲ್ಲಿ ತೋಟವಿದ್ದು ಅಲ್ಲಿ ಕೆಲಸ ಮಾಡಿಸಿ ವಾಪಸ್ಸು ಪೆರಮೊಗರುವಿಗೆ

ಹಾವು ಮತ್ತು ಇಲಿ : ಫೈಟ್ ಫೈಟ್‍ನಲ್ಲಿ ಗೆದ್ದ ಇಲಿರಾಯ

ಕಡಬ : ಸಾಮಾನ್ಯವಾಗಿ ಹಾವು ಇಲಿಯನ್ನು ತಿನ್ನುವುದನ್ನು ಕೇಳಿದ್ದೇವೆ , ನೋಡಿದ್ದೇವೆ . ಆದರೆ ಇಲ್ಲೊಂದು ಹಾವು ಇಲಿ ಫೈಟ್‍ನಲ್ಲಿ ಇಲಿಯೇ ಹಾವನ್ನು ಹಿಡಿದಳೆದು ನುಂಗಲು ಪ್ರಯತ್ನಪಡುವ ವೀಡಿಯೋವೊಂದು ವೈರಲ್ ಆಗಿದೆ . ಇದು ನಡೆದದ್ದು ಕಡಬ ಸಮೀಪದ ಕಳಾರದಲ್ಲಿ ಇಲ್ಲಿನ ಗಣೇಶ್ ಸ್ಟೋರ್ ಸಮೀಪ ಹಾವು ಮತ್ತು ಇಲಿಯ ಪೈಟ್‍ನಲ್ಲಿ ಕೊನೆಗೆ ಇಲಿಯೇ ಹಾವನ್ನು ಕಚ್ಚಿ ಎಳೆದಾಡುವ ದೃಶ್ಯ ಕಂಡು ಬಂದಿದೆ . ಈ ವಿಶ್ವಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲಾಗಿದೆ .

ಸಿಟಿ ಬಜಾರ್ ಆಲ್ ಇನ್ ವನ್ ಶಾಪಿಂಗ್ ಬಜಾರ್ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರಿಂದ ಉದ್ಘಾಟನೆ

ಬೈಂದೂರಿನ ಶನೀಶ್ವರ ಮಂದಿರದ ಮುಖ್ಯ ರಸ್ತೆಯಲ್ಲಿ ನೂತವಾಗಿ ಇಂತಿಯಾಸ್ ಶಿರೂರು ಹಾಗೂ ಮುಸಾದಿಕ್ ಹಳ್ಗೇರಿ ಮಾಲಕತ್ವದ ಸಿಟಿ ಬಜಾರ್ ಅಲ್ ಇನ್ ಒನ್ ಶಾಪಿಂಗ್ ಬಜಾರ್ ಉದ್ಘಾಟನೆ ಗೊಂಡಿತು.   ಉದ್ಘಾಟನೆಯನ್ನು ಬೈಂದೂರಿನ ಜನಪ್ರಿಯ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ ,ರವೀಂದ್ರ ಶಾನಭಾಗ್ ಹಾಗೂ ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.

ಡೆಹ್ರಾಡೂನ್‌ನಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್ ಕುಂದಾಪುರದ ಹನೀಶ್ ಕುಮಾರ್‌ಗೆ ಬೆಳ್ಳಿ ಪದಕ

ಪಿಯೊನಿಕ್ಸ್ ಅಕಾಡೆಮಿ ಇಂಡಿಯಾ ಕುಂದಾಪುರದ ಸದಸ್ಯ ಹನೀಶ್ ಕುಮಾರ್ ರವರಿಗೆ ಡೆಹ್ರಾಡೂನ್‌ನಲ್ಲಿ ನಡೆದ ಅಖಿಲ ಭಾರತ ಸಿಯೊಕೊಕೈ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸೀನಿಯರ್ ಐವತ್ತು ಕೆ.ಜಿ ವಿಭಾಗದಲ್ಲಿ ಬೆಳ್ಳಿ ಹಾಗೂ ಇಪ್ಪತ್ತೊಂದು ವರ್ಷ ಒಳಗಿನ ವಯೋಮಿತಿಯ ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದೆ. ಅಖಿಲ ಭಾರತ ಸಿಯೊಕೊಕೈ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ಪರವಾಗಿ ಕುಂದಾಪುರದ ಆರು ಮಂದಿ ಕರಾಟೆ ಪಟುಗಳು ಪ್ರತಿನಿಧಿಸಿದ್ದರು. ಹನೀಶ್ ಕುಮಾರ್ ರವರು ಉಪ್ಪುಂದದ

ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಆಸಕ್ತ ಗುಂಪಿನ ರೈತರಿಗೆ ಟರ್ಪಾಲ್ ವಿತರಣೆ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರವರ್ತಕರಾಗಿ ನಡೆಸುತ್ತಿರುವ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದಿಂದ ಮೂರು ಆಸಕ್ತ ಗುಂಪಿನ ರೈತರಿಗೆ ಇಪ್ಪತ್ತಮೂರು ಟರ್ಪಾಲ್ ನ್ನು ಒಕ್ಕೂಟದ ಅಧ್ಯಕ್ಷ ರಾದ ಶ್ರೀ ಚಂದ್ರ ಪೂಜಾರಿಯವರು ವಿತರಿಸಿದರು ವಿತರಿಸಿ ಮಾತನಾಡಿದ ಅವರು ಆಕಸ್ಮಿಕ ಮಳೆ ಬರುತ್ತಿರುವ ಕಾರಣ ಭತ್ತ ಕಟಾವಿಗೆ ಸಹಾಯವಾಗಲೆಂದು ಒಕ್ಕೂಟದ ಸದಸ್ಯರಿಗೆ ಉತ್ತಮ ಗುಣಮಟ್ಟದ ಕ್ರಷಿ ಪರಿಕರಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗಿರುತ್ತದೆ