ಮಂಗಳೂರು ಉತ್ತರ ರೋಟರಿ ವತಿಯಿಂದ ಯುವ ಸಾಧಕರಿಗೆ ಸನ್ಮಾನ

ಮಂಗಳೂರು ಉತ್ತರ ರೋಟರಿ ವತಿಯಿಂದ ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಗರದ ಲೇಡಿಹಿಲ್‌ನ ರೋಟರಿ ಬಾಲಭವನದಲ್ಲಿ ನಡೆಯಿತು.

ರೋಟರಿ ಮಾಜಿ ಗವರ್ನರ್ ಮೇಜರ್ ಡೊನೊರ್ ರಂಗನಾಥ ಭಟ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಪ್ರತಿಭೆಗಳಿಗೆ ಗೌರವಿಸಿದ್ರು. ವಿಜ್ಞಾನ ಮತ್ತು ತಾಂತ್ರಿಕತೆ ಕ್ಷೇತ್ರದಲ್ಲಿ ಸ್ವಸ್ತಿಕ್ ಪದ್ಮ, ಪವರ್ ಲಿಫ್ಟಿಂಗ್ ನಲ್ಲಿ ವೇನೇಝಿಯಾ ಆನ್ನಿ ಕಾರ್ಲೊ ಹಾಗೂ ಸುರೇಶ್ ಶೇಟ್ ,ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಅನುಷಾ ಜೇನ್ ಡಿಸೋಜ, ಇನ್ನು ಬಹುಮುಖ ಪ್ರತಿಭೆ ಕ್ಷೇತ್ರದಲ್ಲಿ ಆದಿ ಸ್ವರೂಪ ಅವರನ್ನ ವೇದಿಕೆಯಲ್ಲಿ ಸನ್ಮಾನಿಸಲಾಯ್ತು.

ಇದೇ ಸಮಯದಲ್ಲಿ ರೋಟರಿಯಲ್ಲಿ 50 ವರ್ಷಗಳ ಸೇವೆ ಸಲ್ಲಿಸಿದ ಹಿರಿಯ ರೋಟರಿ ಸದಸ್ಯ ನಾರಾಯಣ ರಾಯರಿಗೆ ಸುವರ್ಣ ಸೇವೆಯ ಪತ್ರವನ್ನು ನೀಡಿ ಸನ್ಮಾನಿಸಲಾಯಿತು. ಈ ವೇಳೆ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ಸತೀಶ್, ಮಂಗಳೂರು ಉತ್ತರ ರೋಟರಿ ಕ್ಲಬ್ ಅಧ್ಯಕ್ಷ ರೋಟರಿ. ದೇವದಾಸ್, ನೂತನ ಅಧ್ಯಕ್ಷ ರೋ. ವಿಠ್ಠಲ್ ಕುಡ್ವ ಸೇರಿದಂತೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published.