ಮಸ್ಕತ್ ಅಲ್ ಹೈಲ್ ಕ್ರೀಡಾಂಗಣದಲ್ಲಿ ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ಒಮಾನ್ ಬಿಲ್ಲವಾಸ್ ಸೂಪರ್ ಲೀಗ್ (OBSL- 2025) ಕ್ರೀಡಾ ಕೂಟ

ಒಮಾನ್:ಕೊಲ್ಲಿ ರಾಷ್ಟ್ರವಾದ ಒಮಾನ್ ದೇಶದ ಮಸ್ಕತ್ ನಗರದಲ್ಲಿರುವ ಅಲ್ ಹೈಲ್ ಕ್ರೀಡಾಂಗಣದಲ್ಲಿ ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ದಿನಾಂಕ 14-11-2025 ರಂದು ಶುಕ್ರವಾರ ಬೆಳಿಗ್ಗೆ 8:00ರಿಂದ ಒಮಾನ್ ಬಿಲ್ಲವಾಸ್ ಸೂಪರ್ ಲೀಗ್ (OBSL 2025) ಕ್ರೀಡಾ ಕೂಟವು ನಡೆಯಲಿದೆ‌.

ಒಮಾನ್ ಬಿಲ್ಲವಾಸ್ ಕೂಟವು ಕೂಟದ ಅಧ್ಯಕ್ಷರಾದ ಶ್ರೀ ಉಮೇಶ್ ಬಂಟ್ವಾಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಈ ಕ್ರೀಡಾ ಕೂಟಕ್ಕೆ ಮುಖ್ಯ ಅತಿಥಿಯಾಗಿ ಅಂತಾರಾಷ್ಟ್ರೀಯ ಪ್ರತಿಭಾನ್ವಿತ ಕ್ರೀಡಾಪಟು ಕು. ರಕ್ಷಾ ಪೂಜಾರಿ ರೆಂಜಾಳ ಅವರು ಪಾಲ್ಗೊಳ್ಳಲಿದ್ದಾರೆ.

ಕ್ರಿಕೆಟ್ ಪಂದ್ಯಾವಳಿಯು ಕರಾವಳಿಯ ಪ್ರತಿಷ್ಠಿತ V4NEWS ನ್ಯೂಸ್ ಚಾನೆಲ್ ನ ಯೂಟ್ಯೂಬ್ ನಲ್ಲಿ ಮಧ್ಯಾಹ್ನ ಮಸ್ಕತ್ ನ ಸಮಯ‌ 1:30ರಿಂದ ಇಂಡಿಯಾದ ಸಮಯ 3:00 ರಿಂದ ನೇರ ಪ್ರಸಾರ ಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ಅಧ್ಯಕ್ಷರು, ಸ್ಥಾಪಕ ಸದಸ್ಯರು ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರು ಒಮಾನ್ ಬಿಲ್ಲವಾಸ್, ಮಸ್ಕತ್ ಇವರುಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published.