Home Posts tagged V4News (Page 911)

ಸಾರ್ವಜನಿಕ ಸ್ಥಳದಕ್ಕೆ ತ್ಯಾಜ್ಯ ಎಸೆದವರ ವಿರುದ್ಧ ಕ್ರಮ : ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ

ಹೆದ್ದಾರಿ ಪಕ್ಕದಲ್ಲಿ ಕೋಳಿ ತ್ಯಾಜ್ಯ ಎಸೆದು, ಗ್ರಾಪಂ.ಗೆ ದಂಡ ಕಟ್ಟದಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಪ್ರಥಮ ಐದು ಸಾವಿರ ಮುಂದಿನ ಸಲ ಇಪ್ಪತ್ತೈದು ಸಾವಿರ ದಂಡ ವಿಧಿಸಿ ದಂಡ ಕಟ್ಟಲು ವಿಫಲವಾದರೆ ನನ್ನ ಗಮನಕ್ಕೆ ತನ್ನಿ ಎಂಬುದಾಗಿ ಉಡುಪಿ ಡಿ.ಸಿ. ಜಗದೀಶ್ ಹೆಜಮಾಡಿ ಗ್ರಾ.ಪಂ.ಅಧಿಕಾರಿಗಳಿಗೆ ಕಢಕ್ ಸೂಚನೆ ನೀಡಿದ್ದಾರೆ.  ಲಾಕ್‍ಡೌನ್ ಪರಿಸ್ಥಿಯನ್ನು

ಉಡುಪಿಯಲ್ಲಿ ಭಾರೀ ಮಳೆ: ನೀರಲ್ಲಿ ಮುಳುಗಿದ ಹತ್ತಾರು ಬೈಕ್, ಕಾರುಗಳು

ಉಡುಪಿಯಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆ ಸುರಿಯುತ್ತಿದ್ದು ಬಿಗ್ ಬಜಾರ್ ಪಾರ್ಕಿಂಗ್ ಪ್ರದೇಶಕ್ಕೆ ಮಳೆ ನೀರು ನುಗ್ಗಿದೆ. ಮಳೆ ನೀರಲ್ಲಿ ಹತ್ತಾರು ಬೈಕ್ ಕಾರುಗಳು ಮುಳುಗಿದ ಘಟನೆ ನಡೆದಿದೆ.   ನಿನ್ನೆ ತಡರಾತ್ರಿಯಿಂದ ಉಡುಪಿ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಬಿಗ್ ಬಜಾರ್ ಕಟ್ಟಡದ ಪಾರ್ಕಿಂಗ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಕಟ್ಟಡದ ನೆಲ ಮಳಿಗೆಗೆ ಮಳೆ ನೀರು ತುಂಬಿ ಕೊಂಡ ಪರಿಣಾಮ ಪಾರ್ಕಿಂಗ್ ಮಾಡಲಾಗಿದ್ದ,ಆರು

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 2 ಪರೀಕ್ಷೆ; ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

ಕೋವಿಡ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಕಲಿಕಾ ಮಟ್ಟ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಎಸ್.ಎಸ್.ಎಲ್. ಸಿ. ವಿದ್ಯಾರ್ಥಿಗಳಿಗೆ 2 ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಪಡಿಸಲಾಗಿದ್ದು, ಆದರೆ ಎಸ್.ಎಸ್.ಎಲ್.ಸಿ.ಗೆ ಈ ಬಾರಿ

ಅಥಣಿ ಪುರಸಭೆ ವತಿಯಿಂದ ಕೊರೊನಾ ಜಾಗೃತಿ

ಅಥಣಿ ಪಟ್ಟಣದ ಸಾರ್ವಜನಿಕರು ಸರಕಾರದ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ, ಕೋರೋನ ಬಗ್ಗೆ ಭಯಬೇಡ ಜಾಗೃತಿ ಇರಲಿ,ಎಂದು ಅಥಣಿ ಪುರಸಭೆ ಮುಖ್ಯಾಧಿಕಾರಿಗಳಾದ ಈರಣ್ಣ ದಡ್ಡಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಕೋರೋಣ ಒಂದನೇ ಅದಕ್ಕಿಂತಲೂ, ಎರಡನೇ ಅಲೆಯಿಂದಾಗಿ ಸಾಕಷ್ಟು ಸೋಂಕಿತರು ಸಾವನ್ನಪ್ಪಿದ್ದು, ಕೊರೋಣ ಬಗ್ಗೆ ಭಯಬೇಡ ಜಾಗೃತಿ ಇರಲಿ, ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಲ್ಲಿ ಇದ್ದು ,

ಎರ್ಮಾಳ್‍ನಲ್ಲಿ ಕೊರೋನಾ ವಾರಿಯರ್ಸ್‍ಗೆ ಕಿಟ್ ವಿತರಣೆ

ಕೊರೋನಾ ವೈರಾಣು ಸಮಸ್ಯೆಯಿಂದಾಗಿ ಅನಿವಾರ್ಯ ವಾಗಿ ಆದ ಲಾಕ್ ಡೌನ್ ನಿಂದ ತೊಂದರೆಗೆ ಸಿಲುಕಿದವರಲ್ಲಿ ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆ ಯರು ಮೊದಲಿಗರು, ಅವರ ಕಷ್ಟಗಳ ಗಳನ್ನು ಮನಗಂಡು ಅವರಿಗೆ ಆಹಾರ ಕಿಟ್ ನೀಡಿರುವುದು ಶ್ಲಾಘನೀಯ ಎಂಬುದಾಗಿ ಶಾಸಕ ಲಾಲಾಜಿ ಮೆಂಡನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.  ಅವರು ಎರ್ಮಾಳು ತೆಂಕ ಎಲ್ಲದಡಿ ಶಿವಪ್ರಸಾದ್ ಶೆಟ್ಟಿ ಮನೆಮಂದಿ ಕೊಡ ಮಾಡಿದ ಕಿಟ್ಟನ್ನು ವಿತರಿಸಿ ಮಾತನಾಡಿದರು. ಅನಿವಾರ್ಯ ಸ್ಥಿತಿ ಹೊರತು ಪಡಿಸಿ

ಅಜ್ಜಿಗೆ ಮನೆ ಕಟ್ಟಿ ಕೊಡಲು ಮುಂದಾದ : ಪೆರ್ಡೂರಿನ “ವಿ ಲವ್ ಹ್ಯೂಮನಿಟಿ ಯುವಕರ ತಂಡ

ಮುತ್ತಜ್ಜಿ ….ಮುಗ್ಗ ಮನಸ್ಸಿನ ಈ ಬಡ ಅಜ್ಜಿ ಉಡುಪಿಯ ಪೆರ್ಡೂರು ಬಳಿ ಪಾಡಿಗಾರದ ನಿವಾಸಿ.ಕಳೆದ ಇಪ್ಪತು ವರ್ಷಗಳಿಂದ ಅಜ್ಜಿ ಬದುಕುತ್ತಿರುವ ಮನೆಯನ್ನ ಕಂಡ್ರೆ… ನಿಜಕ್ಕೂ ನೀವು ಮರುಕ ಪಡ್ತೀರಾ.ನಾಲ್ಕು ಕಂಬಗಳಿಗೆ, ಸಿಮೆಂಟ್ ಶೀಟು ಹಾಕಿ, ತೆಂಗಿನ ಗರಿಗಳಿಂದ ಮುಚ್ಚಿದ ಈ ಹಳೆ ಸೂರಲ್ಲಿಯೇ ತನ್ನ ಬದುಕು ಕಳೆದಿದ್ದಾರೆ. ವಯಸ್ಸಾದ ಅಜ್ಜಿಗೆ ಹಿಂದು… ಮುಂದು ಅಂತಾ ಯಾರು ಇಲ್ಲ.ಇರುವ ಒಬ್ಬ ಮಗನೂ ಯಾವುದೇ ಪ್ರಯೋಜನಕ್ಕಿಲ್ಲ. ಪ್ರತಿ ಬಾರಿಯೂ ಬೀಸುವ

ವಿಜಯಪುರದ ಕನ್ನೋಳಿ ವಾಹನ ಚಾಲಕರಿಗೆ ಉಪಹಾರದ ವ್ಯವಸ್ಥೆ

ವಿಜಯಪುರ ಜಿಲ್ಲೆಯ ಕನ್ನೊಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಯಕರ್ನಾಟಕ ಸಂಘಟನೆ ವಾಹನ ಚಾಲಕರ ಘಟಕದ ಸಹಯೋಗದಲ್ಲಿ ಸತತವಾಗಿ ನಾಲ್ಕು ದಿನಗಳಿಂದ ಉಪಹಾರ ಸೇವೆ ಮಾಡುತ್ತಿದ್ದಾರೆ. ಕಾಶಿನಾಥ ಬಿರಾದಾರ ಎನ್ನುವರು ವಾಹನದ ಚಾಲಕನಾಗಿದ್ದು ಕಳೆದ ವಾರ ವಾಹನ ಚಲಾಯಿಸುವಾಗ ಊಟ ಸಿಗದೆ ಪರದಾಡಿ ತುಂಬಾ ಸಂಕಷ್ಟ ಅನುಭವಿಸಿದ್ದರು. ಆದರಿಂದ ಚಾಲಕರ ತೊಂದರೆಗೆ ಸ್ಪಂದಿಸುವ ಮನಸ್ಸಿಂದ ತಮಗಾದ ಊಟದ ತೊಂದರೆ ಬೇರೆ ಚಾಲಕರು ಅನುಭವಿಸಬಾರದು ಎಂದು ಸತತವಾಗಿ ನಾಲ್ಕು ದಿನದಿಂದ ತಮ್ಮ

ಮಿಶ್ರಬೆಳೆಗಳಿಗೆ ಆದ್ಯತೆ ನೀಡಿ-ಶಾಸಕ ಸಂಜೀವ ಮಠಂದೂರು

  ಪುತ್ತೂರು: ಕೊರೋನಾ ಸಂಕಷ್ಟದಲ್ಲಿ ವ್ಯಾಪಾರ ಕೈಗಾರಿಕೆಗಳು ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಕೃಷಿಕೆ ಒಲವು ತೋರಿಸಿದ್ದಾರೆ. ಅವರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಕೃಷಿ ಮತ್ತು ತೋಟಗಾರಿಕೆಯಲ್ಲಿ ಮಿಶ್ರ ಬೆಳೆಗಳಿಗೆ ಆದ್ಯತೆ ನೀಡಿ ಎಂದು ಶಾಸಕ ಸಂಜೀವ ಮಠಂದೂರು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಕೃಷಿ, ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ತಾ.ಪಂ ಕಿರು ಸಭಾಂಗಣದಲ್ಲಿ ನಡೆದ ಕೃಷಿ, ತೋಟಗಾರಿಕೆ,

ಮಂಜೇಶ್ವರದಲ್ಲಿ ಎಲ್‍ಡಿಎಫ್‍ನಿಂದ ಲಕ್ಷದ್ವೀಪ ಸಂರಕ್ಷಿಸಿ ಪ್ರತಿಭಟನೆ

ಮಂಜೇಶ್ವರ: ಲಕ್ಷದ್ವೀಪ ಸಂರಕ್ಷಿಸಿರಿ ಎಂಬ ಘೋಷಣೆಯನ್ನು ಮುಂದಿಟ್ಟುಕೊಂಡು ಎಲ್‍ಡಿಎಫ್ ಕೇರಳ ರಾಜ್ಯ ಸಮಿತಿಯ ಕರೆಯಂತೆ ಮಂಜೇಶ್ವರ ಪ್ರಧಾನ ಅಂಚೆ ಕಚೇರಿ ಮುಂದೆ ನಡೆದ ಧರಣ ಸತ್ಯಾಗ್ರಹವನ್ನು ಎಲ್‍ಡಿಎಫ್ ಮಂಜೇಶ್ವರ ಮಂಡಲ ಸಂಚಾಲಕ ಬಿವಿ.ರಾಜನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಫುಲ್ ಪಾಟೀಲ್ ಎಂಬ ಸಂಘ ಪರಿವಾರದ ಏಜಂಟನ್ನು ಮುಂದಿಟ್ಟು ಲಕ್ಷದ್ವೀಪ ಜನತೆಯೊಂದಿಗೆ ನಡೆಸುತ್ತಿರುವ ಯುದ್ಧವನ್ನು ಕೊನೆಗಾಣಿಸಬೇಕು, ಸ್ಥಳೀಯ ಜನರ ಜೀವನ ಶೈಲಿ ಹಾಗೂ ಲಕ್ಷ

ಬೆಳ್ತಂಗಡಿಯಲ್ಲಿ ಅಕ್ರಮ ಮರಳು ಅವ್ಯವಹಾರ ಸೂಕ್ತ ತನಿಖೆ : ವಸಂತ ಬಂಗೇರರಿಂದ ಡಿಸಿಗೆ ಮನವಿ

ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಮರಳು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಇದನ್ನು ಕೂಡಲೇ ತನಿಖೆ ಮಾಡುವಂತೆ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅವರು ಮಾಧ್ಯಮದ ಜೊತೆ ಮಾತನಾಡಿ ಬೆಳ್ತಂಗಡಿಯ ಧರ್ಮಸ್ಥಳ ಆಸು ಪಾಸು ದಿನಕ್ಕೆ ಸುಮಾರು 500 ಲೋಡಿಗಿಂತ ಅಧಿಕ ಮರಳು ಸಾಗಾಣಿಕೆ ಮೂಲಕ ಅನೇಕ ಅವ್ಯವಹಾರಗಳು ನಡೆಯುತ್ತಿದೆ. ಪರವಾನಿಗೆ ಇಲ್ಲದೆ ಮರಳು ಗಣಿಗಾರಿಕೆ ನಡೆಯುತ್ತಿದ್ದು ದೂರದ ಊರುಗಳಿಗೆ ಮರಳು ಸಾಗಣೆ