ದೇಶದಲ್ಲಿ ಉಗ್ರರ ವಿಧ್ವಂಸಕ ಕೃತ್ಯ ಸಾಧ್ಯತೆ ಬೆನ್ನಲ್ಲೇ ಮಂಗಳೂರು ಏರ್ ಪೋರ್ಟ್ ಸುತ್ತಮುತ್ತ ಅಲರ್ಟ್ ಮಾಡಲಾಗಿದೆ. ಏರ್‍ಪೋರ್ಟ್ ಭದ್ರತೆಯ ಸಿಐಎಸ್‍ಎಫ್ ಹಾಗೂ ಬಜ್ಪೆ ಪೊಲೀಸರಿಂದ ಸ್ಥಳೀಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇನ್ನು ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತು, ಡ್ರೋನ್ ಬಳಕೆ ಕಂಡು ಬಂದಲ್ಲಿ ಮಾಹಿತಿ ನೀಡಲು ಅಧಿಕಾರಿಗಳು ಸ್ಥಳೀಯರಿಗೆ
ಪುತ್ತೂರು: 9 ತಿಂಗಳ ಹಿಂದೆ 2021 ರ ಜನವರಿ 3 ರಂದು ಪುತ್ತೂರಿನ ಬಲ್ನಾಡು ಚನಿಲದಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕೇರಳದ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಬಸ್‌ನಲ್ಲಿದ್ದ 7 ಮಂದಿ ದಾರುಣ ಮೃತಪಟ್ಟಿದ್ದರು. ಇವರಿಗೆ ಈಗ ಕರ್ನಾಟಕ ಸರ್ಕಾರ ಪರಿಹಾರ ಘೋಷಿಸಿದೆ. ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ ಪರಿಹಾರಕ್ಕಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ
ಕಾರ್ಕಳ: ವಿಸ್ತೃತ ಬಸ್ ನಿಲ್ದಾಣ ಹಾಗೂ ಬಂಡೀಮಠ ಬಸ್ ನಿಲ್ದಾಣಗಳೆರಡನ್ನು ಸಮಾನವಾಗಿ ಸದ್ಭಾವಕೆ ಮಾಡುವಂತೆ ರಾಜ್ಯ ಹೈಕೋರ್ಟ್ ಅದೇಶ ನೀಡಿ ವರ್ಷಗಳೆ ಕಳೆದು ಹೋಗಿದೆ. ಹೈಕೋರ್ಟ್ ಅದೇಶಕ್ಕೆ ಜಿಲ್ಲಾಡಳಿತ, ಕಾರ್ಕಳ ಪುರಸಭೆ ಗೌರವಿಸಿಲ್ಲ. ಈ ಕುರಿತು ಅರ್ಜಿದಾರರು ಮತ್ತೇ ನ್ಯಾಯಾಲಯಕ್ಕೆ ಮೋರೆ ಹೋದರೆ ಪುರಸಭಾ ಸದಸ್ಯರು ಸಹಿತ ಅಧಿಕಾರಿಗಳು ಕಾನೂನಿನ ಕುಣಿಕೆಯಲ್ಲಿ ಸಿಲುಕಬೇಕಾದಿತ್ತೆಂದು ಕಾರ್ಕಳ ಪುರಸಭಾ ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಹೇಳಿದರು. ಕಾರ್ಕಳ
ಉಡುಪಿ ಮಂಗಳೂರು ಗಡಿಭಾಗ ಹೆಜಮಾಡಿ ಗ್ರಾಮಸಭೆಯಲ್ಲಿ ಶಾಂಭವಿ ಹೊಳೆಯಲ್ಲಿ ರಾಜರೋಷವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಹಾಗೂ ಮಟ್ಕಾದಂಧೆಯ ವಿರುದ್ಧ ಜನ ಆಕ್ರೋಶ ವ್ಯಕ್ತ ಪಡಿಸಿದ್ದು, ಸಭೆಯಲ್ಲಿದ್ದ ಅಧಿಕಾರಿಗಳಲ್ಲಿ ತಕ್ಷಣವೇ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಮಾಜಿ ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ವಾಮನ್ ಕೋಟ್ಯಾನ್, ಅವಳಿ ಜಿಲ್ಲೆಗಳ ಗಡಿಭಾಗ ಇದಾಗಿದ್ದು ದ.ಕ. ಜಿಲ್ಲಾ ಪರವಾನಿಗೆ ಪಡೆದಿರುವ ಮಂದಿ ಉಡುಪಿ
ಸತತ ಐದು ವರ್ಷದಿಂದ ಕೆ.ಹೊಸಕೋಟೆಯ ಪಶುಸಂಗೋಪನ ಆಸ್ಪತ್ರೆಯು ವೈದ್ಯರನ್ನೇ ನೋಡದ ಹೋಬಳಿ ಆಸ್ಪತ್ರೆ……ರೈತರ ಗೋಳು ಕೇಳುವವರು ಯಾರು? ಆಲೂರು :ಆಲೂರು ತಾಲೂಕು ಕೆ. ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲಿ ಒಂದು ಪಶು ಸಂಗೋಪನ ಆಸ್ಪತ್ರೆ ಕೆಲವು ವರ್ಷಗಳ ಹಿಂದೆಯೇ ನಿರ್ಮಾಣ ವಾಗಿದೆ.ಆದರೆ ಇದರ ಪರಿಸ್ಥಿತಿಯನ್ನು ನೋಡುವುದಾದರೆ ಈ ಆಸ್ಪತ್ರೆಗೆ 5 ವರ್ಷದಿಂದ ಯಾವುದೇ ಡಾಕ್ಟರ್ ಇಲ್ಲಿಗೆ ನೇಮಿಸಿರುವುದಿಲ್ಲ. ಇಲ್ಲಿ ಒಬ್ಬ ಸಹಾಯಕರು
ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಹಳ್ನಾಡು ಎಂಬಲ್ಲಿ ವಾಸವಾಗಿರುವ ಕಾರ್ತಿಕ್ (20) ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರೆ ಇತ್ತ ತಂದೆ ಮಾನಸಿಕ ಅಸ್ವಸ್ಥರು. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ತಲೆಯ ಮೇಲೆ ಹಾಕಿಕೊಂಡು, ತನ್ನ ವಿದ್ಯಾಭ್ಯಾಸವನ್ನೆ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿನ ಹೋಟೆಲ್ ನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಾರ್ತಿಕ್. ತನ್ನ ಎಳೆಯ ವಯಸ್ಸಿನಲ್ಲಿಯೇ ಸೋರುತ್ತಿದ್ದ ಮನೆಯನ್ನು ಮಾವನ ಸಹಾಯದಿಂದ ಹಾಗೂ ಬ್ಯಾಂಕಿನಿಂದ ಸಾಲ
ಆಗ್ನೇಯ ಆಸ್ಟ್ರೇಲಿಯಾದಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದ್ದು, ಭೂಕಂಪದಿಂದಾಗಿ ಕಟ್ಟಡಗಳು ಅಲುಗಾಡಿದ್ದು, ಗೋಡೆಗಳು ಉರುಳಿ ಬಿದ್ದವು ಹಾಗೂ ಗಾಬರಿಗೊಂಡ ನಿವಾಸಿಗಳು ಮೆಲ್ಬೋರ್ನ್‌ನ ರಸ್ತೆಗಳತ್ತ ಓಡಿದ್ದಾರೆ. ದೇಶದ ಎರಡನೇ ಅತ್ಯಂತ ದೊಡ್ಡ ನಗರ ಮೆಲ್ಬೋರ್ನ್ ಪೂರ್ವಕ್ಕೆ ಸ್ಥಳೀಯ ಸಮಯ 9.15 ಗಂಟೆ ಸಂದರ್ಭದಲ್ಲಿ ಭೂ ಕಂಪನ ಸಂಭವಿಸಿದೆ. ಅಮೆರಿಕದ ಜಿಯಾಲಾಜಿಕಲ್ ಸರ್ವೇ ಕಂಪನಿಯು ಭೂಕಂಪದ ಪ್ರಮಾಣವನ್ನು 5.8 ರಷ್ಟಿತ್ತು ಎಂದಿದೆ. ನಂತರ ಅದನ್ನು 5.9 ಕ್ಕೆ
ಮೂಡುಬಿದಿರೆ: ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದ ಕೋಂಕೆ ಎಂಬಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೆಟ್ಟು 4 ದಿನಗಳಾಗಿದ್ದು ಸ್ಥಳಿಯ ನಿವಾಸಿಗಳು ಕುಡಿಯಲೂ ನೀರಿಲ್ಲದೆ ತೊಂದರೆ ಅನುಭವಿಸಿದ್ದಾರೆ. ಈ ಭಾಗದಲ್ಲಿ ಬಹಳಷ್ಟು ಕೃಷಿಕರೂ ಇದ್ದು ಕೃಷಿಗೆ ನೀರು ಬಿಡಲೂ ಸಾಧ್ಯವಾಗದೆ ತೊಂದರೆ ಅನುಭವಿಸಿದರೂ ಮೆಸ್ಕಾಂ ಇಲಾಖೆಯ ಎ.ಇ.ಇ., ಎಸ್ .ಒ. ಸಹಿತ ಸಿಬ್ಬಂದಿಗಳು ವಿಷಯ ತಿಳಿದರೂ ಸಹಕರಿಸದೆ ಬಹಳಷ್ಟು ತೊಂದರೆ ನೀಡಿದ್ದಾರೆ. ಕೊನೆಕೊನೆಗೆ
ವಿದ್ಯಾರ್ಥಿ ನಿಲಯದಿಂದ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಕಾಣೆಯಾದ ಬಗ್ಗೆ ನಿನ್ನೆ ವರದಿಯಾಗಿತ್ತು, ಇಂದು ಆತ ಸಂಬಂಧಿಕರ ಮನೆಯಲ್ಲಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ನಿನ್ನೆ ಕಡಬದ ಶ್ರೀ ರಾಮಕುಂಜೆಶ್ವರ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಸಿ.ಎಮ್ ಎಂಬ ಅಪ್ರಾಪ್ತ ಬಾಲಕ ಬೆಳಿಗ್ಗೆ 9 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದು, ನಂತರ ಮಧ್ಯಾಹ್ನ 12.40 ಕ್ಕೆ ಕಾಲೇಜು
ಮಂಗಳೂರಿನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಯ ವಿಟಿಯು ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಮತ್ತು ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶ ಲಭಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯ ಡಿ. ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, 2006ರಲ್ಲಿ ಪ್ರಾರಂಭಗೊಂಡ ಈ ಸಂಸ್ಥೆ ತಮ್ಮ ಪ್ರಥಮ ಬ್ಯಾಚ್‍ನ ವಿದ್ಯಾರ್ಥಿಗಳಿಂದ ಈ ವರೆಗೂ



















