ನಂದಾ ದೀಪ ಸೇವಾ ಟ್ರಸ್ಟ್ ವತಿಯಿಂದ ದಾನಿಗಳ ನೆರವಿನಿಂದ ದಿನಸಿ ವಿತರಣೆ

ಕಾಪು:ನಂದಾ ದೀಪ ಸೇವಾ ಟ್ರಸ್ಟ್ ನ ಸದಸ್ಯರಾದ ರವಿ ಶೆಟ್ಟಿ ಪಡುಬಿದ್ರಿಯವರ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ ಕಾಪುವಿನ ತೀರಾ ಬಡತನದಿಂದ ಬಳಲುತ್ತಿರುವ ಗಂಗಮ್ಮ ಶೆಟ್ಟಿಯವರಿಗೆ ದಿನಸಿ ಸಾಮಾನುಗಳನ್ನು ದಿನಾಂಕ 08/12/2025 ರ ಸೋಮವಾರದಂದು ವಿತರಣೆ ಮಾಡಲಾಯಿತು.

ಕಳೆದ 3 ತಿಂಗಳಿಂದ ಗಂಗಮ್ಮ ಶೆಟ್ಟಿಯವರಿಗೆ ಮನೆಯ ದಿನಸಿ ಸಾಮಾನುಗಳನ್ನು ನೀಡುತ್ತಾ ಬರುತ್ತಿದ್ದು ಈ ತಿಂಗಳ ದಿನಸಿಯನ್ನು ನಂದಾ ದೀಪ ಸೇವಾ ಟ್ರಸ್ಟ್ ನ ಸದಸ್ಯರಾದ ಸಾದಿಕ್ ಕಂಚಿನಡ್ಕ ವತಿಯಿಂದ ದಿನಸಿ ಸಾಮಾನುಗಳನ್ನು ಗಂಗಮ್ಮ ಶೆಟ್ಟಿಯವರ ಮನೆಗೆ ಭೇಟಿ ನೀಡಿ, ಈ ತಿಂಗಳ ದಿನಸಿ ಸಮಾನು ನೀಡಲಾಯಿತು. ಈ ಸಂದರ್ಭದಲ್ಲಿ ರವಿ ಶೆಟ್ಟಿ, ಮಹೇಶ್ ದೇವಾಡಿಗ, ರಾಜೇಶ್ ಮಿತ್ರಪಟ್ನ, ಪ್ರಸಾದ್ ಪಕ್ಷಿಕೆರೆ, ಶೇಖರ್ ದೇವಾಡಿಗ ಇವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.