Home Posts tagged V4News (Page 876)

ಪುಂಜಾಲಕಟ್ಟೆ ಹೆದ್ದಾರಿ ಅಗಲಿಕರಣ ವಿಚಾರ: ಸಿಗದ ಪರಿಹಾರ, ಪ್ರತಿಭಟನೆಯ ಎಚ್ಚರಿಕೆ

ಬಂಟ್ವಾಳ ಪುಂಜಾಲಕಟ್ಟೆ ಹೆದ್ದಾರಿ ಅಗಲಗೊಳ್ಳುವ ಕಾರ್ಯದ ಸಂದರ್ಭ ತಮ್ಮ ಜಮೀನು ಸ್ವಾಧೀನಪಡಿಸಿಕೊಂಡಿದ್ದರೂ ಇದುವರೆಗೂ ಪರಿಹಾರ ಬಾರದೇ ಇರುವ ಹಿನ್ನೆಲೆಯಲ್ಲಿ ಜುಲೈ ೨೦ರೊಳಗೆ ಈ ಕುರಿತು ಯಾವುದೇ ಪರಿಹಾರ ಬರದಿದ್ದರೆ ತಮ್ಮ ಜಮೀನಿಗೆ ಬೇಲಿ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಭೂಮಿ ಕಳೆದುಕೊಂಡವರು ನಾವೂರಿನಲ್ಲಿ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ

ಕೋವಿಡ್ ನಿಯಮ ಪಾಲಿಸಿಕೊಂಡು ದೇವರ ದರ್ಶನ ಪಡೆದ ಭಕ್ತಾದಿಗಳು

ಇಂದಿನಿಂದ ರಾಜ್ಯದಾದ್ಯಂತ ಬಹುತೇಕ ಲಾಕ್‌ಡೌನ್ ಸಡಿಲಿಕೆಯಾಗಿದೆ. ಎರಡು ತಿಂಗಳುಗಳಿಂದ ಭಕ್ತಾದಿಗಳಿಗೆ ಮುಚಿದ್ದ ದೇವಸ್ಥಾನಗಳು ತೆರೆದಿದ್ದು. ಕರಾವಳಿಯಲ್ಲಿ ವಿವಿಧ ದೇವಸ್ಥಾನಗಳಿಗೆ ಭಕ್ತ ಸಾಗರ ಹರಿದಿ ಬಂದಿದ್ದು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಸಮಾರು ಎರಡು ತಿಂಗಳುಗಳ ಕಾಲ ಲಾಕ್‌ಡೌನ್‌ನಿಂದಾಗಿದೆ ಭಕ್ತಾದಿಗಳಿಗೆ ಮುಚ್ಚಿದ್ದ ದೇವಸ್ಥಾನಗಳು ಇಂದು ತರೆದಿವೆ. ಸರ್ಕಾರದ ಆದೇಶದಂತೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು ಯಾವುದೇ ಸೇವೆಗಳಿಗೆ

ಮೂಡುಬಿದರೆಯಲ್ಲಿ ಎರಡು ತಿಂಗಳ ಬಳಿಕ ಬಸ್ ಸಂಚಾರ

ಎರಡು ತಿಂಗಳ ಲಾಕ್ ಡೌನ್ ಮುಗಿದು ಮೂಡುಬಿದಿರೆಯಲ್ಲಿ ಸೋಮವಾರದಂದು ಶೇ ೫೦ರಷ್ಟು ಖಾಸಗಿ ಬಸ್ಸುಗಳು ರಸ್ತೆಗಿಳಿದು ಓಡಾಟ ಆರಂಭಿಸಿದವು.ಖಾಸಗಿ ಬಸ್ಸುಗಳು ರಸ್ತೆಗಿಳಿದುದರಿಂದ ಜನರು ತಾವು ಹೋಗಬೇಕಾದ ಸ್ಥಳಗಳಿಗೆ ಬೆಳಗಿನಿಂದಲೇ ಬಸ್ಸುಗಳನ್ನು ಆಶ್ರಯಿಸಿದರು. ಲಾಕ್ ಡೌನ್ ಸಂದರ್ಭದಲ್ಲಿ ಖಾಸಗಿ ಬಸ್ಸು ತಂಗುದಾಣದ ಆವರಣದಲ್ಲಿ ಇತರ ವಾಹನಗಳು ಬಂದು ನಿಲ್ಲುತ್ತಿದ್ದವು. ಅದರಂತೆ ಸೋಮವಾರವು ಕೂಡಾ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಬಸ್ಸು ನಿಲ್ದಾಣದ

ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಕೋವಿಡ್ ಲಸಿಕೆ ಶಿಬಿರ

ಮಂಗಳೂರು: ನಗರದ ಶ್ರೀನಿವಾಸ್ ವಿಶ್ವವಿದ್ಯಾಲಯ, ಸಿಟಿ ಕ್ಯಾಂಪಸ್ ಪಾಂಡೇಶ್ವರದಲ್ಲಿ ದ.ಕ. ಜಿಲ್ಲಾ ಆರೋಗ್ಯ ಕೇಂದ್ರ, ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ, ಕ್ಯಾಂಪಸ್‌ನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಭೋದಕೇತರ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡುವ ಶಿಬಿರ ಜರಗಿತು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್ ಕೋವಿಡ್ ವಾರಿಯರ್ಸ್‌ಗಳನ್ನು ಈ ಸಂದರ್ಭ ಅಭಿನಂದಿಸಿದರು. ಈ ಸಂದರ್ಭ ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ

ಕೆಎಟಿ ತೀರ್ಪು ಹಿನ್ನೆಲೆ: ಮುಂಬಡ್ತಿ ಶಿಕ್ಷಕರ ಹಿತ ಕಾಪಾಡಲು ಆಗ್ರಹ: ಸಚಿವರು, ಶಾಸಕರಿಗೆ ಶಿಕ್ಷಕರ ಸಂಘದಿಂದ ಮನವಿ

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನಡುವಿನ ಮುಂಬಡ್ತಿ ಗೊಂದಲ ಹೊಸ ತಿರುವು ಪಡೆದುಕೊಂಡಿದೆ. ಈಗಾಗಲೇ ಮುಂಬಡ್ತಿ ಪಡೆದಿರುವ ಗ್ರೇಡ್ 2 ಪ್ರೌಢ ಶಾಲಾ ಶಿಕ್ಷಕರ ಹಿತವನ್ನು ಕಾಪಾಡಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬಡ್ತಿ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ಅಭಿಯಾನ ಆರಂಭಿಸಿದೆ. ಶಿಕ್ಷಕರ ಹಿಂಭಡ್ತಿ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರ ಮತ್ತು ಇಲಾಖೆಯ ಮೇಲೆ ಒತ್ತಡ ಹೇರುವಂತೆ ಸಂಘ ಮುಂದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉಸ್ತುವಾರಿ

ಪುತ್ತೂರಿನ ನೈತ್ತಾಡಿಯ ಕಲ್ಲಗುಡ್ಡೆಯಲ್ಲಿ ಅಕ್ರಮ ಮದ್ಯ ಮಾರಾಟ: ಭಾರಿ ಪ್ರಮಾಣದ ಮದ್ಯ ವಶ 

ಪುತ್ತೂರು: ಮನೆಯ ಸಮೀಪದ ಗುಡ್ಡೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಕೆಮ್ಮಿಂಜೆಯ ನೈತ್ತಾಡಿಯ ಕಲ್ಲಗುಡ್ಡೆ ಎಂಬಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದು, ರೂ. 26,118 ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ  ನಡೆದಿದೆ. ಕೆಮ್ಮಿಂಜೆ ಗ್ರಾಮದ ನೈತಾಡಿ ದಿ.ಬಟ್ಯಪ್ಪ ಪೂಜಾರಿ ಅವರ ಪುತ್ರ ಬಾಬು ಪೂಜಾರಿ(48ವ) ಮತ್ತು ಕಲ್ಲಗುಡ್ಡೆ ನಿವಾಸಿ ಚಲ್ಲ ಎಂಬವರ ಪುತ್ರ

ಸಂಪ್ಯದಲ್ಲಿ ನೇಗಿಲು ಹಿಡಿದು ಉಳುಮೆ ಮಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು

ಪುತ್ತೂರು: ಪೊರ್ತು ಕಂತ್ಂಡ್ ಓ ಎರು ಮಗನೇ…ಇದು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪಕ್ಕದಲ್ಲೇ ಹಡೀಲು ಬಿದ್ದ ಗದ್ದೆಯಲ್ಲಿ ಭಾನುವಾರ ಕೇಳಿಬಂದ ಸಂಧಿಯ ಕೆಲವು ಸಾಲು.ಶಾಸಕ ಸಂಜೀವ ಮಠಂದೂರು ಅವರು ಉಟ್ಟಿದ್ದ ಪಂಚೆಯನ್ನು ಎತ್ತಿಕಟ್ಟಿ, ಗದ್ದೆಗೆ ಇಳಿದು, ಎತ್ತುಗಳನ್ನು ಕಟ್ಟಿದ್ದ ನೇಗಿಲನ್ನು ಕೈಗೆ ತೆಗೆದುಕೊಳ್ಳುತ್ತಿದ್ದಂತೆ, ಉಳುಮೆ ಮಾಡುತ್ತಿದ್ದ ಬೇಸಾಯಗಾರರ ಉತ್ಸಾಹ ನೂರ್ಮಡಿಗೊಂಡಿತು. ಸಂಧಿಯ ಸಾಲುಗಳು ಪುಂಖಾನು ಪುಂಖವಾಗಿ ಗದ್ದೆಯ ತುಂಬಾ

ನಾಳೆಯಿಂದ ದೇಗುಲ ಓಪನ್: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸ್ಯಾನಿಟೈಸೇಷನ್ ಕಾರ್ಯ

ರಾಜ್ಯದ್ಯಾಂತ ಜುಲೈ 5ರಿಂದ ಅನ್‌ಲಾಕ್ 3.0 ಜಾರಿಯಲ್ಲಿರಲಿದ್ದು, ದೇವಾಲಯಗಳು ನಾಳೆಯಿಂದ ಓಪನ್ ಆಗಲಿದ್ದು, ಭಕ್ತರ ದರುಶನಕ್ಕೆ ಅವಕಾಶವನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಪೂರ್ಣ ಸ್ಯಾನಿಟೈಸೇಷನ್ ಕಾರ್ಯ ಮಾಡಲಾಗುತ್ತಿದೆ. ದೇವಸ್ಥಾನದ ಒಳಾಂಗಣ, ಹೊರಾಂಗಣ, ಅನ್ನಛತ್ರ, ವಸ್ತು ಸಂಗ್ರಹಾಲಯದಲ್ಲಿ ದೇವಳದ ಸಿಬ್ಬಂದಿಯಿಂದ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ನಾಳೆಯಿಂದ ಶ್ರೀ ಕ್ಷೇತ್ರ

ಕೊಳ್ನಾಡಿನಲ್ಲಿ ಯುವಕನೊರ್ವನಿಗೆ ನಾಲ್ವರ ತಂಡದಿಂದ ಹಲ್ಲೆ

ವಿಟ್ಲ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನಿಗೆ ನಾಲ್ವರ ತಂಡ ಹಲ್ಲೆ ನಡೆಸಿ, ಚೂರಿಯಿಂದ ಇರಿದು ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಸಂಭವಿಸಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳ್ನಾಡು ಗ್ರಾಮದ ಕಾಡುಮಠ ನಿವಾಸಿ ಅಬ್ದುಲ್ ಹ್ಯಾರಿಸ್ (29) ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಾಡುಮಠ ನಿವಾಸಿಗಳಾದ ಅವಿನಾಶ್, ವಿನೀತ್, ದಿನೇಶ್, ಮತ್ತೊಬ್ಬ ಅಪರಿಚಿತ

ವಂ.ಡಾ. ಜಾನ್ ಫೆರ್ನಾಂಡಿಸ್ ನಿಧನ

ಮಂಗಳೂರು: ಧರ್ಮ ಸಮನ್ವಯ ಹಾಗೂ ಅಂತರ್ಧರ್ಮೀಯ ಸಂವಾದದ ಹರಿಕಾರ ವಂ. ಡಾ.ಜಾನ್ ಫೆರ್ನಾಂಡಿಸ್ (85) ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. 1936ರಲ್ಲಿ ಉದ್ಯಾವರದಲ್ಲಿ ಜನಿಸಿದ ಇವರು, 1963ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದರು. ಬಿಜೈ ಮತ್ತು ರೊಸಾರಿಯೊ ಧರ್ಮಕೇಂದ್ರಗಳಲ್ಲಿ ಸಹಾಯಕ ಗುರುಗಳಾಗಿ ಹಾಗೂ ಹೊಸಬೆಟ್ಟು (ಮೂಡುಬಿದಿರೆ), ಕಟಪಾಡಿ ಹಾಗೂ ಬೆಳ್ಮಣ್ ಚರ್ಚ್‌ಗಳಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದರು.