ಮೂಡುಬಿದಿರೆ : ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆ. ಒಂದೇ ಗ್ರಾಮದಲ್ಲಿ ಎರಡೆರಡು ಶಾಲೆಗಳು ಇರುವುದರಿಂದ ಮಕ್ಕಳು ಹಂಚಿ ಹೋಗುತ್ತಾರೆ. ಅಲ್ಲದೆ ಶಿಕ್ಷಕರ ಕೊರತೆಯೂ ಇದೆ. ಇದನ್ನೆಲ್ಲಾ ತಪ್ಪಿಸಲು ಗ್ರಾಮದಲ್ಲಿ ಒಂದೇ ಶಾಲೆಗೆ ಅವಕಾಶ ನೀಡಿ ಆಗ ಸುಲಭವಾಗುತ್ತದೆ ಎಂದು ಗ್ರಾಮ ಪಂಚಾಯತ್‍ನ ಮಾಜಿ ಸದಸ್ಯ ನಾಗವರ್ಮ ಜೈನ್ ಸಲಹೆ ನೀಡಿದರು ಅವರು ಪುತ್ತಿಗೆ ಪಂಚಾಯತ್
ಎಚ್.ಆರ್.ನೋಂದಾಣಿ ಸಂಖ್ಯೆಯ ಲಾರಿಯೊಂದರಲ್ಲಿ ಹತ್ತಾರು ಕೋಣ, ಎತ್ತು, ಎಮ್ಮೆಗಳನ್ನು ಬೇಕಾಬಿಟ್ಟಿ ತುಂಬಿಸಿಕೊಂಡು ಬರುತ್ತಿದ್ದ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು ಹೆಜಮಾಡಿ ಟೋಲ್ ಪಕ್ಕ ಅಡ್ಡ ಹಾಕಿ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯಿಂದ ಕೇರಳಕ್ಕೆ ಇದನ್ನು ಸಾಗಿಸಲಾಗುತ್ತಿದೆ ಎಂಬುದಾಗಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಹುಬ್ಬಳ್ಳಿ ಮೂಲದ ಚಾಲಕ ಹಾಗೂ ಕೇರಳ ಮೂಲದ ಲಾರಿ ಕ್ಲಿನರ್ ಪೊಲೀಸ್ ವಶದಲ್ಲಿದ್ದಾರೆ. ಲಾರಿಯಲ್ಲಿ ಅಡ್ಡಾದಿಡ್ಡಿಯಾಗಿ
ಉಪ್ಪಿನಂಗಡಿ: ವ್ಯಕ್ತಿಯೋರ್ವರು ಬಸ್ ನಿಲ್ದಾಣ ಪಂಚಾಯತ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.27 ರಂದು ನಡೆದಿದೆ.ರಾಮಣ್ಣ ಪೂಜಾರಿ ಎಂಬವರು ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ಇಂದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ
ಬಾಂಗ್ಲಾದೇಶದಲ್ಲಿ ಇಸ್ಕಾನ್ ದೇವಾಲಯಗಳ ಮೇಲೆ ದಾಳಿ ಹಾಗೂ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ , ಮಂಗಳೂರಿನ ಆರ್ಯಸಮಾಜ ಸಮೀಪದಲ್ಲಿರುವ ಇಸ್ಕಾನ್ ಮಂದಿರದ ವತಿಯಿಂದ ಪ್ರತಿಭಟನೆ ನಡೆಯಿತು. ಇದೇ ವೇಳೆ ಕೃಷ್ಣ ಕೀರ್ತನೆಗಳ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಕಾರುಣ್ಯ ಸಾಗರ್ ದಾಸ್ ಮಾತನಾಡಿ, ಬಾಂಗ್ಲಾದೇಶದ ಸರ್ಕಾರ ಹಿಂದೂಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು. ಜೊತೆ ರಕ್ಷಣೆಯನ್ನ ಕೊಡಬೇಕೆಂದು ಎಂದು ಅವರು
ಕಳೆದ ಹಲವಾರು ವರುಷಗಳಿಂದ ಮಸ್ಕಿಯ ವಿನಾಯಕ ಹೋಟೆಲ್ ಎದುರುಗಡೆ ಕಾರ್ಯನಿರ್ವಹಿಸುತ್ತಿದ್ದ ಶ್ರೀ ದುರ್ಗಾಂಬಾ ಟ್ರೇಡರ್ಸ್ ವ್ಯಾಪಾರ ಮಳಿಗೆಯು ಈಗ ಅವರ ಸ್ವಂತ ವಿಶಾಲ ಜಾಗವಾದ ಅರೆಹೊಳೆಯಲ್ಲಿ ಶುಭಾರಂಭಗೊಂಡಿತು. ನೂತನ ಮಳಿಗೆಯಲ್ಲಿ ಹೊಸ ಹೊಸ ಮಾದರಿಯ ಪಿಠೋಪಕರಣಗಳು, ಸಾನಿಟರಿ ವಸ್ತುಗಳು, ಪೈಂಟ್ಸ್ ಹಾಗೂ ಗುಣಮಟ್ಟದ ಕಟ್ಟಡ ಸಾಮಗ್ರಿಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಪಿಠೋಪಕರಣಗಳ ಮೇಲೆ ಶೇಕಡಾ ಇಪ್ಪತ್ತರಷ್ಟು ಕಡಿಮೆ
ಅರಬ್ಬೀ ಸಮುದ್ರದಲ್ಲಿ ಬೃಹತ್ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಬೋಟ್ ನ ಮೀನುಗಾರರಿಗೆ ಈ ಮೀನು ದೊರಕಿದೆ.ಶಾರ್ಕ್ ಜಾತಿಗೆ ಸೇರಿದ ಮೀನು ಇದಾಗಿದ್ದು ಈ ಮೀನು ಹಿಡಿಯುವುದು ನಿಷೇಧವಿದೆ, ಹೀಗಾಗಿ ಬಲೆಗೆ ಸಿಕ್ಕ ಮೀನನ್ನು ಮೀನುಗಾರರು ಬಲೆಯಿಂದ ಬಿಡಿಸಿ ವಾಪಾಸು ಸಮುದ್ರಕ್ಕೆ ಬಿಟ್ಟಿದ್ದಾರೆ. ಸುಮಾರು 1,500 ಕ್ಕೂ ಹೆಚ್ಚು ತೂಕ ಈ ಮೀನು ಹೊಂದಿದ್ದು ಮೀನು ಸೆರೆ
ಬೆಳ್ತಂಗಡಿ ತಾಲೂಕಿನಲ್ಲಿ ೧ರಿಂದ ೫ತರಗತಿಯವರೆಗೆ ಎಲ್ಲಾ ಮಕ್ಕಳು ಬಹಳ ಸಂತೋಷದಿಂದ ಶಾಲೆಗೆ ಆಗಮಿಸಿದರು.ತಾಲೂಕಿನ ನಿಡ್ಲೆ ಸರಕಾರಿ ಶಾಲಾ ಮಕ್ಕಳನ್ನು ತಮ್ಮ ಪೋಷಕರು ಆರತಿ ಬೆಳಗಿ ಬರಮಾಡಿ ಕೊಂಡರು.ಶಾಲಾ ಸಿಬ್ಬಂದಿಗಳು ಶಾಲೆಯನ್ನು ಹೂವುಗಳಿಂದ ಅಲಂಕರಿಸಿದರು.ಪೋಷಕರು ಮಾತನಾಡಿ ಕೊರೋಣದಿಂದ ಮಕ್ಕಳಿಗೆ ಶಾಲೆಗೆ ರಜೆ ಇತ್ತು .ಆದರೆ ಇವತ್ತಿನಿಂದ ಮಕ್ಕಳು ಬಹಳ ಸಂತೋಷದಿಂದ ಶಾಲೆಗೆ ಬಂದಿದ್ದಾರೆ,ಎಂದು ಹೇಳಿದರು.ನಂತರ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ
ಬಂಟ್ವಾಳ: ವಿಶಾಖಪಟ್ಟಂನಲ್ಲಿ ಅ.21 ಮತ್ತು 22 ರಂದು ನಡೆದ ರಾಷ್ಟ್ರೀಯ ಮಟ್ಟದ ಪ್ರಾಚೀನ ಯುದ್ಧ ವಿದ್ಯೆ ಸಿಲಂಬಂ ಸ್ಪರ್ಧೆಯಲ್ಲಿ ವೆನಿಲ್ಲಾ ಮಣಿಕಂಠ ಅವರು ಭಾಗವಹಿಸಿ ಡಬಲ್ ಸ್ಟಿಕ್ ಹಾಗೂ ವಾಲ್ ವೀಚು ವಿಭಾಗದಲ್ಲಿ 2 ಚಿನ್ನದ ಪದಕವನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಅಲ್ಲದೆ ಮುಂದಿನ ಅಂತರಾಷ್ಟೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವೆನಿಲ್ಲಾ ಮಣಿಕಂಠ ಅವರು ಪ್ರಸಕ್ತ ಮಂಗಳೂರಿನ ಎನ್‌ಐಟಿಕೆಯಲ್ಲಿ ಎಂಟೆಕ್ ವ್ಯಾಸಂಗ ಮಾಡಿತ್ತಿದ್ದು ರಾಜೇಶ್
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದ ವಿರುದ್ಧ ಪಡುಬಿದ್ರಿ ಮುಖ್ಯಪೇಟೆಯ ಕಾರ್ಕಳ ಸರ್ಕಲ್ ಬಳಿ ನೂರಾರು ಕಾಪು ತಾಲೂಕು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಭೂ ಸುರಕ್ಷಾ ಪ್ರಮುಖ್ ರಮೇಶ್ ಕಲ್ಲೋಟ್ಟೆ ಮಾತನಾಡಿ, ಬಾಂಗ್ಲಾದೇಶಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಬಾರತದಲ್ಲಿ ಏಕೆ ಪ್ರತಿಭಟನೆ ನಡೆಸುತ್ತಾರೆ ಎಂಬ ಮಾತು ಕೇಳುತ್ತಿರಬಹುದು. ಈ ಮಾತು ಸತ್ಯ…ಕಾರಣ ಇಷ್ಟೇ
ಮಂಗಳೂರು: ನಗರದ ಕೂಳೂರು ವಿ ಆರ್ ಎಲ್ ಬಳಿ ಇರುವ ನಾಗನ ಕಟ್ಟೆಯನ್ನು ಕಿಡಿಗೇಡಿಗಳು ದ್ವಂಸ ಮಾಡಿರುವ ಘಟನೆ ನಡೆದಿದೆ.ಹಲವಾರು ವರುಷಗಳಿಂದ ನಾಗನ ಕಟ್ಟೆ ಈ ಸ್ಥಳದಲ್ಲಿದ್ದು ಪೂಜೆ ಕೈಂಕರ್ಯ ನಡೆಯುತ್ತಿತ್ತು. ಆದರೆ ಯಾರೋ ಕಿಡಿಗೇಡಿಗಳು ಕಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕೃತ್ಯದ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ.


















