Home Posts tagged V4News (Page 808)

ಉಡುಪಿಯಲ್ಲಿ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಸ್ಕೀಂಮ್ ನೌಕರರ ಅಖಿಲ ಭಾರತ ಮುಷ್ಕರ ಭಾಗವಾಗಿ ಉಡುಪಿಯಲ್ಲಿ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾಧಿಕಾರಿ ಕಛೇರಿ ಮಣಿಪಾಲದಲ್ಲಿ ಪ್ರತಿಭಟನೆ ನಡೆಸಿದರು. ಅಕ್ಷರ ದಾಸೋಹ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನ ರಾಜ್ಯ ಹಾಗೂ ಕೇಂದ್ರ ಸರಕಾರ ಈಡೇರಿಸುವಂತೆ ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯ ಮಂತ್ರಿ ಯವರಿಗೆ

ಮಂಗಳೂರಿನಲ್ಲಿ ವಾಣಿಜ್ಯ ಸಪ್ತಾಹ-ರಫ್ತುದಾರರ ಸಮಾವೇಶ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಸಂಸ್ಥೆ ವತಿಯಿಂದ 75ನೇ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಾಣಿಜ್ಯ ಸಪ್ತಾಹ ರಫ್ತುದಾರರ ಸಮಾವೇಶಕ್ಕೆ ನಗರದ ಓಷಿಯನ್ ಪರ್ಲ್ ಹೋಟೆಲ್‍ನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರು ಸೆ.23ರ ಗುರುವಾರ ಚಾಲನೆ ನೀಡಿದರು.

ಹಾಪ್ ಪಿಚ್ ಶಾರ್ಟ್ ಕ್ರಿಕೆಟ್ ಟೂರ್ನಮೆಂಟ್ : ಚಿದಾನಂದ ಸವದಿ ಅವರಿಂದ ಚಾಲನೆ

ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹವು ಕೂಡ ಸದೃಢವಾಗುತ್ತದೆ ಕೊವೀಡ್ ಸಂಕಷ್ಟದ ಸಮಯದಲ್ಲಿ ಕ್ರೀಡೆಗೆ ಹಿನ್ನಡೆ ಉಂಟಾದ ಪರಿಣಾಮ ಮತ್ತೊಮ್ಮೆ ಕ್ರೀಡಾ ವಿಭಾಗ ಸಹಜ ಸ್ಥಿತಿಗೆ ಮರಳಬೇಕು. ಈ ನಿಟ್ಟಿನಲ್ಲಿ ಮಾಜಿ ಡಿಸಿಎಮ್ ಹೆಸರಿನಲ್ಲಿ ಎಲ್.ಎಸ್. ಟ್ರೋಫಿ ಹಾಫ್ ಪಿಚ್ ಕ್ರಿಕೇಟ್ ಟೂರ್ನಮೆಂಟ್ ಸಹಕಾರಿಯಾಗಲಿ ಎಂದು ಬಿಜೆಪಿ ಧುರೀಣ ಚಿದಾನಂದ ಸವದಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೆಎಲ್‌ಇ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಎಲ್.ಎಸ್. ಟ್ರೋಫಿ ಹಾಪ್

ವಿಜಯಪುರ : ಕುರಿ ಕಳ್ಳತನಕ್ಕೆ ಕಳ್ಳರ ವಿಫಲ ಯತ್ನ

ಕುರಿ ಕಳ್ಳತನಕ್ಕೆ ಕುರಿ ಕಳ್ಳರು ವಿಫಲ ಯತ್ನ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ. ಇನ್ನು ಬಳಗಾನೂರ ಗ್ರಾಮದಲ್ಲಿ ಕುರಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಕೊಳ್ಳುವ ಭಯದಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದಾರೆ. ಆದ್ರೂ, ಕುರಿ ಮಾಲೀಕ ಹಾಗೂ ಸ್ಥಳೀಯರು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದ ಕಳ್ಳರಲ್ಲಿ ಇಬ್ಬರನ್ನು ಹಿಡಿದುಕೊಂಡಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಬಿಟ್ಟು ಹೋಗಿದ್ದ ಕಾರಿ ಮೇಲೆ ಸ್ಥಳೀಯರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ : ಸೆ.27ರಂದು ಭಾರತ್ ಬಂದ್‍ಗೆ ಕರೆ

10 ತಿಂಗಳಿಂದ ದೆಹಲಿಯ ಗಡಿಗಳಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆಕಾಳಜಿ ತೋರಿಸುತ್ತಿಲ್ಲ.ನಿರ್ಲಕ್ಷ್ಯ ತೋರುತ್ತಿದೆ. ಇದರಿಂದ ರೈತರ ಬಗ್ಗೆ ಒಂದು ಕೆಟ್ಟ ವಾತಾವರಣನಿರ್ಮಾಣವಾಗಿದೆ.ಇದರಿಂದ 600 ರಷ್ಟು ರೈತರು ತೀರಿಕೊಂಡಿದ್ದು, ಅವರಿಗೆ ಪರಿಹಾರ ಏನೂ ಕೊಟ್ಟಲ್ಲ. ರೈತರನ್ನು ಸಮಾಧಾನಪಡಿಸುವ ಪ್ರಯತ್ನ ಕೂಡಾ ಸರಕಾರ ಮಾಡಿಲ್ಲ. ಹಾಗಾಗಿ ಸಂಯುಕ್ತ ಕಿಸಾನ್ ಮೋರ್ಚಾ ಇಡೀ ದೇಶಾದ್ಯಂತ ಭಾರತ ಬಂದ್‍ಗೆ ಕರೆ ಕೊಟ್ಟದೆ. ಅದರ ಪ್ರಯುಕ್ತ ನಾವು

ಕೃಷಿ ಮಸೂದೆ ವಾಪಸ್ಸಾತಿ, ಬೆಲೆ ಏರಿಕೆ ವಿರುದ್ಧ ಸೆ.27ರಂದು ಪ್ರತಿಭಟನಾ ಸಭೆ

ಬಂಟ್ವಾಳ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ವಾಪಸ್ಸಾತಿಗೆ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಲು ಆಗ್ರಹಿಸಿ ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ಐತಿಹಾಸಿಕ ಚಳುವಳಿಗೆ ಸೆ. 26ನೇ ತಾರೀಖಿಗೆ ಹತ್ತು ತಿಂಗಳು ತುಂಬಲಿರುವ ಹಿನ್ನಲೆಯಲ್ಲಿ ಸಂಯುಕ್ತ ಹೋರಾಟ ಕಿಸಾನ್ ಮೋರ್ಚಾ ಸೆ.27ರಂದು ಭಾರತ್ ಬಂದ್‍ಗೆ ಕರೆ ನೀಡಿದ್ದು ಅಂದು ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಬಳಿಯಿಂದ

ಸುರತ್ಕಲ್ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ವಿಧಾನಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಒತ್ತಾಯ

ಸುರತ್ಕಲ್ ಸುತ್ತ ಮುತ್ತ ಬೃಹತ್ ಕಂಪನಿಗಳು ಇದ್ದು ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.ತುರ್ತು ಅವಘಡವಾದರೆ ಸುರತ್ಕಲ್ ಆರೋಗ್ಯ ಕೇಂದ್ರ ಹತ್ತಿರವಿರುವ ಕೇಂದ್ರವಾಗಿದ್ದು ಮೇಲ್ದರ್ಜೆಗೆ ಏರಿಸುವ ಅವಶ್ಯಕತೆಯಿದೆ. ಸರಕಾರ ಈ ಬಗ್ಗೆ ಒತ್ತು ನೀಡಬೇಕುವಎಂದು ಶಾಸಕ ಡಾ.ಭರತ್ ಶೆಟ್ಟಿ ವಿಧಾನ ಸಭೆಯಲ್ಲಿ ಒತ್ತಾಯಿಸಿದರು. ಮಂಗಳೂರು ಮತ್ತು ಮುಲ್ಕಿ ನಡುವೆ ಅಂತರ ಹಾಗೂ ಆರೋಗ್ಯ ಕೇಂದ್ರ ಇದ್ದರೂ ತುರ್ತು ಸಂದರ್ಭ,ಅಪಾಯಕಾರಿ ಕಂಪನಿಗಳು, ಕಾರ್ಖಾನೆಗಳು ಇರುವ

ಉಡುಪಿಯಲ್ಲಿ ಅಸಾಯಕರಿಗೆ ನೀಡುತ್ತಿದ್ದ ಅನ್ನದಾನದ ಸಮಾರೋಪ

ಉಡುಪಿ: ಕೊರೊನ 2ನೇ ಲಾಕ್‌ಡೌನ್ ಪ್ರಾರಂಭದಿಂದ ಅಸಹಾಯಕ ವೃದ್ಧರು ಅಂಗವಿಕಲರು ಮಾನಸಿಕ ರೋಗಿಗಳಿಗೆ ಹಸಿದವರ ಹಸಿವು ನೀಗಿಸಿದ ವಿಶು ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಕೃಷ್ಣ ಅಮೀನ್ ಮಧ್ವ ನಗರ ಹೇಳಿದರು. ಇದೀಗ ಸೆಪ್ಟೆಂಬರ್ 23ತಾರೀಕಿನಿಂದ ಕೃಷ್ಣ ಮಠದಲ್ಲಿ ಅನ್ನ ಪ್ರಸಾದ ಪ್ರಾರಂಭವಾದ ಹಿನ್ನೆಲೆಯಲ್ಲಿ ಅನ್ನದಾನ ಕಾರ್ಯಕ್ರಮ ಸಮಾರೋಪಗೊಳಿಸಲಾಯಿತು. ಏಪ್ರಿಲ್ 24ರಂದು ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಪ್ರತಿದಿನ 500ಕ್ಕೂ ಹೆಚ್ಚು

ತಲ್ಲೂರು ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆ

ಕುಂದಾಪುರ: ಪ್ರತೀ ವಷರ್ಷವೂ ಬಿರುಬೇಸಿಗೆಯಲ್ಲಿ ತಲ್ಲೂರು ಗ್ರಾ.ಪಂ ವ್ಯಾಪ್ತಿಯ ಪಿಂಗಾಣಿಗುಡ್ಡೆ ಹಾಗೂ ಉಪ್ಪಿನಕುದ್ರು ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಾರೆ. ಸೌಕೂರು ಏತ ನೀರಾವರಿ ಯೋಜನೆಯ ಮೂಲ ಯೋಜನೆಯಂತೆ ತಲ್ಲೂರು ಗ್ರಾ.ಪಂ ವ್ಯಾಪ್ತಿಗೆ ನೀರು ಕಲ್ಪಿಸಲು ಮೂಲನಕ್ಷೆ ತಯಾರಿಸಲಾಗಿತ್ತು. ಆದರೆ ರಾಜಕೀಯ ಸ್ವಹಿತಾಸಕ್ತಿಗಳಿಗಾಗಿ ಮೂಲ ಯೋಜನೆಯನ್ನು ಕೈಬಿಟ್ಟಿದ್ದು ತಲ್ಲೂರು ಗ್ರಾ.ಪಂ ವ್ಯಾಪ್ತಿಯ ಜನತೆಗೆ ದ್ರೋಹವೆಸಗಲಾಗಿದೆ ಎಂದು ಗ್ರಾಮಸ್ಥರು

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದ ಸರ್ಕಾರಿ ಬಸ್

ಕಡಬ: ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಳೆಗೆ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪದ ಊರ್ನಡ್ಕ ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಚಳ್ಳಕೆರೆಯಿಂದ ಧರ್ಮಸ್ಥಳ ಮಾರ್ಗವಾಗಿ ಗುಂಡ್ಯ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ಉದನೆ – ಎಂಜಿರ ಮಧ್ಯದ ಊರ್ನಡ್ಕ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.