Home Posts tagged V4News (Page 787)

ಕ್ರೈಸ್ತರ ಮೇಲಿನ ದಾಳಿಗೆ ಖಂಡನೆ ಎಸ್‌ಡಿಪಿಐಯಿಂದ ಕಾನೂನು ಹೋರಾಟ

ರಾಜ್ಯದ ವಿವಿಧ ಕಡೆಗಳಲ್ಲಿ ಕ್ರೈಸ್ತ ಸಮುದಾಯದ ಧರ್ಮ ಗುರುಗಳು ಚರ್ಚ್, ಸೇವಾ ಕಾರ್ಯಕರ್ತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಸುಳ್ಳು ಕೇಸುಗಳನ್ನು ದಾಖಲಿಸಿ ಕ್ರೈಸ್ತ ಧಾರ್ಮಿಕ ಮುಖಂಡರುಗಳನ್ನು ಬಂಧಿಸುತ್ತಿರುವ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಖಂಡಿಸುತ್ತದೆ. ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ

ಇನೋಳಿಯ ಬ್ಯಾರೀಸ್ ನಾಲೆಡ್ಜ್ ಸೆಂಟರ್‌ನಲ್ಲಿ ಒಂಭತ್ತನೇ ಪದವಿ ಸಮಾರಂಭ

ಮಂಗಳೂರಿನ ಇನೋಳಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ಅಕ್ಟೋಬರ್ 30 ರಂದು ಪದವಿ ದಿನದ ಸಂಭ್ರಮದ ಕ್ಷಣಗಳನ್ನು ಆಚರಿಸಲಾಗುವುದು.ಬೇರಿಸ್ ಇನ್ಸಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬ್ಯಾರಿಸ್ ಎನ್ವಿರೋ-ಅರ್ಕಿಟೆಕ್ಟರ್ ಡಿಸೈನ್ ಸ್ಕೂಲ್‌ನ ಒಂಭತ್ತನೇ ಪದವಿ ಸಮಾರಂಭವು ನಡೆಯಲಿದೆ. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಬಿಐಟಿ ಪ್ರಾಂಶುಪಾಲರಾದ ಡಾ. ಎಸ್.ಐ. ಮಂಜುರ್ ಬಾಷಾ, ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.

ಪುತ್ತೂರು ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಗೀತ ಗಾಯನ

ಪುತ್ತೂರು: 10 ಜನಕ್ಕೂ ಹೆಚ್ಚಿರುವ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಸೇರಿದಂತೆ ಎಲ್ಲೆಡೆ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಈ ಮೂರು ಗೀತೆಗಳನ್ನು ಅ.28ರಂದು ಬೆಳಿಗ್ಗೆ ಗಂಟೆ 11ಕ್ಕೆ ಏಕಕಾಲಕ್ಕೆ ಹಾಡಬೇಕೆಂಬ ನಿರ್ದೇಶನದಂತೆ ಪುತ್ತೂರು ಮಿನಿ ವಿಧಾನ ಸೌಧ ಸಭಾಂಗಣ ದಲ್ಲಿ ಲಕ್ಷ ಕಂಠಗಳ ಗೀತ ಗಾಯನ

ಕಾರ್ಕಳದಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ

ಕಾರ್ಕಳ:ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶದಂತೆ ಕನ್ನಡ ಅಭಿಮಾನವನ್ನು ವೃದ್ಧಿಸುವ ನಿಟ್ಟಿನಲ್ಲಿ ಕನ್ನಡ ಗೀತ ಗಾಯನವು ಕಾರ್ಕಳದಲ್ಲಿ ನಡೆಯಿತು. ಕಾರ್ಕಳದ ಬಾಹುಬಲಿ ಬೆಟ್ಟದ ತಪ್ಪಲಲ್ಲಿರುವ ಚತುರ್ಮುಖ ಬಸದಿಯ ಆವರಣದಲ್ಲಿ ನೂರಾರು ಶಾಲಾ ಮಕ್ಕಳು ಕನ್ನಡ ನಾಡಗೀತೆ ಹಾಡಿದರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ರೂಪ ಶೆಟ್ಟಿ, ಮುಖ್ಯ ಕ್ಷೇತ್ರ ಶಿಕ್ಷಣಾಧಿಕಾರಿ, ಸಂಗೀತ ಶಿಕ್ಷಕರಾದ ಶ್ರೀ ಕೃಷ್ಣ, ಅನಂತ ಪದ್ಮನಾಭ ಭಟ್, ಮುನಿರಾಜ ರೆಂಜಾಳ, ಶಾಲಾ,

ಎಂ.ಡಿ ಪೀಡಿಯಾಟ್ರಿಕ್ಸ್ ಪರೀಕ್ಷೆಯಲ್ಲಿ ಚೈತ್ರಾ ಪಿ ಪ್ರಥಮ ರ‍್ಯಾಂಕ್

ಪುತ್ತೂರು: ಕರ್ನಾಟಕ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಡೆಸಿದ ಎಂ.ಡಿ ಪೀಡಿಯಾಟ್ರಿಕ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಚೈತ್ರಾ ಪಿ ರವರು ಪ್ರಥಮ ರ‍್ಯಾಂಕ್ ನ್ನು ಗಳಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಈಕೆ ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2010ರಲ್ಲಿ ಪೂರೈಸಿ ಬಳಿಕ ಎಂಬಿಬಿಎಸ್ ಪದವಿಯನ್ನು ಹಾಸನ ಮೆಡಿಕಲ್ ಕಾಲೇಜಿನಲ್ಲಿ ಪಡೆದು ಎಂ.ಡಿ ಪೀಡಿಯಾಟ್ರಿಕ್ಸ್ ನ್ನು

ಇಂದಿನಿಂದ ಹಾಸನಾಂಬೆ ದೇವಿ ದರ್ಶನ : 2 ಡೋಸ್ ಲಸಿಕೆ ಕಡ್ಡಾಯ

ಹಾಸನ ಪ್ರಸಿದ್ಧ ಹಾಸನಾಂಬ ದೇವಿ ದರ್ಶನೋತ್ಸವ ಇಂದಿನಿಂದ ಪ್ರಾರಂಭವಾಗಲಿದ್ದು, ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಹಾಸನಾಂಬ ದೇವಾಲಯ ಆವರಣದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ಹಂತದ ಸಿದ್ದತೆಗಳನ್ನು ಪರಿಶೀಲಿಸಿದರು. ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ದೇವಾಲಯದ ಅಲಂಕಾರ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಬಹುತೇಕ ಪೂರ್ಣಗೊಂಡಿದೆ ಎಂದರು. ಸಾರ್ವಜನಿಕರಿಗೆ ಅ.29 ರಿಂದ ನ.5ರ ವರೆಗೆ ಪ್ರತಿ

ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ : ಕುದ್ಕಾಡಿ ನಾರಾಯಣ ರೈ ಕಸ್ಟಡಿಯಿಂದ ಆಸ್ಪತ್ರೆಗೆ ದಾಖಲು

ಪುತ್ತೂರು: ಬಡಗನ್ನೂರಿನಲ್ಲಿ ತೋಟದ ಕೆಲಸಕ್ಕೆ ಬರುತ್ತಿದ್ದ ಅಪ್ರಾಪ್ತ ದಲಿತ ಬಾಲಕಿಯನ್ನು ಅತ್ಯಾಚಾರ ನಡೆಸಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣರಾದ ಆರೋಪ ಎದುರಿಸುತ್ತಿರುವ ಕುದ್ಕಾಡಿ ನಾರಾಯಣ ರೈಯವರನ್ನು ವಿಚಾರಣೆಗಾಗಿ ಪುತ್ತೂರು ಸೆಷೆನ್ಸ್ ನ್ಯಾಯಾಲಯ ಎರಡು ದಿನ ಪೊಲೀಸ್ರ ವಶಕ್ಕೆ ಒಪ್ಪಿಸಿ ಆದೇಶಿಸಿತ್ತು. ಆದೇಶದ ಬೆನ್ನಲ್ಲೆ ಅನಾರೋಗ್ಯದ ಹಿನ್ನಲೆಯಲ್ಲಿ ನ್ಯಾಯಾಲಯದ ಅನುಮತಿಯೊಂದಿಗೆ ನಾರಾಯಣ ರೈ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮಡಪ್ಪಾಡಿ,ಕೊಂಬಾರು ಶಾಲಾ ಮಕ್ಕಳಿಗೆ ವಿತರಿಸಲು ಪುಸ್ತಕ ಹಸ್ತಾಂತರ 

ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಸರ್ಕಾರಿ ಶಾಲೆಯ ಮತ್ತು ಕಡಬ ತಾಲೂಕಿನ ಕೊಂಬಾರು ಸರಕಾರಿ ಶಾಲೆಯ ಮಕ್ಕಳಿಗೆ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ತನ್ನ ಸಿಎಸ್‍ಆರ್ ಯೋಜನೆಯಡಿ ನೋಟ್ ಪುಸ್ತಕಗಳನ್ನು ಒದಗಿಸಲಾಗಿದೆ. ಶಾಲಾ ಮಕ್ಕಳಿಗೆ ವಿತರಿಸಲು ನೋಟ್ ಪುಸ್ತಕಗಳನ್ನು ಮಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಮಾರಂಭದಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ

ಪತ್ರಕರ್ತರ ನಗರ ವಾಸ್ತವ್ಯಕ್ಕೆ ಪಾಲಿಕೆಯಿಂದ ಸಹಕಾರ: ಅಕ್ಷಿ ಶ್ರೀಧರ್

ಮಂಗಳೂರು:  ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರು ನಡೆಸುತ್ತಿರುವ ಗ್ರಾಮ ವಾಸ್ತವ್ಯ ಮಾದರಿ ಕಾರ್ಯಕ್ರಮ. ಇದು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದು, ಪತ್ರಕರ್ತರು ನಗರದಲ್ಲಿ ವಾಸ್ತವ್ಯ ಕಾರ್ಯಕ್ರಮ ಮಾಡುವುದಾದರೆ ಪಾಲಿಕೆ ವತಿಯಿಂದ ಸಹಕಾರ ನೀಡುವುದಾಗಿ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ಹೇಳಿದ್ದಾರೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗ್ರಾಮ ವಾಸ್ತವ್ಯ ಮಾಡಲಾದ ಕಡಬ ತಾಲೂಕಿನ ಕೊಂಬಾರು, ಸುಳ್ಯ ತಾಲೂಕಿನ ಮಡಪ್ಪಾಡಿ ಸರ್ಕಾರಿ ಶಾಲೆಯ

ತೊಕ್ಕೊಟ್ಟು ಫ್ಲೈಓವರ್‌ನಿಂದ ಕೆಳಬಿದ್ದ ಬುಲೆಟ್ ಸವಾರ ಸಾವು

ಉಳ್ಳಾಲ: ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದು ಬುಲೆಟ್ ಸವಾರ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಬುಧವಾರ ಸಂಜೆ ವೇಳೆ ನಡೆದಿದೆ. ಕುಂಪಲ ನಿವಾಸಿ ಸುಬ್ರಹ್ಮಣ್ಯ (50) ಸಾವನ್ನಪ್ಪಿದವರು. ಮಂಗಳೂರು ಕಡೆಯಿಂದ ಕುಂಪಲ ಕಡೆಗೆ ಬುಲೆಟ್ ವಾಹನದಲ್ಲಿ ಬರುವ ಸಂದರ್ಭ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ಬುಲೆಟ್ ಫ್ಲೈಓವರ್ ಗೆ ಢಿಕ್ಕಿ ಹೊಡೆದಿದ್ದು, ಸವಾರ ಸೇತುವೆಯಿಂದ ಕೆಳಗೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯ