Home Posts tagged #v4newskarnataka (Page 15)

ಡಿ.4 : ಬಬ್ಬುಕಟ್ಟೆ ಸರಕಾರಿ ಶಾಲೆಯಲ್ಲಿ ಡೆನ್ನ ಡೆನ್ನಾನ – ಪದ ಪನ್ಕನ’ ಅಭಿಯಾನ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ವಿದ್ಯಾರ್ಥಿಗಳಲ್ಲಿ ತುಳು ಹಾಡುಗಳ ಅಭಿರುಚಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಗಾರ ಹಾಗೂ ಪ್ರಸ್ತುತಿ ‘ಡೆನ್ನ ಡೆನ್ನಾನ – ಪದ ಪನ್ಕನ’ ಕಾರ್ಯಕ್ರಮ ಉಳ್ಳಾಲ ತಾಲೂಕಿನ ಬಬ್ಬುಕಟ್ಟೆಯ ಸರಕಾರಿ ಪ್ರೌಢಶಾಲೆಯಲ್ಲಿ ಡಿ. 4 ರ ಅಪರಾಹ್ನ 3.00 ಗಂಟೆಗೆ ನಡೆಯಲಿದೆ.ಅಂತರಾಷ್ಟ್ರೀಯ ಖ್ಯಾತಿಯ

ಅಂತರಾಷ್ಟ್ರೀಯ ಮಟ್ಟದ ಕರಾಟೆ : ಪ್ರಶಾಂತ್ ಬಿ. ಶೆಟ್ಟಿಗೆ ಚಿನ್ನ, ಮುಬೀನತುಲ್ ಅಸ್ಮಿಯಾಗೆ ಬೆಳ್ಳಿ

ಮೂಡುಬಿದಿರೆ: ಮಹಾರಾಷ್ಟ್ರದ ಅಂಧೇರಿಯಲ್ಲಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಕಾಂಬ್ಯಾಕ್ಟ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಮೂಡುಬಿದಿರೆಯ ಕರಾಟೆಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಮೂಡುಬಿದಿರೆಯ ಪ್ರಶಾಂತ್ ಬಿ. ಶೆಟ್ಟಿ ಅವರು ಸೀನಿಯರ್ ಬ್ಲಾಕ್ ಬೆಲ್ಟ್ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಗಳಿಸಿದ್ದಾರೆ. ಮೂಡುಬಿದಿರೆಯ

ಕೃಷಿ ಬೆಂಬಲ ಬೆಲೆ ಹೆಚ್ಚಿಸಿ : ಪ್ರಧಾನಿಗೆ ಪತ್ರ ನೀಡಿದ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು, ನ.28: (ಕರ್ನಾಟಕ ವಾರ್ತೆ): ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಪತ್ರ ನೀಡಿದ್ದಾರೆ. ಮುಖ್ಯಮಂತ್ರಿ ಗಳ ಪರವಾಗಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಧಾನಿಗೆ ಮನವಿ ಪತ್ರ ನೀಡಿದರು. ಪ್ರಧಾನಿಗಳ ಮಂಗಳೂರು ಭೇಟಿ ಸಂದರ್ಭದಲ್ಲಿ ಅವರಿಗಾಗಿ ಮಾನ್ಯ

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ 4 ದಿನದ ಎರಡನೇ ವಿಶ್ವ ಆಯುರ್ವೇದ ಸಮ್ಮಿಲನ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ನ. 25ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ಡಿ. 25ರಿಂದ ನಡೆಯಲಿರುವ 4 ದಿನದ ಎರಡನೇ ವಿಶ್ವ ಆಯುರ್ವೇದ ಸಮ್ಮಿಲನದ ಅಂಗವಾಗಿ ಕಾಲೇಜಿನಲ್ಲಿ ಆಯುರ್ವೇದ ರಥವನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು. ಕಾಲೇಜಿನ ಅಕಾಡೆಮಿಕ್ ಕೋ ಆರ್ಡಿನೇಟರ್ ಡಾ. ಕವಿತಾ ಬಿ.ಎಂ ಇವರು ರಥಕ್ಕೆ ಹಾರ ಹಾಕುವ ಮೂಲಕ ಸ್ವಾಗತಿಸಿದರು. ಈ ಸಂಧರ್ಭದಲ್ಲಿ ಕಾಲೇಜಿನ ಎಲ್ಲಾ ವೈದ್ಯರುಗಳನ್ನು ಸನ್ಮಾನಿಸಿ

ನಾರ್ಲಪಡೀಲ್ ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೂ ದಂತ ಸಂರಕ್ಷಣಾ ಸಲಕರಣೆ ಮತ್ತು ಕ್ರೇಯನ್ಸ ವಿತರಣೆ

ಚೂಂತಾರು ಪ್ರತಿಷ್ಠಾನ ಮತ್ತು ಆರೋಗ್ಯ ಭಾರತಿಯ ಜಂಟಿ ಆಶ್ರಯದಲ್ಲಿ ಗುರುವಾರ ತಾ. 27.11.2025 ರಂದು ನಾರ್ಲಪಡೀಲ್ ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ ಜರಗಿತು. ಚೂಂತಾರು ಪ್ರತಿಷ್ಠಾನದ ಟ್ರಸ್ಟಿಗಳೂ ಆರೋಗ್ಯ ಭಾರತಿಯ ಜಿಲ್ಲಾ ಗೌರವಾಧ್ಯಕ್ಷರೂ ಆದ ಡಾ. ಮುರಲೀ ಮೋಹನ ಚೂಂತಾರು ಅವರು ಮಕ್ಕಳಿಗೆ ದಂತ ಆರೋಗ್ಯ ಸಂರಕ್ಷಣೆಯ ಮಾಹಿತಿಯನ್ನು ನೀಡಿದರು ಹಾಗೂ ಚೂಂತಾರು ಪ್ರತಿಷ್ಠಾನದ ವತಿಯಿಂದ ಶಾಲೆಯ ಎಲ್ಲ

ಡೈರಿ ವೃತ್ತದಲ್ಲಿ ಮಹಾನಗರ ಪಾಲಿಕೆ ಜೆಸಿಬಿ ಗರ್ಜನೆ – ಫುಟ್ಪಾತ್ ವ್ಯಾಪಾರಿಗಳಿಗೆ ದೊಡ್ಡ ಆಘಾತ

ಹಾಸನ– ನಗರದಲ್ಲಿ ಬುಧವಾರ ಬೆಳಿಗ್ಗೆ ಮಹಾನಗರ ಪಾಲಿಕೆಯ ತುರ್ತು ತೆರವು ಕಾರ್ಯಾಚರಣೆ ದೊಡ್ಡ ಚರ್ಚೆಗೆ ಗ್ರಾಸವಾಯಿತು. ಪಾಲಿಕೆ ಕಮಿಷನರ್ ಕೃಷ್ಣಮೂರ್ತಿ ಹಾಗೂ ಎಇಇ ಕವಿತಾ ಅವರ ನೇತೃತ್ವದಲ್ಲಿ ಡೈರಿ ವೃತ್ತದಿಂದ ಕಾಟಿಹಳ್ಳಿ ಸರ್ಕಲ್‌ವರೆಗೆ ಫುಟ್ಪಾತ್ ಆಕ್ರಮಣ ತೆರವು ನಡೆಸಲಾಯಿತು. ಜೆಸಿಬಿ ಯಂತ್ರದ ಮೂಲಕ ಅಕ್ರಮ ಕಟ್ಟಡಗಳು, ಶೆಡ್ಗಳು, ಮತ್ತು ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ತೆರವು ಕಾರ್ಯಚರಣೆ ಕೈಗೊಂಡಿದ್ದು,

ವಿಟ್ಲ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅವರಣದಿಂದ ದನ ಕಳ್ಳತನ ಪ್ರಕರಣ

ವಿಶ್ವ ಹಿಂದೂ ಪರಿಷದ್‌ ವತಿಯಿಂದ ಭೇಟಿ, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಪೋಲಿಸ್ ಇಲಾಖೆಗೆ ಮನವಿ ಕೇರಳ ಗಡಿ ಪ್ರದೇಶವಾಗಿರುವ ವಿಟ್ಲದ ಪೆರುವಾಯಿ ಗ್ರಾಮದ ಅಶ್ವಥನಗರ ಬಳಿಯಿರುವ ವ್ಯವಸಾಯ ಸೇವಾ ಸಹಕಾರಿ ಸಂಘದ ಅವರಣದಿಂದ ನಾಲ್ಕು ಗೋವುಗಳ ಕಳ್ಳತನವಾಗಿ ಇಂದಿಗೆ ಆರು ದಿನವಾಗಿದ್ದು ಎಫ್ ಐ ಆರ್ ದಾಖಲಿಸಿ ಇಂದಿಗೆ ನಾಲ್ಕು ದಿನ ಕಳೆದರು ಇಂದಿಗೂ ಗೋವು ಪತ್ತೆಯಾಗಿಲ್ಲ ಈ ನಿಟ್ಟಿನಲ್ಲಿ ಇಂದು ವಿಶ್ವ ಹಿಂದೂ ಪರಿಷದ್‌ ಪುತ್ತೂರು ಜಿಲ್ಲೆಯ ವತಿಯಿಂದ ಗೋವು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಿನ್ನೆಲೆ-ರೂ.25ಲಕ್ಷ ದೇಣಿಗೆ ಸಮರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಿನ್ನೆಲೆ-ಈಶಾನ್ಯ ಬದಿಯ ಕಟ್ಟೆ ನಿರ್ಮಾಣಕ್ಕೆ ಬೆಂಗಳೂರಿನ ಉದ್ಯಮಿ ನಾಗೇಶ್ ರಾವ್ ಅತ್ತಾಳ ಸುಜಾತ ದಂಪತಿಯಿಂದ ರೂ.25ಲಕ್ಷ ದೇಣಿಗೆ ಸಮರ್ಪಣೆ. ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಬಗ್ಗೆ ದೇವಳದ ಈಶಾನ್ಯ ಬದಿಯ ಕಟ್ಟೆ ನಿರ್ಮಾಣಕ್ಕಾಗಿ ನಾಗೇಶ್ ರಾವ್ ಅತ್ತಾಳ ಮತ್ತು ಸುಜಾತ ರಾವ್ ಅವರು ರೂ.25 ಲಕ್ಷ

ಪುತ್ತೂರಿನಲ್ಲಿ ನ.26ರಂದು ತುಳು ಸಿನಿಮಾ ‘ಜೈ’ ಯ ವಿಶೇಷ ಪ್ರದರ್ಶನ ಅತ್ಯಂತ ಭವ್ಯವಾಗಿ ಆಯೋಜಿಸಲಾಯಿತು.

ಈ ವಿಶೇಷ ಪ್ರದರ್ಶನಕ್ಕೆ MG Motors Mangalore ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ಹಾಗೂ ಮಡಿಕೇರಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಈ ಶೋ ನಿಗದಿಪಡಿಸಲಾಯಿತು. ಪತ್ರಕರ್ತರ ಸೇವೆಯನ್ನು ಗೌರವಿಸುವ ಉದ್ದೇಶದಿಂದ, ಮಾಧ್ಯಮ ಪ್ರತಿನಿಧಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು,

2025ರ ಕರ್ನಾಟಕ ಸಿರಿಗನ್ನಡ ಸಿರಿ ರಾಜ್ಯ ಪ್ರಶಸ್ತಿಗೆ ಡಾ.ರಾ.ಶಿರೂರು ಆಯ್ಕೆ

ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ. ರಾಮಕೃಷ್ಣ ಶಿರೂರು ಅವರು ಕರ್ನಾಟಕ ಸಿರಿಗನ್ನಡ ಸಿರಿ ರಾಜ್ಯಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ ಎಂದು ದಾವಣಗೆರೆಯ ಕರ್ನಾಟಕ ರಾಜ್ಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ಅವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. 2025 ನವಂಬರ್ 23 ರಂದು ದಾವಣಗೆರೆಯಲ್ಲಿ ಇರುವ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದಲ್ಲಿ ನಡೆಯುವ ರಾಜ್ಯ ಮಟ್ಟದ ಸಮಾರಂಭದಲ್ಲಿ