ಕುತ್ತಾರು : ಕೊರಗಜ್ಜ ಕ್ಷೇತ್ರಕ್ಕೆ ಡಾ. ನರೇಶ್ಚಂದ್ ಹೆಗ್ಡೆ ಭೇಟಿ

ಕರ್ನಾಟಕ ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕದ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಮತ್ತು ಮುನ್ನೂರಿನಲ್ಲಿರುವ ಶ್ರೀ ಪಂಜದಾಯ ಬಂಟ ವೈಧ್ಯನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಇದೇ ಸಮಯಕ್ಕೆ ಕನ್ನಡದ ಖ್ಯಾತ ನಟ ಶರಣ್ ದಂಪತಿ ಜೊತೆಗಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಟ್ರಸ್ಟಿ ಪ್ರೀತಂ ಶೆಟ್ಟಿ ಟ್ರಸ್ಟಿ ಶ್ರೀ ರಾಮ್ ರೈ, ಹರೀಶ್ ಭಂಡಾರ ಬೈಲು, ಬಾಲಕೃಷ್ಣ ಮೂಲ್ಯ, ದೈವ ಪಾತ್ರಿ ಮಹಿಲ ಅಣ್ಣ ಲೋಹಿತ್ ಉಪಸ್ಥಿತರಿದ್ದರು.
