Home Posts tagged V4News (Page 884)

ಮಂಗಳೂರು : ಬಿಜೆಪಿ ಸರ್ಕಾರ ಲಸಿಕೆ ಮಾರಾಟ ವಿರೋಧಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲಾ ಕೋವಿಡ್ ಹೆಲ್ಪ್‌ಲೈನ್‌ನ ವತಿಯಿಂದ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯ ಹತ್ತಿರ ಬಿಜೆಪಿ ಸರಕಾರದ ಎಲ್ಲರಿಗೂ ಉಚಿತ ಲಸಿಕೆ ಎಂಬ ಜಾಹೀರಾತು ಹಾಕಿದ ಹೋಲ್ಡಿಂಗ್ ನ ಮುಂಭಾಗ, ಬಿಜೆಪಿ ಸರಕಾರ ಲಸಿಕೆ ಮಾರಾಟ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು. ನಗರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ

ಬೈಂದೂರಿನ ನಾಡಾ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ

ಬೈಂದೂರು ತಾಲೂಕು ನಾಡ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾಥಮಿಕ ಶಾಲೆ ಹೆಮ್ಮುಂಜೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಲಸಿಕೆ ಹಾಕಿಸಿಕೊಳ್ಳಲು ದೂರದಿಂದ ಬರಲು ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ವ್ಯಕ್ತಿಗಳಿಗೆ ಲಸಿಕೆ ದೊರಕುವಂತೆ ಮಾಡುವಲ್ಲಿ ಪಂಚಾಯತ್ ಸಹಯೋಗದೊಂದಿಗೆ ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ನೀಡುವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಲಸಿಕೆ ನೀಡುವುದರೊಂದಿಗೆ ಲಸಿಕೆ ಮಹತ್ವವನ್ನು ತಿಳಿಸಿದರು. ನಾಡಾ

ಮಣಿಪಾಲದಲ್ಲಿ ಸಿಲಿಂಡರ್ ಸ್ಪೋಟ

ಅಡುಗೆಗೆ ಬಳಸುವ ಸಿಲಿಂಡರ್ ಸ್ಪೋಟಗೊಂಡ ಘಟನೆ ಮಣಿಪಾಲದ ಸೋನಿಯಾ ಕ್ಲಿನಿಕ್ ಬಳಿ ನಡೆದಿದೆ. ಮನೆಗೆ ಬಳಸುವ ಸಿಲಿಂಡರ್‌ನಲ್ಲಿ ಅಡುಗೆ ಅನಿಲ ಸೋರುತ್ತಿರುವುದು ಮನೆಯವರ ಗಮನಕ್ಕೆ ಬಂದಿದ್ದು, ಅದನ್ನು ತಡೆಯುವ ಪ್ರಯತ್ನ ಮಾಡಿದರೂ ಸಫಲವಾಗದೇ ಸಿಲಿಂಡರ್ ಸ್ಪೋಟಗೊಂಡಿದೆ. ಅದೃಷ್ಟವಶತ್ ಮನೆಯವರು ಹೊರ ಓಡಿದ್ದು ಅಡುಗೆ ಮನೆಯ ಮೇಲ್ಚಾವಣೆಗಳು ಸ್ಪೋಟದ ರಭಸಕ್ಕೆ ಹಾರಿ ಹೋಗಿವೆ. ಅಡುಗೆ ಕೋಣೆಯೊಳಗಡೆಯೂ ಹಾನಿ ಉಂಟಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ತಂಡ ತಕ್ಷಣ ತಲುಪಿ

ವಾಪಸ್ ಬಂದರೆ ಕ್ಷಮೆ ಇದೆ: ಬರಲಿಲ್ಲ ಅಂದ್ರೆ ನೋಟಿಸ್ ಕೊಡ್ತೀವಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ 

ಹಾಸನ: ಅಭಿವೃದ್ಧಿ ವಿಚಾರದಲ್ಲಿ ಹಾಗೂ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಇದರ ಜೊತೆಗೆ ಅರಸೀಕೆರೆಯ ಮಾಜಿ ನಗರಸಭಾ ಅಧ್ಯಕ್ಷ ಸಮೀವುಲ್ಲಾ ತೊಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ನೀಡಿ ಆಪರೇಷನ್ ಕಮಲಕ್ಕೆ ಸಿಲುಕಿ ಪಕ್ಷಾಂತರ ಮಾಡಿದ ಏಳು ಮಂದಿಗೆ ಈಗ ಜೆಡಿಎಸ್ ಪಕ್ಷ ವಿರೋಧಿ ಚಟುವಟಿಕೆಯ ಆಧಾರದ ಮೇಲೆ ನೋಟಿಸ್ ಜಾರಿ ಮಾಡಲು ಮುಂದಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.   ಅವರು ಹಾಸನದಲ್ಲಿ ಸುದ್ದಿಗೋಷ್ಠಿ

ಪತ್ರಕರ್ತರಿಗೆ, ಕುಟುಂಬ ಸದಸ್ಯರಿಗೆ ಲಸಿಕಾ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾಡಳಿತದ ವತಿಯಿಂದ ಪತ್ರಕರ್ತರಿಗೆ ಮತ್ತು ಪತ್ರಕರ್ತರ ಕುಟುಂಬ ಸದಸ್ಯರಿಗೆ ಕೋವಿಶಿಲ್ಡ್ ಲಸಿಕೆ ನೀಡುವ ಶಿಬಿರ ಬುಧವಾರ ಉರ್ವದ ಪತ್ರಿಕಾ ಭವನದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಎಲ್ಲರೂ ಕೋವಿಡ್ ನಿರೋಧಕ ಲಸಿಕೆಯನ್ನು ಪಡೆದುಕೊಳ್ಳಬೇಕು. ಲಸಿಕೆ

ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ ಯುಜಿಸಿಯಿಂದ ಹೊಸ ಸ್ವಾಯತ್ತ ಸ್ಥಾನಮಾನ

ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ 2021-22ರ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಹೊಸ ಸ್ವಾಯತ್ತ ಸ್ಥಾನಮಾನವನ್ನು ನೀಡಲಾಗಿದೆ. ಕಾಲೇಜಿಗೆ 2018ರ ಸ್ವಾಯತ್ತ ಕಾಲೇಜುಗಳ ಯೋಜನೆಯ ಅಡಿಯಲ್ಲಿ ಯುಜಿಸಿ ನೀಡಿದ ಸ್ವಾಯತ್ತತೆಯನ್ನು 2019ರಲ್ಲಿ ಕಾಲೇಜು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅನುಮೋದನೆ ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ರಿಯೋ ಡಿಸೋಜಾ ಹೇಳಿದರು ಕಾಲೇಜಿಗೆ 2018ರ

ಬೈಕಂಪಾಡಿಯಲ್ಲಿ ಮೀನುಗಾರರಿಗೆ ಕೋವಿಡ್ ಲಸಿಕೆ ಕಾರ್ಯಕ್ರಮ

ಬೈಕಂಪಾಡಿ ವಿದ್ಯಾರ್ಥಿ ಸಂಘ, ನಾಡದೋಣಿ ಮೀನುಗಾರರ ಸಂಘ, ರೆಡ್ ಕ್ರಾಸ್ ಸಂಸ್ಥೆ ಇದರ ಜಂಟಿ ಸಹಯೋಗದಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಬೈಕಂಪಾಡಿ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಬುಧವಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಪೋರೇಟರ್ ಸುಮಿತ್ರಾ ಕರಿಯ, ಪಾಲಿಕೆ ನಾಮ ನಿರ್ದೇಶಿತ ಸದಸ್ಯರಾದ ರಾಜೇಶ್ ಬೈಕಂಪಾಡಿ, ರೆಡ್ ಕ್ರಾಸ್ ರಾಜ್ಯ

SU College of Management and Commerce Activities

Srinivas University, College of Management & Commerce organizes online job fair program, professsional resume writing training, competitive exam training and  interview training workshops for students who will be completing their degree soon and making them future ready Keeping in mind the need to have students who are equipped with all skills for getting good

ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಇತ್ಯರ್ಥವಾಗಲಿದೆ, ಅವರು ಸಚಿವರಾಗುತ್ತಾರೆ : ಅಥಣಿ ಶಾಸಕ ಮಹೇಶ ಕುಮಟಳ್ಳಿ ಹೇಳಿಕೆ

ಶಾಸಕ ರಮೇಶ ಜಾರಕಿಹೋಳಿ ಸಿಡಿ ಕೇಸ ಬೇಗ ಇತ್ಯರ್ಥವಾಗಲಿದೆ ಮತ್ತೆ ಅವರು ಸಚಿವರಾಗುತ್ತಾರೆ ಎಂದು ಕರ್ನಾಟಕ ಕೋಳಗೇರಿ ಮಂಡಳಿ ಅದ್ಯಕ್ಷರು ಮತ್ತು ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಭರಮಖೋಡಿ ಗ್ರಾಮದಲ್ಲಿ ಸುಮಾರು ಐವತ್ತು ಲಕ್ಷ ರಸ್ತೆ ಸುಧಾರಣೆ ಕಾಮಗಾರಿ ಮತ್ತು ಅಥಣಿ ಸೀಡ್ ಪಾರ್ಮ ಸುಮಾರು ಹನ್ನೊಂದು ಲಕ್ಷ ರೂಪಾಯಿ ಒಂದು ಪ್ರಾಥಮಿಕ ಶಾಲಾ ಕೊಠಡಿ ಗುದ್ದಲಿ ಪೂಜೆ ನೆರವೇರಿಸಿ ಮಾದ್ಯಮದರೊಂದಿಗೆ ಮಾತನಾಡಿದರು.

ಪಡುಬಿದ್ರಿಯಲ್ಲಿ ತೀವ್ರಗೊಂಡ ಕಡಲು ಕೊರೆತ

ಪಡುಬಿದ್ರಿ ಕಾಡಿಪಟ್ಣ ಪ್ರದೇಶದಲ್ಲಿ ಕಡಲು ಕೊರೆತ ತೀವ್ರ ಗೊಂಡಿದ್ದು ಈ ಪ್ರದೇಶದ ಹತ್ತಾರು ತೆಂಗಿನ ಮರಗಳು ಸಹಿತ ಪ್ರವಾಸೋದ್ಯಮ ಇಲಾಖೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಕಾಮಗಾರಿ ಕಡಲ ಒಡಲು ಸೇರಲು ಸನ್ನದ್ಧ ವಾಗಿದೆ. ಸ್ಥಳೀಯರ ಮಾತಿನ ಪ್ರಕಾರ ತಡೆಗೋಡೆ ನಿರ್ಮಾಣ ಪ್ರದೇಶದ ತೀರದಲ್ಲಿ ಕಡಲು ಕೊರೆತ ಸರ್ವೇಸಾಮಾನ್ಯ, ಇದೀಗ ಪಕ್ಕದಲ್ಲಿ ಬಂಡೆ ಕಲ್ಲುಗಳಿಂದ ತಡೆಗೋಡೆ ನಿರ್ಮಾಣವಾಗಿದ್ದು ಈ ಭಾಗದಲ್ಲೂ ತಡೆಗೋಡೆ ನಿರ್ಮಿಸುವಂತೆ ಈ ಭಾಗದ ಶಾಸಕರ ಗಮನಕ್ಕೆ