ಉಡುಪಿ: ಮೂರು ನಾಪತ್ತೆ ಪ್ರಕರಣ ದಾಖಲು
ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಮೂರು ನಾಪತ್ತೆ ಪ್ರಕರಣಗಳು ದಾಖಲಾಗಿವೆ.ಉಡುಪಿ ತಾಲೂಕಿನ ಮೂಡುತೋನ್ಸೆ ಗ್ರಾಮದ ನೇಜಾರು ರಾಜೀವ್ ನಗರದ ನಿವಾಸಿ ಸತೀಶ್ (43) ಕಳೆದ ವರ್ಷದ ಡಿಸೆಂಬರ್ನಿಂದ ನಾಪತ್ತೆಯಾಗಿದ್ದಾರೆ. ಕೆಲಸಕ್ಕೆಂದು ಮನೆಯಿಂದ ಹೋದವರು ಮರಳಿ ಬಂದಿಲ್ಲ ಎಂದು ತಿಳಿದುಬಂದಿದೆ. ಅವರು 5 ಅಡಿ 6 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದಾರೆ. ತುಳು, ಕನ್ನಡ ಮತ್ತು ಹಿಂದಿ ಮಾತನಾಡಬಲ್ಲರು. ಈ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಮಲ್ಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಬೈಂದೂರು ತಾಲೂಕಿನ ಕಿರಿಮಂಜೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ಪತಿ ಮತ್ತು ಮಕ್ಕಳೊಂದಿಗೆ ವಾಸವಿದ್ದ ಮಲ್ಲಿಕಾ (31) ಫೆಬ್ರವರಿ 5 ರಿಂದ ನಾಪತ್ತೆಯಾಗಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಮಾರುಕಟ್ಟೆಗೆ ಹೋಗುವುದಾಗಿ ಹೇಳಿ ಹೋದವರು ಮನೆಗೆ ವಾಪಸ್ ಬಂದಿಲ್ಲ, ಸಂಬಂಧಿಕರನ್ನೂ ಸಂಪರ್ಕಿಸಿಲ್ಲ. ಅವರು 5 ಅಡಿ 3 ಇಂಚು ಎತ್ತರ, ದುಂಡು ಮುಖ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಜೊತೆಗೆ ಕನ್ನಡ ಮಾತನಾಡಬಲ್ಲರು. ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಬೈಂದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲು ವಿನಂತಿಸಲಾಗಿದೆ.ಬ್ರಹ್ಮಾವರ ತಾಲೂಕಿನ ಹಿರಿಯಾಣ ಗ್ರಾಮದ ಚೋರಡಿ ನಿವಾಸಿ ರತಿ (37) ನಾಪತ್ತೆಯಾದ ಮತ್ತೊಬ್ಬ ಮಹಿಳೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಈಕೆ ಜನವರಿ 31 ರಂದು ಮನೆಯಿಂದ ಹೊರಟವರು ಮರಳಿ ಬಂದಿಲ್ಲ. ಅವರು 5 ಅಡಿ ಎತ್ತರ, ಬಿಳಿ ಮೈಬಣ್ಣ, ದಪ್ಪ ಮೈಕಟ್ಟು ಹೊಂದಿದ್ದಾರೆ. ಅವರು ಕನ್ನಡ ಮಾತನಾಡಬಲ್ಲರು. ಮಾಹಿತಿ ಇರುವವರು ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರನ್ನು ಸಂಪರ್ಕಿಸಲು ಕೋರಲಾಗಿದೆ.


















