Home Posts tagged V4News (Page 791)

ಗಣರಾಜ್ಯೋತ್ಸವ ಸಿದ್ಧತಾ ಶಿಬಿರಕ್ಕೆ ಎಸ್‌ ಡಿ ಎಂ ವಿದ್ಯಾರ್ಥಿ ಆಯ್ಕೆ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕ, ಮೊದಲ ಬಿ.ಎಸ್.ಸಿ ವಿದ್ಯಾರ್ಥಿ ಹೃತಿಕ್‌ ಅವರು ದಕ್ಷಿಣ ವಲಯ ಮಟ್ಟದ ಗಣರಾಜ್ಯೋತ್ಸವದ ಪರೇಡ್‌ಗಾಗಿ ನಡೆಯಲಿರುವ ಪೂರ್ವಸಿದ್ಧತಾ ಆಯ್ಕೆ ಶಿಬಿರಕ್ಕೆ ಅರ್ಹತೆ ಪಡೆದಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ

ಕುಕ್ಕೆಗೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕುಟುಂಬ ಭೇಟಿ

ಸುಬ್ರಹ್ಮಣ್ಯ: ರಾಜ್ಯ ಪೋಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.ಕುಟುಂಬದವರೊಂದಿಗೆ ಆಗಮಿಸಿದ ಪ್ರವೀಣ್ ಸೂದ್ ಅವರು ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಪೂಜೆ, ಅಭಿಷೇಕ ನೆರವೇರಿಸಿದರು. ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಪ್ರವೀಣ್ ಸೂದ್ ಪತ್ನಿ, ಮಗಳು ಹಾಗೂ ಅಳಿಯ ಕ್ರಿಕೆಟ್ ಆಟಗಾರ ಮಾಯಾಂಕ್ ಅಗರ್ವಾಲ್ ಜೊತೆಗಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್

ಕೇರಳದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಆವಾಂತರ : ಮೃತಪಟ್ಟವರ ಸಂಖ್ಯೆ 24ಕ್ಕೇರಿಕೆ

ಕೇರಳದಲ್ಲಿ ಶನಿವಾರದಿಂದೀಚೆಗೆ ವ್ಯಾಪಕ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಮತ್ತು ಭೂಕುಸಿತ ಮುಂದುವರಿದಿದೆ. ರವಿವಾರ ಮಧ್ಯಾಹ್ನದ ವೇಳೆಗೆ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಸಂಭಾವ್ಯ ಭೂಕುಸಿತದ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ. ಏತನ್ಮಧ್ಯೆ ಮಳೆ ಸಂಬಂಧಿ ಅನಾಹುತಗಳಿಂದ ಮೃತಪಟ್ಟವರ ಸಂಖ್ಯೆ 24ಕ್ಕೇರಿದ್ದು, 11 ಜಿಲ್ಲೆಗಳಲ್ಲಿ ಸೋಮವಾರ ಕೂಡಾ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ವಿವಿಧೆಡೆ

ಮಂಗಳೂರು : ಎರಡು ದಶಕ ಪೂರೈಸಿದ ಎ.ಜೆ. ಆಸ್ಪತ್ರೆ

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರವು ಒಂದು ಅತ್ಯಾಧುನಿಕ, ಸುಸಜ್ಜಿತ ಆಸ್ಪತ್ರೆ. 2001ರಲ್ಲಿ ಪ್ರಾರಂಭಗೊಂಡ, 425 ಹಾಸಿಗೆಗಳುಳ್ಳ ಈ ಆಸ್ಪತ್ರೆಯನ್ನು ವಿಶ್ವ ದರ್ಜೆಯ ಆರೋಗ್ಯ ಸೇವೆ ನೀಡಲು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ವಿನ್ಯಾಸಗೊಳಿಸಲಾಗಿದೆ. ಮಂಗಳೂರಿನಲ್ಲಿ ಎನ್‍ಎಬಿಹೆಚ್ ಮಾನ್ಯತೆ ಪಡೆದ ಮೊದಲ ಆಸ್ಪತ್ರೆ. ಎ.ಜೆ. ಆಸ್ಪತ್ರೆಯು 30ಕ್ಕೂ ಹೆಚ್ಚು ಪ್ರಮುಖ ವೈದ್ಯಕೀಯ ವಿಭಾಗಗಳನ್ನು ಹೊಂದಿದ್ದು, ಉನ್ನತ ಮಟ್ಟದ ಆರೋಗ್ಯ ಸೇವೆಯನ್ನು ನೀಡಲು ಹೊಸ

ಮಲೆನಾಡಿನಲ್ಲಿ ಕಾಡಾನೆ ಹಾವಳಿ : ಭತ್ತ ಬೆಳೆದ ರೈತ ಕಂಗಾಲು

ಹಾಸನ: ಹಾಸನ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿದ್ದು ರೈತರು ಬೆಳೆದ ಬೆಳೆಗಳು ಹಾಳಾಗಿದ್ದು ರೈತ ತಲೆ ಮೇಲೆ ಕೈಹೊತ್ತು ಕುಳಿತು ಕಂಗಾಲಾಗಿದ್ದಾನೆ. ಹಾಸನ ಜಿಲ್ಲೆ ಆಲೂರು ತಾಲೂಕಿನ ಅಚ್ಚ ಗೊಡನಹಳ್ಳಿಯಲ್ಲಿ ಕಳೆದ ರಾತ್ರಿ ಸರಿಸುಮಾರು 32 ಆನೆಗಳು ರೈತರು ಬೆಳೆದ ಭತ್ತದ 3 ಎಕರೆಯ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಅಲ್ಲದೆ ಅದೇ ಪ್ರದೇಶದಲ್ಲಿ ಬೆಳೆದಿರುವ ಗೆಣಸು, ಅಡಕೆ, ಬಾಳೆ ಮುಂತಾದ ಬೆಳೆಗಳು ಸಂಪೂರ್ಣವಾಗಿ

ಮಲಾಡ್ ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ

ಮುಂಬೈ: ಉಪನಗರ ಮಲಾಡ್ ಪೂರ್ವದ ಕುರಾರ್ ವಿ ಲೇಜಿನಲ್ಲಿ ಸುಮಾರು 50 ವರ್ಷಗಳ ಹಿಂದೆ ಕೈವಲ್ಯ ಶ್ರೀ ಪ್ರೇಮಾನಂದ ಸ್ವಾಮೀಜಿ ಸ್ಥಾಪಿಸಿರುವ ಶ್ರೀ ಮೂಕಾಂಬಿಕಾ ದೇವಸ್ಥಾನ ಈ ವರ್ಷ ಪೂರ್ಣ ನವೀಕೃತಗೊಂಡ ಜೀರ್ಣೋದ್ದಾರ ವಾಗಿದೆ. ಶ್ರೀ ಪ್ರೇಮಾನಂದ ಸ್ವಾಮೀಜಿ ಯವರು ಶ್ರದ್ಧಾ ಭಕ್ತಿಯೊಂದಿಗೆ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದರು. ಅದೇ ಧಾರ್ಮಿಕತೆಯ ನಿಯಮದಲ್ಲಿ ಸ್ವಾಮೀಜಿಯವರ ಸುಪುತ್ರ ಶ್ರೀ ವೇದ ನಂದ ಸ್ವಾಮೀಜಿಯವರು ಈ ವರ್ಷ ನವರಾತ್ರಿ ಉತ್ಸವವನ್ನು

ಕೆ.ಸಿ. ರೋಡ್‌ನಲ್ಲಿ ಬೈಕ್ ಅಪಘಾತ: ಇಬ್ಬರು ಯುವಕರು ದಾರುಣ ಸಾವು

ಉಳ್ಳಾಲ: ಬೈಕ್ ಅಪಘಾತಕ್ಕೀಡಾಗಿ ಮಂಗಳೂರು ದಸರಾ ಮುಗಿಸಿ ವಾಪಸ್ಸಾಗುತ್ತಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ರಾ.ಹೆ. 66ರ ಕೆ.ಸಿ ರೋಡ್ ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಕಾಸರಗೋಡು ಜಿಲ್ಲೆಯ ಕುಂಬ್ಳೆ ನಿವಾಸಿಗಳಾದ ಕೃಷ್ಣಪ್ರಸಾದ್ (26) ಮತ್ತು ಪ್ರಜೀತ್ (24) ಮೃತರು. ನಿನ್ನೆ ರಾತ್ರಿ ಯುವಕರಿಬ್ಬರು ದಸರಾ ವೀಕ್ಷಿಸಿ ವಾಪಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ.ಬೈಕ್ ಸ್ಕಿಡ್ ಆಗಿ ಅಪಘಾತ ನಡೆದಿರುವುದಾಗಿ ತಿಳಿದುಬಂದಿದೆ. ಯುವಕರಿಬ್ಬರ

ಪುತ್ತೂರಿನ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ ಆರೋಪಿಯನ್ನು ಬಂಧಿಸುವಂತೆ ಆಗ್ರಹ

ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ತೋಟದ ಕೆಲಸಕ್ಕೆ ಬರುತ್ತಿದ್ದ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು ಮಗುವನ್ನು ಕರುಣಿಸಿದ ಪ್ರಕರಣದ ಆರೋಪಿ ಆರ್‌ಎಸ್‌ಎಸ್ ಮುಖಂಡ ನಾರಾಯಣ ರೈ ಬಂಧನಕ್ಕೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಒತ್ತಾಯಿಸಿದೆ. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಮನ್ವಯ ಸಮಿತಿಯ ಮುಖಂಡ ಅಶೋಕ್ ಕೊಂಚಾಡಿ ಅವರು, ದಲಿತ ಸಮುದಾಯದ ಬಾಲಕಿಗೆ ಆದ ಅನ್ಯಾಯದ ವಿರುದ್ಧ ಮಾತನಾಡದ ಜಿಲ್ಲಾ ಉಸ್ತುವಾರಿ

ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶಕ್ಕೆ ನಿಧಿ ಸಂಚಯನ

ಸುರತ್ಕಲ್: ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಚಿತ್ರಾಪುರ ಮಠದ ಸಮಗ್ರ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಡೆಸುವ ಸಂಕಲ್ಪದಂತೆ ನಿಧಿ ಸಂಚಯನ ಕಾರ್ಯಕ್ರಮವು ಜರಗಿತು. ಪೇಜಾವರ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಾ ಭರತ್ ಶೆಟ್ಟಿ ವೈ ಅವರು ನಿಧಿ ಸಂಚಯನಕ್ಕೆ ಮುಷ್ಠಿ ಕಾಣಿಕೆ ಸಮರ್ಪಿಸುವ ಮೂಲಕ ಶುಭಾರಂಭಗೊಳಿಸಿದರು. ಈ ಸಂದರ್ಭ

ಕರ್ತವ್ಯ ನಿರತ ಮೆಸ್ಕಾಂ ಸಿಬ್ಬಂದಿಗಳಿಗೆ ದೊಣ್ಣೆಯಿಂದ ಹಲ್ಲೆ

ಕರ್ತವ್ಯ ನಿರತ ಮೆಸ್ಕಾಂ ಸಿಬಂದಿಗಳ ಮೇಲೆ ವ್ಯಕ್ತಿಯೊಬ್ಬರು ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಅ 15 ರಂದು ಸಂಜೆ ಉಪ್ಪಿನಂಗಡಿ ಮೆಸ್ಕಾಂ ಕಚೇರಿಯೊಳಗಡೆ ನಡೆದಿದೆ.     ಉಪ್ಪಿನಂಗಡಿ ಮೆಸ್ಕಾಂ ಕಚೇರಿಯ ಸಿಬಂದಿಗಳಾದ ಜೂನಿಯರ್ ಲೈನ್ ಮ್ಯಾನ್ ವಿತೇಶ್ ಮತ್ತು ಸಿಬ್ಬಂದಿ ಸತೀಶ್ ಹಿರೆಬಂಡಾಡಿ ಹಲ್ಲೆಗೊಳಗಾದವರು. ಹಲ್ಲೆ ಕೃತ್ಯದ ಬಗ್ಗೆ ಮೆಸ್ಕಾಂ ಕಚೇರಿಗಳು ಮಾಹಿತಿ ನೀಡಿದ್ದು ಅಲ್ಲಿಗೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.