ರಾಷ್ಟ್ರೀಯ ಈಜುಸ್ಪರ್ಧೆಯಲ್ಲಿಆಯ್ಕೆಯಾದ ಮಂಗಳಾ ಈಜು ಕ್ಲಬ್ ಸದಸ್ಯೆಯರಾದ ಚಾರ್ವಿ ಎಂ ಹಾಗೂ ಪ್ರಾಪ್ತಿ ಜೆ.ಪಿ
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಈಜುಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ನ ಸದಸ್ಯೆಯಾದ ಕು| ಚಾರ್ವಿ ಎಂ (ಲೇಡಿಹಿಲ್ಲ್ ವಿಕ್ಟೋರಿಯ ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿನಿ) ಇವರು 14 ವರ್ಷದ ಬಾಲಕಿಯರ ವಿಭಾಗದಲ್ಲಿ 2 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಸೇರಿದಂತೆ ಒಟ್ಟು 5 ಪದಕಗಳನ್ನು ಮತ್ತು ಮಂಗಳಾ ಈಜು ಕ್ಲಬ್ನ ಇನ್ನೋರ್ವ ಸದಸ್ಯೆಯಾದ ಕು| ಪ್ರಾಪ್ತಿ ಜೆ.ಪಿ. (ಸೈಂಟ್ ಅಲೋಸಿಯಸ್ ಹೈಯರ್ ಪ್ರೈಮರಿ ಸ್ಕೂಲ್, ಕೊಡಿಯಾಲ್ಬೈಲ್ ಇಲ್ಲಿನ ವಿದ್ಯಾರ್ಥಿನಿ) ಇವರು 14 ವರ್ಷದ ಬಾಲಕಿಯರ ವಿಭಾಗದಲ್ಲಿ 5 ಚಿನ್ನದ ಪದಕಗಳನ್ನು ಗೆದ್ದು ಡಿಸೆಂಬರ್ 13ರಿಂದ 17ರವರೆಗೆ ದೆಹಲಿಯಲ್ಲಿ ನಡೆಯಲಿರುವ 69ನೇ ರಾಷ್ಟ್ರ ಮಟ್ಟದ ಶಾಲಾಮಕ್ಕಳ (ಎಸ್ಜಿಎಫ್ಐ) ಈಜುಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ.
ಇವರು ಕ್ಲಬ್ಬಿನ ಹಿರಿಯ ಈಜು ತರಬೇತುದಾರರಾದ ಶ್ರೀ ಎಂ. ಶಿವಾನಂದ ಗಟ್ಟಿ ಇವರ ಮಾರ್ಗದರ್ಶನದಲ್ಲಿ ಮುಖ್ಯ ತರಬೇತುದಾರರಾದ ಶ್ರೀ ಶಿಶಿರ್ ಎಸ್. ಗಟ್ಟಿ (ಎನ್.ಐ.ಎಸ್), ತರಬೇತುದಾರರಾದ ಶ್ರೀ ಕೀರ್ತನ್ ಎಸ್. ಶೆಟ್ಟಿ, ಶ್ರೀ ಚೇತನ್ ಎಸ್ ಶೆಟ್ಟಿ, ಶ್ರೀ ರಾಜೇಶ್ ಖಾರ್ವಿ ಬೆಂಗ್ರೆ,
ಶ್ರೀ ಪ್ರಥಮ್ ಎ ಕುಂದರ್, ಕು| ಪ್ರೇರಣಾ ಎ ಕುಂದರ್ ಹಾಗೂ ಪುಂಡಲೀಕ ಖಾರ್ವಿ ಇವರಿಂದ ಮಂಗಳೂರು ಮಹಾನಗರಪಾಲಿಕೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.


















