ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯನ್ನು ಬಿಗಿಗೊಳಿಸಿರುವ ಮಂಗಳೂರು ಪೊಲೀಸರು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಒಮನ್ ಪ್ರಜೆ ಹಾಗೂ ಹಿಮಾಚಲ ಪ್ರದೇಶದ ಯುವಕನೊಬ್ಬನನ್ನು ಡ್ರಗ್ಸ್‌ನೊಂದಿಗೆ ಬಂಧಿಸಿದ್ದಾರೆ. ಬಂಧಿತ ಒಮನ್ ಪ್ರಜೆ ಅಹ್ಮದ್ ಮುಸಬಾ ಅಲ್ ಮಹಾಮಾನಿ (34) ಹಾಗೂ ಹಿಮಾಚಲ ಪ್ರದೇಶದ ರಾಮ್ (22) ಎಂದು ಗುರುತಿಸಲಾಗಿದೆ. ಈ ಮಧ್ಯೆ ನಗರದ ಹೊಟೇಲೊಂದರಲ್ಲಿ
ಮಳೆಯ ನಡುವೆಯೂ ತೈಲ ಬೆಲೆ ಏರಿಕೆಯನ್ನ ವಿರೋಧಿಸಿ, ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಹಾಗೂ ಕಾಂಗ್ರೆಸ್ ಮುಖಂಡ ವಿವೇಕ್ ರಾಜ್ ನೇತೃತ್ವದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಯಿತು. ನಗರದ ಕಾಂಗ್ರೆಸ್ ಕಚೇರಿಯಿಂದ ಮಲ್ಲಿಕಟ್ಟೆಯ ಪ್ರೆಟೋಲ್ ಬಂಕ್‌ನಲ್ಲಿ ಲಾರಿಗೆ ಡಿಸೇಲ್
ಮಂಗಳೂರಿನ ಕೂಳೂರು ಹಳೆ ಸೇತುವೆಯಲ್ಲಿ ಭಾರೀ ಗಾತ್ರದ ಹೊಂಡಗಳಲ್ಲಿ ಮಳೆ ನೀರು ನಿಂತು ವಾಹನ ಚಾಲಕರು ಪರದಾಡುವ ಜತೆಗೆ ಟ್ರಾಫಿಕ್ ಜಾಮ್ ಪರಿಸ್ಥಿತಿ ಉಂಟಾಗಿದೆ. ಮೈಕ್ರೋ ಟೆಕ್ನಾಲಜಿ ಮೂಲಕ ದುರಸ್ತಿ ಮಾಡಲಾದ ಕೂಳೂರು ಹಳೇ ಸೇತುವೆಯ ಇಕ್ಕೆಲಗಳಲ್ಲಿ ಇದೀಗ ಹೊಂಡ ಬೀಳಲಾರಂಭಿಸಿದೆ. ಡಾಮರು ತೇಪೆ ಹಾಕಿ ಒಂದೆರಡು ತಿಂಗಳು ಕಳೆಯುವುದರೊಳಗೆ ಒಂದೇ ಮಳೆಗೆ ಅಲ್ಲಲ್ಲಿ ಹೊಂಡ ಬಿದ್ದಿದ್ದು, ಸೋಮವಾರ ಮಳೆಯ ನಡುವೆ ಹೆದ್ದಾರಿ ಇಲಾಖೆ ತೇಪೆ ಹಾಕಲು ಮುಂದಾಗಿದ್ದು ಲಾಕ್ ಡೌನ್
ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನರವರು ಸಂತ ಆಂತೋನಿಯವರ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಸಂಭ್ರಮದ ಬಲಿಪೂಜೆ ಅರ್ಪಿಸಿದರು. ಬಿಶಪರು ತಮ್ಮ ಪ್ರವಚನದಲ್ಲಿ, ಸಂತ ಆಂತೋನಿಯವರು ಮೂವತ್ತಾರು ವರ್ಷದ ತಮ್ಮ ಅಲ್ಪ ಅವಧಿಯ ಜೀವನದಲ್ಲಿ ದೇವರ ರಾಜ್ಯಕ್ಕಾಗಿ ನಿರಂತರ ದುಡಿದರು. ಹಸಿವು, ಬಾಯಾರಿಕೆ ಮತ್ತು ದಣಿವೆನ್ನದೆ ಮೈಲುಗಟ್ಟಲೆ ಕಾಲ್ದಾರಿಯಲ್ಲಿ ನಡೆದು ಯೇಸುಸ್ವಾಮಿಯ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ನಗರದ ಬಲ್ಮಠದ ಪೆಟ್ರೋಲ್ ಪಂಪ್ ಬಳಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಜೆ.ಆರ್. ಲೋಬೊ ಅವರು, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪೆಟ್ರೋಲ್‌ಗೆ 1೦೦ ರೂ ಏರಿಕೆ ಕಂಡಿದೆ. ಇದು ಬಿಜೆಪಿ ಸರ್ಕಾರದ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಮಂಗಳೂರು ಪಾಲಿಕೆಯ ವಿಪಕ್ಷ ಸದಸ್ಯ
ಪುತ್ತೂರು: ಕೋಡಿಂಬಾಡಿ ಸಮೀಪದ ಸೇಡಿಯಾಪು ಬಳಿ ಬೃಹತ್ ಗಾತ್ರದ ಆಲದ ಮರವೊಂದು ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮರ ಬಿದ್ದ ಪರಿಣಾಮ ಪುತ್ತೂರು-ಉಪ್ಪಿನಂಗಡಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಮರ ಉರುಳಿ ಬಿದ್ದಿದ್ದು ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಸದಸ್ಯರು ಸಾರ್ವಜನಿಕರ ಸಹಕಾರದೊಂದಿಗೆ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದೇಶದಲ್ಲಿ ವ್ಯಾಪಕವಾಗಿ 100ರ ಗಡಿ ಸೇರಿರುವ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳದ ವಿರುದ್ಧ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಬಿ ಸಾಲ್ಯಾನ್ ರವರ ನೇತೃತ್ವದಲ್ಲಿ ಶನಿವಾರ ಮಂಗಳೂರಿನ ಲೇಡಿಹಿಲ್ ಪೆಟ್ರೋಲ್ ಬಂಕ್ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತಾಡಿದ ಮಾಜಿ ಶಾಸಕ ಜೆ.ಆರ್.ಲೋಬೋರವರು ಇತಿಹಾಸದಲ್ಲೇ ಪ್ರಥಮ ಬಾರಿಗೆ ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಆಗಿದೆ.ದೇಶದ ಜನರ ಈ ಸಂಕಷ್ಟಕ್ಕೆ ದೇಶದ
ಇಂಧನ ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ಹಮ್ಮಿಕೊಂಡಿರುವ 100ನೋಟ್ ಔಟ್ ಎನ್ನುವ ಪ್ರತಿಭಟನಾ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಕಾವು ಹೇಮನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ವಿನೂತನವಾಗಿ ನಡೆಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾವು ಹೇಮನಾಥ್ ಶೆಟ್ಟಿಯವರು ಮಾತಾಡಿ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೂಲಕ ಜನತೆಯ ಹಣವನ್ನು ಲೂಟಿಗೈಯ್ಯುತ್ತಿದೆ, ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ೧೪೦ ಡಾಲರ್ ಆಗಿದ್ದರೂ
ಪುತ್ತೂರು: ನಮ್ಮಲ್ಲಿಗೆ ಹಲವು ಸಂಸ್ಥೆಗಳ ಮೊಬೈಲ್ ನೆಟ್‌ವರ್ಕ್ಗಳು ಬಂದಿದ್ದರೂ ಅಷ್ಟೇ ವೇಗವಾಗಿ ಮಾಯವಾಗಿ ಹೋಗಿದೆ. ಇವೆಲ್ಲದರ ನಡುವೆ ಬಿಎಸ್‌ಎನ್‌ಎಲ್ ಸಂಸ್ಥೆಯ ಬಗ್ಗೆ ಜನರು ವಿಶ್ವಾಸವಿಟ್ಟು ಅದನ್ನು ಬಳಕೆ ಮಾಡುತ್ತಿದ್ದಾರೆ. ಜನರು ಬಿಎಸ್‌ಎನ್‌ಎಲ್ ಸಂಸ್ಥೆಯ ಬಗ್ಗೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು. ಅವರು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಸರ್ಕಾರಿ ಮತ್ತು ಖಾಸಗಿ ದೂರವಾಣಿ
ದಲಿತ ಕವಿ, ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯನವರಿಗೆ ಅಂತಿಮ ವಿದಾಯ ಹೇಳಲಾಗಿದೆ. ಬೆಂಗಳೂರಿನ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಿರಿಯ ಸಾಹಿತಿ, ಕವಿ ಡಾ.ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ರಾಷ್ಟ್ರಕವಿ ಪ್ರೊ. ಜಿ.ಎಸ್.ಶಿವರುದ್ರಪ್ಪ ಅವರ ಸಮಾಧಿ ಪಕ್ಕದಲ್ಲೇ ಡಾ.ಸಿದ್ದಲಿಂಗಯ್ಯನವರ ಅಂತ್ಯಸಂಸ್ಕಾರ ನಡೆಸಲಾಯಿತು. ಮೂರು ಸುತ್ತಿನ ಕುಶಾಲತೋಪು ಸಿಡಿಸಿ ಗೌರವ ನಮನ ಸಲ್ಲಿಸಲಾಯಿತು. ಬೌದ್ಧ ಧರ್ಮದ


















