ಸಂಪೂರ್ಣ ಹದಗೆಟ್ಟಿರುವ ಕಾನ-ಕುಳಾಯಿ ರೈಲ್ವೇ ಮೇಲ್ಸೇತುವೆ : ಡಿವೈಎಫ್ಐನಿಂದ ಪ್ರತಿಭಟನೆ
                                                ಸಂಪೂರ್ಣ ಹದಗೆಟ್ಟಿರುವ ಕಾನಾ-ಕುಳಾಯಿ ರೈಲ್ವೇ ಮೇಲ್ಸೇತುವೆ ಅವ್ಯವಸ್ಥೆ ವಿರೋಧಿಸಿ ಕೂಡಲೇ ದುರಸ್ಥಿಗೆ ಒತ್ತಾಯಿಸಿ ಡಿವೈಎಫ್ಐ ಕಾನ-ಕುಳಾಯಿ ಘಟಕದ ವತಿಯಿಂದ ಕುಳಾಯಿಗುಡ್ಡೆ ರೈಲ್ವೇ ಬ್ರಿಡ್ಜ್ ಬಳಿ ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಅವರು, ರಸ್ತೆ ಕಾಮಗಾರಿಯಾದ ಪ್ರತೀ ವರ್ಷಕೂಡ ಮೊದಲ ಮಳೆಗೆ ರಸ್ತೆ ಗುಂಡಿ ಬಿದ್ದು, ಸಂಚರಿಸಲು ಆಗದ ಪರಿಸ್ಥಿತಿ ಬಂದೊದಗಿದೆ. 
ಇದಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಡಿವೈಎಫ್ಐ ಘಟಕದ ಇಮ್ತಿಯಾಜ್ ಸೇರಿದಂತೆ ಮುಖಂಡರು ಹಾಜರಿದ್ದರು.


							
							
							














