ಭಾರತೀಯ ವಾಯುಪಡೆಗೆ ಮೂರು ಅಪಾಚೆ ಹೆಲಿಕಾಪ್ಟರ್ ಸೇರ್ಪಡೆ

ಅಮೆರಿಕ ಸಂಯುಕ್ತ ಸಂಸ್ಥಾನದ ಅತ್ಯಾಧುನಿಕ ತಂತ್ರಜ್ಞಾನದ ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಇಂದು ಭಾರತೀಯ ಸೇನೆಗೆ ಬಂದು ಸೇರಿದವು.
ಈ ಅಪಾಚೆ ಹೆಲಿಕಾಪ್ಟರ್‌ಗಳು ಕಾಮೊ ಎಂದರೆ ಪರಿಸರಕ್ಕೆ ಹೊಂದಿ ಅಡಗುವ ಬಣ್ಣ ಹೊಂದಿವೆ ಎಂದು ಹೇಳಲಾಗಿದೆ. ವಾಯು ಪಡೆಗೆ ಎಂದು ಹೇಳಲಾಗಿದ್ದರೂ ಈ ಮೂರು ಹೆಲಿಕಾಪ್ಟರ್‌ಗಳನ್ನು ಭಾರತೀಯ ಸೇನೆಯ ಅದರಲ್ಲೂ ಭೂಸೇನೆಯ ಅಗತ್ಯಕ್ಕೆ ಬಳಸಲಾಗುತ್ತದೆ ಎಂದು ಹೇಳಲಾಗಿದೆ.
ಈ ಹೆಲಿಕಾಪ್ಟರ್ ಅಮೆರಿಕದ ಟರ್ಬೋ ಶಾಪ್ಟ್ ದಾಳಿ ಮಾಡುವ ಹೆಲಿಕಾಪ್ಟರ್ ಆಗಿದೆ. ಟೇಲ್ ವ್ಹೀಲ್ ಮಾದರಿಯದಾದ ಇದು ಲ್ಯಾಂಡಿಂಗ್ ಗೇರ್ ಹೊಂದಿದೆ. ಇಬ್ಬರು ಯೋಧರಿಗೆ ಟಾಂಡೆಮ್ ಕಾಕ್ ಪಿಟ್ ಹೊಂದಿದೆ.