ವಿಟ್ಲ: ಜಿಲ್ಲಾಡಳಿತ ಆದೇಶ ನೀಡಿದ ವಾರಾಂತ್ಯ ಕರ್ಫ್ಯೂ ವಿಟ್ಲದಲ್ಲಿ ಯಶಸ್ವಿಯಾಗಿದೆ. ವಿಟ್ಲದ ನಾಲ್ಕು ರಸ್ತೆಗಳಲ್ಲಿ ವಿಟ್ಲ ಪ್ರಭಾರ ಎಸೈ ರಾಜೇಶ್ ಕೆ.ವಿ ನೇತೃತ್ವದಲ್ಲಿ ಪ್ರೊಬೆಷನರಿ ಎಸೈ ಮಂಜುನಾಥ ಮತ್ತು ಪೊಲೀಸರ ತಂಡ ನಾಕಾಬಂಧಿ ಅಳವಡಿಸಿದ್ದರು. ಹಾಲು ಮತ್ತು ಮೆಡಿಕಲ್ ಹೊರತುಪಡಿಸಿ, ಅನಗತ್ಯವಾಗಿ ಪೇಟೆಗೆ ಬಂದ ವಾಹನಗಳನ್ನು ಮುಟ್ಟುಗೋಲು ಹಾಕಲಾಯಿತು. ವಿಟ್ಲ
ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ವಂದೇ ಮಾತರಂ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಿದ ಕಾರಣಕ್ಕೆ ಜೈಲುವಾಸ ಶಿಕ್ಷೆ ಅನುಭವಿಸಿ ಕಳಪೆ ಆಹಾರವನ್ನು ಸೇವಿಸುವ ಪರಿಸ್ಥಿತಿ ಬಂದಾಗಲೂ ಜೈಲಿನಲ್ಲಿ ಸ್ವಾತಂತ್ರ್ಯಯೋಧರ ಕಥೆಗಳನ್ನು ವಾಚಿಸುತ್ತಾ, ಜೈಲಿನಲ್ಲಿಯೇ ಸಂಘದ ಶಾಖೆ ಮಾಡುತ್ತಾ, ಭಜನೆಗಳನ್ನು ಹಾಡುತ್ತಾ ಕಳೆದ ದಿನಗಳನ್ನು ಹಿರಿಯರು ಹೇಳುವಾಗ ರೋಮಾಂಚನವಾಗುತ್ತದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ಹೇಳಿದರು. ಅವರು ಮರಕಡ ವಾರ್ಡಿನ ಲೀಲಾ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ವೀಕೆಂಡ್ ಕರ್ಪ್ಯೂ ಹಿನ್ನೆಲೆನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಬಂದೋ ಬಸ್ ಮಾಡಲಾಗಿದೆ. ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.40ಕ್ಕೂ ಅಧಿಕ ಕಡೆ ಚೆಕ್ ಪೋಸ್ಟ್‍ಗಳನ್ನು ಮಾಡಿದ್ದು ಪ್ರತೀ ಚೆಕ್‍ಪೋಸ್ಟ್‍ನಲ್ಲೂ 10ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.. ಮೆಡಿಕಲ್ ಮತ್ತು ತುರ್ತು ಸೇವೆ ಹೊರತುಪಡಿಸಿ ಸಂಚರಿಸೋ ವಾಹನಗಳನ್ನು ಪೊಲೀಸರು ಸೀಝ್
ಸರಕಾರದ ಆದೇಶದಂತೆ ದಕ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವ ಕುರಿತಾಗಿ ಪೋಲಿಸರಿಗೆ ಮುಂಜಾಗ್ರತಾ ನಿಯಮಗಳ ಕುರಿತಾಗಿ ಪಣಂಬೂರು ಉಪವಿಭಾಗ ಮಟ್ಟದ ಪೋಲೀಸರಿಗೆ ಮಾಹಿತಿ ಕಾರ್ಯಕ್ರಮವು ಬೈಕಂಪಾಡಿ ಎಪಿ ಎಮ್ ಸಿ ಸಂಕೀರ್ಣ ಕಟ್ಟಡದ ಬಳಿ ಜರುಗಿತು. ಪಣಂಬೂರು ಸಹಾಯಕ ಪೋಲೀಸ್ ಆಯುಕ್ತ ಎಸ್ ಮಹೇಶ್ ಕುಮಾರ್ ಅವರು ಮಾತನಾಡಿ, ಸರಕಾರದ ಹಾಗೂ ದಕ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಶುಕ್ರವಾರ ಸಂಜೆ ೭ ರಿಂದ ಕಟ್ಟುನಿಟ್ಟಿನ ಕ್ರಮ ಪಾಲಿಸಲು ಆದೇಶ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಎಂಬ ವಿಚಾರಕ್ಕೆ ಸಂಬಂಧಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಂಗಳೂರಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ರಾಜೀನಾಮೆ ಮಾತು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅವರೇ ಉತ್ತರ ಕೊಡಲಿ, ಅವರು ರಾಜೀನಾಮೆ ಕೊಡೋದು ಏನೂ ಆಗಿಲ್ಲ. ಅವರು ಕಾಂಗ್ರೆಸ್‌ನಲ್ಲಿ ಮೋಸ ಆಯ್ತು ಅಂತ ಬಿಜೆಪಿಗೆ ಬಂದವರು, ಸಿಡಿ ಜಾಲ ಸೇರಿ ಬೇರೆ ಬೇರೆ ಕಾರಣಕ್ಕೆ ಈ ವಿದ್ಯಮಾನ ನಡೀತಿದೆ ಎಂದು
ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಕಾಂಗ್ರೆಸ್ ಪಕ್ಷ ಕೈಗೊಂಡ ದಮನಕಾರಿ ನೀತಿಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 26ರ ಸಂಜೆ 4ರಂದು ವೆಬೆಕ್ಸ್ ಮೂಲಕ ವಿಚಾರಗೋಷ್ಠಿಯನ್ನು ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರ ಜಗದೀಶ್ ಶೇಣವ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1975ರಲ್ಲಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವದ ಹತ್ಯೆ
ಕೊರೋನಾದ ಚೈನ್ ಬ್ರೇಕ್ ಮಾಡುವ ನಿಟ್ಟಿನಿಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅತ್ಯಂತ ಮುಖ್ಯವಾದುದು, ಆದರೆ ನಮ್ಮ ಮಾರುಕಟ್ಟೆ , ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದೇ ಬಾರೀ ದೊಡ್ಡ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಯುನಿವರ್‌ಸಲ್ ಪ್ರಾಪರ್‌ಟೀಸ್ ಐಲಾಂಡ್ ಮಂಗಳೂರಿನ ಮ್ಯಾನೆಜಿಂಗ್ ಪಾರ್ಟ್‌ನರ್ ಆಗಿರುವ ಗಿರ್ಲ್ಬಟ್ ಡಿಸೋಜ ಅವರು ಒಂದು ಹೊಸ ಪ್ಲಾನ್ ಒಂದನ್ನು ರೂಪಿಸಿದ್ದಾರೆ. ಜನರ ಮೊಬೈಲ್ ಫೋನ್ ಸಂಖ್ಯೆಯ ಕೊನೆಯ ಒಂದು ಸಂಖ್ಯೆಯ
ಬಂಟ್ವಾಳ: ರಕ್ಷಿತಾರಣ್ಯದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧದ ಮರಗಳನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ವಲಯ ಅರಣಾಧಿಕಾರಿಗಳು ಬಂಧಿಸಿದ್ದು ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪಾತೂರು ನಿವಾಸಿ ಇಬ್ರಾಹಿಂ ಹಾಗೂ ಇರಾ ಗ್ರಾಮದ ಮೊಯ್ದೀನ್ ಬಂಧಿತ ಆರೋಪಿಗಳು. ಸಿದ್ದೀಕ್ ಹಾಗೂ ಕೊರುಂಗು
ಕಡಬ :ಉಪ್ಪಿನಂಗಡಿ-ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕುಂಡಾಜೆ ಸೇತುವೆಯಲ್ಲಿ ಮಾರುತಿ ಬೆಲೋನೊ ಹಾಗು ಅಲ್ಟೋ ಕಾರು ನಡುವೆ ಅಪಘಾತ ಸಂಭವಿಸಿದೆ. ಮಾರುತಿ ಬೆಲೋನೊ ಕಾರ್ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಗಣರಾಜ್ ಕುಂಬ್ಳೆಯವರ ಕಾರು ಎಂದು ತಿಳಿದು ಬಂದಿದ್ದು. ಬೆಲೋನೊ ಕಾರು ಕೆ.ಎ ಎಂ.ಜೆ 4683 ಆಲಂಕಾರು ಭಾಗದಿಂದ ಕೊಯಿಲದ ಕಡೆಗೆ ಹೊಗುತ್ತಿದ್ದು. ಅಲ್ಟೋ ಕಾರು ಕೆ.ಎ 21 .ಪಿ.2263 ಉಪ್ಪಿನಂಗಡಿಯಿಂದ ಕಡಬದ ಕಡೆಗೆ
ಕದ್ರಿ ಮಂಜುನಾಥ ಹಾಗೂ ಮಂಗಳಾದೇವಿ ದೇಗುಲದ ಸ್ಥಾಪನೆಗೆ ಮೂಲ ಕಾರಣಿಕರ್ತರು ಈ ಮಹಾನ್ ಯೋಗಿ ಗುರು ಮಚ್ಚೇಂದ್ರನಾಥರು. ಇವರ ಕಾಲ್ಪನಿಕ ಭಾವ ಚಿತ್ರವನ್ನು ಲೀಫ್ ಆರ್ಟ್ ಮುಖಾಂತರ ಯುವ ಕಲಾವಿದ ತಿಲಕ್ ಕುಲಾಲ್ ಮೂಡುಬಿದರೆ ಅವರು ಚಿತ್ರಿಸಿದ್ದಾರೆ. ಅವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.


















