ಕಾಂತಾವರ ಕನ್ನಡ ಸಂಘದ 20225ರ ಸಾಲಿನ ವಾರ್ಷಿಕ ಪ್ರಶಸ್ತಿಗಳ ಘೋಷಣೆ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ವಾರ್ಷಿಕ (2025) ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ಮೊಗಸಾಲೆ ಪ್ರತಿಷ್ಠಾನದಿಂದ ನೀಡುವ ‘ಸಾಹಿತ್ಯ ಪ್ರಶಸ್ತಿ’ಯನ್ನು ಕಾಸರಗೋಡಿನ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರಿಗೆ, ಶ್ರೀಪತಿ ಮಂಜನಬೈಲು ದತ್ತಿನಿಧಿಯ ‘ರಂಗಸನ್ಮಾನ ಪ್ರಶಸ್ತಿ’ಯನ್ನು ಮಂಗಳೂರಿನ ರಂಗಕರ್ಮಿ ಶ್ರೀ ಶಶಿರಾಜ ಕಾವೂರು ಅವರಿಗೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಈಶ್ವರ ಮಂಗಲ ಅವರ ದತ್ತಿನಿಧಿಯ ‘ಯಕ್ಷಗಾನ ಸಾಹಿತ್ಯ ಸಂಶೋಧನ ಪ್ರಶಸ್ತಿ’ಯನ್ನು ಶಿರಸಿಯ ಹಿರಿಯ ಸಾಹಿತಿ ಅಶೋಕ ಹಾಸ್ಯಗಾರ ಅವರಿಗೆ, ಸಂಘದ ‘ವಾರ್ಷಿಕ ಗೌರವ ಪ್ರಶಸ್ತಿ’ಯನ್ನು ಹುಲಿಮನೆ ಜಯರಾಮ ಹೆಗಡೆ ಮಿಜಾರು ಅವರಿಗೆ ನೀಡಲು ನಿರ್ಣಯಿಸಲಾಗಿದೆ.

ಇವುಗಳಲ್ಲಿ ದತ್ತಿ ಪ್ರಶಸ್ತಿಗಳ ಮೌಲ್ಯ ರೂ. ಹತ್ತು ಸಾವಿರ, ವಾರ್ಷಿಕ ಗೌರವ ಪ್ರಶಸ್ತಿಯು ರೂ. ಐದು ಸಾವಿರವಾಗಿದ್ದು ಪ್ರತೀ ಪ್ರಶಸ್ತಿಗಳು ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿವೆೆ. ಇವುಗಳ ಪ್ರದಾನ ಸಮಾರಂಭವನ್ನು ಇದೇ ತಿಂಗಳ ೨೮ರಂದು ಕಾಂತಾವರ ಕನ್ನಡ ಭವನದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆಸುವುದೆಂದು ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಮತ್ತು ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಅವರು ಜಂಟಿಯಾಗಿ ಪ್ರಕಟಿಸಿದ್ದಾರೆ.

Related Posts

Leave a Reply

Your email address will not be published.