ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಸಂಭ್ರಮೋತ್ಸವದ ಆಚರಣೆ ಸಂರಕ್ಷಣಾ ಅಭಿಯಾನವು ಆಕ್ಟೋಬರ್ 2ರಂದು ಬೆಳಗ್ಗೆ 9 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣಗೈದು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪಾದಯಾತ್ರೆಯನ್ನು ಪ್ರಾರಂಭಿಸಲಾಗುವುದು ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಬಿ. ಸಲ್ಯಾನ್
ಪುತ್ತೂರು; ಸರ್ವ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ದಕ್ಕೆಯನ್ನುಂಟುಮಾಡಿ ಕತ್ತಲ್ಲಿರುವ ಸರಕಾರಕ್ಕೆ ಬೆಳಕು ತೋರಿಸುವ ನಿಟ್ಟಿನಲ್ಲಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪಂಜಿನ ಆಗ್ರಹ ನಗರದ ಅಮರ್ ಜವಾನ್ ಸ್ಮಾರಕದ ಬಳಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಹಿಂದುತ್ವದ ಆಧಾರದಲ್ಲಿ ಆಡಳಿತಕ್ಕೆ ಬಂದ ಬಿಜೆಪಿ ಸರಕಾರ ದೇವಸ್ಥಾನಗಳನ್ನು ಕೆಡವುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದು,
ಡಾ. ಶಿವರಾಮ ಕಾರಂತರ ಬಾಲವನ ಪ್ರಶಸ್ತಿಗೆ ಕಂಪ್ಯೂಟರ್ ವಿಜ್ಞಾನಿ ಕೆ.ಪಿ.ರಾವ್ ಕೀಲಿಮಣೆ ವಿನ್ಯಾಸ ತಜ್ಞ ಕಿನ್ನಿಕಂಬಳ ಪದ್ಮನಾಭ ರಾವ್(ಕೆ.ಪಿ.ರಾವ್) ಅವರನ್ನು ಆಯ್ಕೆ ಮಾಡಲಾಗಿದೆ. ಅ. 10 ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನದಲ್ಲಿ ನಡೆಯಲಿರುವ ಕಾಂತರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ತಿಳಿಸಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ
ದೇವಸ್ಥಾನ ಸಹಿತ ಪ್ರಾರ್ಥನಾ ಮಂದಿಗಳ ದ್ವಂಸ ವಿರೋಧಿ ಕಾಪು ಬ್ಲಾಕ್ ಕಾಂಗ್ರೆಸ್ ಹಾಗೂ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಪಡುಬಿದ್ರಿ ಬೀಡು ಬಳಿಯಿಂದ ಪಡುಬಿದ್ರಿ ಮುಖ್ಯ ಪೇಟೆಯವರಗೆ ನಡೆದ ಬೃಹತ್ ಪಂಜಿನ ಮೆರವಣಿಗೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಬಳಿಕ ಪಡುಬಿದ್ರಿ ಪೇಟೆಯಲ್ಲಿ ಸೇರಿದ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ನ್ಯಾಯವಾದಿ
ಮಂಜೇಶ್ವರ : ಮಂಜೇಶ್ವರ ಗ್ರಾ. ಪಂ. ಬೋರ್ಡ್ ಸಭೆಯಲ್ಲಿ ಬೀಫ್ ಸ್ಟಾಲ್ ಸ್ಥಾಪನೆಗೆ ಆಡಳಿತ ಮಂಡಳಿ ಅಜೆಂಡಾದ ಬಗ್ಗೆ ಚರ್ಚಿಸಿ ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಇರುವುದರಿಂದ ಘರಂ ಆದ ವಿರೋಧ ಪಕ್ಷದ ಯುಡಿಎಫ್ ಸದಸ್ಯರುಗಳು ಬೀಫ್ ಸ್ಟಾಲ್‍ಗಳನ್ನು ವಿರೋಧಿಸುತ್ತಿರುವುದು ಆರೆಸ್ಸಸ್ ಅಜೆಂಡಾವನ್ನು ಪ್ರಾಬಲ್ಯಕ್ಕೆ ತರುವ ಯತ್ನವಾಗಿರುವುದಾಗಿ ಆರೋಪಿಸಿ ಬೋರ್ಡ್ ಸಭೆಯನ್ನು ತ್ಯಜಿಸಿ ಹೊರ ಬಂದು ಪ್ರತಿಭಟಿಸಿದರು. ಇವರೊಂದಿಗೆ ಎಸ್ ಡಿ ಪಿ ಐ ಹಾಗೂ ಆಡಳಿತರಂಗ
ಕಾರ್ಕಳ ತಾಲೂಕಿನ ಉದ್ಯಮಿ, ಸಾಮಾಜಿಕ ಕಾರ್ಯಕರ್ತರು ಹಾಗೂ ಕಾರ್ಕಳದ ಲತಾ ಮೆಡಿಕಲ್ಸ್‍ನ ಸ್ಥಾಪಕರಾದ ಜಾರ್ಕಳ ಅಜಿತ್ ಹೆಗ್ಡೆ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ದರ್ಶನವು ಸೆ.30ರಂದು ಬೆಳಗ್ಗೆ 8.30ರಿಂದ 10ರ ವರೆಗೆ ಕಾರ್ಕಳದ ತೆಳ್ಳಾರ್ ರಸ್ತೆಯಲ್ಲಿರುವ ಸ್ವಗೃಹ ಕಸ್ತೂರಿಯಲ್ಲಿ ನಡೆಯಲಿದೆ. ನಂತರ ಮಧ್ಯಾಹ್ನ 12.30ಕ್ಕೆ ನಿಂಜೂರು ಪಡುಮನೆ ಎಂಬಲ್ಲಿ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಗಾಂಧಿಜಯಂತಿಯ ಸಂದರ್ಭದಲ್ಲಿ ತುಳುದಿನವನ್ನು ಐಲೇಸಾ ತಂಡದ ಸಹಯೋಗದೊಂದಿಗೆ ಅಕ್ಟೋಬರ್ ೨ರಂದು ಆನ್ ಲೈನ್ ಮೂಲಕ ಆಚರಿಸಲಿದ್ದು ಇದರಲ್ಲಿ ವಿಶ್ವವಿದ್ಯಾನಿಲಯದ ಮಹತ್ ಭಾಷಾ ಯೋಜನೆಯಾದ ’ಪರಿಷ್ಕ್ರತ ತುಳು ಜ್ಞಾತಿಪದಸಂಚಯದ ಡಿಜಿಟಲ್ ಆವೃತ್ತಿಯನ್ನು ಕುಲಾಧಿಪತಿಯವರಾದ ಶ್ರೀ ಯನ್, ವಿನಯ ಹೆಗ್ಡೆಯವರು ಲೋಕಾರ್ಪಣೆ ಮಾಡಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿಯವರಾದ ಡಾ. ಎಂ. ಎಸ್ ಮೂಡಿತ್ತಾಯರು, ಕುಲಸಚಿವರಾದ ಡಾ.
ಮಂಗಳೂರಿನ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಬಸ್ ಓಡಾಟದ ಕನಸು ನನಸಾಗಿದೆ. ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ನರ್ಮ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಇದೇ ವೇಳೆ ಮಾತನಾಡಿದ ಶಾಸಕರು ಈ ಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು, ನೌಕರಿಗೆ ಹೋಗುವ ಜನರಿಗೆ ಅನುಕೂಲವಾದ ಸಮಯದಲ್ಲಿ ನರ್ಮ್ ಬಸ್ ಸಂಚಾರ ಅವಕಾಶ ನೀಡಲಾಗಿದೆ. ಪ್ರತೀ 45 ನಿಮಿಷಕ್ಕೆ ನರ್ಮ್ ಬಸ್ ಓಡಾಟ ನಡೆಸಲಿದೆ. ಇದೀಗ ಪ್ರಾಯೋಗಿಕವಾಗಿ ಸಮಯದಲ್ಲಿ
ಪುತ್ತೂರು: ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ದಶಮಾನೋತ್ಸವ ಕಾರ್ಯಕ್ರಮವು ಮುಕ್ರಂಪಾಡಿಯ ವಿಭಾಗೀಯ ಕಚೇರಿಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ನಿವೃತ್ತ ನೌಕರರನ್ನು ಸನ್ಮಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಈ ಭಾಗದಲ್ಲಿ ಉತ್ತರ ಕರ್ನಾಟಕ ಭಾಗದವರೇ ನಿಗಮದಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ತವರು ಜಿಲ್ಲೆಗೆ ವರ್ಗಾಯಿಸಿದರೆ ಇಲ್ಲಿ ಸಿಬ್ಬಂದಿ
ಮಂಗಳೂರು: ಸಿದ್ದರಾಮಯ್ಯರೇ ಒಬ್ಬ ದೊಡ್ಡ ಭಯೋತ್ಪಾದಕ ಅನ್ನೋದು ನನಗೆ ಅನಿಸುತ್ತೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ಸಿಗರು ತಾಲಿಬಾನಿಗಳಿದ್ದಂತೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿ ಈ ರೀತಿ ಪ್ರತಿಕ್ರಿಯಿಸಿದರು. ಅವರ ಅತಂತ್ರ ಸ್ಥಿತಿಯಲ್ಲಿ ಅವರು ಇಂಥ ಹೇಳಿಕೆಗಳನ್ನು ಕೊಡ್ತಿದ್ದಾರೆ, ತಾಲಿಬಾನ್ ಸಂಸ್ಕೃತಿ ಅವರದ್ದು, ಅವರು


















