Home Posts tagged V4News (Page 835)

ಆಹಾರ ಪೊಟ್ಟಣ ಕಿರಾಣಿ ಅಗಂಡಿಯೊಂದರಲ್ಲಿ ಮಾರಾಟಕ್ಕೆ ಇಡಲಾಗಿದೆ- ಹರೀಶ್ ಕುಮಾರ್ ಆರೋಪ

ಕಾರ್ಮಿಕ ಇಲಾಖೆಯ ಕಲ್ಯಾಣ ನಿಧಿಯಡಿ ರಾಜ್ಯದಲ್ಲಿ 8೦೦೦ ಕೋಟಿ ರೂ. ಸಂಗ್ರಹವಿದೆ. ಅದರಡಿ ಕಾರ್ಮಿಕರಿಗೆ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ಬಂಟ್ವಾಳದ ನರಿಕೊಂಬು ಗ್ರಾಮದಲ್ಲಿ ವಿತರಣೆಗೆ ಬಂದ ಆಹಾರ ಪೊಟ್ಟಣ ಅಲ್ಲಿನ ಕಿರಾಣಿ ಅಗಂಡಿಯೊಂದರಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ

ಲಸಿಕೆ ವಿಚಾರದಲ್ಲಿ ತಾರತಮ್ಯ ಯಾಕೆ-ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ 

 ಬಿಜೆಪಿಯ ಜನಪ್ರತಿನಿಧಿಗಳು ಸರಕಾರದಿಂದ ಜನಸಾಮಾನ್ಯರಿಗೆ ಸಿಗಬೇಕಾದ ಹಕ್ಕನ್ನೂ ರಾಜಕೀಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವು ಕಾಂಗ್ರೆಸ್ ಕಾರ್ಪೊರೇಟರ್‌ಗಳು, ಗ್ರಾ.ಪಂ. ಸದಸ್ಯರಿರುವ ಪ್ರದೇಶಗಳಲ್ಲಿ ಲಸಿಕೆ ಶಿಬಿರ ಆಯೋಜನೆ ಮಾಡಿ ಬಳಿಕ ಅದನ್ನು ರದ್ದು, ತಾರತಮ್ಯ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪ ಮಾಡಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕೆ ಹಂಚಿಕೆ,

ಯಕ್ಷಮಿತ್ರರು ದುಬೈ ವತಿಯಿಂದ ಯಕ್ಷಗಾನದ ದ್ರುವತಾರೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಯಕ್ಷಗಾನದ ದ್ರುವತಾರೆ, ಯಕ್ಷ ಭೀಮ, ಅಭಿನವ ವಾಲ್ಮೀಕಿ ಕೀರ್ತಿಶೇಷ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಭಾವಪೂರ್ವ ಶ್ರದಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.   ಯಕ್ಷಮಿತ್ರರು ದುಬೈ ಇವರ ವತಿಯಿಂದ ಈ ಕಾರ್ಯಕ್ರಮ ದುಬೈಯ ಹೋಟೆಲ್ ಒಂದರಲ್ಲಿ ಕಾರ್ಯಕ್ರಮ ನಡೆಯಿತು. ತಂಡದ ಹಿರಿಯ ಸದಸ್ಯರಾದ ವೆಂಕಟೇಶ ಶಾಸ್ತ್ರಿ, ಭವಾನಿ ಶಂಕರ್ ಶರ್ಮ, ಕೃಷ್ಣ ಪ್ರಸಾದ್ ರಾವ್ ದೀಪ ಬೆಳಗಿಸಿ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಾಸನ : ಅತಂತ್ರ ಸ್ಥಿತಿಯಲ್ಲಿರುವ ಗಣೇಶ ಮೂರ್ತಿ ತಯಾರಕರ ಬದುಕು

ಇಂದು ದೇಶದಾದ್ಯಂತ ಕೋವಿಡ್‍ನಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ ಕೆಲವೊಂದು ಕಸುಬುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕು ಇಂದು ಹೀನಾಯವಾಗಿದೆ ಅದಕ್ಕೆ ಉದಾಹರಣೆ ಎಂಬಂತೆ ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಅದರ ಅಂಗವಾಗಿ ಪ್ರತಿ ವರ್ಷವೂ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದ ಕಲಾವಿದರು ಇಂದು ಕೋವಿಡ್‍ನಿಂದಾಗಿ ಹೀನಾಯ ಬದುಕನ್ನು ಬದುಕುತ್ತಿದ್ದಾರೆ. ಪ್ರತಿವರ್ಷವು ವಿಜೃಂಭಣೆಯಿಂದ ನಡೆಯುತ್ತಿದ್ದ ಗಣೇಶ

ಅಧಿಕಾರಿಗಳು ಲಂಚದ ಪ್ರವೃತ್ತಿಯಿಂದ‌ ಹೊರಬರಬೇಕು: ಸಂಸದ ಬಿವೈ ರಾಘವೇಂದ್ರ

ಕುಂದಾಪುರ:  ಬೈಂದೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ದಾಖಲೆ ಮೊತ್ತದ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ಇಲಾಖಾಧಿಕಾರಿಗಳ ಕೆಲಸದ ವೇಗ ನಿರೀಕ್ಷಿತ ಮಟ್ಟದಲ್ಲಿ ಇರದ ಕಾರಣ ಅನುಷ್ಠಾನ ಕುಂಠಿತವಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಹಣ ನೀಡದೆ ಕೆಲಸ ಆಗುವುದಿಲ್ಲ. ಅಧಿಕಾರಿಗಳು ಈ ಪ್ರವೃತ್ತಿಯಿಂದ ಹೊರಬರಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಬೈಂದೂರಿನಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ

ಫಾದರ್ ಮುಲ್ಲರ್ ಆಸ್ಪತ್ರೆಯ ವತಿಯಿಂದ ಸೆ.6 ರಂದು ಉಚಿತ ‘ಪೋಸ್ಟ್ ಕೋವಿಡ್ ಫಿಸಿಯೋಥೆರಪಿ’ ಶಿಬಿರ

ಕೋವಿಡ್ -19 ಸೋಂಕಿನಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸೆ.6 ರಂದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪೋಸ್ಟ್ ಕೋವಿಡ್ ಫಿಸಿಯೋಥೆರಪಿ ಕ್ಯಾಂಪ್ ನಡೆಯಲಿದೆ. ಕೋವಿಡ್ -19 ಸೋಂಕು ತಗುಲಿ ಚೇತರಿಸಿದವರಲ್ಲಿ ಶೇಕಡಾ 87% ವ್ಯಕ್ತಿಗಳಲ್ಲಿ ಆಯಾಸ, ಉಸಿರಾಟದ ತೊಂದರೆ, ಕೀಲು ನೋವು, ಎದೆ ನೋವು ಮತ್ತು ಜೀವನದ ಗುಣಮಟ್ಟವನ್ನು ಕಡಿಮೆ ಮಾಡುವುದು ಸೇರಿದಂತೆ ಉಳಿದಿರುವ ಲಕ್ಷಣಗಳನ್ನು ಹೊಂದಿದೆ. ಇದರಿಂದ ಸ್ನಾಯು ಕಾರ್ಯದಲ್ಲಿ ಸಮಸ್ಯೆ,

ಬಂಟ್ವಾಳ: ಮೇಗಿನ ಕುರಿಯಾಳದಲ್ಲಿ 13ನೇ ಶತಮಾನದ ಶಾಸನ‌ ಪತ್ತೆ

ಬಂಟ್ವಾಳ : ತಾಲೂಕಿನ ಮೇಗಿನ‌ ಕುರಿಯಾಳದಲ್ಲಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ‌-ಉಡುಪಿ,(ಎನ್.ಟಿ.ಸಿ.-ಎ.ಒ.ಎಂ-ನ ಅಂಗ ಸಂಸ್ಥೆ) ಇದರ ಅಧ್ಯಯನ‌ ನಿರ್ದೇಶಕ ಪ್ರೊ.ಎಸ್‌.ಎ.ಕೃಷ್ಣಯ್ಯ ಅವರು ಇತ್ತೀಚೆಗೆ ಪತ್ತೆ ಮಾಡಿದ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ. ಗ್ರಾನೈಟ್ (ಕಣ)ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು 25 ಸಾಲುಗಳನ್ನು ಹೊಂದಿದೆ. ಶಾಸನವು

ಕೊಟ್ಟಾರ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರ : ಬೆಣ್ಣೆ ರಂಗಪೂಜೆ

ಕೊಟ್ಟಾರ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರದಲ್ಲಿ ದಿನಾಂಕ 30-08-2021ರ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಶ್ರೀಕೃಷ್ಣ ಅಷ್ಟೋತ್ತರ ಶತನಾಮಾವಳಿ, ನೆರವೇರಿ ಮಧ್ಯಾಹ್ನ 12-30 ಕ್ಕೆ ಅಲಂಕಾರ ಪೂಜೆ ರಾತ್ರಿ 07-30 ಕ್ಕೆ ಮಹಾಪೂಜೆ ನೆರವೇರಿ ಮಧ್ಯರಾತ್ರಿ 12: 30ರ ಚಂದ್ರೋದಯದ ಶ್ರೀಕೃಷ್ಣ ಜನ್ಮ ಸಮಯದಲ್ಲಿ 21 ಬಗೆಯ ಮಿಠಾಯಿ 21 ಬಗೆಯ ಹಣ್ಣು ಹಂಪಲು ಶ್ರೀಕೃಷ್ಣ ದೇವರಿಗೆ ಸಮರ್ಪಣೆ ಮಾಡಲಾಯಿತು. ಮಾರನೇ ದಿವಸ ಮೊಸರುಕುಡಿಕೆ ಯಂದು ಸಾಯಂಕಾಲ

CPIM ಹಿರಿಯ ಸದಸ್ಯ ಮೋನಪ್ಪ ಬಂಗೇರ ನಿಧನ

CPIM ಪಕ್ಷದ ಹಿರಿಯ ಸದಸ್ಯರೂ, ಬಜಾಲ್ ಜಲ್ಲಿಗುಡ್ಡ ಪ್ರದೇಶದ ನಿವಾಸಿಗಳಾದ ಮೋನಪ್ಪ ಬಂಗೇರರವರು(78 ವರ್ಷ) ದೀರ್ಘಕಾಲದ ಅಸೌಖ್ಯದಿಂದಾಗಿ ಬಜಾಲ್ ಜಲ್ಲಿಗುಡ್ಡೆಯಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾದ ಮೋನಪ್ಪ ಬಂಗೇರರವರು ತಮ್ಮ ಯೌವನದಲ್ಲಿ ಹಂಚು ಕಾರ್ಮಿಕರಾಗಿ ಹಂಚು ಕಾರ್ಮಿಕರ ಅನೇಕ ಹೋರಾಟಗಳಲ್ಲಿ ಸಕ್ರೀಯ ಪಾತ್ರ ವಹಿಸಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಾದ ಪಕ್ಕಲಡ್ಕ ಯುವಕ ಮಂಡಲ ಹಾಗೂ ಜನತಾ

ಗಮನ ಸೆಳೆದ ಕೃಷ್ಣ ಜನ್ಮಾಷ್ಠಮಿಯ ಡಿಸೈನರ್ ವೇರ್

ಪ್ರತಿಯೊಂದು ವಿಶೇಷ ಹಬ್ಬದ ಸಂದರ್ಭದಲ್ಲಿ ಆಯಾ ಹಬ್ಬದ ಮಹತ್ವಕ್ಕೆ ಸಂಬಂಧಿಸಿದ ಫೆಸ್ಟಿವ್ ವೇರ್ ಮೂಲಕ ಫ್ಯಾಶನ್ ಪ್ರಿಯರನ್ನು ಆಕರ್ಷಿಸುತ್ತಿದೆ ಬೆಂಗಳೂರಿನ ಜಿಯಾನಿ ಡಿಸೈನರ್ಸ್ ಸಂಸ್ಥೆ.ಈ ಬಾರಿಯ ಶ್ರೀ ಕೃಷ್ಣಾಷ್ಟಮಿಗೆ ಯಶೋಧೆ ಕೃಷ್ಣ ಪರಿಕಲ್ಪನೆಯ ಧಿರಿಸಿನ ಫೋಟೋ ಶೂಟ್ ಮೂಲಕ ಜಿಯಾನಿ ಡಿಸೈನರ್ ಸಂಸ್ಥೆ ಫ್ಯಾಷನ್ ಪ್ರಿಯರ ಗಮನ ಸೆಳೆಯಿತು . ಜನಪ್ರಿಯ ಮೊಡೇಲ್ ಪ್ರಿಯಾ ಕುಮಾರ್ ಅವರು ಯಶೋಧೆಯಾಗಿ ಆಕರ್ಷಕ ಫೆಸ್ಟಿವ್ ವೇರ್ ನಲ್ಲಿ ಮಿಂಚಿದರು. ಯಶೋಧೆ ಪುಟ್ಟ