Home Posts tagged #v4stream (Page 284)

ಕಡಲ್ಕೋರೆತ ತಡೆಗಟ್ಟಲು ಜಿಲ್ಲಾಡಳಿತ ಕಾಳಜಿ ವಹಿಸುತ್ತಿಲ್ಲ : ಯು.ಟಿ.ಖಾದರ್

ಜಿಲ್ಲೆಯಲ್ಲಿ ಕಡಲ್ಕೋರೆತ ತಡೆಗಟ್ಟಲು ಜಿಲ್ಲಾಡಳಿತ ಯಾವುದೇ ರೀತಿಯಲ್ಲೂ ಕಾಳಜಿ ವಹಿಸಿದಂತೆ ತೋರುತ್ತಿಲ್ಲ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.ಈ ಕುರಿತು ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಉಳ್ಳಾಲ, ಸೋಮೇಶ್ವರ್ ಬೀಚ್ ನಲ್ಲಿ ರಸ್ತೆಗಳು ಸಮುದ್ರ ಪಾಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೋಟ್ಯಾಂತರ ವೆಚ್ಚದಲ್ಲಿ

ಯಾರಿಗೂ ಹೇಳ್ಬೇಡಿ ಆಡಿಯೋ ನಕಲಿ ಅಥವಾ ಅಸಲಿಯೇ ಸಿಎಂ ಸ್ಪಷ್ಟ ಪಡಿಸಲಿ: ಯು.ಟಿ.ಖಾದರ್

 ಬಿಜೆಪಿ ರಾಜ್ಯಾಧ್ಯಕ್ಷರ ಆಡಿಯೋ ನಕಲಿ ಅಥವಾ ಅಸಲಿಯೇ ಎಂದು ಮುಖ್ಯ ಮಂತ್ರಿ ಸ್ಪಷ್ಟ ಪಡಿಸಬೇಕಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ರು. ಹಾಲಿ ಸಿ.ಎಂ ಯಡಿಯೂರಪ್ಪ ಇನ್ನೂ ಮುಂದುವರಿಯುತ್ತಾರೋ ಇಲ್ಲವೋ ಎನ್ನುವುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟವಾಗಿ ತಿಳಿಸಲಿ ಯು.ಟಿ.ಖಾದರ್ ಅವರು ಹೇಳಿದರು. ಇನ್ನು ಕಾಂಗ್ರೆಸ್‌ನಲ್ಲಿ ಯಾವುದೇ ಬಣವಿಲ್ಲ, ಎಲ್ಲಾರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಕೆಲಸ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಸಿಕೆ ವಿತರಣೆಯಲ್ಲಿ ವಿಫಲ: ಯು.ಟಿ.ಖಾದರ್ ಆರೋಪ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಸಿಕೆ ವಿತರಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪ ಮಾಡಿದ್ದಾರೆ. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ದಿನ ಸುಮಾರು ಒಂದೂವರೆ ಲಕ್ಷ ಡೋಸ್ ಲಸಿಕೆ ಅಗತ್ಯ ಇದೆ.ಆದರೆ ಸರಬರಾಜಾಗುತ್ತಿರುವುದು ಒಂದು ವಾರಕ್ಕೆ 50 ಸಾವಿರ.ಇದರಿಂದಾಗಿ ಜನಸಾಮಾನ್ಯರು ಲಸಿಕೆಗಾಗಿ ಪರದಾಡುವಂತಾಗಿದೆ. ಸರಕಾರ ಜನಸಾಮಾನ್ಯರ ಈ ರೀತಿಯ ಅಗತ್ಯಗಳ ಬಗ್ಗೆ ,ಸಮಸ್ಯೆ

ಮೂಲಭೂತ ಸೌಕರ್ಯ ವಂಚಿತ ಸಿರಿಬಾಗಿಲು: ಸೇತುವೆ ಇಲ್ಲದೆ ಗ್ರಾಮದ ಜನರ ಪರದಾಟ

ಮಳೆಗಾಲ ಬಂತೆಂದರೆ ಸಾಕು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಿರಿಬಾಗಿಲು ಎನ್ನುವ ಗ್ರಾಮ ಇತರ ಪ್ರದೇಶಗಳ ಸಂಪರ್ಕವನ್ನೇ ಕಳೆದುಕೊಂಡು ದ್ವೀಪವಾಗಿ ಬಿಡುತ್ತದೆ. ಶಿರಾಢಿಘಾಟ್ ನ ಮಧ್ಯಭಾಗದಲ್ಲಿರುವ ಈ ಗ್ರಾಮದ ಸುತ್ತ ಮೂರು ಹೊಳೆಗಳು ಹರಿಯುತ್ತಿದೆ, ಸೇತುವೆಯಿಲ್ಲದ ಕಾರಣ ಮಳೆಗಾಲದಲ್ಲಿ ಈ ಹೊಳೆಗಳು ತುಂಬಿ ಹರಿಯುವ ಕಾರಣ ಇಲ್ಲಿನ ಜನರಿಗೆ ಅಗತ್ಯ ಕಾರ್ಯಗಳಿಗಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗಲಾರದ ಸಮಸ್ಯೆ ಇಲ್ಲಿ ವರ್ಷದಿಂದ ವರ್ಷಕ್ಕೆ

ಬೆಳ್ತಂಗಡಿಯಲ್ಲಿ ಬಿಜೆಪಿ ಮಂಡಲದಿಂದ ವಿಶೇಷ ಕಾರ್ಯಕಾರಿಣಿ ಸಭೆ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ರವರು ಕೋವಿಡ್ನ 2 ನೆ ಅಲೆಯನ್ನು ಸಮರ್ಪಕವಾಗಿ ನಿಯಂತ್ರಿಸುವ ದೇಶ ಅಂದರೆ ಅದು ನರೇಂದ್ರ ಮೋದಿ ಸರಕಾರದ ಭಾರತ ದೇಶ, ಕರ್ನಾಟಕದಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅಲ್ಲದೆ ಬರೀ ಮೂರು ವರ್ಷದಲ್ಲಿ ಬೆಳ್ತಂಗಡಿ

ಪರ್ತಗಳಿ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮಿಗಳು ಅಸ್ತಂಗತ

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠಾಧೀಶರಾದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ (76) ಇಂದು ಇಹಲೋಕ ತ್ಯಜಿಸಿ ವಿಷ್ಣುಪಾದ ಸೇರಿದ್ದಾರೆ. 1945ರಲ್ಲಿ ಗಂಗೊಳ್ಳಿಯಲ್ಲಿ ಜನಸಿದ ಶ್ರೀಗಳ ಪೂರ್ವಾಶ್ರಮ ಹೆಸರು ರಾಘವೇಂದ್ರ. ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ1967ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ಸನ್ಯಾಸ ಸ್ವೀಕರಿಸಿ 54 ವರ್ಷ ಸುಧೀರ್ಘವಾಗಿ ಮಠವನ್ನು, ಮಠದ ಆಡಳಿತದಲ್ಲಿರುವ ದೇವಾಲಯಗಳನ್ನು , ಮಠದ ಲಕ್ಷಾಂತರ ಶಿಷ್ಯರನ್ನು ಧಾರ್ಮಿಕವಾಗಿ

ಬಿಜೆಪಿ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್: ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರದ್ದೆನ್ನಲಾದ ಆಡಿಯೋ ಸಂಬಂಧ ಕರ್ನಾಟಕ ಕಾಂಗ್ರೆಸ್ ಪಕ್ಷ, ಬಿಜೆಪಿ ಪಕ್ಷದ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್ ಎಂದು ಲೇವಡಿ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್, ಬಿಜೆಪಿ ಪಕ್ಷದ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಬಿಎಸ್ ಯಡಿಯೂರಪ್ಪ ಅವರಿಗೆ ಈ ಹಿಂದೆಯೇ ಮನವರಿಕೆಯಾಗಿತ್ತು. ಆದರೆ ಜಗದೀಶ್ ಶೆಟ್ಟರ್ ಮತ್ತು ಕೆಎಸ್ ಈಶ್ವರಪ್ಪ

ಮಾವಿನ ಎಲೆ 290..! 64% ಡಿಸ್ಕೌಂಟ್ ಆಗಿ 109..!

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಮಾವಿನಹಣ್ಣಿಗೆ ಬೇಡಿಕೆ ಇರುತ್ತದೆ. ಆದರೆ ಈಗ ಕಾಲ ಬದಲಾಗಿ ಮಾವಿನ ಎಲೆಗೂ ಕೂಡ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಇದು ಆಚ್ಚರಿಯ ಸಂಗತಿಯಾದರೂ ನಂಬಲೇಬೇಕು ಹೌದು ಕಾಲಕ್ಕೆ ತಕ್ಕಂತೆ ಕೋಲ.! ಈಗ ಬದಲಾಗಿದೆ ಆನ್‍ಲೈನ್ ಶಾಪಿಂಗ್ ಆ್ಯಪ್ ಒಂದಾದ ಅಮೇಜಾನ್‍ನಲ್ಲಿ 21 ಮಾವಿನ ಎಲೆಗೆ 290 ರೂಪಾಯಿಯಾಗಿದ್ದು 64% ಡಿಸ್ಕೌಂಟ್ ಆಗಿ 109 ರೂಪಾಯಿಯಾಗಿದೆ. ಮೊನ್ನೆ ಹಲಸಿನ ಬೀಜಕ್ಕೆ ಇಂದು ಮಾವಿನ ಎಲೆಗೆ ಡಿಮ್ಯಾಂಡ್ ಹೆಚ್ಚಾಗಿದ್ದು.

ಪತ್ರಕರ್ತ ಡಾ.ಸಂದೀಪ್ ವಾಗ್ಲೆ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ

ಸೌಹಾರ್ದತೆ ಮತ್ತು ಮಾನವೀಯ ಮೌಲ್ಯವನ್ನು ಪ್ರತಿ ಬಿಂಬಿಸುವ ವರದಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಕನ್ನಡ ಪ್ರಭ ದಿನಪತ್ರಿಕೆಯ ವರದಿಗಾರ ಡಾ.ಸಂದೀಪ್ ವಾಗ್ಲೆ ಆಯ್ಕೆಯಾಗಿದ್ದಾರೆ.ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ 2020, ನವಂಬರ್ 25ರಂದು ಪ್ರಕಟಗೊಂಡ ಸಂದೀಪ್ ವಾಗ್ಲೆ ಅವರ ವರದಿ‘ ಕೋಮು ಸೌಹಾರ್ದ ತೆಗೆ ಸಾಕ್ಷಿ-ಸೇತುವಾದ ಯಕ್ಷಗಾನ’ ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರೂ.

ರಾಷ್ಟ್ರಪಕ್ಷಿಗೆ ಸ್ಕೂಟರ್ ಢಿಕ್ಕಿ: ದ್ವಿಚಕ್ರ ಸವಾರ ಮೃತ್ಯು

ತೆಂಕ ಎರ್ಮಾಳು ಗರೋಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನವಿಲೊಂದಕ್ಕೆ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಸವಾರ ರಸ್ತೆಯಂಚಿನ ಬಾಂಡ್ ಕಲ್ಲೊಂದಕ್ಕೆ ಡಿಕ್ಕಿಯಾಗಿ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತ ಯುವಕ ಬೆಳಪು ನಿವಾಸಿ ಪಡುಬಿದ್ರಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ. ಅಬ್ದುಲ್ (25) ಎಂದು ಗುರುತಿಸಲಾಗಿದೆ. ಪಡುಬಿದ್ರಿ ಕಡೆಯಿಂದ ತನ್ನ ಸ್ಕೂಟರಲ್ಲಿ ಬರುತ್ತಿದ್ದ ಯುವಕನಿಗೆ ನವಿಲೊಂದು ಹಾರಿಕೊಂಡು ಬಂದು ಡಿಕ್ಕಿಯಾಗಿದೆ.