ಕುಂದಾಪುರ: ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ವಿತರಿಸಲಾದ ಅಡುಗೆ ಎಣ್ಣೆ ಅಂಗಡಿಯೊಂದರಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆ ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮೀ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಶಾಲಾ ಮಕ್ಕಳಿಗೆ ವಿತರಿಸುವ ಅಡುಗೆ ಎಣ್ಣೆ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತೆಗ್ಗರ್ಸೆ
ಪುತ್ತೂರು ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳ ತೆರವು ಕಾರ್ಯಾಚರಣೆಗೆ ಪುತ್ತೂರು ನಗರ ಸಭೆ ಜು.೨೩ರ ಬೆಳ್ಳಂಬೆಳಗ್ಗೆ ಮುಂದಾಗಿದೆ. ಜೆಸಿಬಿ ಮೂಲಕ ನಗರ ಸಭೆ ಪೌರಾಯುಕ್ತ ಹಾಗೂ ಇತರ ಅಧಿಕಾರಿಗಳ ಸಮಕ್ಷಮದಲ್ಲಿ ಆಕ್ರಮ ಶೆಡ್ ಗಳನ್ನೂ ಕೆಡವಲಾಗುತ್ತಿದೆ. ತಳ್ಳು ಗಾಡಿಯ ಅನುಮತಿ ಪಡೆದು, ಒಂದಷ್ಟು ಸಮಯದ ಬಳಿಕ ಅಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತಿದ್ದವರಿಗೆ ನಗರ ಸಭೆ ಈ ಮೂಲಕ ಇಂದು ನಸುಕಿನ ವೇಳೆ ಆಘಾತ ನೀಡಿದೆ. ಈ ಅಂಗಡಿಗಳು
ಜಿಟಿ ಜಿಟಿ ಮಳೆ. ತುಂಬಿ ಹರಿಯುತ್ತಿರುವ ಸೌಪರ್ಣಿಕೆ. ಆ ಭಾಗದ ಮಕ್ಕಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕೆಂದರೆ ತುಂಬಿ ಹರಿಯುವ ನದಿಯನ್ನು ದೋಣಿ ಮೂಲಕ ದಾಟಿ ಜೀವವನ್ನು ಪಣಕ್ಕಿಟ್ಟು ಪರೀಕ್ಷೆಯನ್ನು ಬರೆಯಬೇಕು. ಆದರೆ ಮಕ್ಕಳ ಸುರಕ್ಷತೆಗಾಗಿ ಖುದ್ದು ಡಿಡಿಪಿಐ ಉಡುಪಿಯಿಂದ ಬಂದು ಪರೀಕ್ಷಾ ಕೇಂದ್ರಕ್ಕೆ ದೋಣಿಯ ಮೂಲಕ ಮಕ್ಕಳನ್ನು ಕರೆದೊಯ್ದ ಅಪರೂಪದ ಸ್ಟೋರಿಯನ್ನು ನಾವಿವತ್ತು ನಿಮ್ಮ ಮುಂದೆ ಇಡುತ್ತಿದ್ದೇವೆ ನೋಡಿ.. ಒಂದೆಡೆ ಜಿಟಿಜಿಟಿ ಮಳೆಯಲಿ ನೆನೆದು
ಕಿಕ್ಕಿರಿದು ತುಂಬಿದ್ದ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಬಸ್ ಚಾಲಕನಿಗೆ ರಕ್ತ ಒತ್ತಡ ಕಡಿಮೆಯಾದ ಪರಿಣಾಮ ಸ್ಟೇರಿಂಗ್ ಮೇಲ್ಗಡೆಯೇ ಉರುಳಿ ಬಿದ್ದ ಘಟನೆ ನಗರ ಹೊರವಲಯದ ಅಡ್ಯಾರ್ ನಲ್ಲಿ ನಡೆದಿದ್ದು ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕಿಗೆ ಬರುತ್ತಿದ್ದ ಸೇಫ್ ವೇ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ ಅಡ್ಯಾರ್ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಕಣ್ಣು ಮಂಜಾಗಿದ್ದು ತಕ್ಷಣ ಬಸ್
ರಾಜ್ಯದಲ್ಲಿ ಶಾಲಾರಂಭಕ್ಕೆ ರಾಜ್ಯ ಸರಕಾರ ಚಿಂತನೆಯನ್ನು ನಡೆಸಿದೆ. ಈ ಕುರಿತು ಶಿಕ್ಷಣ ಇಲಾಖೆಯ ಆಯುಕ್ತರ ವರದಿ ಕೈ ಸೇರಲಿದ್ದು, ನಂತರದಲ್ಲಿ ಶಾಲಾರಂಭದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲಾರಂಭ ಮಾಡುವ ಹಿನ್ನೆಲೆಯಲ್ಲಿ ಸಾಧಕ ಬಾಧಕಗಳ ಕುರಿತು ಶಿಕ್ಷಣ ಇಲಾಖೆಯ ಆಯುಕ್ತರು ಅಧ್ಯಯನ ನಡೆಸುತ್ತಿದ್ದು,
ಹುತಾತ್ಮ ದಿನಾಚರಣೆಯ ಅಂಗವಾಗಿ ಐತಿಹಾಸಿಕ ನರಗುಂದ ಬಂಡಾಯದ ಹೋರಾಟ ಮುಗಿಸಿ ವಾಪಸ್ ಹಾಸನಕ್ಕೆ ತೆರಳುತ್ತಿದ್ದಾಗ ಸಂಭವಿಸಿದ ಕಾರು ಅಪಘಾತದಲ್ಲಿ ಹಿರಿಯ ರೈತ ಮುಖಂಡರಾದ ಜಿ.ಟಿ ರಾಮಸ್ವಾಮಿ ಮತ್ತು ಚನ್ನಪಟ್ಟಣ ರಾಮಣ್ಣನವರು ನಿಧನರಾಗಿದ್ದಾರೆ. ಚಿಕ್ಕಮಗಳೂರು ಬಳಿ ಅಪಘಾತ ಸಂಭವಿಸಿದ್ದು ತಕ್ಷಣವೇ ಅವರನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.ಅವರೊಡನಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ರವಿಕಿರಣ್ ಪುಣಚರವರಿಗೆ
ಗುಂಡ್ಯ: ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75 ಬಳಿ ಭೂಕುಸಿತವಾಗಿದೆ. ಬೆಂಗಳೂರು ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಪ್ರಸಿದ್ದ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ, ಸೌತ್ತಡ್ಕ ಕ್ಷೇತ್ರಕ್ಕೆ ಭೇಟಿ ನೀಡುವ ವಾಹನದ ಚಾಲಕರು ಪರಾಡುತ್ತಿರುವ ಮಾಹಿತಿ ಲಭಿಸಿದೆ. ಇನ್ನು ಮುಂಜಾಗೃತವಾಗಿ ಗುಂಡ್ಯ ಚೆಕ್ ಪೋಸ್ಟ್ ಗಳಲ್ಲಿಯೇ ವಾಹನಗಳಿಗೆ ತಡೆ
ಕಾರ್ಕಳ: ಮಲಬಾರ್ ಗೋಲ್ಡ್ ವತಿಯಿಂದ ಕಾರ್ಕಳದ ಶಾಸಕರ ಭವನದಲ್ಲಿ ತಾಲೂಕಿನ ಅರ್ಹ ಬಡ ವರ್ಗದವರಿಗೆ ರೇಷನ್ ಕಿಟ್ ಗಳನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿತರಿಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ನ ಮ್ಯಾನೇಜರ್ ರಾಘವೇಂದ್ರ ನಾಯಕ್ ಅಜೆಕಾರ್ ಅವರು ಬಡ ಜನತೆಗೆ ಇರುವ ಮಲಬಾರ್ ಗೋಲ್ಡ್ ನ ಸಾಮಾಜಿಕ ಸೌಲಭ್ಯಗಳ ಬಗ್ಗೆ ವಿವರಣೆಗಳನ್ನು ನೀಡಿದರು.ಕಾರ್ಕಳ ನಗರ ಬಿಜೆಪಿ ಅಧ್ಯಕ್ಷರು ಮಹಾವೀರ್ ಜೈನ್, ತಾಲೂಕು ಪಂಚಾಯತ್ ಅಧ್ಯಕ್ಷರು ಮಾಲಿನಿ ಜೆ ಶೆಟ್ಟಿ,
ಕೊನೆಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ರಾಜೀನಾಮೆಯ ಸುಳಿವು ನೀಡಿದ್ದಾರೆ. ಕೇಂದ್ರದ ವರಿಷ್ಠರು ನೀಡುವ ಆದೇಶವನ್ನು ಚಾಚು ತಪ್ಪದೆ ಪಾಲಿಸುತ್ತೇನೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 25ರ ನಂತರ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ. ನನ್ನ ಪರ ಪ್ರತಿಭಟನೆ ನಡೆಸುವುದು ಸರಿಯಲ್ಲ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ರಾಜೀನಾಮೆ ನೀಡುವುದರ ಕುರಿತು ಸುಳಿವು ನೀಡಿದ್ದಾರೆ. ಇಡೀ
ಮಂಗಳೂರು: ನಗರದ ನೀರುಮಾರ್ಗದ ಜಂಕ್ಷನ್ ಸಮೀಪದಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರಕ್ಕೆ ನುಗ್ಗಿದ ಇಬ್ಬರು ಕಳ್ಳರು ಕಾಣಿಕೆ ಡಬ್ಬಿ ಕಳವುಗೈದಿರುವ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ. ಇದರ ಸಂಪೂರ್ಣ ದೃಶ್ಯ ಭಜನಾ ಮಂದಿರದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಭಜನಾ ಮಂದಿರದ ಮುಂಭಾಗಕ್ಕೆ ನಸುಕಿನ ವೇಳೆ 1.45ರ ಸುಮಾರಿಗೆ ಆಗಮಿಸಿರುವ ಕಳ್ಳರು ಮುಂಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ್ದಾರೆ. ಬಳಿಕ ಉತ್ತರದ ಬಾಗಿಲು ತೆರೆದು ಪ್ರಧಾನ ಗುಡಿಯ


















