Home Posts tagged V4News (Page 824)

ಕಾಪುವಿನಲ್ಲಿ ಮೋರಿಗೆ ಢಿಕ್ಕಿಯಾದ ಕಾರು: ಒರ್ವನ ಸ್ಥಿತಿ ಗಂಭೀರ

ಕಾಪುವಿನ ಕೊಪ್ಪಲಂಗಡಿಯಲ್ಲಿ ಕಳೆದ ತಡರಾತ್ರಿ ನಡೆದ ಕಾರು ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿದ್ದು ಒರ್ವನ ಸ್ಥಿತಿ ಗಂಭೀರ ವಾಗಿದೆ ಎನ್ನಲಾಗಿದೆ. ಬೆಂಗಳೂರು ನೋಂದಾಣಿ ಸಂಖ್ಯೆಯ ಮಾರುತಿ ಕಾರಿನಲ್ಲಿ ಉಡುಪಿ ಮೂಲದವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರಿನಲ್ಲಿ ನಾಲ್ವರು

ಸಿಎಯಲ್ಲಿ ಪ್ರಥಮ ರ್‍ಯಾಂಕ್ ವಿಜೇತೆ ರುತ್ ಡಿಸಿಲ್ವ ಗೆ ಸಾರ್ವಜನಿಕ ಅಭಿನಂದನೆ

 ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್  ಪಡೆದ ಮಂಗಳೂರಿನ ರುತ್ ಕ್ಲೇರ್ ಡಿಸಿಲ್ವಾ ಅವರಿಗೆ V4 ಸ್ಟುಡಿಯೋದಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯ ವಿವಿಧ ಸಂಘ ಸಂಸ್ಥೆಯ ವತಿಯಿಂದ ಸನ್ಮಾನ ನೀಡಿ ಗೌರವಿಸಲಾಯಿತು.   ಮಂಗಳೂರಿನ ಯೆಯ್ಯಾಡಿಯಲ್ಲಿರುವ ವಿ4 ನ್ಯೂಸ್ ಸ್ಟುಡಿಯೋದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಹಲವಾರು ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು. 

ಉಡುಪಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಮೇಶ್ ಕಾಂಚನ್ ನೇಮಕ

ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಉಡುಪಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ,ಬೈಲೂರು ವಾರ್ಡಿನ ನಗರ ಸಭಾ ಸದಸ್ಯ ರಮೇಶ್ ಕಾಂಚನ್ ರವರನ್ನು ನೇಮಕ ಗೊಳಿಸಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇಮಕಾತಿ ಅದೇಶ ಹೊರಡಿಸಿದ್ದು, ಪಕ್ಷ ಸಂಘಟನೆ ಬಲವರ್ಧನೆ ಕಾರ್ಯನ್ಮೋಕರಾಗಬೇಕೆಂದು ಸೂಚಿಸಿದ್ದಾರೆ. ಉಡುಪಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಸೇರಿದಂತೆ ಇತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು

ವಿದ್ಯುತ್ ದೀಪ, ರಸ್ತೆ ಸಂಪರ್ಕ ಸರಿ ಪಡಿಸಲು ಆಗ್ರಹ

ಕಸ್ಬಾ ಬೆಂಗ್ರೆಯ ಸಾಂಪ್ರದಾಯಿಕ, ನಾಡದೋಣಿಗಳು ತಂಗುವ ತೀರದಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದೆ, ಸರಿಯಾದ ರಸ್ತೆ ಸಂಪರ್ಕ ಇಲ್ಲದೆ ಮೀನುಗಾರರು ವೃತ್ತಿ ನಿರ್ವಹಿಸಲು ಸಮಸ್ಯೆಗಳು ಉಂಟಾಗಿದ್ದು, ಅದ್ಯತೆಯಿಂದ ವಿದ್ಯುತ್ ಬೆಳಕು, ರಸ್ತೆ ಸಂಪರ್ಕ ಒದಗಿಸುವಂತೆ ಒತ್ತಾಯಿಸಲಾಯಿತು. ನಿಯೋಗದಲ್ಲಿ ಪಲ್ಗುಣಿ‌ ನಾಡದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷರಾದ ಅಬ್ದುಲ್ ತಯ್ಯೂಬ್,ಸರ್ಫರಾಝ್,ಸಾವಲ್, ಫಹಾಝ್,ಮುದಸ್ಸಿರ್,ಇಮ್ತಿಯಾಝ್,

ದೋಣಿ ದುರಂತದಲ್ಲಿ‌ ಮೃತರಾದ ಮೀನುಗಾರ ಶೆರೀಫ್ ಕುಟುಂಬಕ್ಕೆ ಪರಿಹಾರ ಒದಗಿಸಲು ಆಗ್ರಹ

ವಾರದ ಹಿಂದೆ ಮೀನುಗಾರಿಕೆಯ ಸಂದರ್ಭ ದೋಣಿ ಮಗುಚಿ ಮೃತರಾದ ಕಸ್ಬಾ ಬೆಂಗ್ರೆಯ ನಿವಾಸಿ ಶೆರೀಫ್ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಧನ ನೀಡುವಂತೆ ಕೋರಿ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಹರೀಶ್ ಕುಮಾರ್ ಅವರಿಗೆ “ಸಾಂಪ್ರದಾಯಿಕ ಮೀನುಗಾರರ ಸಂಘ” ದ ವತಿಯಿಂದ ಮನವಿ ಸಲ್ಲಿಸಲಾಯಿತು. ವೃದ್ದೆ ತಾಯಿ, ಸಹೋದರಿ, ಹೆಂಡತಿ, ಮೂರು ಸಣ್ಣ ಮಕ್ಕಳಿರುವ ಕುಟಂಬಕ್ಕೆ ಶೆರೀಫ್ ದುಡಿಮೆಯೇ ಆಧಾರವಾಗಿತ್ತು. ದಿಢೀರ್ ನಡೆದ ದುರಂತದಿಂದ ಮೃತ ಶೆರೀಫ್ ಕುಟುಂಬ

ಎ. ಜೆ ಆಸ್ಪತ್ರೆಯಲ್ಲಿ ರೋಗಿಗಳ ವಿಶ್ವ ಸುರಕ್ಷತಾ ದಿನ ಆಚರಣೆ

ಈ ವರ್ಷದ ರೋಗಿಗಳ ವಿಶ್ವ ಸುರಕ್ಷತಾ ದಿನದ ಥೀಮ್ “ತಾಯಿ ಮತ್ತು ನವಜಾತ ಶಿಶುಗಳ ಆರೈಕೆ”. ರೋಗಿಗಳ ಸುರಕ್ಷತೆಯ ಬಗ್ಗೆ ಜಾಗ್ರತಿ ಮೂಡಿಸಲು ರೋಗಿಗಳ ವಿಶ್ವ ಸುರಕ್ಷತಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.ಎ. ಜೆ ಆಸ್ಪತ್ರೆಯಲ್ಲಿ ರೋಗಿಗಳ ವಿಶ್ವ ಸುರಕ್ಷತಾ ದಿನವನ್ನುಆಚರಿಸಲಾಯಿತು. ಈ ಸಂಧರ್ಭ ಆಸ್ಪತ್ರೆಯಲ್ಲಿ ರೋಗಿಗಳ ಸುರಕ್ಷತೆಗಾಗಿಡಬ್ಲ್ಯೂ.ಹೆಚ್.ಓ ಮಾರ್ಗಸೂಚಿಗಳ ಅನುಷ್ಠಾನ ಮತ್ತು ಪಾಲನೆ ಬಗ್ಗೆ ವಿಶ್ಲೇಷಿಸಲಾಯಿತು. ಡಾ. ಮಂಜುನಾಥ್‍ಕಾಮತ್,

ಸಾರಾಯಿ ನಿಷೇಧಿಸುವಂತೆ ಆಗ್ರಹ : ಮಹಿಳೆಯರು,ಪ್ರಗತಿಪರ ಸಂಘಟನೆಗಳಿಂದ ಧರಣಿ

ದೇವರಹಿಪ್ಪರಗಿ ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಎಂಎಸ್‍ಎಐಎಲ್ ರದ್ದುಪಡಿಸಲು ಗ್ರಾಮದ ಹಲವು ಮುಖಂಡರು, ಮಹಿಳೆಯರಿಂದ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಮೊಹರೆ ಹನಮಂತರಾಯ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಬಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ನಂತರ ಅಂಬೇಡ್ಕರ್ ವೃತ್ತದಲ್ಲಿ ಹಲವಾರು ಪ್ರಗತಿಪರ ಸಂಘಟನೆಯ ಮುಖಂಡರುಗಳು ಮಾತನಾಡಿ ಮಹಿಳೆಯರ ಹೋರಾಟಕ್ಕೆ ಬೆಂಬಲ

ದೇವಸ್ಥಾನ ಕೆಡವಿರುವುದಕ್ಕೆ ಖಂಡಿಸಿ ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್‍ನಿಂದ ಬೃಹತ್ ಪ್ರತಿಭಟನೆ

ನಂಜನಗೂಡಿನಲ್ಲಿ ದೇವಸ್ಥಾನ ಕೆಡವಿರುವುದಕ್ಕೆ ಅಧಿಕಾರದಲ್ಲಿರುವ ಬಿಜೆಪಿ ಸರಕಾರವೇ ನೇರ ಹೊಣೆ, 2008ರಲ್ಲಿ ಆದ ಸುಪ್ರೀ ಕೋರ್ಟ್ ಆದೇಶವನ್ನು ಪ್ರಯೋಗಕ್ಕೆ ಒಳಪಡಿಸಿದ್ದು ಬಿಜೆಪಿ ಸರಕಾರ, ಇದು ಸರಕಾರ ಪ್ರಾಯೋಜಿತ ಕಾರ್ಯಕ್ರಮ ಎಂದು ಎಂದು ಮಾಜಿ ಸಚಿವ ಬಿ.ರಮನಾಥ ರೈ ಆಕ್ರೋಶ ವ್ಯಕತಪಡಿಸಿದರು. ರಾಜ್ಯ ಬಿಜೆಪಿ ಸರಕಾರ ಧಾರ್ಮಿಕ ಕೇಂದ್ರಗಳನ್ನು ಧ್ವಂಸಗೊಳಿಸಿದ ಹಾಗೂ ಅನೇಕ ದೇವಸ್ಥಾನ, ದೈವಸ್ಥಾನ ಮತ್ತು ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವುದರ ವಿರುದ್ದ

ಮೀನುಗಾರಿಕೆ ದೋಣಿ ಮಗುಚಿ ದುರುಂತ

ಬೈಂದೂರು ಉಪ್ಪುಂದದ ತಾರಾಪತಿಯಲ್ಲಿ ಜೈಗುರೂಜಿ ಹೆಸರಿನ ದೋಣಿಯಲ್ಲಿ ಆರು ಜನರು ಮೀನುಗಾರಿಕೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಹಿಂತಿರುಗಿ ಬರುವ ವೇಳೆ ರಭಸದಿಂದ ಹೊಡೆದ ತೆರೆಗೆ ದೋಣಿ ಮಗುಚಿ ಬಿದ್ದ ಪರಿಣಾಮವಾಗಿ ಆರು ಜನರಲ್ಲಿ ನಾಲ್ವರನ್ನು ಕಾಪಾಡುವಲ್ಲಿ ಯಶಸ್ವಿಯಾಗಿ, ಉಳಿದಿಬ್ಬರು ಚರಣ್ ಹಾಗೂ ಗೊಂಡಯ್ಯ ಅಣ್ಣಪ್ಪ ಎಂಬುವರು ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಚರಣ್ ಮತ್ತು ಅಣ್ಣಪ್ಪ ಎಂಬುವರಲ್ಲಿ ಚರಣ್ ಮೃತ ದೇಹ ಅಮ್ಮನವರ ತೊಪ್ಲು ಎಂಬಲ್ಲಿ ಶನಿವಾರದಂದು

ಶ್ರೀಮತಿ ಗಂಗಮ್ಮ ಹೊಸೊಳಿಕೆ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ ಕಾರ್ಯಕ್ರಮ

ಸುಳ್ಯ ತಾಲೂಕಿನ ಗುತ್ತಿಗಾರು ವಳಲಂಬೆಯ ಹೊಸೋಳಿಕೆ ಗಿರಿಯಪ್ಪ ಗೌಡ ಅವರ ಧರ್ಮ ಪತ್ನಿ ಶ್ರೀಮತಿ ಗಂಗಮ್ಮ ಅವರು ಸೆಪ್ಟಂಬರ್ 6ರಂದು ಅಸೌಖ್ಯದಿಂದ ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವು ಇಂದು ಹೊಸೊಳಿಕೆಯ ತಮ್ಮ ಸ್ವ ಗೃಹದಲ್ಲಿ ನೆರವೇರಿತ್ತು.ಈ ಸಂದರ್ಭದಲ್ಲಿ ಮೃತರ ಪತಿ ಗಿರಿಯಪ್ಪ ಗೌಡ ಹೊಸೊಳಿಕೆ, ಪುತ್ರಿಯರಾದ ಶ್ರೀಮತಿ ರೇಷ್ಮಾ ಗಂಗಾಧರ್ ಕೆದ್ಕಾರ್, ಶ್ರೀಮತಿ ಪ್ರೇಮ ಕುಶಾಲಪ್ಪ ಸೋಮರ್ ಪೇಟೆ ಸೇರಿದಂತೆ ಕುಟುಂಬಸ್ಥರು ಮತ್ತು