ಶಿರ್ವ: ಅಕ್ರಮ ಮರಳುಗಾರಿಕೆ ಅಡ್ಡೆಗೆ ಕಾಪು ತಶೀಲ್ದಾರ್ ಪ್ರತಿಭಾ ದಾಳಿ ನಡೆಸಿದ್ದಾರೆ.ಕಳೆದ ಹಲವು ದಿನಗಳಿಂದ ಶಿರ್ವ ಬಳಿಯ ಮುಟ್ಲುಪಾಡಿ ಸೇತುವೆ ಕೆಳಗಡೆ ಕೇರಳ ಮೂಲದ ಕೋಶಿ ಎನ್ನುವಾತನ ತೋಟದ ಜಾಗದಲ್ಲಿ ಅಕ್ರಮ ಮರಳುಗಾರಿಕೆಯನ್ನು ಎಗ್ಗಿಲದೆ ನಡೆಸುತ್ತಿದ್ದರು. ಹಗಲಿನಲ್ಲೇ ರಾಜಾರೋಶವಾಗಿ ಹೊಳೆಗೆ ಡ್ರಜ್ಜಿಂಗ್ ಮಿಶಿನ್‌ಗಳನ್ನು ಹಾಕಿ ಮರಳು ತೆಗೆದು ನೂರಾರು
ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾನಿಯೂರಿನಲ್ಲಿ ಭಾರೀ ಮಳೆಗೆ ಕುಡಿಯುವ ನೀರಿನ ಬಾವಿಯೊಂದು ಪಂಪ್ ಸೆಟ್ಟ್ ಸಹಿತ ಕುಸಿದು ಸುಮಾರು ಮೂರು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಮಾನಿಯೂರಿನ ಗಣೇಶ್ ಮೂಲ್ಯ ಎಂಬವರಿಗೆ ಸೇರಿದ ಕಲ್ಲು ಕಟ್ಟಿದ್ದ ಬಾವಿ ಗುರುವಾರ ಕುಸಿತ ಕಂಡಿದ್ದು, ಸ್ಥಳಕ್ಕೆ ಎಲ್ಲೂರು ಗ್ರಾ.ಪಂ. ಅಧ್ಯಕ್ಷ ಜಯಂತ್ ಕುಮಾರ್ ಆಗಮಿಸಿ ಪರಿಶೀಲನೆ ಮಾಡಿದ್ದು, ಪ್ರಕೃತಿ ವಿಕೋಪದಡಿ ಸರ್ಕಾರದಿಂದ ಸಂತ್ರಸ್ಥರಿಗೆ ಪರಿಹಾರ ನೀಡಲು ಶ್ರಮಿಸುವುದಾಗಿ
ಸುಮಾರು 117 ವರ್ಷಗಳ ಇತಿಹಾಸವಿರುವ ಸಹಕಾರ ಕ್ಷೇತ್ರಕ್ಕೆ ಸಹಕಾರ ಸಚಿವಾಲಯ ಬೇಕು ಎನ್ನುವ ಬೇಡಿಕೆಯನ್ನು ಕೇಂದ್ರ ಸರ್ಕರ ಪರಿಗಣಿಸಿ ಸಹಕಾರದಿಂದ ಸಮೃದ್ಧಿ ಎನ್ನುವ ಘೋಷವಾಕ್ಯದೊಂದಿಗೆ ಸಹಕಾರ ಸಚಿವಾಲಯವನ್ನು ರಚಿಸಿರುವ ಕೇಂದ್ರ ಸರ್ಕಾರಕ್ಕೆ ಸಹಕಾರಿಗಳ ಪರವಾಗಿ ಧನ್ಯವಾದವನ್ನು ತಿಳಿಸುತ್ತೇನೆ ಎಂದು ಸಹಕಾರ ಭಾರತಿಯ ಕರ್ನಾಟಕದ ರಾಜ್ಯಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು. ಅವರು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೊಷ್ಟಿ ನಡೆಸಿ ಮಾತನಾಡಿ ನಮ್ಮ
ಮಂಗಳೂರು ನಗರದಾದ್ಯಂತ ಸ್ಮಾರ್ಟ್‍ಸಿಟಿ ಕಾಮಗಾರಿ ನಡೆಯುತ್ತಿದ್ದು ನಗರದ ಡೊಂಗರಕೇರಿ ಕಟ್ಟೆಯ ಬಳಿ ಕಾಮಗಾರಿಯನ್ನು ನಡೆಸುತ್ತಿರುವ ಸಂದರ್ಭ ಪುರಾತನ ಬಾವಿಯೊಂದು ಪತ್ತೆಯಾಗಿದೆ. ನಗರದ ಅಲ್ಲಿಲ್ಲಿ ಕಾಮಗಾರಿ ವೇಳೆ ಬಾವಿ ಪತ್ತೆಯಾಗುತ್ತಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ನಗರದ ಡೊಂಗರಕೇರಿ ಕಟ್ಟೆಯ ಬಳಿ ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ರಸ್ತೆ ಫುಟ್‍ಬಾತ್ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ವೇಳೆ ಪುರಾತನ ಬಾವಿ ಪತ್ತೆಯಾಗಿದ್ದು, ತಕ್ಷಣ ಮಹಾನಗರ ಪಾಲಿಕೆ
ಸೇತುವೆಯೆಂದರೆ ಕೇವಲ ಎರಡು ಊರಿನ ಸಂಪರ್ಕದ ಕೊಂಡಿ ಮಾತ್ರವಲ್ಲ ಎರಡು ಊರಿನ ಜನರ ಸಂಬಂಧದ ಕೊಂಡಿ. ಮರವೂರು ಸೇತುವೆ ಕುಸಿತದಿಂದ ಎರಡು ಊರಿನ ಸಂಪರ್ಕ ಕಳೆದುಕೊಂಡು 3 ವಾರಗಳು ಕಳೆದಿವೆ. ಆದರೆ ಇದರ ದುರಸ್ತಿ ಕಾರ್ಯ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿದೆ ಈ ಬಗ್ಗೆ ಸ್ಪೆಷಲ್ ರಿಪೋರ್ಟ್. ಮರವೂರು ಸೇತುವೆ ಕುಸಿತವಾಗಿ ಸುಮಾರು 3 ವಾರಗಳು ಕಳೆದಿವೆ. ಸಂಪೂರ್ಣ ಎರಡು ಕಡೆಯ ಸಂಪರ್ಕ ಕಳೆದುಕೊಂಡಿದೆ. ಕಾರಣಗಳ ಕುರಿತು
ಅದು ಬರೋಬರಿ 13.5 ರೂ ಕೋಟಿ ವೆಚ್ಚದಲ್ಲಿ ನಡೆದ ಮಾರ್ಕೇಟ್….. ಉದ್ಘಾಟನೆಗೊಂಡು 3 ವರ್ಷ ಕಳೆದರೂ , ವ್ಯಾಪಾರಕ್ಕಾಗಿ ಗ್ರಾಹಕರಿಗೆ ಬಿಟ್ಟುಕೊಟ್ಟಿಲ್ಲ…. ಬೀಕೋ ಎನ್ನುತ್ತಿರುವ ಕಟ್ಟಡ… ಹಾಗಾದ್ರೆ ಅದು ಯಾವ ಮಾರುಕಟ್ಟೆ ಅಂತೀರಾ ಇಲ್ಲಿದೆ ಸ್ಟೋರಿ… 2019ರ ಜೂನ್ 28ರಂದು ಮಂಗಳೂರಿನ ಉರ್ವನಲ್ಲಿ ನಿರ್ಮಾಣಗೊಂಡ ಮಾರ್ಕೇಟ್…..ಉದ್ಘಾಟನೆಗೊಂಡ ಬಳಿಕ ಮಳಿಗೆಗಳನ್ನು ಏಲಂ ಮಾಡದೇ ಬಿಕೋ ಎನ್ನುತ್ತಿರುವ ಕಟ್ಟಡ….. ಹೌದು ಮಂಗಳೂರು
ಉಡುಪಿ: ಕಾರ್ಮಿಕರ ಹೆಸರಲ್ಲಿ ನೀಡಲಾದ ಆಹಾರ ಕಿಟ್ ಅವ್ಯವಹಾರ ತನಿಖೆಗೆ ಅಗ್ರಹಿಸಿ ಹಾಗೂ ತೈಲ ಬೆಲೆ ಏರಿಕೆ ವಿರೋಧಿಸಿ ಉಡುಪಿಯಲ್ಲಿ ಸಿಐಟಿಯು ಕಾರ್ಮಿಕ ಸಂಘಟನೆ ಪ್ರತಿಭಟನೆ ನಡೆಸಿದರು. ಕೊವಿಡ್ ಸಂಕಷ್ಟ ಕಾಲದಲ್ಲಿ ಕಾರ್ಮಿಕರ ಹೆಸರಲ್ಲಿ ಬಿಡುಗಡೆಗೊಂಡ ಆಹಾರ ಕಿಟ್ ಖರೀದಿಯಲ್ಲಿ ಭಾರೀ ನಡೆದಿರುವ ಅವ್ಯಹಾರ ತನಿಖೆ ನಡೆಸುವ ಜೊತೆಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಉಡುಪಿ ತಾಲೂಕು ಕಚೇರಿ ಎದುರುಗಡೆ ಸಿಐಟಿಯು ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಬೆಟ್ಟು-ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನ ಸಂಪರ್ಕಿಸುವ ಮಣ್ಣಿನ ರಸ್ತೆ ಪ್ರಥಮ ಮಳೆಗೆ ಸಂಪೂರ್ಣ ಹದಗೆಟ್ಟು ಕೆಸರುಗದ್ದೆಯಾಗಿ ಪರಿವರ್ತನೆಯಾಗಿದೆ.ಈಗಾಗಲೇ ಕಿರಿದಾಗಿರುವ ಈ ರಸ್ತೆಯು ಬೇಸಿಗೆಯಲ್ಲಿ ಧೂಳು ತುಂಬಿಕೊಂಡರೆ ಮಳೆಗಾಲದಲ್ಲಿ ಕೆಸರುಮಯಗೊಂಡು ಪಾದಚಾರಿಗಳಿಗೆ ನಡೆದಾಡಲು ಕೂಡ ಅಸಾಧ್ಯವಾಗಿದೆ. ಇದೇ ಪರಿಸರದಲ್ಲಿ ಕಾರಣಿಕ ಪ್ರಸಿದ್ಧ ಗಾಯತ್ರಿ ದೇವಿ ದೇವಸ್ಥಾನವೂ ಇದೆ. ವಗ್ಗ
ಕುಂದಾಪುರ: ಕೆಆರ್‌ಎಸ್ ಅಣೆಕಟ್ಟಿನ ಮಾಮೂಲಿ ನಿರ್ವಹಣೆಯ ಕಾಮಗಾರಿಗಾಗಿ ಹಣ ಬಿಡುಗಡೆ ಆಗಿರಬಹುದು. ಬಿರುಕು ಹಾಗೂ ಇನ್ನಿತರ ತಾಂತ್ರಿಕ ಮಾಹಿತಿಗಳನ್ನು ನೀಡಲು ಪರಿಣಿತ ತಾಂತ್ರಿಕ ತಜ್ಙರ ವಿಭಾಗವೇ ಇದೆ. ಅವರ ವರದಿ ಹಾಗೂ ಸಲಹೆ ಆಧಾರದಲ್ಲಿಯೇ ಕಾಮಗಾರಿಗಳು ನಡೆಯುತ್ತದೆ. ಸುಮ್ಮನೆ ಜನರಿಗೆ ಆತಂಕ ಮೂಡಿಸುವುದು ಹಾಗೂ ಪ್ರಚಾರಕ್ಕಾಗಿ ಹೇಳಿಕೆ ನೀಡುವುದನ್ನು ಎಲ್ಲರೂ ನಿಲ್ಲಿಸುವುದು ಸೂಕ್ತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು. ಅವರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಮತ್ತು ಪಿಲಿಕುಳದಲ್ಲಿರುವ ಟರ್ಶಿಯರಿ ಟ್ರೀಟ್ ಮೆಂಟ್ ಪ್ಲಾಂಟ್‍ಗೆ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಕಾರ್ಯಪಾಲಕ ಅಭಿಯಂತರ ಗುರುಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮೇಯರ್ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯೆ ನೀಡಿ,

















