Home Posts tagged V4News (Page 89)

ಮಂಗಳೂರು : ಕುಸಿದುಬಿದ್ದ ಆವರಣ ಗೋಡೆ – ಹಲವು ದ್ವಿಚಕ್ರ ವಾಹನಗಳು ಜಖಂ

ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ಕ್ಯೂಟ್ ಹೌಸ್ – ಬಿಜೈ ಬಳಿ ತಡರಾತ್ರಿ ಗುಡ್ಡ ಕುಸಿದು ರಸ್ತೆಗೆ ಬಿದ್ದು ಸಂಚಾರ ವ್ಯವಸ್ಥೆಗೆ ತೊಂದರೆ ಆಗಿದೆ. ನಗರದ ಮೇರಿಹಿಲ್ ಸಮೀಪದಲ್ಲಿ ತಡೆಗೋಡೆ ಕುಸಿದ ಪರಿಣಾಮ ಪಕ್ಕದಲ್ಲಿದ್ದ ಬೈಕ್ ಹಾಗೂ ಕಾರು ಜಖಂಗೊಂಡಿದೆ. ಸಮೀಪದಲ್ಲಿಯೇ

ಪುತ್ತೂರಿನ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : ಆರೋಪಿಗಳಿಗೆ ಹೈಕೋರ್ಟಿನಲ್ಲಿ ಹಿನ್ನಡೆ, ಜಾಮೀನು ಅರ್ಜಿ ವಜಾ

ಪುತ್ತೂರು : ಪುತ್ತೂರಿನಲ್ಲಿ ನಡೆದ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ಹೈಕೋರ್ಟ್ ನೀಡಿದೆ. ಎರಡನೇ ಬಾರಿಯೂ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ, ಆದೇಶಿಸಿದೆ. ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡದ ನಾಯಕ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳಾದ ಚೇತನ್, ಮನಿಷ್, ಕೇಶವ, ಮಂಜುನಾಥ್ ಅವರು ಎರಡನೇ ಬಾರಿ ಹೈಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್

ನಾಪತ್ತೆಯಾದ ಮೀನುಗಾರ ಪತ್ತೆಗೆ ತುರ್ತು ಕ್ರಮದ ಜತೆಗೆ ತುರ್ತು ಪರಿಹಾರದ ವ್ಯವಸ್ಥೆ: ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು: ಗಂಗೊಳ್ಳಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ದೋಣಿ ದುರಂತದಲ್ಲಿ ಒರ್ವ ಮೀನುಗಾರ ಅಪಾಯದಿಂದ ಪಾರಾಗಿದ್ದು ಮೂವರು ಮೀನುಗಾರರು‌ ನಾಪತ್ತೆಯಾಗಿರು ಮಾಹಿತಿ ತಿಳಿದು ಬಂದಿದೆ. ಕಾಣೆಯಾಗಿರುವ ಮೀನುಗಾರರ ಪತ್ತೆಗೆ ಅಗತ್ಯ ತುರ್ತು ಕ್ರಮಕ್ಕೆ ಈಗಾಗಲೇ ನಿರ್ದೇಶಿಸಲಾಗಿದೆ. ಮುಂದುರಿದು ಮೀನುಗಾರ ಕುಟುಂಬಕ್ಕೆ ಮೀನುಗಾರಿಕೆ ಇಲಾಖೆಯ ಸಂಕಷ್ಟ ಪರಿಹಾರ ನಿಧಿಯಡಿ ಅಗತ್ಯ ಪರಿಹಾರ ಒದಗಿಸಲು ಶಾಸಕರಾದ ಯಶ್ ಪಾಲ್ ಸುವರ್ಣ ಸಹಿತ ಜಿಲ್ಲೆಯ‌ ಶಾಸಕರ ಮೂಲಕ ಮೀನುಗಾರಿಕೆ

ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ನೂತನ ಕೊಠಡಿಗಳ ಉದ್ಘಾಟನೆ

ನೆಲ್ಯಾಡಿ: ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ನೈಜ ಪಠ್ಯವಸ್ತು ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆಯಬೇಕು. ಅತ್ಯಂತ ಪುರಾತನ ಹಾಗೂ ಸಂಸ್ಕಾರಯುತ ಭಾಷೆ ಸಂಸ್ಕೃತ, ಅದು ಮಾತ್ರವಲ್ಲದೆ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಗಳು ವಿಶ್ವದ ಮೌಲ್ಯಮಾಪನದ ದಿಕ್ಕು ತೋರಿಸುವಂತಹವು. ಇಂತಹ ಶಿಷ್ಟ ಹಾಗೂ ಆಧ್ಯಾತ್ಮಿಕ ಶಿಕ್ಷಣ ನೀಡುವ ಸಂಸ್ಥೆಗೆ ಮಕ್ಕಳನ್ನು ಕಳುಹಿಸುವುದರಿಂದ ಅವರು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುತ್ತಾರೆ ಎಂದು ಕರ್ನಾಟಕ

ಮೂಡುಬಿದಿರೆ : ಉಪನ್ಯಾಸಕರಿಬ್ಬರಿಂದ ವಿದ್ಯಾಥಿ೯ನಿಯ ಅತ್ಯಾಚಾರ

ಮೂಡುಬಿದಿರೆ : ಇಲ್ಲಿನ ಕಾಲೇಜೊಂದರ ಕಾಮುಕ ಉಪನ್ಯಾಸಕರಿಬ್ಬರು ಮತ್ತು ಅವರ ಸ್ನೇಹಿತನೋವ೯ ಸೇರಿಕೊಂಡು ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳನ್ನೂ ಅಲ್ಲಿನ ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯಾಲಜಿ ಉಪನ್ಯಾಸಕ ಸಂದೀಪ್ ಹಾಗೂ ಅವರ ಸ್ನೇಹಿತ ಅನೂಪ್ ಎಂಬವರೇ ಬಂಧಿತ ಆರೋಪಿಗಳು.ಉಪನ್ಯಾಸಕ ನರೇಂದ್ರ ನೋಟ್ಸ್

ಪುತ್ತೂರಿನ ಕನ್ನಡದ ಕಟ್ಟಾಳು ಸೀತಾರಾಮ ರೈ ಬನ್ನೂರು ನಿಧನ

ಪುತ್ತೂರು: ಪುತ್ತೂರಿನ ಕನ್ನಡದ ಕಟ್ಟಾಳು ಬನ್ನೂರು ನಿವಾಸಿ ಸೀತಾರಾಮ ರೈ ಬನ್ನೂರು(76ವ)ರವರು ಜು.15 ರಂದು ನಿಧನರಾದರು. ಪುತ್ತೂರಿನಲ್ಲಿ ಕನ್ನಡ ರಾಜ್ಯೋತ್ಸವ ಸಹಿತ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಭಾಗವಹಿಸುತ್ತಿದ್ದ ಸೀತಾರಾಮ ರೈ ಬನ್ನೂರು ಅವರು ಹೃದಯಾಘಾತಕ್ಕೊಳಗಾಗಿ ಹಲವು ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ಪುತ್ರಿ ರೋಜಾ, ಪುತ್ರರಾದ ಬ್ಲಾಕ್ ಕಾಂಗ್ರೆಸ್‌

ಸೌಹಾರ್ದತೆ ಬದುಕಿನ ಧ್ಯೇಯವಾಗಲಿ: ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ

ಮಂಗಳೂರು: ಸೌಹಾರ್ದತೆ ನಮ್ಮ ಬದುಕಿನ ಮೂಲ ಧ್ಯೇಯವಾಗಬೇಕು, ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳುವ ಸಂದರ್ಭದಲ್ಲಿ ಜಾತಿ, ಮತ ತಾರತಮ್ಯವನ್ನು ಮೀರಿ ನಿಂತು ಸಾಧನೆಯನ್ನು ಮಾಡಬೇಕು. ಸೌಹಾರ್ದತೆ ಅನ್ನುವುದು ನಮ್ಮ ನಾಡಿನ ಪರಂಪರೆಯಾಗಿದೆ, ಈ ಆಶಯದಂತೆ ಬದುಕು ರೂಪಿಸಿಕೊಳ್ಳುವುದು ಪ್ರತಿಯೊಬ್ಬರ ಜವಬ್ದಾರಿ ಆಗಿದೆ ಎಂದು ಖ್ಯಾತ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಅವರು ಹೇಳಿದರು. ಅವರು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ

ಮಾಧವ ಕೃಪಾ ಶಾಲೆ ಮತ್ತು ಶಾರದಾ ರೆಸಿಡೆನ್ಶಿಯಲ್ ಶಾಲೆಯಲ್ಲಿ ಯೋಗ ಸಮಾವೇಶ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಹಾಗೂ ಮಣಿಪಾಲ್‌ ಇಂಟೆಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್ (ಸಿ ಐ ಎಂ ಆರ್) ಕೇಂದ್ರದ ಯೋಗ ವಿಭಾಗವು ಮಾಧವ ಕೃಪಾ ಶಾಲೆ (ಎಂ ಕೆ ಎಸ್), ಮಣಿಪಾಲ ಮತ್ತು ಶಾರದಾ ರೆಸಿಡೆನ್ಷಿಯಲ್ ಶಾಲೆ (ಎಸ್ ಆರ್ ಎಸ್), ಕುಂಜಿಬೆಟ್ಟು, ಉಡುಪಿ ಇದರ ಸಹಯೋಗದಲ್ಲಿ, ಅಂತರಾಷ್ಟ್ರೀಯ ಯೋಗ ದಿನಾಚರಣೆ 2025 ರ ಭಾಗವಾಗಿ ಯೋಗ ಸಮಾವೇಶ ಎಂಬ ಸಮಗ್ರ ಕಾರ್ಯಕ್ರವನ್ನು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ

ಮಾಧವ ಕೃಪಾ ಶಾಲೆ ಮತ್ತು ಶಾರದಾ ರೆಸಿಡೆನ್ಶಿಯಲ್ ಶಾಲೆಯಲ್ಲಿ ಯೋಗ ಸಮಾವೇಶ

ಮಣಿಪಾಲ, ಜು. 3: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಹಾಗೂ ಮಣಿಪಾಲ್‌ ಇಂಟೆಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್ (ಸಿ ಐ ಎಂ ಆರ್) ಕೇಂದ್ರದ ಯೋಗ ವಿಭಾಗವು ಮಾಧವ ಕೃಪಾ ಶಾಲೆ (ಎಂ ಕೆ ಎಸ್), ಮಣಿಪಾಲ ಮತ್ತು ಶಾರದಾ ರೆಸಿಡೆನ್ಷಿಯಲ್ ಶಾಲೆ (ಎಸ್ ಆರ್ ಎಸ್), ಕುಂಜಿಬೆಟ್ಟು, ಉಡುಪಿ ಇದರ ಸಹಯೋಗದಲ್ಲಿ, ಅಂತರಾಷ್ಟ್ರೀಯ ಯೋಗ ದಿನಾಚರಣೆ 2025 ರ ಭಾಗವಾಗಿ ಯೋಗ ಸಮಾವೇಶ ಎಂಬ ಸಮಗ್ರ ಕಾರ್ಯಕ್ರವನ್ನು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ […]