Home Posts tagged V4News (Page 828)

ಉಜಿರೆಯಲ್ಲಿ ಮಾಹಿತಿಕಾರ್ಯಾಗಾರ : ‘ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಎಸ್.ಡಿ.ಎಂ ಸನ್ನದ್ಧ’

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿರಾಷ್ಟ್ರೀಯ ಶಿಕ್ಷಣ ನೀತಿಯ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿಎಸ್.ಡಿ.ಎಂಕಾಲೇಜಿನ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳು ತೀವ್ರಗೊಂಡಿವೆಎಂದುಎಸ್.ಡಿ.ಎಂಕಾಲೇಜಿನ ಪ್ರಾಚಾರ್ಯರಾದಡಾ.ಸತೀಶ್ಚಂದ್ರ ತಿಳಿಸಿದರು. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದಎಸ್.ಡಿ.ಎಂ

ಸಿಎ ಪರೀಕ್ಷೆಯಲ್ಲಿ ರುಥ್ ಕ್ಲೇರ್ ಡಿ ಸಿಲ್ವ ಪ್ರಥಮ ರ್‍ಯಾಂಕ್

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ಜುಲೈಯಲ್ಲಿ ನಡೆಸಿದ ಅಖೀಲ ಭಾರತ ಸಿಎ ಅಂತಿಮ ಪರೀಕ್ಷೆಯಲ್ಲಿ ನಗರದ ರುಥ್ ಕ್ಲೇರ್ ಡಿ’ಸಿಲ್ವ ಅವರು ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ನಗರದ ಮಲ್ಲಿಕಟ್ಟೆ ನಿವಾಸಿ ರುಥ್ ಅವರು ರೋಸಿ ಮರಿಯಾ ಡಿ’ಸಿಲ್ವ ಮತ್ತು ರಫೆರ್ಟ್ ಡಿ’ಸಿಲ್ವ ಅವರ ಪುತ್ರಿ. ನಗರದ ಸಂತ ತೆರೆಸಾ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದು ಮಂಗಳೂರು ವಿ.ವಿ.ಯಿಂದ ದೂರ ಶಿಕ್ಷಣ ಮೂಲಕ ಪದವಿ ಪೂರ್ಣಗೊಳಿಸಿದ್ದಾರೆ.  ಈ ಬಗ್ಗೆ ಮಾತನಾಡಿದ ರ್‍ಯಾಂಕ್ ಪಡೆದ ರುಥ್ ಕ್ಲೇರ್ ಡಿ

ದ.ಕ. ಜಿಲ್ಲೆಯಲ್ಲಿ ಸೆ.17ರಂದು ಮೆಗಾ ಲಸಿಕಾ ಮೇಳ

ದ.ಕ. ಜಿಲ್ಲೆಯು ಕೋವಿಡ್ ವಿರುದ್ಧದ ಲಸಿಕೀಕರಣದಲ್ಲಿ ರಾಜ್ಯದಲ್ಲಿ ಪ್ರಸಕ್ತ 4ನೆ ಸ್ಥಾನದಲ್ಲಿದ್ದು, ಸೆ. 17ರಂದು ಮೆಗಾ ಲಸಿಕಾ ಮೇಳದ ಮೂಲಕ 1.50 ಲಕ್ಷ ಡೋಸ್ ಲಸಿಕೆ ನೀಡಲು ಸಿದ್ಧತೆ ನಡೆಸಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ಶೇ. 80ರಷ್ಟು ಮಂದಿ ಪ್ರಥಮ ಡೋಸ್ ಪಡೆದಿದ್ದಾರೆ. ಸುಮಾರು 56,000 ಮಂದಿ ಪ್ರಸಕ್ತ ಎರಡನೆ ಡೋಸ್ ಪಡೆಯಲು ಅರ್ಹತೆ

ಮಂಗಳೂರಿನಲ್ಲಿ ರೋಗಿಗೆ ನಿಫಾ ವೈರಸ್ ಲಕ್ಷಣ ಪತ್ತೆ ವಿಚಾರ : ಉಡುಪಿ ಮತ್ತು ಕಾರವಾರ ಅಲರ್ಟ್

ಕೊರೊನಾದೊಂದಿಗೆ ನಿಫಾ ವೈರಸ್ ಮತ್ತಷ್ಟು ಆತಂಕ ತಂದೊಡ್ಡಿದ್ದು, ಇದೀಗ ಕಾರವಾರದ ವ್ಯಕ್ತಿಯೊಬ್ಬಗೆ ಸೋಂಕಿನ ಕೆಲ ಲಕ್ಷಣ ಕಂಡು ಬಂದಿದೆ. ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಾರವಾರದ ವ್ಯಕ್ತಿ ಗೋವಾದ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಾರವಾರಕ್ಕೆ ಬೈಕ್ ನಲ್ಲಿ ಮಳೆಯಲ್ಲಿ ಬಂದಿದ್ದು, ಆತನಿಗೆ ನಿಫಾ ಸೋಂಕಿನ ಶಂಕೆ ಇಲ್ಲದಿದ್ದರೂ ನಿರ್ಲಕ್ಷ ಮಾಡಲು

ಮಂಗಳೂರಿನಲ್ಲಿ ಹೆಂಡತಿ ಮತ್ತು ಮಗನಿಗೆ ಅಪ್ಪನಿಂದ ಚೂರಿ ಇರಿತ..!

ಮಂಗಳೂರು ನಗರದ ಕಂಕನಾಡಿಯ ಸೇರಾವೋ ರಸ್ತೆ ಕಂಪೌಂಡ್‌ನಲ್ಲಿ ಪತಿಯೇ ಪತ್ನಿ ಮತ್ತು ಪುತ್ರನಿಗೆ ಚೂರಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮಂಗಳೂರು ನಗರದ ಕಂಕನಾಡಿ ಸೇರಾವೋ ರಸ್ತೆ ಕಂಪೌಂಡ್ ನಿವಾಸಿ ರಮೇಶ್ ಬಂಗೇರಾ (54) ಎಂಬುವವರು ಪ್ರಕರಣದ ಆರೋಪಿ. ಬೇಬಿ ಕುಂದರ್ ಮತ್ತು ಅಶ್ವಿನ್ ಹಲ್ಲೆಗೊಳಗಾಗಿದ್ದಾರೆ. ಬೇಬಿ ಕುಂದರ್ ಅವರು ತನ್ನ ಗಂಡ ರಮೇಶ್ ಬಂಗೇರಾ ಮತ್ತು ಮಗ ಅಶ್ವಿನ್ ಜತೆಯಲ್ಲಿ ವಾಸವಾಗಿದ್ದರು. ಸೆ.11ರಂದು ರಾತ್ರಿ 10:30ಕ್ಕೆ ಗಂಡ ರಮೇಶ್ ಬಂಗೇರಾ

ಆಸ್ಕರಣ್ಣನಿಗೆ ಭಾವಪೂರ್ಣ ನಮನಗಳು: ಪಿ.ವಿ. ಮೋಹನ್

ಆಸ್ಕರಣ್ಣ ತೀರಿಕೊಂಡಿದ್ದಾರೆ. ಅವರನ್ನು ಕಾಣುವುದು ಇನ್ನು ಸಾಧ್ಯವಾಗುವುದೇ ಇಲ್ಲ. ನಮಗೆ ಕಾಣದ ದೂರದ ಲೋಕಕ್ಕೆ ಹೋಗಿದ್ದಾರೆ. ಈ ಪರಿಸ್ಥಿತಿ ಬರಬಹುದು ಎಂದೂ ಯೋಚಿಸಿರಲಿಲ್ಲ ; ಒಂದು miracle ಆಗಬಹುದೆಂದು ದಿನಗಳನ್ನು ಎದುರಿಸುತ್ತಿದ್ದೆವು. ಅವರ ಬದುಕು, ರಾಜಕೀಯ ಅನುಭವಗಳು ಒಂದು ತೆರೆನ ವಿಶಿಷ್ಟವಾದವು. ಬುದ್ದನಂತಹ, ಯೇಸುವಿನಂತಹ, ಗಾಂಧಿಯಂತಹ ವ್ಯಕ್ತಿ ಆಸ್ಕರಣ್ಣ ರಾಗಿದ್ದರು. ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಆಗಿರುವ ನಷ್ಟವಲ್ಲ ಅದು ಇಡೀ

ಆಸ್ಕರ್ ಫೆರ್ನಾಂಡಿಸ್‌ಗೆ ಸಂತಾಪ ಸೂಚಿಸಿದ ಗೋಪಾಲ ಪೂಜಾರಿ

ನನಗೆ ರಾಜಕೀಯದಲ್ಲಿ ಪುನರ್ಜನ್ಮ ನೀಡಿದ ಮಹಾನ್ ನಾಯಕ ಅಗಲಿದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸಂತಾಪ ಸೂಚಿಸಿದ್ದಾರೆ. ಉಡುಪಿ, ದ.ಕ ಜಿಲ್ಲೆಗೆ ಆಸ್ಕರ್ ಫೆರ್ನಾಂಡಿಸ್ ಅವರ ಕೊಡುಗೆ ಅಪಾರ. ನಾನು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದರು. ಜಿಲ್ಲೆಯಲ್ಲಿ ಸಾಕಷ್ಟು ನಾಯಕರನ್ನು ಹುಟ್ಟುಹಾಕುವ ಕೆಲಸ ಮಾಡಿದ್ದಾರೆ. ಅಜಾತಶತ್ರು ಆಸ್ಕರಣ್ಣನ ಅಗಲುವಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ

ಆಸ್ಕರ್ ಅವರ ಮೂಲ ಮನೆಯಲ್ಲಿ ಪಾರ್ಥಿವ ಶರೀರ ಇರಿಸಿ ಪ್ರಾರ್ಥನೆ

ಉಡುಪಿ: ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ ಕೇಂದ್ರದ ಮಾಜಿ ಸಚಿವ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಆಂಬುಲೆನ್ಸ್ ಮೂಲಕ ಉಡುಪಿಗೆ ಕರೆತರಲಾಯಿತು. ಪಾರ್ಥಿವ ಶರೀರದ ಜೊತೆಗೆ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಮಕ್ಕಳಾದ ಓಶನ್, ಒಶಾನಿ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಗೆ ಆಗಮಿಸಿದರು. ಬಳಿಕ ಉಡುಪಿಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ನೇತೃತ್ವದಲ್ಲಿ ಚರ್ಚ್ ಹಾಲ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.

ಪುತ್ತೂರಿನಲ್ಲಿ ಅಪ್ರಾಪ್ತರನ್ನು ಬಳಸಿ ಭಿಕ್ಷಾಟನೆ: ಮಕ್ಕಳನ್ನು ರಕ್ಷಣೆ ಮಾಡಿದ ಚೈಲ್ಡ್ ಲೈನ್ ಅಧಿಕಾರಿಗಳು

ಪುತ್ತೂರು:ಪುತ್ತೂರಿನಲ್ಲಿ ಅಪ್ರಾಪ್ತರನ್ನು ಭಿಕ್ಷಾಟನೆಗೆ ಕಳುಹಿಸುವ ಮೂಲಕ ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾರೆಂಬ ದೂರಿನ ಮೇರೆಗೆ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಯ ಅಧಿಕಾರಿಗಳು ನೆಲ್ಲಿಕಟ್ಟೆಯಲ್ಲಿ ಕಾರ್ಯಾಚರಣೆ ನಡೆಸಿ 6 ವರ್ಷದ ಬಾಲಕ ಮತ್ತು 8 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಸಂಗೀತ ಎಂಬ ಮಹಿಳೆಯು ಇತ್ತೀಚೆಗೆ ಬಿಸಿ ರೋಡ್‌ನಲ್ಲಿ ಮಗುವೊಂದಕ್ಕೆ ಹಲ್ಲೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದು ಅಲ್ಲಿ ದಾಳಿ

ಪುತ್ತೂರಿನಲ್ಲಿ ರಿಕ್ಷಾ-ಕಾರು ಢಿಕ್ಕಿ: ರಿಕ್ಷಾ ಚಾಲಕ ಸಹಿತ ಮೂವರಿಗೆ ಗಾಯ

ಪುತ್ತೂರು: ಆಟೋ ರಿಕ್ಷಾ ಮತ್ತು ಕಾರು ನಡುವೆ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಎದುರು ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ. ಅಪಘಾತದಿಂದ ರಿಕ್ಷಾ ಚಾಲಕ ಸಹಿತ ಅದರಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ.ಗಾಯಾಳು ರಿಕ್ಷಾ ಚಾಲಕ ಕಂಬಳಬೆಟ್ಟು ನಿವಾಸಿ ಪಕೀರ್ ಸಾಹೇಬ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣೆಯ ಯಸ್. ಐ. ರಾಮ ನಾಯ್ಕ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.