ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ಮಾದಕ ವಸ್ತು ಹಾಗೂ ಸೈಬರ್ ಕ್ರೈಂ ಜಾಗೃತಿ ಕುರಿತು ಮಾಹಿತಿ ಕಾರ್ಯಾಗಾರ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಅ. 03 ರಂದು ಸುಳ್ಯ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ಮಾದಕ ವಸ್ತು ಜಾಗೃತಿ ಹಾಗೂ ಸೈಬರ್ ಕ್ರೈಂ ಕುರಿತು ಮಾಹಿತಿ ಕಾರ್ಯಾಗಾರವು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಾಗಾರದಲ್ಲಿ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಶ್ರೀಯುತ ಸಂತೋಷ್ ಬಿ ಪಿ ರವರು ಮಾಹಿತಿಯನ್ನು ನೀಡುತ್ತಾ ಮಾದಕ ವ್ಯಸನ ಹಾಗೂ ಸೈಬರ್ ಕ್ರೈಂನಿಂದ ಉಂಟಾಗುವ ತೊಂದರೆ ಹಾಗೂ ಇದನ್ನು ತಡೆಯುವ ಕುರಿತು ಮಾಹಿತಿಯನ್ನು ನೀಡಿದರು.

ಮಾಹಿತಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಕಾಲೇಜಿನ ಪ್ರಾಂಶುಪಾಲರು ಡಾ ಲೀಲಾಧರ್ ಡಿ ವಿ ಯವರು ಸ್ವಾಗತಿಸಿದರು.
ಕೊನೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ ವಿನಯ್ ಶಂಕರ್ ಭಾರಧ್ವಾಜ್ ಅವರು ವಂದಿಸಿದರು.
ವೇದಿಕೆಯಲ್ಲಿ ಕಾಲೇಜಿನ ಅಕಾಡೆಮಿಕ್ ಕೊ ಆರ್ಡಿನೇಟರ್ ಡಾ ಕವಿತಾ ಬಿ ಎಂ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು, ಕಲಿಕಾ ವೈದ್ಯರುಗಳು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.